ಜಿಯೋ ಫೈಬರ್‌ ಖರೀದಿಸುವ ಗ್ರಾಹಕರಿಗೆ ಈ ಕೊಡುಗೆ ಜಬರ್ದಸ್ತ್ ಆಗಿದೆ!

|

ದೇಶದ ಮೂಂಚೂಣಿಯ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಇದೀಗ ತನ್ನ ಜಿಯೋ ಫೈಬರ್ ಬಳಕೆದಾರರಿಗೆ 'ಫೆಸ್ಟಿವಲ್ ಬೊನಾಂಜಾ' (festive bonanza) ಕೊಡುಗೆಯನ್ನು ಘೋಷಿಸಿದೆ. ಈ ನೂತನ ಕೊಡುಗೆಯಲ್ಲಿ ಜಿಯೋ ಫೈಬರ್ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಕೊಡುಗೆ ಲಭ್ಯವಾಗಲಿದೆ. ಇನ್ನು ಜಿಯೋ ಫೈಬರ್ ಯೋಜನೆಗಳು ಅತ್ಯುತ್ತಮ ಓಟಿಟಿ ಪ್ರಯೋಜನಗಳನ್ನು ಒಳಗೊಂಡಿವೆ.

ಬೊನಾಂಜಾ

ಹೌದು, ಜಿಯೋ ಸಂಸ್ಥೆಯು ಫೆಸ್ಟಿವಲ್ ಬೊನಾಂಜಾ ಕೊಡುಗೆಯಲ್ಲಿ ಗ್ರಾಹಕರಿಗೆ 4,500 ವರೆಗೆ ಪ್ರಯೋಜನಗಳನ್ನು ತಿಳಿಸಿದೆ. ಇನ್ನು ಜಿಯೋದ ಈ ಆಫರ್ ಅಧಿಕೃತ ಜಿಯೋ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಅಂದಹಾಗೆ ಈ ಹಬ್ಬದ ಕೊಡುಗೆಯು ಇದೇ ಅಕ್ಟೋಬರ್ 1 ಮತ್ತು ಅಕ್ಟೋಬರ್ 9 ರ ನಡುವೆ ಜಿಯೋ ಫೈಬರ್ ಸಂಪರ್ಕ ಪಡೆದ ಗ್ರಾಹಕರಿಗೆ ಮಾತ್ರ ಅನ್ವಯಿಸಲಿದೆ.

ಪಡೆಯಲು

ಜಿಯೋ 599ರೂ ಮತ್ತು 899ರೂ. ಈ ಯೋಜನೆಗಳೊಂದಿಗೆ ಬಳಕೆದಾರರು ಆಫರ್ ಅನ್ನು ಪಡೆಯಬಹುದು. ಈ ಆಫರ್‌ ಪಡೆಯಲು ಆಸಕ್ತ ಗ್ರಾಹಕರು ಈ ಎರಡು ಪ್ಲ್ಯಾನ್‌ಗಳಲ್ಲಿ ಒಂದನ್ನು ಸಂಪರ್ಕಿಸಿರುವ ಹೊಸ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆಯಬಹುದಾಗಿದೆ. ಇನ್ನು ಜಿಯೋದ ಈ ಎರಡೂ ಯೋಜನೆಗಳು ಅನಿಯಮಿತ ಡೇಟಾ, ಕರೆ ಸೌಲಭ್ಯಗಳು, ಉಚಿತ OTT ಚಂದಾದಾರಿಕೆಗಳು, ಫ್ರೀ ಶಾಪಿಂಗ್ ವೋಚರ್‌ಗಳು ಸೇರಿದಂತೆ ಇತರೆ ಪ್ರಯೋಜನ ಪಡೆದಿವೆ. ಫೆಸ್ಟಿವಲ್ ಬೊನಾಂಜಾ ಕೊಡುಗೆಯ ಪ್ರಯೋಜನಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೈಬರ್ 599ರೂ. ಯೋಜನೆಯ ಪ್ರಯೋಜನಗಳು

ಜಿಯೋ ಫೈಬರ್ 599ರೂ. ಯೋಜನೆಯ ಪ್ರಯೋಜನಗಳು

ಜಿಯೋದ ಈ ಯೋಜನೆಯು ಪ್ರಸ್ತುತ ಅನಿಯಮಿತ ವಾಯಿಸ್‌ ಕರೆ, 3.3TB ಮಾಸಿಕ ಡೇಟಾ ಪ್ರಯೋಜನಗಳನ್ನು ಒಳಗೊಂಡಿದೆ. ಹಾಗೆಯೇ ಇದು ಡಿಸ್ನಿ+ ಹಾಟ್‌ಸ್ಟಾರ್, ಸೋನಿ ಲೈವ್, ಜೀ5 ಸೇರಿದಂತೆ 12 ಹೆಚ್ಚಿನ OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಜೊತೆಗೆ 550+ ಟಿವಿ ಚಾನೆಲ್‌ಗಳ ಆಕ್ಸಸ್ ಆನ್-ಡಿಮಾಂಡ್ ಟಿವಿ ಚಂದಾದಾರಿಕೆ ಪ್ರಯೋಜನ ಪಡೆದಿದೆ. ಇನ್ನು ಈ ಕೊಡುಗೆಯಲ್ಲಿ ಜಿಯೋ ಫೈಬರ್ ಬಳಕೆದಾರರು ಹೆಚ್ಚುವರಿಯಾಗಿ 6 ತಿಂಗಳ ವ್ಯಾಲಿಡಿಟಿಯೊಂದಿಗೆ 4500ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು.

ಫೆಸ್ಟಿವಲ್ ಬೊನಾಂಜಾ ಕೊಡುಗೆಯಲ್ಲಿ ಈ ಪ್ರಯೋಜನಗಳು ಲಭ್ಯ

ಫೆಸ್ಟಿವಲ್ ಬೊನಾಂಜಾ ಕೊಡುಗೆಯಲ್ಲಿ ಈ ಪ್ರಯೋಜನಗಳು ಲಭ್ಯ

* ರಿಲಯನ್ಸ್ ಡಿಜಿಟಲ್‌ನಲ್ಲಿ 1000ರೂ. ಗಳ ರಿಯಾಯಿತಿ
* Myntra ನಲ್ಲಿ 1000ರೂ. ಗಳ ರಿಯಾಯಿತಿ
* Ajio ನಲ್ಲಿ 1000ರೂ. ಗಳ ರಿಯಾಯಿತಿ
* Ixigoನಲ್ಲಿ 1500ರೂ . ಗಳ ರಿಯಾಯಿತಿ.

ಜಿಯೋ ಫೈಬರ್ 899ರೂ. ಯೋಜನೆಯ ಪ್ರಯೋಜನಗಳು

ಜಿಯೋ ಫೈಬರ್ 899ರೂ. ಯೋಜನೆಯ ಪ್ರಯೋಜನಗಳು

ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಒಳಗೊಂಡಿದ್ದು, 100 mbps ಡೇಟಾ ವೇಗವನ್ನು ನೀಡುತ್ತದೆ. ಜೊತೆಗೆ ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್, ಸೋನಿ ಲಿವ್, ಝೀ5 ಸೇರಿದಂತೆ 12 ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆ ನೀಡುತ್ತದೆ. ಅಲ್ಲದೇ 550+ ಟಿವಿ ಚಾನೆಲ್‌ಗಳ ಆಕ್ಸಸ್‌ನೊಂದಿಗೆ ಟಿವಿ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಇನ್ನು ಈ ಕೊಡುಗೆಯಲ್ಲಿ ಜಿಯೋ ಫೈಬರ್ ಬಳಕೆದಾರರಿಗೆ ಹೆಚ್ಚುವರಿಯಾಗಿ 3 ತಿಂಗಳ ವ್ಯಾಲಿಡಿಟಿ ಸಿಗಲಿದ್ದು, ಅದರೊಂದಿಗೆ 3500ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು.

ಫೆಸ್ಟಿವಲ್ ಬೊನಾಂಜಾ ಕೊಡುಗೆಯಲ್ಲಿ ಈ ಪ್ರಯೋಜನಗಳು ಲಭ್ಯ

ಫೆಸ್ಟಿವಲ್ ಬೊನಾಂಜಾ ಕೊಡುಗೆಯಲ್ಲಿ ಈ ಪ್ರಯೋಜನಗಳು ಲಭ್ಯ

* ರಿಲಯನ್ಸ್ ಡಿಜಿಟಲ್‌ನಲ್ಲಿ 500ರೂ. ಗಳ ರಿಯಾಯಿತಿ
* Myntra ನಲ್ಲಿ 500ರೂ. ಗಳ ರಿಯಾಯಿತಿ
* Ajio ನಲ್ಲಿ 1000ರೂ. ಗಳ ರಿಯಾಯಿತಿ
* Ixigoನಲ್ಲಿ 1500ರೂ . ಗಳ ರಿಯಾಯಿತಿ.

Best Mobiles in India

English summary
Jio Festival Bonanza offer announced: Check Offers and Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X