Subscribe to Gizbot

ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ?

Written By:

ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು ಸಿಗುತ್ತಿದ್ದು, ಅತ್ಯಂತ ವೇಗವಾಗಿ ಮತ್ತು ಕಡಿಮೆ ಬೆಲೆಗೆ ಮೊಬೈಲ್‌ ಸೇವೆಗಳು ಲಭ್ಯವಾಗುತ್ತಿವೆ. ಹಾಗಾಗಿ, ಈ ವರ್ಷದ ಜೂನ್ ವೆಳೆಗೆ 50 ಕೋಟಿ ಇಂಟರ್‌ನೆಟ್ ಬಳಕೆದಾರರನ್ನು ಭಾರತ ಹೊಂದಲಿದೆ ಎಂದು ಇಂಟರ್‌ನೆಟ್ ಅಂಡ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ ಜಂಟಿ ವರದಿ ತಿಳಿಸಿದೆ.

ಇದೇ ಡಿಸೆಂಬರ್ 2017ರ ವೇಳೆಗೆ ಭಾರತದಲ್ಲಿ 481 ಬಿಲಿಯನ್ ಇಂಟರ್‌ನೆಟ್ ಬಳಕೆದಾರರಿದ್ದು, ಕಳೆದ ವರ್ಷಕ್ಕಿಂತ 13.34 ಪರ್ಸೆಂಟ್ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರು ಇಂಟರ್‌ನೆಟ್ ಬಳಕೆಗೆ ಬಂದಿದ್ದಾರೆ. ಇನ್ನು ಕಡಿಮೆ ಬೆಲೆಗೆ ಸಿಗುತ್ತಿರುವ ಇಂಟರ್‌ನೆಟ್ ಸೇವೆಗಳೂ ಕೂಡ ಸ್ಮಾರ್ಟ್‌ಪೋನ್ ಬಳಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ?

ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ) ಮತ್ತು ಕಂಠರ್ ಐಎಂಆರ್ಬಿ ಈ ಜಂಟಿ ವರದಿಯನ್ನು ತಯಾರಿಸಿದ್ದು, ನಗರ ಪ್ರದೇಶಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇ 18.64ರಷ್ಟು ಪ್ರಗತಿ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಶೇ 15.03 ರಷ್ಟು ಮಾತ್ರ ಇದೆ ಎಂದು ವರದಿಯಲ್ಲಿ ಹೇಳಿದೆ.

ಅಂದಾಜು 45.5 ಕೋಟಿ ಜನಸಂಖ್ಯೆ ಹೊಂದಿರುವ ನಗರ ಭಾರತವು 295. ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಗ್ರಾಮೀಣ ಭಾರತ ಅಂದಾಜು 90 ಕೋಟಿ ಜನಸಂಖ್ಯೆ ಹೊಂದಿದ್ದು, ಅದರಲ್ಲಿ ಕೇವಲ 18.6 ಕೋಟಿ ಜನರು ಮಾತ್ರ ಅಂತರ್ಜಾಲ ಬಳಕೆ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಎಷ್ಟು ಗೊತ್ತಾ?

ಒಟ್ಟಾರೆ ಅಂತರ್ಜಾಲ ಬಳಕೆದಾರರಲ್ಲಿ 14.3 ಕೋಟಿ ಮಹಿಳೆಯರು ಅಂತರ್ಜಾಲ ಬಳಕೆ ಮಾಡುತ್ತಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಇದು ಒಟ್ಟು ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 30% ಆಗಿದೆ. ಇನ್ನು ಪ್ರತಿದಿನವೂ ಇಂಟರ್‌ನೆಟ್ ಬಳಕೆ ಮಾಡುವವರ ಪ್ರಮಾಣ ಅಂದಾಜು 28.1 ಕೋಟಿಯಷ್ಟಿರಬಹುದು ಎಂದು ಈ ಜಂಟಿ ವರದಿ ತಿಳಿಸಿದೆ.

ಓದಿರಿ: ಜಿಯೋ ಗ್ರಾಹಕರಿಗೆ ಬಂಪರ್!..ಮತ್ತೆ ಒಂದು ವರ್ಷ ಉಚಿತ ಪ್ರೈಮ್ ಸೇವೆ!!

English summary
The number of Internet users stood at 481 million in December 2017 Read more at kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot