ಎಚ್ಚರ!!! ಇಂಟರ್ನೆಟ್ ಬಳಕೆ: ಆಪ್ತರಿಂದ ದೂರ ಮರಣಕ್ಕೆ ಸಮೀಪ

By Shwetha
|

ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಶೀತ ಜ್ವರ ಬರುವುದರ ಜೊತೆಗೆ ಪ್ರತಿರೋಧಕ ಕ್ರಿಯೆಯಲ್ಲಿ ಸಮಸ್ಯೆಯನ್ನು ಎದುರಿಸಲಿದ್ದೀರಿ ಎಂಬುದು ಹೊಸ ಅಧ್ಯಯನದಿಂದ ಧೃಡಪಟ್ಟಿದೆ.

ಓದಿರಿ: ಇಂಟರ್ನೆಟ್ ಅಭಾವ ಜೀವನ ನರಕಸದೃಶ ಹೇಗೆ?

ಸ್ವನೇಸಿಯಾ ಮತ್ತು ಮಿಲಾನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೆಚ್ಚು ಇಂಟರ್ನೆಟ್ ಸಂಪರ್ಕವಿರುವವರಲ್ಲಿ ಶೀತ ಮತ್ತು ಜ್ವರವನ್ನು ಪತ್ತೆಹಚ್ಚಿದ್ದು ಇವರಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುವುದರಿಂದಾಗಿ ಇಂತಹ ಸಮಸ್ಯೆಗಳಿಗೆ ಇವರು ಒಳಗಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಕೆಳಗಿನ ಲೇಖನದಲ್ಲಿ ಈ ಕುರಿತ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ

500 ಜನ

500 ಜನ

ಅಧ್ಯಯನಕ್ಕಾಗಿ ವಿಜ್ಞಾನಿಗಳು 500 ಜನರನ್ನು ಆಯ್ಕೆಮಾಡಿದ್ದು 18 ರಿಂದ 101 ವರ್ಷದವರನ್ನು ಇದು ಒಳಗೊಂಡಿತ್ತು.

ಶೀತ ಮತ್ತು ಜ್ವರ

ಶೀತ ಮತ್ತು ಜ್ವರ

ಹೆಚ್ಚು ಇಂಟರ್ನೆಟ್ ಬಳಸುವ ಜನರು ಶೀತ ಮತ್ತು ಜ್ವರದ ಸಮಸ್ಯೆಯಿಂದ ಬಳಲುತ್ತಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

ಸಮಾನ

ಸಮಾನ

ಇಂಟರ್ನೆಟ್‌ನ ಸಂಪರ್ಕಕ್ಕೆ ಬಂದೊಡನೆ ಇವರಲ್ಲಿ ಈ ರೀತಿಯ ಸಮಸ್ಯೆ ಇದ್ದು ಮಹಿಳೆಯರು ಮತ್ತು ಪುರುಷರಲ್ಲಿ ಇದು ಸಮಾನವಾಗಿದೆ

 ಸಮಸ್ಯೆ

ಸಮಸ್ಯೆ

ನಿದ್ರಾ ಹೀನತೆ, ಕಡಿಮೆ ಆಹಾರ ಸೇವಿಸುವಿಕೆ, ವ್ಯಾಯಾಮ ಮಾಡದಿರುವುದು ಮೊದಲಾದ ಸಮಸ್ಯೆಗಳನ್ನು ಈ ಅಧ್ಯಯನ ಒಳಗೊಂಡಿದೆ

ಅನಾರೋಗ್ಯಕರ ಚಟುವಟಿಕೆ

ಅನಾರೋಗ್ಯಕರ ಚಟುವಟಿಕೆ

ಇನ್ನು ಮದ್ಯಪಾನ ಮತ್ತು ಧೂಮಪಾನದಂತಹ ಅನಾರೋಗ್ಯಕರ ಚಟುವಟಿಕೆ ಕೂಡ ಅಧಿಕವಾಗಿ ಇಂಟರ್ನೆಟ್ ಅನ್ನು ಬಳಸುವವರಲ್ಲಿ ಕಂಡು ಬಂದಿದೆ.

ಪ್ರತಿರೋಧಕ ಕೊರತೆ

ಪ್ರತಿರೋಧಕ ಕೊರತೆ

ಇದು ಇವರಿಲ್ಲಿ ಪ್ರತಿರೋಧಕ ಕೊರತೆಯನ್ನು ಉಂಟು ಮಾಡುತ್ತಿದ್ದು ರೋಗಗಳಿಗೆ ಇವರನ್ನು ಹತ್ತಿರವಾಗಿಸುತ್ತಿದೆ.

ಹೆಚ್ಚಿನ ಒತ್ತಡ

ಹೆಚ್ಚಿನ ಒತ್ತಡ

ಇನ್ನು ಇಂಟರ್ನೆಟ್‌ನ ಸಂಪರ್ಕಕ್ಕೆ ಬಂದಾಗ ಜನರು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದ್ದು ಇಂಟರ್ನೆಟ್ ಬಳಕೆ ಮಾಡದೇ ಇದ್ದಾಗ ಅಷ್ಟೊಂದು ಒತ್ತಡವನ್ನು ಅನುಭವಿಸುತ್ತಿರುವವರಂತೆ ಇವರು ಕಾಣುತ್ತಿಲ್ಲ ಎಂಬುದು ಅಧ್ಯಯನದ ಮಾಹಿತಿಯಾಗಿದೆ.

ರೋಗಕ್ಕೆ ಹತ್ತಿರ

ರೋಗಕ್ಕೆ ಹತ್ತಿರ

ಇಂಟರ್ನೆಟ್‌ನ ಹೆಚ್ಚು ಬಳಕೆ ಬಳಕೆದಾರರನ್ನು ಜನರಿಂದ ದೂರವಾಗಿಸಿ ರೋಗಕ್ಕೆ ಹತ್ತಿರವಾಗಿಸುತ್ತಿದೆ

ಇಂಟರ್ನೆಟ್

ಇಂಟರ್ನೆಟ್

ಇನ್ನು ಪುರುಷ ಮತ್ತು ಮಹಿಳೆಯರಲ್ಲಿ ಇಂಟರ್ನೆಟ್ ಅನ್ನು ಏಕೆ ಬಳಸುತ್ತಿದ್ದಾರೆ ಎಂಬುದನ್ನು ನೋಡಹೊರಟಾಗ ಮಹಿಳೆಯರು ಇಂಟರ್ನೆಟ್ ಅನ್ನು ಸಾಮಾಜಿಕ ಮಾಧ್ಯಮ ಮತ್ತು ಶಾಪಿಂಗ್‌ಗಾಗಿ ಬಳಸುತ್ತಿದ್ದು, ಪುರುಷರು ಗೇಮಿಂಗ್ ಮತ್ತು ಅಶ್ಲೀಲತೆಗಾಗಿ ಬಳಸುತ್ತಿದ್ದಾರೆ.

ರೋಗಕ್ಕೆ ಹತ್ತಿರ

ರೋಗಕ್ಕೆ ಹತ್ತಿರ

ಇಂಟರ್ನೆಟ್‌ನ ಹೆಚ್ಚು ಬಳಕೆ ನಿಮ್ಮನ್ನು ರೋಗಕ್ಕೆ ಹತ್ತಿರವಾಗಿಸುತ್ತಿದೆ ಎಂಬುದಂತೂ ನಿಜ

Best Mobiles in India

English summary
Spending too much time online may increase your risk of catching a cold or the flu as excessive internet use can damage the immune function, a new study has claimed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X