ಐಕ್ಯೂ 9 SE 5G ಬೆಲೆಯಲ್ಲಿ ಭಾರೀ ಇಳಿಕೆ!..ಇದು ರೆಡ್ಮಿ ನೋಟ್‌ 12 ಪ್ರೊ ಗಿಂತ ಉತ್ತಮವೇ?

|

ಭಾರತದಲ್ಲಿ ಐಕ್ಯೂ (iQOO) ಮೊಬೈಲ್‌ ಸಂಸ್ಥೆಯು ಕೆಲವು ಫೋನ್‌ಗಳ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಆ ಪೈಕಿ ಐಕ್ಯೂ 9 SE 5G ಫೋನ್‌ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದ್ದು, ಇದೀಗ ಭರ್ಜರಿ ಬೆಲೆ ಇಳಿಕೆ ಕಂಡು ಮತ್ತೊಮ್ಮೆ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಆಲ್‌ ರೌಂಡರ್‌ 5G ಫೋನ್‌ ಎನಿಸಿಕೊಂಡಿರುವ ಐಕ್ಯೂ 9 SE 5G ಫೋನ್‌ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ರೆಡ್ಮಿ ನೋಟದ 12 ಪ್ರೊ+ ಫೋನಿಗಿಂತ ಇದು ಸೂಪರ್‌ ಆಗಿದೆಯಾ?

ಐಕ್ಯೂ 9 SE 5G ಬೆಲೆಯಲ್ಲಿ ಭಾರೀ ಇಳಿಕೆ!..ರೆಡ್ಮಿ ನೋಟ್‌ 12 ಪ್ರೊ ಗಿಂತ ಉತ್ತಮವೇ

ಹೌದು, ದೈತ್ಯ ಇ ಕಾಮರ್ಸ್‌ ಎನಿಸಿಕೊಂಡಿರುವ ಅಮೆಜಾನ್‌ ತಾಣದಲ್ಲಿ 'ಐಕ್ಯೂ 9 SE 5G' ಸ್ಮಾರ್ಟ್‌ಫೋನ್‌ ಭಾರೀ ಡಿಸ್ಕೌಂಟ್‌ ಪಡೆದಿದೆ. 39,990ರೂ. ಬೆಲೆಯ ಈ ಫೋನ್‌ ಅನೆಜಾನ್‌ನಲ್ಲಿ 25% ರಿಯಾಯಿತಿ ಪಡೆದಿದ್ದು, 29,990ರೂ. ಗಳಿಗೆ ಲಭ್ಯವಿದೆ. ಇದರೊಂದಿಗೆ ಸುಮಾರು 22,000ರೂ. ವರೆಗೂ ಎಕ್ಸ್‌ಚೇಂಜ್ (ಹಳೆಯ ಫೋನ್‌ ಕಾರ್ಯ ವೈಖರಿ ಸ್ಥಿತಿ ಆಧರಿಸಿ) ಕೊಡುಗೆ ಸಹ ಲಭ್ಯವಾಗಲಿದೆ.

ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿಗಳು ಸಹ ದೊರೆಯುತ್ತವೆ. ಅಲ್ಲದೇ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯದ ಆಯ್ಕೆ ಸಹ ಗ್ರಾಹಕರಿಗೆ ಸಿಗಲಿದೆ. ಇನ್ನು ಈ ಫೋನ್ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿವುದು ಹಾಗೂ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇನ್ನು ಈ ಫೋನ್ ಸ್ಪೇಸ್ ಫ್ಯೂಷನ್ ಮತ್ತು ಸನ್ಸೆಟ್ ಸಿಯೆರಾ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೇ ಐಕ್ಯೂ 9 SE 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ 9 SE 5G ಬೆಲೆಯಲ್ಲಿ ಭಾರೀ ಇಳಿಕೆ!..ರೆಡ್ಮಿ ನೋಟ್‌ 12 ಪ್ರೊ ಗಿಂತ ಉತ್ತಮವೇ

ಐಕ್ಯೂ 9 SE ಸ್ಮಾರ್ಟ್‌ಫೋನ್‌ ಫೀಚರ್ಸ್‌
ಐಕ್ಯೂ 9 SE ಸ್ಮಾರ್ಟ್‌ಫೋನ್‌ 6.62 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿದೆ. ಹಾಗೆಯೇ8GB + 128GB ಮತ್ತು 12GB + 256GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ IMX598 ಸೆನ್ಸಾರ್‌ ಅನ್ನು ಹೊಂದಿದೆ. ಇದು ಕೂಡ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸುಸಜ್ಜಿತ ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಐಕ್ಯೂ 9 SE 5G ಬೆಲೆಯಲ್ಲಿ ಭಾರೀ ಇಳಿಕೆ!..ರೆಡ್ಮಿ ನೋಟ್‌ 12 ಪ್ರೊ ಗಿಂತ ಉತ್ತಮವೇ

ಈ ಸ್ಮಾರ್ಟ್‌ಫೋನ್‌ 4,500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 66W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS/ A-GPS ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಐಕ್ಯೂ 9 SE ಸ್ಮಾರ್ಟ್‌ಫೋನ್‌ ಎರಡು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 8GB + 128GB ಮತ್ತು 12GB + 256GB ಆಗಿವೆ. ಹಾಗೆಯೇ ಈ ಫೋನ್‌ ಸ್ಪೇಸ್ ಫ್ಯೂಷನ್ ಮತ್ತು ಸನ್ಸೆಟ್ ಸಿಯೆರಾ ಬಣ್ಣಗಳ ಆಯ್ಕೆಯಲ್ಲಿ ಲಭ್ಯ.

Best Mobiles in India

English summary
iQOO 9 SE 5G discounted on Amazon, is it better than Redmi Note 12 Pro Plus?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X