Subscribe to Gizbot

ಬೇರೆಡೆ ತಿಂಗಳಿಗೆ 1 GB ಡೇಟಾ: ಜಿಯೋದಲ್ಲಿ ರೂ.149ಕ್ಕೆ ದಿನ 1 GB 4G ಡೇಟಾ..!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಬೇಕು ಎನ್ನುವ ಕಾರಣಕ್ಕೆ ಗ್ರಾಹಕರಿಗೆ ಒಂದರ ಮೇಲೊಂದು ಹೊಸ ಆಫರ್ ಗಳನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ಅತೀ ಕಡಿಮೆ ಬೆಲೆಗೆ ದಿನಕ್ಕೊಂದು GB ಡೇಟಾವನ್ನು ನೀಡುವ ಪ್ಲಾನ್‌ ಘೋಷಣೆ ಮಾಡಿದೆ.

ಜಿಯೋದಲ್ಲಿ ರೂ.149ಕ್ಕೆ ದಿನ 1 GB 4G ಡೇಟಾ..!!

ಓದಿರಿ: ಜಿಯೋ ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!

ಜಿಯೋ ಈ ಬಾರಿ ತನ್ನ ಆಫರ್ ಗಳ ಬೆಲೆಯಲ್ಲಿ ಇಳಿಕೆಯನ್ನು ಮಾಡಿ ಇತರೆ ಟೆಲಿಕಾಂ ಕಂಪನಿಗಳಿಗೆ ಶಾಕ್ ನೀಡಿದೆ ಈ ಮೂಲಕ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಿದೆ. ಈ ಹೊದ ಆಫರ್ ಕಡಿಮೆ ಬೆಲೆಗೆ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹ್ಯಾಪಿ ನ್ಯೂ ಇಯರ್ 2018:

ಹ್ಯಾಪಿ ನ್ಯೂ ಇಯರ್ 2018:

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ವರ್ಷದ ಅಂಗವಾಗಿ ನೂತನ ಆಫರ್ ಒಂದನ್ನು ಬಿಡುಗಡೆಗೊಳಿಸಿದೆ. ಗ್ರಾಹಕರಿಗೆ ಪ್ರತಿನಿತ್ಯ 1 GB ಡೇಟಾ ಉಚಿತವಾಗಿ ಸಿಗಲಿದೆ.

ಬೆಲೆ ಕಡಿತ:

ಬೆಲೆ ಕಡಿತ:

ಈ ಹಿಂದೆ ರೂ.199 ಇದ್ದ ತನ್ನ ರಿಚಾರ್ಜ್ ಬೆಲೆಯಲ್ಲಿ ರೂ.50 ಕಡಿತ ಮಾಡಿದ್ದು, ರೂ. 149ಕ್ಕೆ ಹೆಚ್ಚಿನ ಲಾಭವನ್ನು ನೀಡಲು ಮುಂದಾಗಿದೆ. ಜಿಯೋ ಬಿಡುಗಡೆಗೊಳಿಸಿರುವ ಈ ಆಫರ್ ಟೆಲಿಕಾಂ ಕ್ಷೇತ್ರದ ಈವರೆಗಿನ ಅತಿ ಕಡಿಮೆ ವೆಚ್ಚದ ಡೇಟಾ ಪ್ಲಾನ್ ಇದಾಗಿದೆ.

ಬೇರೆಯಲ್ಲಿಯೂ ಈ ಆಫರ್ ಇಲ್ಲ:

ಬೇರೆಯಲ್ಲಿಯೂ ಈ ಆಫರ್ ಇಲ್ಲ:

ರಿಯಲನ್ಸ್ ಜಿಯೋ ಹೊರತುಪಡಿಸಿ ಬೇರಾವ ಕಂಪೆನಿಯೂ ರೂ. 149 ಪ್ರತಿನಿತ್ಯ 1GB ಡೇಟಾ ನೀಡುತ್ತಿಲ್ಲ ಎನ್ನಲಾಗಿದ್ದು, ಇದರೊಂದಿಗೆ ಗ್ರಾಹಕರು ಉಚಿತ ಕರೆ ಮಾಡುವ ಅವಕಾಶ ಮತ್ತು ಜಿಯೋ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ಜಿಯೋ ಆಫರ್ ಗಳು ಬದಲಾಗಿದೆ.

ಜಿಯೋ ಆಫರ್ ಗಳು ಬದಲಾಗಿದೆ.

ಇದಲ್ಲದೇ ಇದುವರೆಗೂ ಜಿಯೋ ನೀಡಿರುವ ಆಫರ್‌ಗಳ ಬೆಲೆಯಲ್ಲಿ ಮತ್ತು ಲಾಭದಲ್ಲಿ ಬದಲಾವಣೆಯನ್ನು ಮಾಡಿದ್ದು, ಬೇರೆ ಕಂಪನಿಗಳು ಕಾಪಿ ಮಾಡಲು ಸಾಧ್ಯವಾಗದ ಮಟ್ಟದಲ್ಲಿ ಆಫರ್ ಅನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
jio 2018 new year offer. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot