ಐಕ್ಯೂ ನಿಯೋ 7 ಫೀಚರ್ಸ್‌ ಬಹಿರಂಗ: 120W ಫಾಸ್ಟ್ ಚಾರ್ಜಿಂಗ್ ನಿರೀಕ್ಷೆ

|

ವಿವಿಧ ಪೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳ ತಯಾರಿಕಾ ಸಂಸ್ಥೆಗಳಲ್ಲಿ ಐಕ್ಯೂ ಕಂಪೆನಿ ಸಹ ಪ್ರಮುಖವಾಗಿದೆ. ಈ ಕಂಪೆನಿ ಈಗಾಗಲೇ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅದರಂತೆ ಇನ್ನೇನು ಕೆಲವು ದಿನಗಳಲ್ಲಿ ನಿಯೋ ಸರಣಿಯ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಇನ್ನು ಲಾಂಚ್‌ ಆಗಲು ಸಜ್ಜುಗೊಂಡಿರುವ ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್ಸ್‌ ಈಗಾಗಲೇ ಲೀಕ್‌ ಆಗಿವೆ.

ಐಕ್ಯೂ

ಹೌದು, ಐಕ್ಯೂ ಕಂಪೆನಿ ತನ್ನ ನಿಯೋ ಸರಣಿಯ ಐಕ್ಯೂ ನಿಯೋ 7 ಸ್ಮಾರ್ಟ್‌ಫೋನ್‌ ಅನ್ನು ಈ ತಿಂಗಳ ಅಂತ್ಯದಲ್ಲಿ ಲಾಂಚ್‌ ಮಾಡಲಿದೆ ಎನ್ನಲಾಗಿದೆ. ಅದರೂ ನಿಖರವಾದ ದಿನಾಂಕ ಬಹಿರಂಗ ಆಗಿಲ್ಲ. ಆದರೆ, ಅದರ ಫೀಚರ್ಸ್‌ ಮಾತ್ರ ಲೀಕ್‌ ಆಗಿವೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಎಲ್‌ಇಡಿ ಪ್ಲ್ಯಾಶ್‌ ಆಯ್ಕೆ ಪಡೆದಿದೆ ಎಂಬ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಚೈನೀಸ್ ಟಿಪ್‌ಸ್ಟರ್

ಚೈನೀಸ್ ಟಿಪ್‌ಸ್ಟರ್ ಬಾಲ್ಡ್ ಪಾಂಡಾ ಪ್ರಕಾರ ಐಕ್ಯೂ ನಿಯೋ 7 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ ಎನ್ನಲಾಗಿದೆ. ಈ ಲೀಕ್‌ ಆದ ಮಾಹಿತಿ ನಿಜವಾದರೆ 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಮೊದಲ ನಿಯೋ ಸರಣಿಯ ಡಿವೈಸ್ ಆಗಿ ಈ ಸ್ಮಾರ್ಟ್‌ಫೋನ್‌ ಜನಪ್ರಿಯವಾಗಲಿದೆ. ಹಾಗಿದ್ರೆ ಲೀಕ್‌ ಆದ ಮಾಹಿತಿಯಂತೆಯೇ ಈ ಸ್ಮಾರ್ಟ್‌ಫೋನ್‌ನ ವಿವರವನ್ನು ಈ ಲೇಖನದಲ್ಲಿ ನೋಡೋಣ.

ಡಿಸ್‌ಪ್ಲೇ ಹೇಗಿರಬಹುದು?

ಡಿಸ್‌ಪ್ಲೇ ಹೇಗಿರಬಹುದು?

ಐಕ್ಯೂ ನಿಯೋ 7 ಫೋನ್ 6.62 ಇಂಚಿನ ಫುಲ್‌ HD ಅಮೋಲೆಡ್‌ ಡಿಸ್‌ಪ್ಲೇ ಜೊತೆಗೆ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಆಯ್ಕೆ ಪಡೆದಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಕ್ಯಾಮೆರಾ ಉದ್ದೇಶಕ್ಕಾಗಿ ಪಂಚ್-ಹೋಲ್ ರಚನೆ ಪಡೆದಿದೆ ಎನ್ನಲಾಗಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಐಕ್ಯೂ ನಿಯೋ 7 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 9000+ SoC ನಿಂದ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಫೋನ್‌ನ ಪ್ರೊಸೆಸರ್‌ ಚಿಪ್‌ಸೆಟ್‌ ಕಾರ್ಟೆಕ್ಸ್-X2 ಕೋರ್, ಮೂರು ಕಾರ್ಟೆಕ್ಸ್-A710 ಕೋರ್‌ ಹಾಗೂ ನಾಲ್ಕು ಕಾರ್ಟೆಕ್ಸ್-A510 ಕೋರ್‌ಗಳನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಮುಖ ವಿಷಯ ಎಂದರೆ ಈ ಚಿಪ್‌ಸೆಟ್‌ ಅನ್ನು ಈ ವರ್ಷದ ಜೂನ್‌ನಲ್ಲಿ ಪರಿಚಯಿಸಲಾಗಿತ್ತು. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಮಾಲಿ G710 MC10 GPU ಅನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.

ಕ್ಯಾಮೆರಾ ರಚನೆ ಹೇಗಿರಲಿದೆ ?

ಕ್ಯಾಮೆರಾ ರಚನೆ ಹೇಗಿರಲಿದೆ ?

ಈ ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಇದೆ ಎಂದು ಹೇಳಲಾಗುತ್ತಿದೆ. ಹಾಗೆಯೇ 50 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ ಇದರಲ್ಲಿದ್ದು, ಈ ಹಿಂದೆ ಐಕ್ಯೂ 8 ಪ್ರೊ ನಲ್ಲಿ ಬಳಕೆ ಮಾಡಲಾದ ಕ್ಯಾಮೆರಾ ಸೆನ್ಸಾರ್‌ ಅನ್ನೇ ಇದರಲ್ಲಿ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ದೃಢವಾಗಿದೆ. ಇದರ ಜೊತೆಗೆ 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್‌ ಪೋರ್ಟ್ರೇಟ್ ಟೆಲಿಫೋಟೋ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಸೆಲ್ಫಿ ಕ್ಯಾಮೆರಾದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಐಕ್ಯೂ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 120W ವೇಗದ ಚಾರ್ಜಿಂಗ್ ಬೆಂಬಲದ ಆಯ್ಕೆ ಪಡೆದಿದೆ ಎಂದು ಹೇಳಲಾಗಿದೆ. ಇತರೆ ಫೋನ್‌ಗಳಿಗೆ ಹೋಲಿಸಿಕೊಂಡರೆ ನಿಯೋ ಸರಣಿಯಲ್ಲಿ 120W ವೇಗದ ಚಾರ್ಜಿಂಗ್ ಆಯ್ಕೆಯನ್ನು ಪಡೆದ ಮೊದಲ ಫೋನ್‌ ಆಗಿ ಇದು ಹೊರಹೊಮ್ಮಲಿದೆ. ಈ ಹಿಂದೆ ಬಿಡುಗಡೆಯಾದ ಕಂಪೆನಿಯ ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್‌ 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
iQOO Company is also one of the leading manufacturers of smartphones with various features. But iQOO Neo 7 smartphone features that are ready for release have been revealed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X