ಲಡಾಖ್‌ನಲ್ಲಿ ಪಾಂಗ್ಯಾಂಗ್‌ ಸರೋವರದ ಬಳಿ 4G ಸೇವೆಗಳನ್ನು ಒದಗಿಸಿದ ಜಿಯೋ

|

ಲಡಾಖ್‌ನಲ್ಲಿನ ಪಾಂಗ್ಯಾಂಗ್ ಸರೋವರದ ಬಳಿ ಇರುವ ಹಳ್ಳಿಗೆ ರಿಲಾಯನ್ಸ್‌ ಜಿಯೋ ತನ್ನ 4G ಸೇವೆಗಳನ್ನು ಒದಗಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಚೀನಾ ಮಧ್ಯೆ ಸಂಘರ್ಷಕ್ಕೆ ಈ ಪ್ರದೇಶ ಕೇಂದ್ರವಾಗಿತ್ತು.

ಲಡಾಖ್‌ನಲ್ಲಿ ಪಾಂಗ್ಯಾಂಗ್‌ ಸರೋವರದ ಬಳಿ 4G ಸೇವೆಗಳನ್ನು ಒದಗಿಸಿದ ಜಿಯೋ

ಪಾಂಗ್ಯಾಂಗ್‌ ಸರೋವರದ ಸ್ಪಾಂಗ್‌ಮಿಕ್‌ ಗ್ರಾಮದಲ್ಲಿ 4G ಧ್ವನಿ ಮತ್ತು ಡೇಟಾ ಸೇವೆಯನ್ನು ರಿಲಾಯನ್ಸ್‌ ಜಿಯೋ ಆರಂಭಿಸಿದೆ ಎಂದು ರಿಲಾಯನ್ಸ್‌ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಜನಪ್ರಿಯ ಪ್ರವಾಸಿ ತಾಣದ ಸುತ್ತಮುತ್ತ 4G ಮೊಬೈಲ್‌ ಸಂಪರ್ಕವನ್ನು ಒದಗಿಸುತ್ತಿರುವ ಮೊದಲ ಟೆಲಿಕಾಂ ಸೇವಾ ಪೂರೈಕೆದಾರ ರಿಲಾಯನ್ಸ್‌ ಆಗಿದೆ. ಸ್ಪಾಂಗ್‌ಮಿಕ್‌ ಗ್ರಾಮದಲ್ಲಿ ಜಿಯೋ ಮೊಬೈಲ್‌ ಟವರ್ ಅನ್ನು ಲಡಾಖ್‌ನ ಲೋಕಸಭೆ ಸದಸ್ಯ ಜಮ್ಯಾಂಗ್‌ ಶೆರಿಂಗ್‌ ನಾಮ್‌ಗ್ಯಾಲ್‌ ಉದ್ಘಾಟನೆ ಮಾಡಿದ್ದಾರೆ.

ಈ ಟವರ್ ಉದ್ಘಾಟನೆಯಿಂದಾಗಿ ಸ್ಥಳೀಯರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ಈ ಪ್ರದೇಶದಲ್ಲಿನ ಆರ್ಥಿಕತೆ ವೃದ್ಧಿಯಾಗುತ್ತದೆ ಮತ್ತು ಪ್ರವಾಸಿಗರಿಗೆ ಹಾಗೂ ಸೇನಾಪಡೆಗಳಿಗೆ ಈ ಪ್ರದೇಶದಲ್ಲಿ ಉತ್ತಮ ಸಂಪರ್ಕ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲರಿಗೂ ಡಿಜಿಟಲ್‌ ಸಂಪರ್ಕ ಸಾಧ್ಯವಾಗಿಸುವುದು ಮತ್ತು ಸಮಾಜಗಳನ್ನು ಸಬಲೀಕರಿಸುವ ಧ್ಯೇಯಕ್ಕೆ ಅನುಗುಣವಾಗಿ ಲಡಾಖ್‌ ಪ್ರದೇಶದಲ್ಲಿ ತನ್ನ ನೆಟ್‌ವರ್ಕ್‌ ಅನ್ನು ನಿರಂತರವಾಗಿ ಜಿಯೋ ವೃದ್ಧಿಸುತ್ತಿದೆ.

ಅತ್ಯಂತ ಕಡಿದಾದ ಪ್ರದೇಶ ಮತ್ತು ತೀಕ್ಷ್ಣ ಹವಾಮಾನದ ಮಧ್ಯೆಯೂ ಜಿಯೋ ತಂಡವು ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಕುಗ್ರಾಮಗಳನ್ನೂ ತಲುಪುವ ಪ್ರಯತ್ನ ಮಾಡುತ್ತಿದೆ ಎಂದು ರಿಲಾಯನ್ಸ್‌ ಜಿಯೋ ಅಧಿಕಾರಿಗಳು ಹೇಳಿದ್ದಾರೆ.

Best Mobiles in India

English summary
Jio expands 4G services in Ladakh region near Pangong lake.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X