ಜಿಯೋ ಮತ್ತು ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ : ದುಬಾರಿ ಬೆಲೆಯಲ್ಲಿ ಯಾವುದು ಬೆಸ್ಟ್?

|

ಭಾರತದಲ್ಲಿ ಬ್ರಾಡ್‌ಬ್ಯಾಂಡ್ ವಲಯವು ಸಾಕಷ್ಟು ಬದಲಾವಣೆ ಕಂಡಿದೆ. ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ರಿಲಾಯನ್ಸ್‌ ಜಿಯೋ ಹಾಗೂ ಏರ್‌ಟೆಲ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಈ ಸಂಸ್ಥೆಗಳ ಕೆಲವು ಪ್ಲ್ಯಾನ್‌ಗಳು ದುಬಾರಿ ಶುಲ್ಕವನ್ನು ಒಳಗೊಂಡಿವೆ.

ಜಿಯೋ ಹಾಗೂ ಏರ್‌ಟೆಲ್

ಹೌದು, ರಿಲಾಯನ್ಸ್‌ ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳ ಕೆಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳು ಗ್ರಾಹಕರಿಗೆ ಆಕರ್ಷಕವಾಗಿವೆ. ಆ ಪೈಕಿ ಈ ಎರಡು ಕಂಪನಿಗಳ 3,999ರೂ. ಪ್ರೈಸ್‌ಟ್ಯಾಗ್‌ನ ಬ್ರಾಡ್‌ಬ್ಯಾಂಡ್‌ ವೇಗದ ಇಂಟರ್ನೆಟ್‌ ಬ್ರೌಸಿಂಗ್ ಹಾಗೂ ಇತರೆ ಹೆಚ್ಚಿವರಿ ಸೌಲಭ್ಯಗಳನ್ನು ಪಡೆದಿವೆ. ಆದರೆ ಜಿಯೋ ಹಾಗೂ ಏರ್‌ಟೆಲ್‌ ಇವೆರಡರಲ್ಲಿ ಯಾವುದು ಬೆಸ್ಟ್‌ ಬ್ರಾಡ್‌ಬ್ಯಾಂಡ್‌ ಯೋಜನೆ ಎನ್ನುವ ಗೊಂದಲ ನಿಮ್ಮಲ್ಲಿ ಮೂಡಿದ್ದರೇ ಮುಂದೆ ಓದಿರಿ.

ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಏರ್‌ಟೆಲ್‌ ನಾಲ್ಕು ವಿಭಿನ್ನ ರೀತಿಯ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ನೀಡುತ್ತದೆ. ಮುಖ್ಯವಾಗಿ ಡೇಟಾ ಪ್ರಯೋಜನಗಳನ್ನು ಮತ್ತು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ನೀಡುತ್ತದೆ. ಏರ್‌ಟೆಲ್‌ನ VIP ಯೋಜನೆ ಅತ್ಯಂತ ದುಬಾರಿ ಬ್ರಾಡ್‌ಬ್ಯಾಂಡ್ ಯೋಜನೆಯಾಗಿದ್ದು, 3,999 ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಈ ಯೋಜನೆಯಲ್ಲಿ, ಗ್ರಾಹಕರು ಅನಿಯಮಿತ ಇಂಟರ್ನೆಟ್ ಮತ್ತು ಬೃಹತ್ 1 Gbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ವಾಯಿಸ್ ಕರೆ ಪ್ರಯೋಜನಗಳ ಜೊತೆಗೆ, ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಸಿಗುತ್ತವೆ. ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೇ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಆಪ್ ಪ್ರೀಮಿಯಂನ ಉಚಿತ ಚಂದಾದಾರಿಕೆ ಲಭ್ಯ.

ಜಿಯೋ 3,999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಜಿಯೋ 3,999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಜಿಯೋ ಫೈಬರ್ 1 Gbps ಇಂಟರ್ನೆಟ್ ವೇಗದ ಆಯ್ಕೆಯಲ್ಲಿ ಎರಡು ವಿಭಿನ್ನ ಯೋಜನೆಗಳನ್ನು ಹೊಂದಿದೆ. 3,999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಪ್ಲ್ಯಾಟಿನಿಯಮ್ ಎಂದು ಕರೆಯಲಾಗುತ್ತದೆ. ಅಲ್ಲಿ ಗ್ರಾಹಕರು ಮಾಸಿಕ 3,999 ರೂ. ಯೋಜನೆಯಲ್ಲಿ, ಅವರು 2,500 ಜಿಬಿ ಡೇಟಾವನ್ನು ಪಡೆಯುತ್ತಾರೆ. ಅಲ್ಲದೆ, ಲಾಕ್‌ಡೌನ್‌ನಿಂದಾಗಿ ಕಂಪನಿಯು 2,500 ಜಿಬಿಯ ಡಬಲ್ ಡೇಟಾ ಪ್ರಯೋಜನವನ್ನು ನೀಡುತ್ತಿದೆ. ವಾಯಿಸ್‌ ಕರೆ ಪ್ರಯೋಜನಗಳಂತೆ, ಗ್ರಾಹಕರಿಗೆ ಭಾರತದಲ್ಲಿ ಎಲ್ಲಿಯಾದರೂ ಉಚಿತ ಧ್ವನಿ ಕರೆ ಸಿಗುತ್ತದೆ. ಪ್ಲಾಟಿನಂ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಆರಿಸಿಕೊಳ್ಳುವ ಜಿಯೋ ಫೈಬರ್ ಗ್ರಾಹಕರು ಸೋನಿಲೈವ್, ಡಿಸ್ನಿ + ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಇನ್ನೂ ಅನೇಕ ಒಟಿಟಿ ಪ್ರಯೋಜನಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.

ಯಾವುದು ಉತ್ತಮ ಆಯ್ಕೆ?

ಯಾವುದು ಉತ್ತಮ ಆಯ್ಕೆ?

ಜಿಯೋ ಫೈಬರ್ ಮತ್ತು ಏರ್‌ಟೆಲ್ ಎರಡೂ ಸಂಸ್ಥೆಗಳು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ನೀಡುತ್ತದೆ. ಕಡಿಮೆ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆ 699 ರೂ.ಗಳಿಂದ ಪ್ರಾರಂಭವಾದರೆ, ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಯೋಜನೆ 799 ರೂ.ಗಳಿಂದ ಪ್ರಾರಂಭವಾಗುತ್ತದೆ. ಇನ್ನು ಈ ಎರಡು ಸಂಸ್ಥೆಗಳು ದುಬಾರಿ ಬೆಲೆಯಲ್ಲಿ 3,999 ರೂ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊಂದಿವೆ. ಎರಡರಲ್ಲಿಯೂ 1 ಜಿಬಿಪಿಎಸ್ ಇಂಟರ್ನೆಟ್ ವೇ ಲಭ್ಯ. ಟ್ರೂಲೀ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ನೋಡುತ್ತಿದ್ದರೇ ಏರ್‌ಟೆಲ್‌ನ VIP ಯೋಜನೆಯು ಉತ್ತಮ ಆಯ್ಕೆ. ವೇಗದ ಇಂಟರ್ನೆಟ್ ಬ್ರೌಸ್‌ ಜೊತೆಗೆ OTT ಸೌಲಭ್ಯಗಳಿಗೆ ಜಿಯೋ ಸಹ ಆಕರ್ಷಕ ಅನಿಸಲಿದೆ.

Best Mobiles in India

English summary
Jio And Airtel operators offer a Rs 3,999 broadband plan which comes with different data and additional benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X