ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 14 ಪ್ಲಸ್‌ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!

|

ಆಪಲ್‌ ಐಫೋನ್‌ ಖರೀದಿಸಬೇಕೆಂದು ಕೊಂಡವರಿಗೆ ಫ್ಲಿಪ್‌ಕಾರ್ಟ್‌ ಗುಡ್‌ನ್ಯೂಸ್‌ ನೀಡಿದೆ. ಫ್ಲಿಪ್‌ಕಾರ್ಟ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದ ಐಫೋನ್‌ 14 ಪ್ಲಸ್‌ ಅನ್ನು ಡಿಸ್ಕೌಂಟ್‌ ಬೆಲೆಯಲ್ಲಿ ಮಾರಾಟಮಾಡ್ತಿದೆ. ಈ ಮೂಲಕ ಐಫೋನ್‌ 14 ಪ್ಲಸ್‌ ಬೆಲೆಯಲ್ಲಿ 12,000 ರೂಪಾಯಿ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್‌ ಆಫರ್‌ಗಳು ಮತ್ತು ಎಕ್ಸ್‌ಚೇಂಜ್‌ ಆಫರ್‌ ಅನ್ನು ಅನ್ವಯಿಸಿದರೆ ಇನ್ನಷ್ಟು ಕಡಿಮೆ ಬೆಲೆಗೆ ಐಫೋನ್‌ 14 ಪ್ಲಸ್‌ ಅನ್ನು ಖರೀದಿಸಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 14 ಪ್ಲಸ್‌ ಬೆಲೆಯಲ್ಲಿ ಭಾರಿ ಕಡಿತ!

ಹೌದು, ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 14 ಪ್ಲಸ್‌ ಬೆಲೆ ಕಡಿತವನ್ನು ಪಡೆದುಕೊಂಡಿದೆ. 89,900ರೂ. ಮೂಲ ಬೆಲೆ ಹೊಂದಿದ್ದ ಐಫೋನ್‌ 14 ಪ್ಲಸ್‌ ಅನ್ನು 76,999ರೂ. ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರೊಂದಿಗೆ ಇನ್ನು ಅನೇಕ ಆಫರ್‌ಗಳನ್ನು ನೀವು ಪಡೆದುಕೊಳ್ಳುವ ಮೂಲಕ ಈ ಐಫೋನ್‌ ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 14 ಪ್ಲಸ್‌ ಮೇಲೆ ಏನೆಲ್ಲಾ ರಿಯಾಯಿತಿ ಲಭ್ಯವಾಗ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ 14 ಪ್ಲಸ್‌ ಮೇಲೆ ಏನೆಲ್ಲಾ ಆಫರ್‌?
ಐಫೋನ್ 14 ಪ್ಲಸ್‌ ಮೂಲ ಬೆಲೆ 89,900ರೂ.ಆಗಿದೆ. ಆದರೆ ಈ ಐಫೋನ್‌ ಅನ್ನು ಫ್ಲಿಪ್‌ಕಾರ್ಟ್‌ ಕೇವಲ 76,999ರೂ.ಬೆಲೆಯಲ್ಲಿ ಸೇಲ್‌ ಮಾಡ್ತಿದೆ. ಈ ಮೂಲಕ ಐಫೋನ್‌ 14 ಪ್ಲಸ್‌ ಮೇಲೆ ಬರೋಬ್ಬರಿ 12,901 ರೂಗಳ ಫ್ಲಾಟ್ ರಿಯಾಯಿತಿ ದೊರೆಯುತ್ತಿದೆ. ಇದಲ್ಲದೆ ನಿಮ್ಮ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿಕೊಂಡು ಖರೀದಿಸಿದರೆ 5% ರಷ್ಟು ಡಿಸ್ಕೌಂಟ್‌ ಸಿಗಲಿದೆ. ಜೊತೆಗೆ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 21400ರೂ. ವರೆಗೆ(ಡಿವೈಸ್‌ನ ಗುಣಮಟ್ಟದ ಆಧಾರದ ಮೇಲೆ) ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ನೀವು ಐಫೋನ್‌ 14 ಪ್ಲಸ್‌ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 14 ಪ್ಲಸ್‌ ಬೆಲೆಯಲ್ಲಿ ಭಾರಿ ಕಡಿತ!

ಐಫೋನ್ 14 ಪ್ಲಸ್‌ ಫೀಚರ್ಸ್‌
ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್‌ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್‌ ಪಡೆದಿದೆ.

ಇನ್ನು ಕಳೆದ ವರ್ಷ ಬಿಡುಗಡೆಯಾಗಿದ್ದ ಐಫೋನ್‌ 14 ಸರಣಿ Emergency SOS via satellite ಫೀಚರ್ಸ್‌ನಿಂದಾಗಿ ಗಮನಸೆಳೆದಿದೆ. Emergency SOS via satellite ಅಕ್ಷರಶಃ ತುರ್ತು ಸಹಾಯಕ ಆಯ್ಕೆ ಆಗಿದೆ. ಸುಲಭವಾಗಿ ಹೇಳುವುದಾದರೆ, ಯಾವುದೇ ವೈ-ಫೈ ಕನೆಕ್ಟಿವಿಟಿ ಅಥವಾ ಸೆಲ್ಯುಲರ್ ಕನೆಕ್ಟಿವಿಟಿ ಇಲ್ಲದ ಅಥವಾ ಸಿಗದ ಸಂದರ್ಭಗಳಲ್ಲಿಯೂ ಬಳಕೆದಾರರು ಮೆಸೆಜ್‌ ಅಪ್ಲಿಕೇಶನ್ ಮೂಲಕ ಮೆಸೆಜ್‌ ಕಳುಹಿಸಬಹುದಾಗಿದೆ. ಬಳಕೆದಾರರು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿರುವಾಗ ಖಂಡಿತಾ ಇದೊಂದು ಉಪಯುಕ್ತ ಫೀಚರ್‌ ಎನ್ನಬಹುದು.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 14 ಪ್ಲಸ್‌ ಬೆಲೆಯಲ್ಲಿ ಭಾರಿ ಕಡಿತ!

ತುರ್ತು ಸಂದರ್ಭದಲ್ಲಿ SOS ಫೀಚರ್ಸ್‌ ನಿಮಗೆ ಸಹಾಯ ಮಾಡಲಿದೆ. ನಿಮ್ಮ ಐಫೋನ್‌ನಲ್ಲಿ ನೀವು ತುರ್ತು SOS ಫೀಚರ್ಸ್‌ ಅನ್ನು ಬಳಸ ಬೇಕಾದರೆ ಮೊದಲಿಗೆ ತುರ್ತು ಸಂಪರ್ಕವನ್ನು ಗೊತ್ತುಪಡಿಸಬೇಕಿರುತ್ತದೆ. ನೀವು ತುರ್ತು ಸೇವೆಗಳಿಗೆ ಸೂಚನೆ ನೀಡಿದ ನಂತರ ನಿಮ್ಮ ಸ್ಥಳ ಮತ್ತು ಪರಿಸ್ಥಿತಿಯ ಬಗ್ಗೆ ತಿಳಿಸಲಾಗುತ್ತದೆ. SOS ಫೀಚರ್ಸ್‌ ಬಳಸುವಾಗ ಕರೆನ್ಸಿ ಇರಬೇಕಾದ ಅವಶ್ಯಕತೆ ಕೂಡ ಇರುವುದಿಲ್ಲ.

Best Mobiles in India

English summary
iPhone 14 is being sold with a flat discount of Rs 12,901 on Flipkart. Mind you, the price cut is not inclusive of any bank offer or any exchange offer.know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X