Subscribe to Gizbot

ಏರ್‌ಟೆಲ್‌ಗೆ ಮತ್ತೆ ಟಾಂಗ್ ನೀಡಿದ ಟ್ರಾಯ್!..ಜಿಯೋನೆ ಬೆಸ್ಟ್ ಎಂತು ರಿಪೋರ್ಟ್!!

Written By:

ಜಿಯೋ ನೀಡುವ ಇಂಟರ್‌ನೆಟ್‌ಗಿಂತ ತನ್ನ ಇಂಟರ್‌ನೆಟ್ ಸ್ಪೀಡ್ ಹೆಚ್ಚಿದೆ ಎಂದು ಹೇಳಿಕೊಳ್ಳುತ್ತಿದ್ದ ಏರ್‌ಟೆಲ್‌ಗೆ ಟ್ರಾಯ್‌ನ ನೂತನ ರಿಪೋರ್ಟ್ ಕಾರ್ಡ್ ಟಾಂಗ್ ನೀಡಿದೆ. 4ಜಿ ಸ್ಪೀಡ್ ವಿಚಾರದಲ್ಲಿ ರಿಲಾಯನ್ಸ್ ಜಿಯೋ ಟೆಲಿಕಾಂ ಇತರೆ ಎಲ್ಲಾ ಟೆಲಿಕಾಂ ಕಂಪೆನಿಗಳಿಗಿಂತಲೂ ಅಧಿಕ ವೇಗದ ಇಂಟರ್‌ನೆಟ್ ಒದಗಿಸುತ್ತಿದೆ ಎಂದು ಟ್ರಾಯ್ ವರದಿಯಲ್ಲಿ ಹೇಳಿದೆ.!

ಭಾರತದ ಟೆಲಿಕಾಂ ಕಂಪೆನಿಗಳಲ್ಲಿಯೇ ಅತಿ ಹೆಚ್ಚು ವೇಗದ ಇಂಟರ್‌ನೆಟ್ ಅನ್ನು ಜಿಯೋ ಒದಗಿಸುತಿದ್ದು, 21.3 MBPS ಸರಾಸರಿ ಡೌನ್​ಲೋಡ್ ವೇಗವನ್ನು ಹೊಂದಿರುವ ಜಿಯೋ ಮೊದಲ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಏರ್‌ಟೆಲ್ ಜಿಯೋಗಿಂತಲೂ ಎರಡುವರೆ ಪಟ್ಟು ಕಡಿಮೆ ವೇಗದಲ್ಲಿ (8.8MBPS) ಕೇವಲ ಸರಾಸರಿ ಡೌನ್​ಲೋಡ್ ವೇಗವನ್ನು ಹೊಂದಿದೆ.!

ಏರ್‌ಟೆಲ್‌ಗೆ ಮತ್ತೆ ಟಾಂಗ್ ನೀಡಿದ ಟ್ರಾಯ್!..ಜಿಯೋನೆ ಬೆಸ್ಟ್ ಎಂತು ರಿಪೋರ್ಟ್!!

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಕಟಿಸಿದ ರಿಪೋರ್ಟ್‌ಕಾರ್ಡ್‌ನಲ್ಲಿ, ಡೌನ್​ಲೋಡ್ ವಿಚಾರದಲ್ಲಿ ಜಿಯೋ ಟಾಪ್​ನಲ್ಲಿದ್ದರೆ, ಅಪ್​ಲೋಡ್ ಸ್ಪೀಡ್ ವಿಚಾರದಲ್ಲಿ 6.9 ಎಂಬಿಪಿಎಸ್ ವೇಗವನ್ನು ಹೊಂದಿರುವ ಐಡಿಯಾ ಮುಂದಿದೆ. ಇನ್ನು 4ಜಿ ಅಪ್​ಲೋಡ್ ಸರಾಸರಿ ವೇಗದಲ್ಲಿ ಏರ್‌ಟೆಲ್ ನಾಲ್ಕನೇ ಸ್ಥಾನಕ್ಕೆ ಕುಸಿದಿರುವುದು ಆಶ್ಚರ್ಯವಾಗಿದೆ.!

ಏರ್‌ಟೆಲ್‌ಗೆ ಮತ್ತೆ ಟಾಂಗ್ ನೀಡಿದ ಟ್ರಾಯ್!..ಜಿಯೋನೆ ಬೆಸ್ಟ್ ಎಂತು ರಿಪೋರ್ಟ್!!

4ಜಿ ಡೌನ್​ಲೋಡ್ ಸರಾಸರಿ ವೇಗ!
1) ಜಿಯೋ: 21.3 ಎಂಬಿಪಿಎಸ್
2) ಏರ್​​ಟೆಲ್: 8.8 ಎಂಬಿಪಿಎಸ್
3) ವೊಡಾಫೋನ್: 7.2
4) ಐಡಿಯಾ: 6.8

4ಜಿ ಅಪ್​ಲೋಡ್ ಸರಾಸರಿ ವೇಗ!!
1) ಐಡಿಯಾ: 6.9 ಎಂಬಿಪಿಎಸ್
2) ವೊಡಾಫೋನ್: 5.5
3) ಜಿಯೋ: 4.5
4) ಏರ್​ಟೆಲ್: 3.9 ಎಂಬಿಪಿಎಸ್

ಓದಿರಿ: ಶೀಘ್ರವೇ ಬರಲಿದೆಯಂತೆ ಮಡುಚಬಲ್ಲ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್!!

English summary
Jio has topped the chart of fastest 4G telecom operators with an average peak download speed of 21.3 megabit per second.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot