ಸದ್ಯದಲ್ಲೇ ಜಿಯೋ, ಏರ್‌ಟೆಲ್‌ ಪ್ಲಾನ್ ದುಬಾರಿ?!...ಗ್ರಾಹಕರಿಗೆ ಶಾಕ್‌!

|

ಹೊಸ ವರ್ಷ ಬಂತು ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಅಧಿಕ ಪ್ರಯೋಜನಗಳ ಜೊತೆಗೆ ಬಂಫರ್ ಆಫರ್ ಪರಿಚಯಿಸುತ್ತವೆ ಎಂದು ನಿರೀಕ್ಷಿಸಿರುವ ಗ್ರಾಹಕರಿಗೆ ಸದ್ಯದಲ್ಲೇ ಬಿಗ್ ಶಾಕ್ ಸಾಧ್ಯತೆ ಇದೆ. ಏಕೆಂದರೆ ದೇಶದಲ್ಲಿ ಪ್ರಮುಖ ಟೆಲಿಕಾಂ ಸಂಸ್ಥೆಗಳಾಗಿ ಗುರುತಿಸಿಕೊಂಡಿರುವ ರಿಲಯನ್ಸ್‌ ಜಿಯೋ ಹಾಗೂ ಭಾರ್ತಿ ಏರ್‌ಟೆಲ್‌ ಟೆಲಿಕಾಂಗಳು ಸದ್ಯದ ಪ್ಲ್ಯಾನ್‌ಗಳ ಟಾರೀಫ್ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಜೆಫರೀಸ್‌ನ ವಿಶ್ಲೇಷಕರ

ಹೌದು, ಜೆಫರೀಸ್‌ನ ವಿಶ್ಲೇಷಕರ ವರದಿಯ ಪ್ರಕಾರ, ಜಿಯೋ ಮತ್ತು ಏರ್‌ಟೆಲ್ ಸೇರಿದಂತೆ ಟೆಲಿಕಾಂ ಆಪರೇಟರ್‌ಗಳು ಮುಂದಿನ 3 ವರ್ಷಗಳಲ್ಲಿ ಅಂದರೆ FY23, FY24 ಮತ್ತು FY25 ರ Q4 ರಲ್ಲಿ ಶುಲ್ಕದಲ್ಲಿ ಶೇ.10 ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ. ಇದರರ್ಥ ಬಳಕೆದಾರರು ಮುಂಬರುವ ವರ್ಷಗಳಲ್ಲಿ ಪ್ರತಿ ನಾಲ್ಕನೇ ತ್ರೈಮಾಸಿಕದಲ್ಲಿ ಮೊಬೈಲ್ ಪ್ಲ್ಯಾನ್‌ಗಳ ಬೆಲೆಗಳಲ್ಲಿ ಏರಿಕೆ ಕಾಣುತ್ತಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವರದಿಯು

ಟೆಲಿಕಾಂ ಸಂಸ್ಥೆಗಳ ಆದಾಯ ಮತ್ತು ಮಾರ್ಜಿನ್‌ಗಳ ಮೇಲೆ ಹೆಚ್ಚುತ್ತಿರುವ ಒತ್ತಡವು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವರದಿಯು ಸೂಚಿಸುತ್ತದೆ. ಟೆಲಿಕಾಂ ಕಂಪನಿಯ ಕಾರ್ಯಕ್ಷಮತೆಯ ನಿರ್ಣಾಯಕ ಸೂಚಕವಾದ ಪ್ರತಿ ಬಳಕೆದಾರರ ಸರಾಸರಿ ಆದಾಯ (ARPU), ಮೂರನೇ ತ್ರೈಮಾಸಿಕದಲ್ಲಿ ಏರ್‌ಟೆಲ್, ವಿ ಮತ್ತು ಜಿಯೋ ಟೆಲಿಕಾಂಗೆ ಮಧ್ಯಮವಾಗಿ ಹೆಚ್ಚಾಗಿದೆ. ಅಲ್ಲದೇ ಮತ್ತಷ್ಟು ಬೆಲೆ ಏರಿಕೆಗಳೊಂದಿಗೆ, ARPU ಗಮನಾರ್ಹ ಏರಿಕೆಯನ್ನು ಕಾಣಲಿದೆ.

ಏರ್‌ಟೆಲ್‌ ಟೆಲಿಕಾಂ

ಏರ್‌ಟೆಲ್ ಟೆಲಿಕಾಂ ಈಗಾಗಲೇ ಚಾಲ್ತಿ ಇರುವ ತನ್ನ ಕೆಲವು ಯೋಜನೆಗಳ ಮೇಲೆ ಶುಲ್ಕವನ್ನು ಹೆಚ್ಚಿಸಲು ಶುರು ಮಾಡಿದೆ. ಹಾಗೆಯೇ ಏರ್‌ಟೆಲ್‌ ಟೆಲಿಕಾಂ ಇತ್ತೀಚೆಗೆ ತನ್ನ 99ರೂ. ಪ್ಲ್ಯಾನ್‌ ಅನ್ನು ರದ್ದು ಮಾಡುವ ಮೂಲಕ ಕೆಲವು ಅಗ್ಗದ ಯೋಜನೆಗಳನ್ನು ತೆಗೆದುಹಾಕಲು ಪ್ರಾರಂಭಿಸಿದೆ. ಕಂಪನಿಯ ಗ್ರಾಮೀಣ ವಿಸ್ತರಣೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಯೋಜನೆಯು

ಪ್ರಿಪೇಯ್ಡ್ ಯೋಜನೆಯು 1GB ಡೇಟಾ, 100 ಸಂದೇಶಗಳು, ಏರ್‌ಟೆಲ್‌ ಎಕ್ಸ್‌ಟ್ರೀಮ್‌, ವೆಂಕ್‌ ಮ್ಯೂಸಿಕ್‌ ಮತ್ತು ಜೀ5 ಪ್ರೀಮಿಯಂ ಆಕ್ಸಸ್‌ ಅನ್ನು 18 ದಿನಗಳವರೆಗೆ ನೀಡುತ್ತದೆ. ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಯುಪಿ ಪೂರ್ವ ಸೇರಿದಂತೆ ಆಯ್ದ ವಲಯಗಳಲ್ಲಿನ ಬಳಕೆದಾರರಿಗೆ ಇದು ಲಭ್ಯವಿತ್ತು. ಆದಾಗ್ಯೂ, ಕಡಿಮೆ ಲಾಭಾಂಶವನ್ನು ಕಂಡ ನಂತರ ಏರ್‌ಟೆಲ್ ಈ ಪ್ಲ್ಯಾನ್‌ ಅನ್ನು ರದ್ದುಗೊಳಿಸಿತು. 99ರೂ. ಏರ್‌ಟೆಲ್‌ ಪ್ಲಾನ್ ಬದಲಾಗಿ ಈಗ 155ರೂ. ಬೆಲೆಯಲ್ಲಿ ಲಭ್ಯವಿದೆ.

ಚಂದಾದಾರರಲ್ಲಿ

ಈ ನಡುವೆ ಟೆಲಿಕಾಂ ಆದಾಯವು ಚಂದಾದಾರರನ್ನು ಆಧರಿಸಿದೆ. ಹಾಗೆಯೇ ಕಳೆದ ಕೆಲವು ತಿಂಗಳುಗಳಲ್ಲಿ, ಏರ್‌ಟೆಲ್ ಮತ್ತು ಜಿಯೋ ಎರಡೂ ತಮ್ಮ ಚಂದಾದಾರರ ನೆಲೆಯಲ್ಲಿ ಏರಿಕೆ ಕಂಡಿವೆ. ಇದು ಹೆಚ್ಚು ಬಳಕೆದಾರರನ್ನು ಆಕರ್ಷಿಸಲು ಎರಡು ಟೆಲಿಕಾಂ ಕಂಪನಿಗಳ ನಡುವೆ ನಡೆಯುತ್ತಿರುವ ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸಿತು. ಮತ್ತೊಂದೆಡೆ, ವಿ ಟೆಲಿಕಾಂ ಚಂದಾದಾರರಲ್ಲಿ ಭಾರೀ ಕುಸಿತ ಕಂಡಿದೆ ಮತ್ತು ಅದೇ ಕಾರಣಕ್ಕಾಗಿ, ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಉತ್ತಮ ಮೌಲ್ಯದ ಯೋಜನೆಗಳನ್ನು ನೀಡುವ ಮೂಲಕ ಬಳಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ.

ನೆಟ್‌ವರ್ಕ್

5G ಯ ನಡೆಯುತ್ತಿರುವ ವಿಸ್ತರಣೆಯು ವಿ ಟೆಲಿಕಾಂನ ಚಂದಾದಾರರ ಆಧಾರದ ಮೇಲೆ ಪ್ರಮುಖವಾಗಿ ಪರಿಣಾಮ ಬೀರಿದೆ. ಜಿಯೋ ಮತ್ತು ಏರ್‌ಟೆಲ್‌ ಈಗಾಗಲೇ ತಮ್ಮ 5G ನೆಟ್‌ವರ್ಕ್ ಕನೆಕ್ಷನ್‌ ಅನ್ನು ಹೊರತರಲು ಪ್ರಾರಂಭಿಸಿದ್ದರೆ, ಮತ್ತೊಂದೆಡೆ ವಿ, ಐದನೇ ತಲೆಮಾರಿನ ನೆಟ್‌ವರ್ಕ್ ಸಂಪರ್ಕವನ್ನು ಪ್ರಾರಂಭಿಸಲು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದೆ.

ಇಂಡಿಯಾ

ಮತ್ತೊಂದೆಡೆ, ಜಿಯೋ ಮತ್ತು ಏರ್‌ಟೆಲ್ ಬಹುತೇಕ ಭಾರತೀಯ ಪ್ರಮುಖ ನಗರಗಳಲ್ಲಿ ವೇಗವಾಗಿ ಆವರಿಸುತ್ತಿವೆ. ಮುಂದಿನ 1-2 ವರ್ಷಗಳಲ್ಲಿ ಭಾರತದಲ್ಲಿ 5G ಪ್ಯಾನ್ ಇಂಡಿಯಾ ಮಾಡುವ ಅನ್ನು ನಿಯೋಜಿಸುವ ಗುರಿಯನ್ನು ಹೊಂದಿವೆ.

Best Mobiles in India

English summary
The telecom operators are expected to raise tariff by 10 per cent consequently for the upcoming three years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X