ಒಪ್ಪೋ ಸ್ಮಾರ್ಟ್‌ಫೋನ್‌ ಬಳಕೆದಾರರು ಖುಷಿ ಪಡುವ ಕಾಲ ದೂರವಿಲ್ಲ!

|

ಭಾರತದಲ್ಲಿ 5G ಬಿಡುಗಡೆ ಆದಾಗಿನಿಂದ, ಸ್ಮಾರ್ಟ್‌ಫೋನ್ ಸಂಸ್ಥೆಗಳು ಮತ್ತು ಟೆಲಿಕಾಂ ಆಪರೇಟರ್‌ಗಳು ಫೋನ್‌ಗಳಿಗೆ 5G ಬೆಂಬಲವನ್ನು ಸಕ್ರಿಯಗೊಳಿಸಲು ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಫೋನ್‌ಗಳು ಈಗಾಗಲೇ 5G ಸಪೋರ್ಟ್‌ ಪಡೆದಿದ್ದು, ಮತ್ತೆ ಕೆಲವು ಸಪೋರ್ಟ್‌ ಪಡೆಯುವ ಹಂತದಲ್ಲಿವೆ. ಅದೇ ರೀತಿ ಒಪ್ಪೋ (OPPO) ಸಂಸ್ಥೆಯು ಈಗ ತನ್ನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಈಗ 5G ನೆಟ್‌ವರ್ಕ್ ಅನ್ನು ಬೆಂಬಲಿಸುತ್ತವೆ ಎಂದು ಘೋಷಿಸಿದೆ.

ಟ್ರೂ 5G

ಒಪ್ಪೋ ತನ್ನ ಗ್ರಾಹಕರಿಗೆ ಟ್ರೂ 5G ಅನುಭವಕ್ಕಾಗಿ ಹೆಚ್ಚಿನ ವೇಗ, ಉತ್ತಮ ವಿಶ್ವಾಸಾರ್ಹತೆ ಲಭ್ಯ ಮಾಡಲು ಜಿಯೋ ಟೆಲಿಕಾಂನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ಹೇಳುತ್ತದೆ. ಹೀಗಾಗಿ ಒಪ್ಪೋ ಫೋನ್‌ ಬಳಕೆದಾರರು ಖುಷಿ ಪಡುವ ಸಮಯ ದೂರವಿಲ್ಲ ಎನ್ನಲಾಗಿದೆ. ಹಾಗಾದರೇ ಮುಂದಿನ ದಿನಗಳಲ್ಲಿ ಜಿಯೋ 5G standalone (SA) ನೆಟ್‌ವರ್ಕ್ ಅನ್ನು ಬೆಂಬಲಿಸುವ ಒಪ್ಪೋ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಯೋಣ ಬನ್ನಿರಿ.

ಒಪ್ಪೋ ಫೋನ್‌ಗಳಲ್ಲಿ ಈಗ ಜಿಯೋ 5G (SA) ನೆಟ್‌ವರ್ಕ್

ಒಪ್ಪೋ ಫೋನ್‌ಗಳಲ್ಲಿ ಈಗ ಜಿಯೋ 5G (SA) ನೆಟ್‌ವರ್ಕ್

ಒಪ್ಪೋ ತನ್ನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಈಗ ಜಿಯೋ 5G (SA) ನೆಟ್‌ವರ್ಕ್ ಅನ್ನು ಬೆಂಬಲಿಸುತ್ತದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ 5G ಬೆಂಬಲಿತ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ಅನ್ನು ಹೊರತಂದಿದೆ. ಹಾಗೆಯೇ ಇನ್ಮುಂದೆ ಹೊಸದಾಗಿ ಬಿಡುಗಡೆ ಆಗಲಿರುವ ಒಪ್ಪೋ ಸಂಸ್ಥೆಯ ನೂತನ ಫೋನ್‌ಗಳು ಜಿಯೋ 5G (SA) ನೆಟ್‌ವರ್ಕ್‌ ಬೆಂಬಲತವಾಗಿರಲಿವೆ.

ಜಿಯೋ 5G (SA) ನೆಟ್‌ವರ್ಕ್ ಬೆಂಬಲಿತ ಫೋನ್‌ಗಳ ಲಿಸ್ಟ್‌:

ಜಿಯೋ 5G (SA) ನೆಟ್‌ವರ್ಕ್ ಬೆಂಬಲಿತ ಫೋನ್‌ಗಳ ಲಿಸ್ಟ್‌:

* ಒಪ್ಪೋ ರೆನೋ 8
* ಒಪ್ಪೋ ರೆನೋ 8 ಪ್ರೊ
* ಒಪ್ಪೋ ರೆನೋ 7
* ಒಪ್ಪೋ F21 ಪ್ರೊ 5G
* ಒಪ್ಪೋ F19 ಪ್ರೊ+
* ಒಪ್ಪೋ K10
* ಒಪ್ಪೋ A53s

ಜಿಯೋ  5G ಸೇವೆ ವಿಸ್ತರಣೆ

ಜಿಯೋ 5G ಸೇವೆ ವಿಸ್ತರಣೆ

ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಇತ್ತೀಚಿಗೆ ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳಲ್ಲಿ ಹೊರತಂದಿದೆ. ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಹೀಗೆ ಆರು ನಗರಗಳಲ್ಲಿ ಜಿಯೋ ಟ್ರೂ 5G ಸೇವೆಗಳ ಯಶಸ್ವಿ ಬೀಟಾ ಅನಾವರಣ ಆದ ಬಳಿಕ ಇದೀಗ ಜಿಯೋ ಹೆಚ್ಚಿನ ನಗರಗಳಲ್ಲಿ ಜಿಯೋ ಟ್ರೂ - 5G ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಇನ್ನು ಡಿಸೆಂಬರ್ 2023 ರೊಳಗೆ ದೇಶವ್ಯಾಪಿ 5G ಸೇವೆಯನ್ನು ಒದಗಿಸುವುದಾಗಿ ಜಿಯೋ ಭರವಸೆ ನೀಡಿದೆ.

ಏರ್‌ಟೆಲ್‌ 5G ಲಭ್ಯತೆಯ ನಗರಗಳ ಲಿಸ್ಟ್‌

ಏರ್‌ಟೆಲ್‌ 5G ಲಭ್ಯತೆಯ ನಗರಗಳ ಲಿಸ್ಟ್‌

ನಗರಗಳು ಏರ್‌ಟೆಲ್‌ನ 5G ನೆಟ್‌ವರ್ಕ್ ಸೇವೆಗಳು ಮುಂಬೈ, ದೆಹಲಿ, ವಾರಣಾಸಿ, ಚೆನ್ನೈ, ಸಿಲಿಗುರಿ, ನಾಗ್ಪುರ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ. ವರ್ಷಾಂತ್ಯದ ವೇಳೆಗೆ ಟೆಲಿಕಾಂಗಳು ಹೆಚ್ಚಿನ ನಗರಗಳನ್ನು ತಲುಪುವ ನಿರೀಕ್ಷೆಯಿದೆ.

ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ?..ಹೀಗೆ ತಿಳಿಯಿರಿ

ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ?..ಹೀಗೆ ತಿಳಿಯಿರಿ

ಹಂತ 1: ನಿಮ್ಮ ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ
ಹಂತ 2: ನಂತರ 'Wi-Fi ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ಆ ಬಳಿಕ 'SIM ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 4: 'Preferred network type' ಆಯ್ಕೆಯಲ್ಲಿ ನೀವು ಲಭ್ಯವಿರುವ ನೆಟ್‌ವರ್ಕ್ ಮಾಹಿತಿ ಬಗ್ಗೆ ನೋಡಲು ಸಾಧ್ಯವಾಗುತ್ತದೆ.
ಹಂತ 5: ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಅಲ್ಲಿ 2G / 3G / 4G / 5G ಎಂದು ಪಟ್ಟಿ ಮಾಡಲಾಗುತ್ತದೆ.

Best Mobiles in India

English summary
Jio 5G update: Full list of Oppo smartphones that will get the service soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X