ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌ ಲಾಂಚ್‌!..ಏನುಂಟು..ಏನಿಲ್ಲ!

|

ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 14 ಸರಣಿಯನ್ನು ಇಂದು (ಸೆಪ್ಟೆಂಬರ್ 7 ರಂದು) ಬಿಡುಗಡೆ ಮಾಡಿದೆ. ಸಂಸ್ಥೆಯು (Far Out) 'ಫಾರ್ ಔಟ್' ಹೆಸರಿನಲ್ಲಿ ಕಾರ್ಯಕ್ರಮದ ಮೂಲಕ ಐಫೋನ್ 14 ಸರಣಿಯ ಮಾದರಿಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದೆ.

ಪರಿಚಯಿಸಿದೆ

ಆಪಲ್‌ ಸಂಸ್ಥೆಯು ಆಯೋಜಿಸಿದ್ದ 'ಫಾರ್ ಔಟ್' ಹೆಸರಿನ ಕಾರ್ಯಕ್ರದಲ್ಲಿ ಇಂದು ಐಫೋನ್ 14 ಸರಣಿಯನ್ನು ಪರಿಚಯಿಸಿದೆ. ಈ ಸರಣಿಯು A15 ಬಯೋನಿಕ್ ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ನಿರೀಕ್ಷೆಯಂತೆ ಐಫೋನ್ 14 ಮತ್ತು ಐಫೋನ್ 14 ಪ್ಲಸ್‌ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಇನ್ನು ಐಫೋನ್‌ 14 ಸರಣಿಯು ಈ ಹಿಂದಿನ ಐಫೋನ್‌ 13 ಸರಣಿಯ ಉತ್ತರಾಧಿಕಾರಿ ಆಗಿದ್ದು, ಸಾಕಷ್ಟು ಅಪ್‌ಡೇಟ್‌ಗಳೊಂದಿಗೆ ಎಂಟ್ರಿ ಕೊಟ್ಟಿದೆ. ಇದ್ರಲ್ಲಿ Emergency SOS via satellite ಆಯ್ಕೆ ಪ್ರಮುಖ ಆಕರ್ಷಣೆ ಆಗಿದೆ.

ಐಫೋನ್

ನೂತನ ಐಫೋನ್ 14 ಫೋನ್ ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಹಿಂಭಾಗದ ಮುಖ್ಯ ಕ್ಯಾಮೆರಾವು ಸಹ 12 ಮೆಗಾ ಪಿಕ್ಸಲ್‌ನಲ್ಲಿದೆ. ಐಫೋನ್ 14 ಪ್ಲಸ್‌ ಫೋನ್‌ಗಳು ಹಲವು ಹೊಸ ನಮೂನೆಯ ಫೀಚರ್ಸ್‌ಗಳೊಂದಿಗೆ ಲಗ್ಗೆ ಹಾಕಿದ್ದು, ಡಿಸೈನ್, ಕ್ಯಾಮೆರಾ, ಬ್ಯಾಟರಿ ಆಯ್ಕೆಗಳು ಆಕರ್ಷಕ ಆಗಿ ಕಾಣಿಸಿಕೊಂಡಿವೆ. ಇನ್ನು ಈ ಐಫೋನ್ 14, ಐಫೋನ್ 14 ಪ್ಲಸ್‌ ಫೋನ್‌ಗಳ ಫೀಚರ್ಸ್‌ ಏನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 14 ಫೀಚರ್ಸ್‌

ಐಫೋನ್ 14 ಫೀಚರ್ಸ್‌

ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

ಐಫೋನ್ 14 ಪ್ಲಸ್‌ ಫೀಚರ್ಸ್‌

ಐಫೋನ್ 14 ಪ್ಲಸ್‌ ಫೀಚರ್ಸ್‌

ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್‌ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್‌ ಪಡೆದಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?

ಬೆಲೆ ಎಷ್ಟು ಮತ್ತು ಲಭ್ಯತೆ?

ಹೊಸ ಐಫೋನ್ 14 ಆರಂಭಿಕ ಬೆಲೆಯು $799 (ಭಾರತದಲ್ಲಿ ಭಾರತದಲ್ಲಿ ಆರಂಭಿಕ ಬೆಲೆ 79,900 ರೂ) ಆಗಿದೆ. ಅದೇ ರಿತಿ ಐಫೋನ್ 14 ಪ್ಲಸ್‌ ಬೆಲೆಯು $899 (ಭಾರತದಲ್ಲಿ ಭಾರತದಲ್ಲಿ ಆರಂಭಿಕ ಬೆಲೆ 89,900ರೂ) ಆಗಿದೆ. ಐಫೋನ್ 14 ಸರಣಿಯ ಮುಂಗಡ-ಕೋರಿಕೆ ಲಭ್ಯತೆಯು ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುತ್ತದೆ. ಆದರೆ ಐಫೋನ್ 14 ಸೆಪ್ಟೆಂಬರ್ 16 ರಿಂದ ಲಭ್ಯವಾಗಲಿದ್ದು, ಇನ್ನು ಐಫೋನ್ 14 ಪ್ಲಸ್ ಅಕ್ಟೋಬರ್ 7 ರಂದು ಮಾರುಕಟ್ಟೆಗೆ ಬರಲಿದೆ.

Best Mobiles in India

English summary
iPhone 14 and iPhone 14 Plus with A15 Bionic Launched: Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X