ಐಕ್ಯೂ TWS ಏರ್ ಇಯರ್‌ಬಡ್ಸ್‌ ಅನಾವರಣ; ಅಧಿಕ ಬ್ಯಾಟರಿ ಬಾಳಿಕೆ

|

ಐಕ್ಯೂ ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವುದರ ಜೊತೆಗೆ ಇದೀಗ ನಿಯೋ ಸರಣಿಯಲ್ಲಿ ಐಕ್ಯೂ ನಿಯೋ 7 5g ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದೇ ವೇದಿಕೆಯಲ್ಲಿ ಐಕ್ಯೂ TWS ಏರ್ ಇಯರ್‌ ಬಡ್ಸ್‌ ಅನ್ನೂ ಸಹ ಲಾಂಚ್‌ ಮಾಡಲಾಗಿದ್ದು, ಈ ಗ್ಯಾಜೆಟ್‌ ಬಜೆಟ್‌ ಬೆಲೆಗೆ ಲಭ್ಯವಿದೆ. ಹಾಗೆಯೇ 14.2mm ಬಯೋ ಕಾರ್ಬನ್ ಫೈಬರ್ ಡ್ರೈವರ್‌ ಫೀಚರ್ಸ್‌ ಪಡೆದಿದೆ.

ನಿಯೋ ಕಂಪೆನಿ

ಹೌದು, ನಿಯೋ ಕಂಪೆನಿಯು ಪ್ರೀಮಿಯಂ ಲುಕ್‌ ಇರುವ ಹೊಸ ಐಕ್ಯೂ TWS ಏರ್ ಇಯರ್‌ ಬಡ್ಸ್‌ ಅನಾವರಣ ಮಾಡಿದೆ. ಈ ಇಯರ್‌ಬಡ್ಸ್ ಬರೋಬ್ಬರಿ 25 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆಯಂತೆ. ಹಾಗೆಯೇ ಕಂಪೆನಿಯೇ ಮೊದಲ ಗೇಮಿಂಗ್ ವೈರ್‌ಲೆಸ್ ಇಯರ್‌ಬಡ್ಸ್‌ ಎಂದು ಹೇಳಿಕೊಂಡಿದೆ. ಹಾಗಿದ್ರೆ ಇದರ ಇನ್ನಷ್ಟು ಫೀಚರ್ಸ್‌ ಹಾಗೂ ಬೆಲೆ ಎಷ್ಟು? ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ವಿನ್ಯಾಸ

ವಿನ್ಯಾಸ

ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಇತರೆ ಇಯರ್‌ಬಡ್ಸ್‌ಗಳ ಶೈಲಿಯನ್ನು ಹೋಲುತ್ತದೆಯಾದರೂ ಈ TWS ಏರ್ ಪ್ರೀಮಿಯಂ ಲುಕ್‌ ಪಡೆದಿದೆ. ಈ ಇಯರ್‌ಬಡ್‌ಗಳನ್ನು ಮೆಕ್ಯಾನಿಕ್ಸ್ ವೆಂಟ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಹೆಚ್ಚಿನ ಆಡಿಯೊ ಸ್ಪಷ್ಟತೆ ಪಡೆಯಬಹುದು.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಈ ಹೊಸ ವೈರ್‌ಲೆಸ್ ಹಗುರವಾಗಿದ್ದು, ಮಧುರವಾದ ಆಡಿಯೋ ಅನುಭವವನ್ನು ನೀಡುತ್ತದೆ ಎಂದು ಕಂಪೆನಿಯೇ ಹೇಳಿಕೊಂಡಿದೆ. ಇನ್ನುಳಿದಂತೆ ಇಯರ್‌ಬಡ್‌ಗಳು 14.2mm ಬಯೋಕಾರ್ಬನ್ ಫೈಬರ್ ಹಾಗೂ NdFeB ಮ್ಯಾಗ್ನೆಟಿಕ್ ಸರ್ಕ್ಯೂಟ್ ಸಿಸ್ಟಮ್‌ನಿಂದ ಪ್ಯಾಕ್ ಆಗಿವೆ. ಜೊತೆಗೆ ಡೀಪ್‌X 2.0 ಸ್ಟಿರಿಯೊ ಎಫೆಕ್ಟ್ ಮತ್ತು ಪ್ರೊಫೆಷನಲ್ ಆಡಿಯೊ ಮಿಕ್ಸಿಂಗ್‌ ಫೀಚರ್ಸ್‌ ಸಹ ಇದರಲ್ಲಿದ್ದು, ಬಳಕೆದಾರರು ಸ್ಪಷ್ಟವಾದ ಸೌಂಡ್‌ ಜೊತೆಗೆ ಅತ್ಯುತ್ತಮ ಬೇಸ್‌ ಹಾಗೂ ಟ್ರಿಬಲ್ ಸೌಂಡ್‌ ಅನುಭವವನ್ನು ಪಡೆಯಬಹುದಾಗಿದೆ.

ಡ್ಯುಯಲ್ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್

ಡ್ಯುಯಲ್ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್

ಇಯರ್‌ಬಡ್ಸ್‌ ನೀರು ಹಾಗೂ ಧೂಳು ನಿರೋಧಕ್ಕಾಗಿ IP54 ರೇಟ್ ಪಡೆದಿದೆ. ಹಾಗೆಯೇ ಕರೆ ವಿಚಾರಕ್ಕೆ ಬಂದರೆ ನಾಯ್ಸ್‌ ಕ್ಯಾನ್ಸಲಿಂ್‌ ಫೀಚರ್ಸ್‌ ಇಲ್ಲವಾದರೂ AI ಕಾಲ್ ನಾಯ್ಸ್ ರೆಡ್ಯೂಕ್ಷನ್ ಅಲ್ಗಾರಿದಮ್‌ಗೆ ಬೆಂಬಲವನ್ನು ನೀಡುತ್ತದೆ. ಈ ಮೂಲಕ ಬಳಕೆದಾರರು ಸ್ಪಷ್ಟ ಕರೆಯ ಧ್ವನಿಯಲ್ಲಿ ಸಂವಹನ ನಡೆಸಬಹುದಾಗಿದೆ. ಹಾಗೆಯೇ ವರ್ಧಿತ ಕರೆ ಅನುಭವಕ್ಕಾಗಿ ಪ್ರತಿ ಇಯರ್‌ಬಡ್ಸ್‌ ಡ್ಯುಯಲ್ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್‌ಗಳನ್ನು ಹೊಂದಿವೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಈ ಡಿವೈಸ್‌ 25 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತವಂತೆ. ಇದರಲ್ಲಿನ ಪ್ರತಿ ಇಯರ್‌ಬಡ್ ಒಂದು ಪೂರ್ಣ ಚಾರ್ಜ್‌ನಲ್ಲಿ 4.8 ಗಂಟೆಗಳ ವರೆಗೆ ಪ್ಲೇಟೈಮ್‌ ನೀಡಲಿದ್ದು, ಇಯರ್‌ಬಡ್‌ ಬ್ಲೂಟೂತ್ ಆವೃತ್ತಿ 5.2 ಅನ್ನು ಬೆಂಬಲಿಸುತ್ತವೆ. ಹಾಗೆಯೇ ಮಾನ್‌ಸ್ಟರ್ ಗೇಮಿಂಗ್ ಸೌಂಡ್, ಕಡಿಮೆ ಲೇಟೆನ್ಸಿ ಮೋಡ್ ಮತ್ತು ವೇಗದ ಕನೆಕ್ಟ್‌ ಫೀಚರ್ಸ್‌ ಸಹ ನೀಡಲಿದೆ. ಇಯರ್‌ಬಡ್‌ಗಳು ತಲಾ 3.5 ಗ್ರಾಂ ತೂಕ ಹೊಂದಿದ್ದು, ಪವರ್ ಕೇಸ್ 39 ಗ್ರಾಂ ತೂಕ ಇದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಐಕ್ಯೂ TWS ಏರ್‌ ಇಯರ್‌ಬಡ್ಸ್‌ನ ಚೀನಾದಲ್ಲಿನ ಬೆಲೆ CNY 199 (ಭಾರತದಲ್ಲಿ ಸುಮಾರು 2,300ರೂ. ಗಳು) ಆರಂಭಿಕ ಕೊಡುಗೆಯಾಗಿ CNY 169 (ಸುಮಾರು 1900ರೂ. ಗಳು) ನಲ್ಲಿ ಈ ಇಯರ್‌ಬಡ್ಸ್‌ಗಳನ್ನು ಮಾರಾಟ ಮಾಡುತ್ತಿದೆ. ಇದರ ಕೇಸ್‌ ಕಪ್ಪು ಹಾಗೂ ಹಳದಿ ಬಣ್ಣ ಮಿಶ್ರಿತದಿಂದ ಕೂಡಿದ್ದು, ಆಕರ್ಷಕವಾಗಿದೆ. ಈ ಇಯರ್‌ಪಾಡ್ಸ್‌ ಭಾರತದಲ್ಲಿ ಶೀಘ್ರದಲ್ಲೇ ಮಾರಾಟಕ್ಕೆ ಲಭ್ಯವಾಗಲಿವೆ ಎಂದು ತಿಳಿದುಬಂದಿದೆಯಾದರೂ ಐಕ್ಯೂ ಕಂಪೆನಿ ಮಾತ್ರ ಇದರ ಬಗ್ಗೆ ಯಾವುದೇ ವಿವರಗಳನ್ನು ದೃಢಪಡಿಸಿಲ್ಲ.

Best Mobiles in India

English summary
Along with launching high-end smartphones, iQOO has also launched new TWS Air Ear Buds. Here are the details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X