Just In
Don't Miss
- News
Breaking; ಫೆ. 26ಕ್ಕೆ ದಾವಣಗೆರೆಗೆ ಕೇಜ್ರಿವಾಲ್ ಭೇಟಿ
- Sports
ಮತ್ತೆ ವಿವಾದದ ಸುಳಿಯಲ್ಲಿ ವಿನೋದ್ ಕಾಂಬ್ಳಿ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಜಬ್ರಾ ಇಲೈಟ್ 85H' ಬ್ಲೂಟೂತ್ ಹೆಡ್‌ಫೋನ್ ಲಾಂಚ್!..ಹೇಗಿವೆ ಗೊತ್ತಾ ಫೀಚರ್ಸ್!
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಡಿಯೊ ಉತ್ಪನ್ನಗಳ ಮೂಲಕ ಈಗಾಗಲೇ ಗುರುತಿಸಿಕೊಂಡಿರುವ 'ಜಬ್ರಾ' ಕಂಪನಿಯು ಮ್ಯೂಸಿಕ್ ಪ್ರಿಯ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಈ ಕಂಪನಿಯು ಇದೀಗ ಮತ್ತೊಂದು ಹೊಚ್ಚ ಹೊಸ ಹೆಡ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಈ ಡಿವೈಸ್ ಅತ್ಯುತ್ತಮ ಗುಣಮಟ್ಟದ ಆಡಿಯೊ ಔಟ್‌ಪುಟ್ ಹೊಂದಿದ್ದು, ಕ್ರಿಸ್ಟಲ್ ಕ್ಲಿಯರ್ ಸೌಂಡ್ ಟ್ರಾಕ್ ಅನ್ನು ಸಹ ಹೊಂದಿದೆ.

ಹೌದು, ಜಬ್ರಾ ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಗೆ 'ಇಲೈಟ್ 85H' ಹೆಸರಿನ ವಾಯರ್‌ಲೆಸ್ ಬ್ಲೂಟೂತ್ ಹೆಡ್‌ಫೋನ್ ಬಿಡುಗಡೆ ಮಾಡಿದೆ. ಈ ಹೆಡ್‌ಫೋನ್ ಆಯಂಟಿ ನಾಯ್ಸ್, ನಾಯಿಸ್ ಕ್ಯಾನ್ಸ್‌ಲೆಶನ್ ಆಯ್ಕೆಯನ್ನು ಮತ್ತು ಸ್ಮಾರ್ಟ್‌ಸೌಂಡ್ ಆಪ್ ಸೇರಿದಂತೆ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಹಾಗಾದರೇ ಜಬ್ರಾ ಕಂಪನಿಯ ಈ ಹೆಡ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್ ಒಳಗೊಂಡಿದೆ ಎಂಬುದನ್ನು ನೋಡೋಣ ಬನ್ನಿರಿ.

ಹೆಡ್‌ಫೋನ್ ಡಿಸೈನ್
ಜಬ್ರಾ ಇಲೈಟ್ 85H ಹೆಡ್‌ಫೋನ್ ನೋಡಲು ಆಕರ್ಷಕವಾಗಿದ್ದು, ಲೆದರ್‌ಕೋಟ್‌ನಲ್ಲಿ ರಚಿತವಾಗಿದೆ. ಇಯರ್‌ಕಪ್ಸ್ ಸಾಫ್ಟ್ ರಚನೆಯಲ್ಲಿದ್ದು, ಹಿತಕರ ಅನುಭವ ಒದಗಿಸಲಿವೆ. ಈ ಡಿವಯಸ್ ಕಿವಿ ಮತ್ತು ತಲೆಗೆ ಅನಗತ್ಯ ಒತ್ತಡ ನೀಡುವುದಿಲ್ಲ. ಅತ್ಯುತ್ತಮ ಬ್ಲೂಟೂತ್ ಹೊಂದಿದ್ದು, ವಾಯರ್‌ಲೆಸ್ ಮೂಲಕ ಮೂಲಕ ಮೊಬೈಲ್, ಲ್ಯಾಪ್‌ಟಾಪ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ.

ಆಡಿಯೊ ತಂತ್ರಜ್ಞಾನ
ಜಬ್ರಾ ಸಂಸ್ಥೆಯು ಈಗಾಗಲೇ ಹಲವು ಶ್ರೇಣಿಯಲ್ಲಿ ಆಡಿಯೊ ಡಿವೈಸ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಹೊಸ ಹೆಡ್‌ಫೋನ್‌ನಲ್ಲಿ audEERING intelligence technology (ANC) ತಂತ್ರಾಜ್ಞಾನವನ್ನು ಒಳಗೊಂಡಿದೆ. ಈ ತಂತ್ರಜ್ಞಾನವು ಬಳಕೆದಾರರು ಯಾವುದೇ ವಾತಾವರಣದಲ್ಲಿದ್ದರು ಅತ್ಯುತ್ತಮ ಸೌಂಡ್ ಅವರಿಗೆ ಕೇಳುವಂತೆ ಆಟೋಮ್ಯಾಟಿಕ್ ಅಡ್ವಸ್ಟ್ ಆಗುವಂತಿದೆ.

ಸ್ಮಾರ್ಟ್‌ಪ್ಲಸ್ ಆಪ್
ಜಬ್ರಾ ಇಲೈಟ್ 85H ಹೆಡ್‌ಫೋನ್ ಡಿವೈಸ್ ನಲ್ಲಿ ಕಂಪನಿಯ ಸ್ಮಾರ್ಟ್‌ಪ್ಲಸ್ ಆಪ್ ನೀಡಲಾಗಿದ್ದು, ಈ ಆಪ್ ಬಳಸಿ ಬಳಕೆದಾರರು ಹಲವಾರು ಫೀಚರ್ಸ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ. ಅನ್‌ವಾಂಟೆಡ್ ಶಬ್ದವನ್ನು ಬ್ಲಾಕ್ ಮಾಡಬಹುದಾಗಿದ್ದು, ಒಟ್ಟು 6000 ವಿಭಿನ್ನ ಸೌಂಡ್ ಗುರುತಿಸಿ ಗ್ರಹಿಸುವ ಸಾಮರ್ಥ್ಯವನ್ನು ಪಡೆದಿದ್ದು, ಈ ತಂತ್ರಜ್ಞಾನವು (ANC) ವನ್ನು ಪಡೆದುಕೊಂಡಿದೆ.

ವಾಯಿಸ್ ಅಸಿಸ್ಟಂಟ್ ಬೆಂಬಲ
ಜಬ್ರಾ ಹೆಡ್‌ಫೋನ್ ವಾಯಿಸ್ ಅಸಿಸ್ಟಂಟ್ ಬೆಂಬಲವನ್ನು ಪಡೆದುಕೊಂಡಿದ್ದು, ಗೂಗಲ್ ಅಸಿಸ್ಟಂಟ್ ಸೇವೆಯನ್ನು ತ್ವರಿತವಾಗಿ ಆಕ್ಸ್‌ಸ್ ಮಾಡಲಿದೆ. ಬಳಕೆದಾರರು ಕರೆ ಮತ್ತು ಮ್ಯೂಸಿಕ್ ಆಯ್ಕೆಗಳನ್ನು ಕಸ್ಟಮೈಸ್ ಮಾಡಬಹುದಾಗಿದೆ. ಹೆಡ್‌ಫೋನ್‌ನಲ್ಲಿ ಒಂದು ಬಟನ್ ಆಯ್ಕೆ ನೀಡಿದ್ದು, ಆ ಬಟನ್ ಒತ್ತುವ ಮೂಲಕ ನೇರವಾಗಿ ಗೂಗಲ್ ಅಸಿಸ್ಟಂಟ್, ಆಪಲ್ ಸಿರಿ ಮತ್ತು ಅಲೆಕ್ಸಾ ಸೇವೆ ಪಡೆಯಬಹುದು.

ಬೆಲೆ ಮತ್ತು ಬಣ್ಣಗಳ ಆಯ್ಕೆ
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಜಬ್ರಾ ಕಂಪನಿಯ ಹೆಡ್‌ಫೋನ್ ಬೆಲೆಯು 28,999ರೂ.ಗಳು ಆಗಿದೆ. ರೀಟೈಲ್ ಶಾಪ್‌ಗಳಲ್ಲಿ ದೊರೆಯಲಿದೆ. ಈ ಡಿವೈಸ್ ಬ್ಲ್ಯಾಕ್, ಟೈಟಾನಿಮ್ ಬ್ಲ್ಯಾಕ್, ಗೋಲ್ಡ್ ಮತ್ತು ನೇವಿ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಉತ್ತಮ ಪ್ರೈಸ್‌ಟ್ಯಾಗ್‌ನೊಂದಿಗೆ, ಇತ್ತೀಚಿನ ಅತ್ಯುತ್ತಮ ಫೀಚರ್ಸ್‌ಗಳನ್ನು ಈ ಹೆಡ್‌ಫೋನ್ ತುಂಬಿಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470