ಆಪಲ್ ಕದ್ದಿರುವ ಆಂಡ್ರಾಯ್ಡ್‌ನ ಅತ್ಯುನ್ನತ ಫೀಚರ್‌ಗಳೇನು?

By Shwetha
|

ಆಪಲ್ ತನ್ನ ನೆಕ್ಸ್ಟ್ ಜನರೇಶನ್ ಮೊಬೈಲ್ ಓಎಸ್ ಐಓಎಸ್ 9 ಅನ್ನು ಸಾದರಪಡಿಸಿದೆ. ಡಬ್ಲ್ಯೂಡಬ್ಲ್ಯೂಡಿಸಿ ಕಾರ್ಯಾಗಾರದಲ್ಲಿ ಆಪಲ್ ಈ ಓಎಸ್‌ನ ಬಿಡುಗಡೆಯನ್ನು ಮಾಡಿತ್ತು.

ಓದಿರಿ: ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?

ಇಂದಿನ ಲೇಖನದಲ್ಲಿ ಈ ಓಎಸ್ ಪ್ರಸ್ತುಪಡಿಸಿರುವ ಹೊಸ ಫೀಚರ್‌ಗಳು ಮತ್ತು ಅಪ್‌ಗ್ರೇಡ್‌ಗಳ ಕುರಿತ ಮಾಹಿತಿಯನ್ನು ತಿಳಿಯೋಣ. ಈ ಫೀಷರ್‌ಗಳು ಆಂಡ್ರಾಯ್ಡ್ ಫೋನ್‌ನಲ್ಲಿದೆ ಎಂಬುದೇ ಇದರ ವಿಶೇಷತೆಯಾಗಿದೆ. ಆಂಡ್ರಾಯ್ಡ್ ತನ್ನ ಡಿವೈಸ್‌ಗಳಲ್ಲಿ ಆಪಲ್ ಹೊಸದಾಗಿ ಪ್ರಸ್ತುಪಡಿಸಿರುವ ಅಂಶಗಳನ್ನು ಈಗಾಗಲೇ ಸಾದರ ಪಡಿಸಿದ್ದು ಪಡಿಯಚ್ಚಿನಂತಿದೆ. ಹಾಗಿದ್ದರೆ ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವ ಆ ಫೀಚರ್‌ಗಳು ಯಾವುದು ಎಂಬುದನ್ನು ಅರಿತುಕೊಳ್ಳೋಣ.

ಪ್ರೊಆಕ್ಟೀವ್ ಅಸಿಸ್ಟೆಂಟ್

ಪ್ರೊಆಕ್ಟೀವ್ ಅಸಿಸ್ಟೆಂಟ್

ಐಓಎಸ್9 ಐಫೋನ್‌ಗೆ ತಂದಿರುವ ಉತ್ತಮ ಕೊಡುಗೆ ಎಂದರೆ ಜಾಣತನವಾಗಿದೆ. ಇದರ ಭಾಗವಾಗಿಯೇ ಪ್ರೊಆಕ್ಟೀವ್ ಅಸಿಸ್ಟೆಂಟ್ ಬಿಡುಗಡೆಯಾಗಿದೆ ಎಂದು ಹೇಳಬಹುದು. ನಿಮ್ಮ ಇಮೇಲ್, ಕ್ಯಾಲೆಂಡರ್ ಮತ್ತು ಬಳಕೆಯ ವಿಧಾನವನ್ನು ಅನುಸರಿಸಿ ಇದು ಸಿದ್ಧ ಮಾಹಿತಿಯನ್ನು ಒದಗಿಸುತ್ತದೆ. ಆಂಡ್ರಾಯ್ಡ್‌ನ ಗೂಗಲ್ ನೌ ಈ ಫೀಚರ್ ಅನ್ನು ಒದಗಿಸುತ್ತಿದೆ.

ಕಡಿಮೆ ಪವರ್ ಮೋಡ್

ಕಡಿಮೆ ಪವರ್ ಮೋಡ್

ಐಓಎಸ್ 9 ಲೋ ಪವರ್ ಮೋಡ್‌ನೊಂದಿಗೆ ಬಂದಿದ್ದು ಇದು 3 ಗಂಟೆಗಳವರೆಗೆ ಐಫೋನ್ ಬ್ಯಾಟರಿ ಬ್ಯಾಕಪ್ ಅನ್ನು ಇರಿಸುತ್ತದೆ. ನಿಮ್ಮ ಕಾರ್ಯಕ್ಷಮತೆಯನ್ನು ಕುಗ್ಗಿಸಿ ಹಿನ್ನಲೆ ಅಪ್ಲಿಕೇಶನ್ ಚಾಲನೆಯನ್ನು ತಗ್ಗಿಸಿ ಬ್ರೈಟ್‌ನೆಸ್ ಅನ್ನು ತನ್ನಷ್ಟಕ್ಕೆ ಕಡಿಮೆ ಮಾಡುತ್ತದೆ. ಆಂಡ್ರಾಯ್ಡ್ 5.0 ಲಾಲಿಪಪ್ ಸ್ಟಾಕ್ ಆಂಡ್ರಾಯ್ಡ್ ಡಿವೈಸ್ ಎಂಬ ಫೀಚರ್ ಅನ್ನು ಪ್ರಸ್ತುತಪಡಿಸಿದ್ದು ಎಚ್‌ಟಿಸಿ ಹೆಚ್ಚು ಪವರ್ ಸೇವಿಂಗ್ ಮೋಡ್‌ನೊಂದಿಗೆ ಬಂದಿದೆ.

ಸ್ಪಿಲ್ಟ್ ವ್ಯೂ

ಸ್ಪಿಲ್ಟ್ ವ್ಯೂ

ಸ್ಪಿಲ್ಟ್ ಸ್ಕ್ರೀನ್ ಫೀಚರ್ ಆದ ಸ್ಪಿಲ್ಟ್ ವ್ಯೂವನ್ನು ಆಪಲ್ ಘೋಷಿಸಿದೆ. ಐಪ್ಯಾಡ್ ಏರ್ 2 ಬಳಕೆದಾರರು ಒಮ್ಮೆಗೆ ಎರಡು ಅಪ್ಲಿಕೇಶನ್‌ಗಳನ್ನು ಒಂದೇ ಸಮಯದಲ್ಲಿ ರನ್ ಮಾಡುವುದು ಜೊತೆಗೆ ಕಾರ್ಯನಿರ್ವಹಿಸುವುದೂ ಮಾಡಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ನಲ್ಲಿ ಮತ್ತು ದುಬಾರಿ ಎಲ್‌ಜಿ ಅಂತೆಯೇ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಈ ಫೀಚರ್ ಇದೆ.

ಪಿಕ್ಚರ್ ಇನ್ ಪಿಕ್ಚರ್

ಪಿಕ್ಚರ್ ಇನ್ ಪಿಕ್ಚರ್

ಪಿಕ್ಚರ್ ಇನ್ ಪಿಕ್ಚರ್ ಎಂಬ ಫೀಚರ್ ಅನ್ನು ಆಪಲ್ ಪ್ರಸ್ತುಪಡಿಸಿದ್ದು ಸಣ್ಣ ವಿಂಡೋದಲ್ಲಿ ವೀಡಿಯೋಗಳನ್ನು ಚಾಲನೆ ಮಾಡುವ ವ್ಯವಸ್ಥೆಯನ್ನು ಇದು ಕಲ್ಪಿಸಿದೆ. ಫೇಸ್ ಟೈಮರ್ ಅಥವಾ ವೀಡಿಯೋ ವೀಕ್ಷಣೆಯನ್ನು ಮಾಡುತ್ತಿರುವಾಗ ಬಳಕೆದಾರರು ಹೋಮ್ ಬಟನ್ ಅನ್ನು ಒತ್ತಬಹುದು ಮತ್ತು ವೀಡಿಯೋ ಡಿಸ್‌ಪ್ಲೇಯ ಕೆಳಭಾಗದಲ್ಲಿ ಪ್ರಸಾರವಾಗುತ್ತದೆ. ಸ್ಯಾಮ್‌ಸಂಗ್ ಪಾಪ್-ಅಪ್ ಪ್ಲೇ ಎಂಬ ಫೀಚರ್ ಅನ್ನು ಈಗಾಗಲೇ ಪ್ರಸ್ತುಪಡಿಸಿದೆ.

ನ್ಯೂಸ್ ಅಪ್ಲಿಕೇಶನ್

ನ್ಯೂಸ್ ಅಪ್ಲಿಕೇಶನ್

ಆಪಲ್ ನ್ಯೂಸ್ ಅಪ್ಲಿಕೇಶನ್ ಮೂಲಕ ತನ್ನ ಬಳಕೆದಾರರಿಗೆ ಹೊಸ ಲೋಕವನ್ನೇ ತೆರೆದಿಡುತ್ತಿದೆ. ಬೇರೆ ಬೇರೆ ಪ್ರಕಟಣೆಗಳ ವೈಯಕ್ತೀಕರಿಸಿದ ವಿಷಯವನ್ನು ಹೊತ್ತು ತರುತ್ತಿದ್ದು ಇದನ್ನು ಓದುಗನಿಗೆ ಮನನವಾಗುವಂತೆ ಮಾರ್ಪಡಿಸುತ್ತದೆ. ಸಂಪೂರ್ಣ ಮಾಹಿತಿಯನ್ನು ಓದುಗರಿಗೆ ನೀಡುತ್ತದೆ. ಗೂಗಲ್‌ನ ನ್ಯೂಸ್ ಸ್ಟ್ಯಾಂಡ್ ಇದೇ ರೀತಿಯ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ.

ಸುಧಾರಿತ ಸರ್ಚ್

ಸುಧಾರಿತ ಸರ್ಚ್

ಹುಡುಕಾಟ ವಿಷಯಗಳು ಮತ್ತು ಅದಕ್ಕೆ ತಕ್ಕುದಾದ ಹೆಚ್ಚಿನ ಉತ್ತರಗಳನ್ನು ಸಿರಿ ನೀಡುತ್ತಿದೆ. ಹತ್ತಿರದ ಸ್ಥಳಗಳು, ಹೆಚ್ಚಾಗಿ ಬಳಸಿದ ಅಪ್ಲಿಕೇಶನ್‌ಗಳು, ಜನರು ಮತ್ತು ಸ್ಥಳೀಯ ಸುದ್ದಿಗಳು ಸೇರಿದಂತೆ ಹುಡುಕಾಟ ಸಲಹೆಗಳನ್ನು ಒದಗಿಸುತ್ತದೆ. ಆಂಡ್ರಾಯ್ಡ್‌ನಲ್ಲಿರುವ ಗೂಗಲ್ ನೌ ಮತ್ತು ಗೂಗಲ್ ಸರ್ಚ್ ಅಪ್ಲಿಕೇಶನ್ ಇದೇ ವ್ಯವಸ್ಥೆಯೊಂದಿಗೆ ಬಂದಿದೆ.

ಕೀಬೋರ್ಡ್ ಶಾರ್ಟ್‌ಕಟ್‌ಗಳು

ಕೀಬೋರ್ಡ್ ಶಾರ್ಟ್‌ಕಟ್‌ಗಳು

ಐಓಎಸ್ 9 ನಲ್ಲಿರುವ ಹೊಸ ತ್ವರಿತ ಕೀಬೋರ್ಡ್ ಹೊಸ ಟೂಲ್‌ಬಾರ್ ಅನ್ನು ಒದಗಿಸುತ್ತದೆ ಇದರಿಂದಾಗಿ ನಕಲಿಸುವುದು, ಅಂಟಿಸುವುದು, ಕತ್ತರಿಸುವುದನ್ನು ಇನ್ನಷ್ಟು ಸರಳವಾಗಿ ನಿರ್ವಹಿಸಬಹುದಾಗಿದೆ. ಇನ್ನು ಹೆಚ್ಚಿನ ಥರ್ಡ್ ಪಾರ್ಟಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಇದೇ ಫೀಚರ್ ಅನ್ನು ಒದಗಿಸುತ್ತಿವೆ. ಆಪಲ್ ಆಂಡ್ರಾಯ್ಡ್‌ನಿಂದ ಪಡೆದುಕೊಂಡ ಫೀಚರ್ ಇದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಟ್ರಾನ್ಸಿಟ್ ಡೈರೆಕ್ಶನ್ಸ್

ಟ್ರಾನ್ಸಿಟ್ ಡೈರೆಕ್ಶನ್ಸ್

ಟ್ರಾನ್ಸಿಟ್ ಡೈರೆಕ್ಶನ್ಸ್ ಎಂಬ ಫೀಚರ್‌ನಲ್ಲಿ ಆಪಲ್ ಹಿಂದುಳಿದಿತ್ತು. ಅದಾಗ್ಯೂ ಐಓಎಸ್ 9 ಎರಡು ರೀತಿಯ ದೋಷಗಳನ್ನು ಎತ್ತಿ ತೋರಿಸಿದೆ. ಆಪಲ್ ಮ್ಯಾಪ್ಸ್‌ನಲ್ಲಿ ಸಾರ್ವಜನಿಕ ಸಾರಿಗೆ ಮಾಹಿತಿಯಿದ್ದು ಬಸ್ ಮತ್ತು ಟ್ಯಾಕ್ಸಿ ವಿವರನ್ನು ಬಳಕೆದಾರರಿಗೆ ಪಡೆದುಕೊಳ್ಳಬಹುದಾಗಿದೆ. ಇನ್ನು ಆಸಕ್ತಿಕರ ಸ್ಥಳಗಳನ್ನು ಇದರಲ್ಲಿ ಲೊಕೇಟ್ ಮಾಡಬಹುದು. ಆಂಡ್ರಾಯ್ಡ್‌ನಲ್ಲಿ ಗೂಗಲ್ ಮ್ಯಾಪ್ಸ್ ಈ ವ್ಯವಸ್ಥೆಯನ್ನು ಈಗಾಗಲೇ ಹೊಂದಿದೆ.

Most Read Articles
Best Mobiles in India

English summary
Apple showcased its next-generation mobile operating system, iOS 9, during the keynote session of its WWDC. Interestingly, a number of these features have been available on Android phones and tablets for a long time, though they are not part of stock Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more