ಯಶಸ್ವಿ 2 ವರ್ಷ ಪೊರೈಸಿದ ಜಿಯೋ..ಮತ್ತೊಂದು ಅಭಯ ನೀಡಿದ ಅಂಬಾನಿ!!

|
Get 1GB free Jio 4G data with Cadbury Dairy Milk - KANNADA

ಡಿಜಿಟಲ್ ಇಂಡಿಯಾಗೆ ಬೇಕಾಗಿದ್ದ ಪರಿವರ್ತಕ ಎಂದೇ ಕರೆಸಿಕೊಳ್ಳುತ್ತಿರುವ 'ಜಿಯೋ' ಟೆಲಿಕಾಂ ತನ್ನ 2 ವರ್ಷಗಳ ಯಶಸ್ವಿ ಪಯಣದಲ್ಲಿ ಮುಂದುವರೆದಿದೆ. ಎರಡು ವರ್ಷಗಳ ಹಿಂದೆ ತನ್ನ ಸೇವೆಗಳು ಪ್ರಾರಂಭವಾದಾಗಿನಿಂದ ಜಿಯೋ ಡಿಜಿಟಲ್ ಕ್ರಾಂತಿಯನ್ನೇ ಮಾಡಿದ್ದು, ಡೇಟಾದ ಶಕ್ತಿಯನ್ನು ಪ್ರತಿಯೊಬ್ಬ ಭಾರತೀಯನ ಕೈಗೂ ಎಟುಕುವ ಮಟ್ಟಕ್ಕೆ ತಂದಿದೆ.ಪ್ರತಿ ಸೆಕೆಂಡಿಗೆ 7 ಗ್ರಾಹಕರಂತೆ ಕೇವಲ 170 ದಿನಗಳಲ್ಲಿ 100 ಮಿಲಿಯನ್ ಗ್ರಾಹಕರನ್ನು ಸೇರಿಸಿಕೊಂಡ ವಿಕ್ರಮ ಎಂಬ ದಾಖಲೆಯನ್ನು ಸಹ ಸೃಷ್ಟಿಸಿದೆ.

ಹೌದು, ಜೂನ್ 30, 2018ರ ಅಂಕಿ ಅಂಶಗಳ ಪ್ರಕಾರ 215 ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರು ಜಿಯೋ ಜಾಲದಲ್ಲಿ ಡಿಜಿಟಲ್ ಜೀವನವನ್ನು ಆನಂದಿಸುತ್ತಿದ್ದಾರೆ. ಇದರಿಂದಾಗಿ, ವಿಶ್ವದ ಯಾವುದೇ ಭಾಗದಲ್ಲಿ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಲಾದ ತಂತ್ರಜ್ಞಾನ ಸೇವೆ ಎಂಬ ಹೆಗ್ಗಳಿಕೆಯನ್ನು ಜಿಯೋಗೆ ತಂದುಕೊಟ್ಟಿದೆ. ಡಿಜಿಟಲ್ ಪರಿಹಾರಗಳ ಬೆಂಬಲಿತವಾದ ಹೊಸ ತಲೆಮಾರಿನ ತಂತ್ರಜ್ಞಾನ ಜಿಯೋ ಡಿಜಿಟಲ್ ಬದುಕಿನ ಆಮ್ಲಜನಕವಾದ ಡೇಟಾವನ್ನು ಭಾರತೀಯರಿಗೆ ಅಧಿಕ ಪ್ರಮಾಣದಲ್ಲಿ ನೀಡಿರುವುದಾಗಿ ಜಿಯೋ ತಿಳಿಸಿದೆ.

ಯಶಸ್ವಿ 2 ವರ್ಷ ಪೊರೈಸಿದ ಜಿಯೋ..ಮತ್ತೊಂದು ಅಭಯ ನೀಡಿದ ಅಂಬಾನಿ!!

ಕಳೆದೆರಡು ವರ್ಷಗಳಲ್ಲಿ ಜಿಯೋ ಜೊತೆಗೆ ಭಾರತದ ಪ್ರಯಾಣ ಯಾರೂ ಊಹಿಸಲು ಸಾಧ್ಯವಾಗದಂತೆ ಬೆಳೆದುನಿಂತಿದೆ. ಜಿಯೋ ಜಾಲ ಇಷ್ಟರಲ್ಲೇ ಭಾರತದ ಶೇ.99 ಜನಸಂಖ್ಯೆಯನ್ನು ಸಂಪರ್ಕಿಸಲಿದೆ ಎಂದು ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ. ಭಾರತದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ರೂಪಿಸಲಾಗಿರುವ 2ಜಿ ಪ್ರಸಾರವ್ಯಾಪ್ತಿಗಿಂತ ದೊಡ್ಡದಾದ 4ಜಿ ವ್ಯಾಪ್ತಿಯನ್ನು ನೀಡುತ್ತಿರುವ ಜಿಯೋ ತನ್ನ ಎರಡು ವರ್ಷಗಳ ಸಾಧನೆಯನ್ನು ಜನರ ಬಳಿ ಬಿಚ್ಚಿಟ್ಟಿದೆ.

ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ:

ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ:

ಅತ್ಯುನ್ನತ ತಂತ್ರಜ್ಞಾನ ಬಳಸುವ ಸಂಪೂರ್ಣ ಐಪಿ ಜಾಲದ ಬೆಂಬಲ, 800 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಹಾಗೂ 2300 ಮೆಗಾಹರ್ಟ್ಸ್ ಬ್ಯಾಂಡುಗಳನ್ನು ವ್ಯಾಪಿಸಿರುವ ಎಲ್‌ಟಿಇ ತರಂಗಗುಚ್ಛ (ಸ್ಪೆಕ್ಟ್ರಂ) ಹಾಗೂ ಅತಿದೊಡ್ಡ ಫೈಬರ್ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್‌ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ. ಭಾರತದಲ್ಲಿ ಉಚಿತ ಕರೆಗಳ ಕನಸು ನನಸಾಗಿದೆ. ಜಿಯೋ ತನ್ನ ಎಲ್ಲ ಟ್ಯಾರಿಫ್ ಪ್ಲಾನುಗಳ ಜೊತೆಯಲ್ಲಿ ಅಪರಿಮಿತ ಉಚಿತ ಕರೆಗಳನ್ನು ನೀಡಿದೆ.

ಭಾರತಕ್ಕೆ ಈಗ ಮೊದಲ ಸ್ಥಾನ

ಭಾರತಕ್ಕೆ ಈಗ ಮೊದಲ ಸ್ಥಾನ

ಟೆಲಿಕಾಂ ಮಾರುಕಟ್ಟೆ ಬಹಳ ಕ್ಷಿಪ್ರವಾಗಿ ಡೇಟಾದತ್ತ ಸಾಗಿದೆ ಹಾಗೂ ಮತ್ತೊಮ್ಮೆ ಗ್ರಾಹಕರಿಗೆ ಜಯ ದೊರೆತಿದೆ. ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಪ್ರಮಾಣ ತಿಂಗಳಿಗೆ 20 ಕೋಟಿ ಜಿಬಿಯಿಂದ ಸುಮಾರು 370 ಕೋಟಿ ಜಿಬಿಗೆ ತಲುಪಿದೆ. ಈ ಪೈಕಿ ಜಿಯೋ ಗ್ರಾಹಕರೇ ಸುಮಾರು 240 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ. ಮೊಬೈಲ್ ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ಪ್ರತಿ ತಿಂಗಳೂ 100 ಕೋಟಿ ಜಿಬಿಗಿಂತ ಹೆಚ್ಚು ಡೇಟಾ ನಿರ್ವಹಿಸುವ ಜಿಯೋ, ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲವಾಗಿ ಬೆಳೆದಿದೆ.

ನವಯುಗವನ್ನು ಸಾರಿದ ಜಿಯೋಫೋನ್:

ನವಯುಗವನ್ನು ಸಾರಿದ ಜಿಯೋಫೋನ್:

ಫೀಚರ್‌ಗಳನ್ನು ಅಡಕಗೊಳಿಸಿದ ಫೋನ್‌ಗಳ ಬಳಕೆದಾರರಿಗೆ ಭಾರತದ ಹೊಸ ಸ್ಮಾರ್ಟ್ ಫೋನ್ ಎನಿಸಿದ ಜಿಯೋ ಫೋನ್ ಹೊಸದೊಂದು ಯುಗದ ಪ್ರಾರಂಭವನ್ನು ಸಾರುತ್ತಿದೆ. 2018 ಜೂನ್ 30ರ ವೇಳೆಗೆ, 25 ಮಿಲಿಯನ್ ಫೋನುಗಳನ್ನು ಮಾರಾಟಮಾಡಿರುವ ದಾಖಲೆ ಹೊಂದಿರುವ ಜಿಯೋ ಫೋನ್ ಮುಂದಿನ ದಿನಗಳಲ್ಲಿ ಅತಿ ಅಲ್ಪಾವಧಿಯಲ್ಲಿ 100 ಮಿಲಿಯ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.

ಜಿಯೋಫೈ ಪರಿಚಯಿಸಿದುದು:

ಜಿಯೋಫೈ ಪರಿಚಯಿಸಿದುದು:

ವೈಯಕ್ತಿಕ ಧ್ವನಿ ಹಾಗೂ ಡಾಟಾ ಹಾಟ್ ಸ್ಪಾಟ್‌ಗಳ ಅಳವಡಿಕೆಯಿಂದಾಗಿ ಗ್ರಾಹಕರು ಜಿಯೋ ಡಿಜಿಟಲ್ ಜೀವನಶೈಲಿಯನ್ನು ಅನ್ನು ಹಲವು ಸಾಧನಗಳ ಮೂಲಕ ಬಳಸುವುದು ಸಾಧ್ಯವಾಗಿದೆ. ಅಲ್ಲದೆ, ವಿಒಎಲ್‌ಟಿಇ ಕರೆಗಳ ಲಾಭವನ್ನು ತಮ್ಮ ಹಳೆಯ 2ಜಿ/3ಜಿ ಮೊಬೈಲ್ ಗಳಿಂದಲೂ ಪಡೆಯುವುದಕ್ಕೆ ಅವಕಾಶವಾಗಿದೆ.

ರೂ. 15ಕ್ಕಿಂತ ಕಡಿಮೆ

ರೂ. 15ಕ್ಕಿಂತ ಕಡಿಮೆ

ಪ್ರತಿ ಜಿಬಿಗೆ ರೂ. 250 - ರೂ. 10,000 ಇದ್ದ ದರಗಳು, ಜಿಯೋ ಪ್ರಾರಂಭದ ನಂತರ ಪ್ರತಿ ಜಿಬಿಗೆ ರೂ. 15ಕ್ಕಿಂತ ಕಡಿಮೆಯಾಗಿದ್ದು ದರಪಟ್ಟಿಗಳು ಜನಸಾಮಾನ್ಯರ ಕೈಗೆಟುಕುವ ಮಟ್ಟಕ್ಕೆ ತಲುಪಿವೆ. ಡೇಟಾ ಪ್ರಜಾತಾಂತ್ರೀಕರಣಕ್ಕೆ ದಾರಿತೋರಿದ ಜಿಯೋ, ವಿವಿಧ ಪ್ಲಾನುಗಳ ಮೂಲಕ ಜಿಯೋ ಗ್ರಾಹಕರು ಇನ್ನೂ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ.ಭಾರತದಲ್ಲಿ ಟೆಲಿಕಾಂ ಜಾಲಗಳ ಗುಣಮಟ್ಟದ ಮೇಲ್ವಿಚಾರಣೆಯನ್ನು ಅಧಿಕೃತವಾಗಿ ನೋಡಿಕೊಳ್ಳುವ ಟ್ರಾಯ್ ಸ್ಪೀಡ್ಟೆಸ್ಟ್ ಪೋರ್ಟಲ್ ಜಿಯೋ ಅನ್ನು 4ಜಿ ಜಾಲಗಳ ವ್ಯಾಪ್ತಿ, ಬಳಕೆ ಹಾಗೂ ಡೇಟಾ ವೇಗಗಳಲ್ಲಿ ಅಗ್ರಗಣ್ಯವೆಂದು ಸತತವಾಗಿ ಗುರುತಿಸಿದೆ.

ಟ್ಯಾರಿಫ್ ಸರಳೀಕರಣ:

ಟ್ಯಾರಿಫ್ ಸರಳೀಕರಣ:

ಜಿಯೋ ಬರುವ ಮೊದಲು ಮಾರುಕಟ್ಟೆಯಲ್ಲಿ ಸುಮಾರು 22,000 ಪ್ಲಾನುಗಳಿದ್ದವು. ಜಿಯೋ ಬಂದ ನಂತರ ಮೊಬೈಲ್ ಸೇವಾ ಸಂಸ್ಥೆಗಳು ಜಿಯೋ ಮಾದರಿಯನ್ನು ಅನುಸರಿಸುವ ಮೂಲಕ ಪ್ಲಾನುಗಳ ಸಂಖ್ಯೆಯನ್ನು ಕಡಿಮೆಮಾಡಲು ಪ್ರಯತ್ನಿಸುತ್ತಿವೆ. ಕೆಲವೇ ಸರಳ ಪ್ಲಾನುಗಳನ್ನು ಪರಿಚಯಿಸಿರುವ ಜಿಯೋ ಏಕಕಾಲದಲ್ಲಿ ಕೇವಲ ಒಂದೆರಡು ಪ್ಲಾನುಗಳನ್ನಷ್ಟೇ ಪ್ರಮುಖವೆಂದು ಪರಿಗಣಿಸುತ್ತಿದೆ. ಇದರಿಂದಾಗಿ ಗ್ರಾಹಕರ ಬದುಕು ಬಹಳ ಸರಳವಾಗಿದೆ ಹಾಗೂ ತಮಗಾಗಿ ಅತ್ಯುತ್ತಮ ಕೊಡುಗೆಯನ್ನು ಸ್ವತಃ ಅವರೇ ಆಯ್ದುಕೊಳ್ಳುವುದು ಸಾಧ್ಯವಾಗಿದೆ.

ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ:

ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ:

ಜಿಯೋ ಪ್ರಾರಂಭದ ನಂತರ ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲ ಪ್ರಮುಖ ಸೋಶಿಯಲ್ ಮೀಡಿಯಾ ವೇದಿಕೆಗಳ ಭಾರತೀಯ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜಿಯೋ ಪ್ರಾರಂಭದ ಮೊದಲ ವರ್ಷದಲ್ಲೇ ಸುಮಾರು 70 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ್ ಹಾಗೂ ಫೇಸ್‌ಬುಕ್‌ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ.

ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ:

ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ:

ರಿಲಯನ್ಸ್ ರೀಟೈಲ್ ನಿಂದ ವಿಒ‌ಎಲ್‌ಟಿಇ ಅಂತರ್ಗತ LYF ಸಾಧನಗಳನ್ನು ಬಿಡುಗಡೆಮಾಡಿದುದರಿಂದ, ಸ್ಮಾರ್ಟ್‌ಫೋನ್ ಬ್ರಾಂಡ್ ಗಳೆಲ್ಲವೂ ಎಲ್‌ಟಿಇ ಶಿಪ್‌ಮೆಂಟ್‌ಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತಾಯಿತು. ಇದರಿಂದಾಗಿ ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ಗಳೂ ಎಲ್‌ಟಿಇ ಸಾಧನಗಳಾಗಿ ಬದಲಾಗಿರುವ ಸ್ಥಿತಿ ನಿರ್ಮಾಣವಾಗಿದೆ.

Best Mobiles in India

English summary
Jio completes 2 years of telecom services. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X