ಬಿಡುಗಡೆಗೆ ಸಜ್ಜಾದ iQOO 10 ಪ್ರೊ; ಇದರ ಫೀಚರ್ಸ್‌ ತಿಳಿದ್ರೆ ಖಂಡಿತಾ ಅಚ್ಚರಿ ಪಡ್ತೀರಾ!

|

ಐಕ್ಯೂ (iQOO) ಮೊಬೈಲ್‌ ಕಂಪನಿಯು ತನ್ನ ಐಕ್ಯೂ 10 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನೂತನ ಸ್ಮಾರ್ಟ್‌ಫೋನ್ ಸರಣಿಯು ವೆನಿಲ್ಲಾ ಐಕ್ಯೂ 10 ಮತ್ತು ಐಕ್ಯೂ 10 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಇನ್ನು ಈ ಸರಣಿಯು ಇದೇ ಜುಲೈ 19, 2022 ರಂದು ಚೀನಾದಲ್ಲಿ ಅನಾವರಣ ಆಗಲಿದೆ ಎಂದು ಹೇಳಲಾಗಿದೆ. ಆದ್ರೆ, ಬಿಡುಗಡೆಗೆ ಮುಂಚಿತವಾಗಿ, ಐಕ್ಯೂ 10 ಪ್ರೊ ಫೋನಿನ ಬ್ಯಾಟರಿ ಫೀಚರ್‌ ಗ್ರಾಹಕರನ್ನು ಅಚ್ಚರಿಗೊಳ್ಳುವಂತೆ ಮಾಡಿದೆ.

ಬೆಂಬಲದೊಂದಿಗೆ

ಹೌದು, ಐಕ್ಯೂ ಸಂಸ್ಥೆಯು ತನ್ನ ಐಕ್ಯೂ 10 ಮತ್ತು ಐಕ್ಯೂ 10 ಪ್ರೊ ಫೋನ್‌ಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಅವುಗಳಲ್ಲಿ ಐಕ್ಯೂ 10 ಪ್ರೊ ಫೋನ್‌ 200W ವೇಗದ ಚಾರ್ಜಿಂಗ್‌ ಸೌಲಭ್ಯದ ಬೆಂಬಲದೊಂದಿಗೆ ಬರುತ್ತದೆ ಎಂದು ಐಕ್ಯೂ (iQOO) ದೃಢಪಡಿಸಿದೆ. ಐಕ್ಯೂ 10 ಪ್ರೊ ಫೋನ್‌ ವಿಶ್ವದ ಮೊದಲ 200W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಫೋನ್‌ ಎಂಬ ಹೆಗ್ಗಳಿಕೆ ಪಡೆಯುವ ಸಾಧ್ಯತೆಗಳಿವೆ.

ಪ್ರತಿಶತದಷ್ಟು

ಸಂಸ್ಥೆಯು ಐಕ್ಯೂ 10 ಪ್ರೊ ಫೋನಿನೊಂದಿಗೆ ಬಳಸಲಾಗುವ 200W ವೇಗದ ಚಾರ್ಜರ್‌ನ ಮೊದಲ ನೋಟವನ್ನು ಸಹ ಬಹಿರಂಗಪಡಿಸಲಾಗಿದೆ. ಇನ್ನು ಐಕ್ಯೂ 10 ಪ್ರೊ ಫೋನ್‌ 200W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಸಾಧನವು 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗೆಯೇ ವೆನಿಲ್ಲಾ ಐಕ್ಯೂ 10 ಫೋನ್‌ 120W ವೇಗದ ಚಾರ್ಜಿಂಗ್‌ ಸೌಲಭ್ಯದೊಂದಿಗೆ ಎಂಟ್ರಿ ಕೊಡಲಿದೆ ಎನ್ನಲಾಗಿದೆ.

ಐಕ್ಯೂ 10 ಪ್ರೊ ಫೋನ್‌ ನಿರೀಕ್ಷಿತ ಫೀಚರ್ಸ್‌

ಐಕ್ಯೂ 10 ಪ್ರೊ ಫೋನ್‌ ನಿರೀಕ್ಷಿತ ಫೀಚರ್ಸ್‌

ಐಕ್ಯೂ 10 ಪ್ರೊ ಫೋನ್‌ 6.78 ಇಂಚಿನ 2K+ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಸಾಧನವು ಸ್ನಾಪ್‌ಡ್ರಾಗನ್ 8+ ಜೆಬ್‌ 1 ಪ್ರೊಸೆಸರ್‌ನಿಂದ ಚಾಲಿತಗೊಳ್ಳುತ್ತದೆ. ಇದು 16 GB RAM ಮತ್ತು 512 GB UFS 3.1 ಸಂಗ್ರಹಣೆಯೊಂದಿಗೆ ಜೋಡಿಯಾಗಿ ಬರುತ್ತದೆ. ಇನ್ನು ಈ ಫೋನ್‌ ಆಂಡ್ರಾಯ್ಡ್‌ 12 ಆಧಾರಿತ OriginOS ಅನ್ನು ಬೂಟ್ ಮಾಡುತ್ತದೆ.

ಪಿಕ್ಸಲ್‌

ಈ ಫೋನ್ ತ್ರಿವಳಿ ಕ್ಯಾಮೆರಾ ಸೆನ್ಸಾರ್ ಒಳಗೊಂಡಿರುವ ಸಾಧ್ಯತೆಗಳಿವೆ. ಐಕ್ಯೂ 10 ಪ್ರೊ ಫೋನ್‌ 50 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದೆ. 50 ಮೆಗಾ ಪಿಕ್ಸಲ್‌ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 14.6 ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಇನ್ನು ಮುಂಭಾಗದಲ್ಲಿ, 32 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಸ್ನ್ಯಾಪರ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ಈ ಫೋನ್‌ 200W ವೇಗದ ಚಾರ್ಜಿಂಗ್ ಬೆಂಬಲಕ್ಕಾಗಿ 4,550mAh ಬ್ಯಾಟರಿಯನ್ನು ಹೊಂದಿದೆ ಎಂದು ವರದಿಯಾಗಿದೆ. ಬಜೆಟ್‌ ಬೆಲೆಯಲ್ಲಿ 6000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡ ಕೆಲವು ಫೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಸ್ಮಾರ್ಟ್‌ ಫೋನ್‌ ಆಕ್ಟಾ ಕೋರ್‌ ಎಕ್ಸಿನೋಸ್‌ 850SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ನಲ್ಲಿ ಒನ್ ಯುಐ ಕೋರ್‌ ಬೆಂಬಲ ದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು ಡ್ಯುಯಲ್ ಸಿಮ್ (ನ್ಯಾನೋ) ಸ್ಲಾಟ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ 4 GB RAM + 64 GB ಮತ್ತು 6GB RAM + 128 GB ವೇರಿಯೆಂಟ್‌ ಆಯ್ಕೆಯ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವನ್ನು ಹೊಂದಿದೆ. ಹಾಗೆಯೇ ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಈ ಸ್ಮಾರ್ಟ್‌ ಫೋನ್‌ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಟೆಕ್ನೋ ಸ್ಮಾರ್ಕ್‌ 7 ಸ್ಮಾರ್ಟ್‌ಫೋನ್‌

ಟೆಕ್ನೋ ಸ್ಮಾರ್ಕ್‌ 7 ಸ್ಮಾರ್ಟ್‌ಫೋನ್‌

ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. 2GB RAM ರೂಪಾಂತರವು ಕ್ವಾಡ್-ಕೋರ್ ಮೀಡಿಯಾ ಟೆಕ್ ಹಿಲಿಯೊ A20 SoC ಹೊಂದಿದ್ದರೆ, 3 GB RAM ರೂಪಾಂತರವು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ A25 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಾರ್ಯ ನಿರ್ವಹಿಸಲಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ಈ ಫೋನ್ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಸ್ಮಾರ್ಟ್‌ ಫೋನ್ 2400 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇನ್ಫಿನಿಟಿ-ಯು ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 6 GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 6,000 mAh ಸಾಮರ್ಥ್ಯದ ಬ್ಯಾಟರಿ ಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ತಂತ್ರಜ್ಞಾನ ವನ್ನು ಬೆಂಬಲಿಸುತ್ತದೆ.

Best Mobiles in India

English summary
iQOO 10 Pro will be world’s first 200W fast charging phone, company officially confirms.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X