ಪ್ರೇಮಿಗಳ ದಿನದಂದು ಜಿಯೋ ಮಾಡಿದ್ದೇನು..?
ವಾಲೆಂಟೆನ್ಸ್ ಡೇ ಅಂಗವಾಗಿ ಜಿಯೋ ಪ್ರಮುಖ ಟೆಲಿಕಾಂ ಕಂಪನಿಗಳಿಗೆ ಶುಭಾಶಯ ತಿಳಿಸಿದೆ.

ಜಿಯೋ ಆಫಿಷಿಯಲ್ ಟ್ವಿಟರ್ ಆಕೌಂಟ್ ನಿಂದ ಪೋಸ್ಟ್ ಆಗಿರುವ ಟ್ವೀಟ್ ನಲ್ಲಿ 'ಡಿಯರ್ @airtelindia, @VodafoneIN, @ideacellular, ಹ್ಯಾಪಿ ವ್ಯಾಲೆಂಟೆನ್ಸ್ ಡೇ, #WithLoveFromJio,' ಎಂದು ಶುಭಾಷಯವನ್ನು ತಿಳಿಸಲಾಗಿದೆ.
ಇದೇ ಏರ್‌ಟೆಲ್, ವೊಡೋಪೋನ್ ಮತ್ತು ಐಡಿಯಾ ಟೆಲಿಕಾಂ ಕಂಪನಿಗಳು ಜಿಯೋ ವಿರುದ್ಧ ತಿರುಗಿಬಿದ್ದು, ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದವು, ಅಲ್ಲದೇ ಟೆಲಿಕಾಂ ಸಚಿವಾಲಯಕ್ಕೂ ಮತ್ತು ಟ್ರಾಯ್‌ಗೂ ದೂರು ನೀಡಿದ್ದವು.

ಓದಿರಿ: ವಾಟ್ಸ್ಆಪ್ ಸ್ಟೇಟಸ್ ಹೈಡ್ ಮಾಡುವುದೇಗೆ..? ಇನ್ನು ಹಲವು ವಾಟ್ಸ್ಆಪ್ ಸೀಕ್ರೆಟ್‌ಗಳು..!
ದೇಶದಲ್ಲಿ ಜೀಯೊ ಉಚಿತ ಸೇವೆಯನ್ನು ನೀಡುವ ಮೂಲಕ ತಮ್ಮ ಗ್ರಾಹಕರನ್ನು ತನ್ನಡೆಗೆ ಜಿಯೋ ಸೆಳೆಯುತ್ತಿದೆ ಎಂಬುದು ಈ ಕಂಪನಿಗಳ ದೂರಾಗಿದ್ದು, ಆದರೆ ಇದನ್ನು ಶಮನ ಮಾಡುವ ಸಲುವಾಗಿಯೇ ಜಿಯೋ ಈ ರೀತಿ ಶುಭಾಷಯವನ್ನು ಟ್ವೀಟ್ ಮಾಡಿದೆ ಎನ್ನಲಾಗಿದೆ.


Click it and Unblock the Notifications








