ನೀವು ಐಫೋನ್‌ ಬಳಕೆದಾರರೇ?... ತಿಳಿದುಕೊಳ್ಳಲೇಬೇಕಾದ ಟ್ರಿಕ್ಸ್‌ಗಳು ಇಲ್ಲಿವೆ!

|

ಐಫೋನ್‌ಗಳ ಕಾರ್ಯಕ್ಷಮತೆ ಹಾಗೂ ಅದರ ಶೈಲಿಗೆ ಗ್ರಾಹಕರು ಸುಲಭವಾಗಿ ಮಾರುಹೋಗುತ್ತಾರೆ. ಅದರಲ್ಲೂ ಐಫೋನ್‌ ಈಗ ಪ್ರತಿಷ್ಟೆಯ ವಿಷಯವಾಗಿಯೂ ಕಂಡುಬರುತ್ತಿದೆ. ಈ ಕಾರಣಕ್ಕೆ ಅದೆಷ್ಟೋ ಜನ ಈ ಫೋನ್‌ಗಳನ್ನು ಖರೀದಿ ಮಾಡಲು ಯಾವಾಗಲೂ ಕಾತುರರರಾಗಿರುತ್ತಾರೆ. ಹಾಗಿದ್ರೆ, ಈ ಐಫೋನ್‌ನಲ್ಲಿ ಹಲವಾರು ಜನರಿಗೆ ಗೊತ್ತಿರದ ಕೆಲವು ಟ್ರಿಕ್ಸ್‌ ಗಳು ಇಲ್ಲಿವೆ ಗಮನಿಸಿ.

ನೀವು ಐಫೋನ್‌ ಬಳಕೆದಾರರೇ?... ತಿಳಿದುಕೊಳ್ಳಲೇಬೇಕಾದ ಟ್ರಿಕ್ಸ್‌ಗಳು ಇಲ್ಲಿವೆ!

ಹೌದು, ಸಾಮಾನ್ಯವಾಗಿ ಎಲ್ಲಾ ಫೋನ್‌ಗಳಲ್ಲಿಯೂ ವಿಧ ವಿಧವಾದ ಫೀಚರ್ಸ್‌ಗಳು ಬಳಕೆದಾರರಿಗೆ ಹಲವಾರು ರೀತಿಯ ಪ್ರಯೋಜನ ನೀಡುತ್ತವೆ. ಇದರ ಹೊರತಾಗಿಯೂ ಐಫೋನ್‌ನಲ್ಲಿ ಹೆಚ್ಚಿನ ಸೌಲಭ್ಯ ಬಳಕೆದಾರರಿಗೆ ಸಿಗಲಿದೆ. ಹಾಗಿದ್ರೆ, ಏನೆಲ್ಲಾ ಟ್ರಿಕ್ಸ್‌ನಿಂದ ಯಾವೆಲ್ಲಾ ಪ್ರಯೋಜನ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ವಸ್ತುಗಳನ್ನು ಅಳೆಯಲು ಐಫೋನ್ ಬಳಸಬಹುದು
ಐಫೋನ್‌ನಲ್ಲಿ ನಿಮ್ಮ ಮುಂದೆ ಇರುವ ಯಾವುದೇ ವಸ್ತುವಿನ ಗಾತ್ರವನ್ನು ಅಳೆಯಬಹುದು. ಇದಕ್ಕಾಗಿ ನೀವು ಅಳತೆ ಆಪ್‌ ಓಪನ್‌ ಮಾಡಿ ನಂತರ ನಿಮ್ಮ ಹತ್ತಿರದ ವಸ್ತುವನ್ನು ಸ್ಕ್ಯಾನ್ ಮಾಡಲು ಐಫೋನ್ ಕ್ಯಾಮೆರಾಗೆ ಅನುಮತಿ ನೀಡಿ. ಇದಾದ ನಂತರ ಅಟೋಮ್ಯಾಟಿಕ್‌ ಆಗಿ ಐಫೋನ್ ವಸ್ತುವಿನ ಅಂಚನ್ನು ಪತ್ತೆ ಮಾಡುತ್ತದೆ ಮತ್ತು ಅದನ್ನು ಬಿಳಿ ಪೆಟ್ಟಿಗೆಯಲ್ಲಿ ಫ್ರೇಮ್ ಮಾಡುತ್ತದೆ. ಆಯಾಮಗಳನ್ನು ನೋಡಲು ಬಿಳಿ ಪೆಟ್ಟಿಗೆಯನ್ನು ಟ್ಯಾಪ್ ಮಾಡಬಹುದು ಅಥವಾ + ಚಿಹ್ನೆ ಮೇಲೆ ಟ್ಯಾಪ್‌ ಮಾಡಬಹುದಾಗಿದೆ.

ಪಠ್ಯವನ್ನು ಅನುವಾದಿಸಬಹುದು!
ನೀವು ಪರಿಚಯವಿಲ್ಲದ ಭಾಷೆಯಲ್ಲಿ ಬರೆದ ಪಠ್ಯವನ್ನು ಓದಲು ಬಯಸಿದರೆ ಐಫೋನ್‌ ಇದಕ್ಕೆ ಅನುವು ಮಾಡಿಕೊಡಲಿದೆ. ನಿಮ್ಮ ಮೊಬೈಲ್ ಪಠ್ಯವನ್ನು ಗುರುತಿಸಿದ ನಂತರ, ಡಿಸ್‌ಪ್ಲೇ ಮೇಲೆ ಹಳದಿ ರೇಖೆಗಳನ್ನು ಕಾಣಬಹುದು. ನಂತರ ಡಿಸ್‌ಪ್ಲೇನ ಕೆಳಗಿನ ಬಲ ಮೂಲೆಯಲ್ಲಿ, ಸ್ಕ್ಯಾನ್ ಚಿಹ್ನೆಯನ್ನು ಟ್ಯಾಪ್ ಮಾಡಿದಾಗ ಇದು ಪಠ್ಯವನ್ನು ಪ್ರತ್ಯೇಕಿಸುತ್ತದೆ ಮತ್ತು ಅದನ್ನು ಸ್ಟಿಲ್ ಇಮೇಜ್ ಆಗಿ ವರ್ಧಿಸುತ್ತದೆ. ಅಂತಿಮವಾಗಿ ಬೇಕಾದ ಭಾಷೆಯಲ್ಲಿ ಆ ಪಠ್ಯವನ್ನು ಓದಬಹುದಾಗಿದೆ.

ನೀವು ಐಫೋನ್‌ ಬಳಕೆದಾರರೇ?... ತಿಳಿದುಕೊಳ್ಳಲೇಬೇಕಾದ ಟ್ರಿಕ್ಸ್‌ಗಳು ಇಲ್ಲಿವೆ!

ವಿಜೆಟ್‌ಗಳೊಂದಿಗೆ ಕಸ್ಟಮೈಸ್ ಮಾಡಿ
ನಿಮ್ಮ ಫೋನ್‌ನಲ್ಲಿ ಯಾವುದೇ ಆಪ್‌ ಅನ್ನು ಓಪನ್ ಮಾಡದೆಯೇ ಒಂದೇ ನೋಟದಲ್ಲಿ ಮಾಹಿತಿ ಪಡೆದುಕೊಳ್ಳಬೇಕು ಎಂದರೆ ವಿಜೆಟ್‌ ಸಹಾಯಕ. ಇದಕ್ಕಾಗಿ ನೀವು ನೀವು ಕಸ್ಟಮೈಸ್ ಟ್ಯಾಪ್ ಮಾಡಲು ಸಾಧ್ಯವಾಗುವವರೆಗೆ ಲಾಕ್ ಸ್ಕ್ರೀನ್ ಅನ್ನು ಟಚ್‌ ಮಾಡಿ ಹಿಡಿದುಕೊಳ್ಳಿ. ನಂತರ ಯಾವ ವಿಜೆಟ್‌ಗಳನ್ನು ಸೇರಿಸಬೇಕೋ ಅದನ್ನು ಅಲ್ಲಿ ನೀಡಲಾದ ಪಟ್ಟಿಯಿಂದ ಆಯ್ಕೆ ಮಾಡಿಕೊಳ್ಳಿ. ಇದಾದ ನಂತರ ಬೇಕಾದ ಸ್ಥಳಕ್ಕೆ ಡ್ರ್ಯಾಗ್‌ ಮಾಡಿ.

ಒನ್‌ ಹ್ಯಾಂಡ್ ಬಳಕೆ
ನೀವು ದೊಡ್ಡ ಡಿಸ್‌ಪ್ಲೇ ಇರುವ ಡಿವೈಸ್ ಹೊಂದಿದ್ದರೆ ಒಂದು ಕೈಯಿಂದ ಡಿಸ್‌ಪ್ಲೇಯನ್ನು ಕಂಟ್ರೋಲ್‌ ಮಾಡಲು ಕಷ್ಟವಾಗುತ್ತದೆ. ಇದಕ್ಕಾಗಿ ಮೆನುವಿನಲ್ಲಿ ರೀಚಬಿಲಿಟಿ ಆಯ್ಕೆ ಇದೆ. ಇದರ ಮೂಲಕ ಬೇಕಾದ ಕಂಟೆಂಟ್‌ ಅನ್ನು ಡಿಸ್‌ಪ್ಲೇನ ಅರ್ಧ ಭಾಗಕ್ಕೆ ಫಿಕ್ಸ್‌ ಮಾಡಿ ಬಳಕೆ ಮಾಡಬಹುದು. ಇದರಿಂದ ಒಂದೇ ಬೆರಳಲ್ಲಿ ಫೋನ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್ ವಿಭಾಗಕ್ಕೆ ಭೇಟಿ ನೀಡಬೇಕು. ನಂತರ ಅಕ್ಸೆಸಿಬಿಲಿಟಿ ವಿಭಾಗಕ್ಕೆ ತಲುಪಿ ಅಲ್ಲಿ ಟಚ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ, ಅದನ್ನು ಟ್ಯಾಪ್‌ ಮಾಡಿದ ನಂತರ ಸ್ಕ್ರೀನ್‌ ಸೈಜ್‌ ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಬಹುದಾಗಿದೆ.

ಇನ್‌ಬಿಲ್ಟ್‌ ಅಕ್ಸೆಸಿಬಿಲಿಟಿ ಫೀಚರ್ಸ್‌
ಇದನ್ನು ದೃಷ್ಟಿ, ಶ್ರವಣ ಮತ್ತು ಕಲಿಕೆಯ ಅಗತ್ಯಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಈ ಫೀಚರ್ಸ್‌ ವಿಭಾಗಕ್ಕೆ ಯಾವುದೇ ಸಮಯದಲ್ಲಿಯಾದರೂ ಪ್ರವೇಶಿಸಬಹುದು. ಇದರಲ್ಲಿ ಪ್ರಮುಖವಾಗಿ ಪಠ್ಯದ ಗಾತ್ರವನ್ನು ಹೊಂದಿಸಿಬಹುದಾಗಿದ್ದು, ಇದಕ್ಕಾಗಿ ನೀವು ಮೊದಲು ಸೆಟ್ಟಿಂಗ್‌ ವಿಭಾಗಕ್ಕೆ ತಲುಪಬೇಕು. ನಂತರ ಅಕ್ಸೆಸಿಬಿಲಿಟಿ ಆಯ್ಕೆ ಗಮನಿಸಿ. ಅಲ್ಲಿ ಡಿಸ್‌ಪ್ಲೇ ಮತ್ತು ಟೆಕ್ಸ್ಟ್‌ ಸೈಜ್‌ನಲ್ಲಿ ಬೇಕಾದ ಗಾತ್ರಕ್ಕೆ ಪಠ್ಯವನ್ನು ಸೆಟ್‌ ಮಾಡಿಕೊಳ್ಳಬಹುದು. ಅದರಲ್ಲೂ ಬಣ್ಣವನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಇನ್ನೆರಡು ಆಯ್ಕೆಗಳಿದ್ದು, ಸಂಪೂರ್ಣ ಡಿಸ್‌ಪ್ಲೇಯನ್ನು ಹಿಗ್ಗಿಸಬಹುದು ಹಾಗೂ ಪಠ್ಯವನ್ನು ಗಟ್ಟಿಯಾಗಿ ಓದುವಂತೆ ಮಾಡಬಹುದಾದ ಆಯ್ಕೆಯನ್ನೂ ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ.

ನೀವು ಐಫೋನ್‌ ಬಳಕೆದಾರರೇ?... ತಿಳಿದುಕೊಳ್ಳಲೇಬೇಕಾದ ಟ್ರಿಕ್ಸ್‌ಗಳು ಇಲ್ಲಿವೆ!

ಸ್ಕ್ರೀನ್‌ಶಾಟ್‌ ವೇಳೆ ಬ್ಯಾಕ್ ಟ್ಯಾಪ್ ಬಳಸಿ
ಐಒಎಸ್ 14 ಅಥವಾ ಇದರ ಮುಂದಿನ ಆವೃತ್ತಿಯಲ್ಲಿ ಬ್ಯಾಕ್ ಟ್ಯಾಪ್ ಫೀಚರ್ಸ್‌ ಲಭ್ಯ ಇದೆ. ಇದರ ಮೂಲಕ ಸುಲಭವಾಗಿ ಸ್ಕ್ರೀನ್ ಶಾಟ್‌ ಚಿತ್ರ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್‌ ವಿಭಾಗಕ್ಕೆ ಪ್ರವೇಶ ಪಡೆಯಬೇಕಿದೆ. ನಂತರ ಅಲ್ಲಿ ಅಕ್ಸೆಸಿಬಿಲಿಟಿ ಆಯ್ಕೆಯನ್ನು ಟ್ಯಾಪ್‌ ಮಾಡಿದರೆ ಟಚ್‌ ಆಂಡ್‌ ಸೆಲೆಕ್ಟ್‌ ಬ್ಯಾಕ್‌ ಟ್ಯಾಬ್‌ ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿದರೆ ಈ ಸೌಲಭ್ಯ ನಿಮಗೆ ಲಭ್ಯವಾಗುತ್ತದೆ.

Best Mobiles in India

English summary
iPhone tricks you really need to know about.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X