Subscribe to Gizbot

ಇಂಟೆಕ್ಸ್‌ನಿಂದ ರೂ 5,000 ಕ್ಕೆ ಆಂಡ್ರಾಯ್ಡ್ ಫೋನ್

Written By:

ಇಂಟೆಕ್ಸ್ ರೂ 5000 ಕ್ಕೆ ಬಜೆಟ್ ಫೋನ್ ಅನ್ನು ಲಾಂಚ್ ಮಾಡಿದ್ದು ಇಂಟೆಕ್ಸ್ ಆಕ್ವಾ ಯಂಗ್ ಎಂಬ ಹೆಸರನ್ನು ಇದು ಪಡೆದುಕೊಂಡಿದೆ. ಕಂಪೆನಿ ವೆಬ್‌ಸೈಟ್‌ನಲ್ಲಿ ಫೋನ್ ಪಟ್ಟಿಯಾಗಿದೆ. ಭಾರತೀಯ ಮಾರುಕಟ್ಟೆಗೆ ಫೋನ್ ಇನ್ನೂ ಕಾಲಿಡಬೇಕಾಗಿದ್ದು ಮುಂಬರುವ ದಿನಗಳಲ್ಲಿ ಫೋನ್ ಭಾರತೀಯ ಇಂಟೆಕ್ಸ್ ಅಭಿಮಾನಿ ಬಳಕೆದಾರರ ಕೈ ಸೇರಲಿದೆ.

ಇಂಟೆಕ್ಸ್‌ನಿಂದ ರೂ 5,000 ಕ್ಕೆ ಆಂಡ್ರಾಯ್ಡ್ ಫೋನ್

ಫೋನ್ ಬೆಲೆ ರೂ 5,090 ಆಗಿದ್ದು, ಡ್ಯುಯಲ್ ಸಿಮ್ ವಿಶೇಷತೆಯೊಂದಿಗೆ ಡಿವೈಸ್ ಬಂದಿದೆ. ಆಂಡ್ರಾಯ್ಡ್ 5.1 ಲಾಲಿಪಪ್ ಇದರಲ್ಲಿ ಚಾಲನೆಯಾಗುತ್ತಿದ್ದು 5 ಇಂಚಿನ FWVGA ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್‌ಗೂ ಇದು ಬೆಂಬಲವನ್ನು ನೀಡುತ್ತಿದೆ.

ಓದಿರಿ: ಗೂಗಲ್‌ ಸ್ಟ್ರೀಟ್‌ವ್ಯೂನಲ್ಲಿರುವ ವಿಸ್ಮಯಗಳು

ಫೋನ್ 1.3GHZ ಕ್ವಾಡ್ ಕೋರ್ ಸ್ಪ್ರೆಡ್‌ಟರ್ಮ್ ಪ್ರೊಸೆಸರ್‌ನೊಂದಿಗೆ 1ಜಿಬಿ RAM ಅನ್ನು ಒಳಗೊಂಡು ಬಂದಿದೆ. ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದಾಗಿದೆ. ಫೋನ್ ರಿಯರ್ ಕ್ಯಾಮೆರಾ 5ಎಮ್‌ಪಿಯಾಗಿದ್ದು, ಮುಂಭಾಗ ಕ್ಯಾಮೆರಾ 0.3 ಎಮ್‌ಪಿಯಾಗಿದೆ. 3ಜಿ, ಜಿಪಿಆರ್‌ಎಸ್, ಜಿಪಿಎಸ್, ವೈಫೈ, ಬ್ಲ್ಯೂಟೂತ್ ಆಯ್ಕೆಗಳೊಂದಿಗೆ ಬಂದಿದೆ.

English summary
Intex has introduced a new budget smartphone in the 5K range The Intex Aqua Young has been listed on the company website.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot