ಕೇದಾರನಾಥ ಯಾತ್ರಾರ್ಥಿಗಳಿಗೆ ಈಗ ಜಿಯೋದಿಂದ ಸಿಹಿಸುದ್ದಿ!

|

ಕೇದಾರನಾಥ ಯಾತ್ರಾರ್ಥಿಗಳಿಗೆ ರಿಲಯನ್ಸ್ ಜಿಯೋ ಭಾರೀ ಸಿಹಿಸುದ್ದಿ ನೀಡಿದೆ. ಗೌರಿಕುಂಡ ಮತ್ತು ಕೇದಾರನಾಥ ನಡುವಿನ ಮಾರ್ಗದಲ್ಲಿ ಮೊಬೈಲ್ ಹಾಗೂ ಡೇಟಾ ಸೇವೆಗಳನ್ನು ಒದಗಿಸಲು ಇದೀಗ ರಿಲಯನ್ಸ್ ಜಿಯೋ ಮುಂದಾಗಿದೆ.

ಕೇದಾರನಾಥ ಯಾತ್ರಾರ್ಥಿಗಳಿಗೆ ಈಗ ಜಿಯೋದಿಂದ ಸಿಹಿಸುದ್ದಿ!

ಹೌದು, ರಿಲಯನ್ಸ್ ಜಿಯೋ ಗೌರಿಕುಂಡ ಮತ್ತು ಕೇದಾರನಾಥ ನಡುವಿನ ಮಾರ್ಗದಲ್ಲಿ ಮೊಬೈಲ್ ಮತ್ತು ಡೇಟಾ ಸೇವೆಗಳನ್ನು ಒದಗಿಸುತ್ತಿರುವ ಮೊದಲ ಟೆಲಿಕಾಂ ಆಪರೇಟರ್ ಆಗಿದೆ ಎಂದು ಕಂಪನಿಯು ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ ಎರಡು ವರ್ಷಗಳ ಬಳಿಕ ಪುನರಾರಂಭಗೊಂಡಿದೆ. ಈ ವರ್ಷ ಹಿಮಾಲಯದ ಪುಣ್ಯಕ್ಷೇತ್ರಗಳಿಗೆ ಯಾತ್ರಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಗೌರಿಕುಂಡ ಮತ್ತು ಕೇದಾರನಾಥ ನಡುವೆ ಐದು ಟವರ್‌ಗಳನ್ನು ಸ್ಥಾಪಿಸುವ ಯೋಜನೆಗೆ ಅನುಗುಣವಾಗಿ ಸೋನ್‍ಪ್ರಯಾಗದಲ್ಲಿ ದೊಡ್ಡ ಟವರ್ ಸ್ಥಾಪಿಸಲಾಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿದೆ.

ಕೇದಾರನಾಥ ಯಾತ್ರಾರ್ಥಿಗಳಿಗೆ ಈಗ ಜಿಯೋದಿಂದ ಸಿಹಿಸುದ್ದಿ!

ಛೋಟಿ ಲಿಂಚೋಲಿ, ಲಿಂಚೋಲಿ ಮತ್ತು ರುದ್ರಪಾಯಿಂಟ್‍ನಲ್ಲಿ ಮೂರು ಟವರ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಮತ್ತು ಉಳಿದ ಎರಡನ್ನು ಶೀಘ್ರದಲ್ಲೇ ನಿರ್ಮಿಸಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗದಲ್ಲಿ ಯಾತ್ರಾರ್ಥಿಗಳಿಗೆ ತಡೆರಹಿತ ಸಂಪರ್ಕಕ್ಕಾಗಿ ಮೊಬೈಲ್ ನೆಟ್‌ವರ್ಕ್‌ ಫೈಬರ್ ಲಿಂಕ್ ನೀಡಲಾಗಿದೆ ಎಂದು ತಿಳಿಸಿದೆ.

ಇತ್ತೀಚಿಗೆ ಜಿಯೋ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ತನ್ನ 4ಜಿ ಸೇವೆಯನ್ನು ಪ್ರಾರಂಭಿಸಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಮರ್ಪಕ ಮೊಬೈಲ್‍ ನೆಟ್‍ ವರ್ಕ್‍ ಸಂಪರ್ಕ ಇರಲಿಲ್ಲ. ಇದರಿಂದಾಗಿ ಸ್ಥಳೀಯ ಜನರಿಗೆ ಮಾತ್ರವಲ್ಲ, ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ದೂರವಾಣಿ ಸಂವಹನಕ್ಕೆ ಬಹಳ ತೊಂದರೆಯಾಗಿತ್ತು. ಇದನ್ನರಿತ ಜಿಯೋ 4ಜಿ ಡಿಜಿಟಲ್‍ ಸೇವೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಿಸಿದೆ. ಇದರಿಂದ ಆ ಪ್ರದೇಶದ ಜನರು ಸಂವಹನ ಸಾಧಿಸಲು, ವಿದ್ಯಾರ್ಥಿಗಳು ಆನ್‍ ಲೈನ್‍ ಪಾಠ ಆಲಿಸಲು, ಯುವ ಜನರು ತಮ್ಮ ಉದ್ಯೋಗಾವಕಾಶಗಳನ್ನು ತಾವಿರುವ ಸ್ಥಳದಿಂದಲೇ ನಿರ್ವಹಿಸಲು ಸಹಾಯಕವಾಗಿದೆ.

ಅಲ್ಲದ ನೆಟ್‍ ವರ್ಕ್‍ ಸಮಸ್ಯೆಯಿಂದ ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ಮನೆಗಳಿಗೆ ಕರೆ ಮಾಡಲು ಅಥವಾ ಆನ್‍ಲೈನ್‍ ಸಂಪರ್ಕ ಸಾಧಿಸಲು ಕಷ್ಟಪಡಬೇಕಾಗಿತ್ತು. ಈಗ ಜಿಯೋ 4ಜಿ ನೆಟ್‍ ವರ್ಕ್ ನಿಂದಾಗಿ ಸುಲಲಿತ ಸಂವಹನಕ್ಕೆ ನೆರವಾಗಿದೆ. ಇನ್ನು ಮಲೆ ಮಹದೇಶ್ವರ ಬೆಟ್ಟ ದಟ್ಟ ಅರಣ್ಯ ಶ್ರೇಣಿಯಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಇದು ಸಮುದ್ರ ಮಟ್ಟದಿಂದ 3,200 ಅಡಿ ಎತ್ತರದಲ್ಲಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ.

Best Mobiles in India

English summary
Jio brings mobile telephony service to Kedarnath trek route.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X