ಜಿಯೋ ಗಿಗಾಫೈಬರ್‌ ಇಂಟರ್ನೆಟ್‌ ವೇಗ No.1 ; ನೆಟ್‌ಫ್ಲಿಕ್ಸ್ ವರದಿ.!

|

ಭಾರತೀಯರ ಮನೆ ಮಾತಾಗಿರುವ ಜಿಯೋ ತನ್ನ ಹಲವು ಸೇವೆಗಳಿಂದ ಗ್ರಾಹಕರ ಮನಗೆದ್ದಿದೆ. ಇದೀಗ ಗ್ರಾಹಕರು 'ಜಿಯೋ ಗಿಗಾಫೈಬರ್‌ ಇಂಟರ್‌ನೆಟ್‌' ಸೇವೆಯನ್ನು ಬಳಸಲು ಸಜ್ಜಾಗಿದ್ದು, ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಡುವೆ ನೆಟ್‌ಫ್ಲಿಕ್ಸ್ ಮೀಡಿಯಾ ಸರ್ವೀಸ್‌ ತಾಣವು 'ಜಿಯೋ ಗಿಗಾಫೈಬರ್‌ ಅಂತರ್ಜಾಲ ಸೇವೆ' ನಂಬರ್‌ ಒನ್ ಆಗಿದೆ ಎಂದು ತಿಳಿಸಿದ್ದು, ಗ್ರಾಹಕರ ಖುಷಿ ಹೆಚ್ಚಿಸಿದೆ.

ಜಿಯೋ ಗಿಗಾಫೈಬರ್‌ ಇಂಟರ್ನೆಟ್‌ ವೇಗ No.1 ; ನೆಟ್‌ಫ್ಲಿಕ್ಸ್ ವರದಿ.!

ಹೌದು, ಜಿಯೋ ಗಿಗಾಫೈಬರ್‌ ಇಂಟರ್ನೆಟ್‌ ಸೇವೆಯ ವೇಗವು ಏರ್‌ಟೆಲ್, ಸ್ಪೆಕ್ಟ್ರಾನೆಟ್‌ ಮತ್ತು ಸೆವೆನ್‌ ಸ್ಟಾರ್‌ ಡಿಜಿಟಲ್ ಇಂಟರ್ನೆಟ್‌ ಸೇವೆಗಳಿಗಿಂತ ಅತ್ಯುತ್ತಮವಾಗಿದೆ ಎಂಬುದನ್ನು ನೆಟ್‌ಫ್ಲಿಕ್ಸ್ ಹೇಳಿದೆ. ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ರಿಲಾಯನ್ಸ್ ಜಿಯೋ ಗಿಗಾಫೈಬರ್‌ ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಆರಂಭವಾಗಿದ್ದು, ಆದರೆ ದೇಶದಲ್ಲಿ ವಾಣಿಜ್ಯಕರವಾಗಿ ಇನ್ನು ಲಭ್ಯವಾಗಿಲ್ಲ.

ಜಿಯೋ ಗಿಗಾಫೈಬರ್‌ ಇಂಟರ್ನೆಟ್‌ ವೇಗ No.1 ; ನೆಟ್‌ಫ್ಲಿಕ್ಸ್ ವರದಿ.!

ಫೆಬ್ರವರಿ ತಿಂಗಳಲ್ಲಿ ಜಿಯೋ ಗಿಗಾಫೈಬರ್ ಇಂಟರ್ನೆಟ್‌ ವೇಗವು 3.61 Mbps ಸಾಮರ್ಥ್ಯದಲ್ಲಿ ಲಭ್ಯವಾಗಿದ್ದು, ಈ ಮೂಲಕ ಜಿಯೋ ಸಂಸ್ಥೆಯು ಏರ್‌ಟೆಲ್, ಸ್ಪೆಕ್ಟ್ರಾನೆಟ್‌ ಮತ್ತು ಸೆವೆನ್‌ ಸ್ಟಾರ್‌ ಡಿಜಿಟಲ್ ಇಂಟರ್ನೆಟ್‌ ಸೇವೆಗಳನ್ನು ಹಿಂದೆಹಾಕಿದೆ. ಹಾಗಾದರೇ ಜಿಯೋ ಗಿಗಾಫೈಬರ್‌ನ ಯೋಜನೆಗಳು ಮತ್ತು ಇತರೆ ನೆಟವರ್ಕ್ ಸಂಸ್ಥೆಗಳ ಇಂಟರ್ನೆಟ್‌ ವೇಗ ಹೇಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ನೆಟ್‌ಫ್ಲಿಕ್ಸ್ ISP ವರದಿ

ನೆಟ್‌ಫ್ಲಿಕ್ಸ್ ISP ವರದಿ

ಅಂತರ್ಜಾಲ ಮನರಂಜನಾ ತಾಣವಾಗಿರುವ ನೆಟ್‌ಫ್ಲೆಕ್ಸ್‌ ಮೀಡಿಯಾ ಸರ್ವೀಸ್‌, ಪ್ರತಿ ತಿಂಗಳು ತನ್ನ ISP ಸ್ಪೀಡ್‌ ಇಂಡೆಕ್ಸ್‌ ನಲ್ಲಿ ಇಂಟರ್ನೆಟ್‌ ಸೇವೆಯನ್ನು ಪೂರೈಸುವ ಕಂಪನಿಗಳ ಅಂತರ್ಜಾಲದ ವೇಗವನ್ನು ತಿಳಿಯುತ್ತದೆ. ಜಿಯೋ ಗಿಗಾಫೈಬರ್‌ ಇಂಟರ್ನೆಟ್ ಸೇವೆ ವೇಗವಾಗಿ ದೊರೆತಿದ್ದು, ನೆಟ್‌ಫ್ಲಿಕ್ಸ್ ISPನಲ್ಲಿ ವರದಿಯಾಗಿದೆ.

ಜಿಯೋ ನಂ.1

ಜಿಯೋ ನಂ.1

ಜಿಯೋ ಗಿಗಾಫೈಬರ್‌ ಇಂಟರ್ನೆಟ್‌ 3.61 Mbps ವೇಗದಲ್ಲಿ ಲಭ್ಯವಾಗುವುದರ ಮೂಲಕ ಮೊದಲ ಸ್ಥಾನ ಪಡೆದಿದ್ದು, ಉಳಿದಂತೆ ಏರಟೆಲ್‌ 3.29 Mbps, ಸ್ಪೆಕ್ಟ್ರಾನೆಟ್‌ 3.34 Mbps ಮತ್ತು ಸೆವೆನ್‌ ಸ್ಟಾರ್‌ ಡಿಜಿಟಲ್ ಇಂಟರ್ನೆಟ್‌ 3.43 Mbps ವೇಗವನ್ನು ಹೊಂದಿವೆ ಎಂಬುದನ್ನು ನೆಟ್‌ಫ್ಲಿಕ್ಸ್ ವರದಿ ತಿಳಿಸಿದೆ.

ಇತರೆ ಕಂಪನಿಗಳ ಸ್ಥಾನ

ಇತರೆ ಕಂಪನಿಗಳ ಸ್ಥಾನ

ನೆಟ್‌ಫ್ಲಿಕ್ಸ್ ISPನಲ್ಲಿ ವರದಿಯಾಗಿಯಲ್ಲಿ ಜಿಯೋ ನಂಬರ್‌ ಇನ್‌ ಆಗಿದ್ದರೇ, ಇಂಟರ್ನೆಟ್‌ ಸೇವೆಯನ್ನು ಪೂರೈಸುತ್ತಿರುವ ಇತರೆ ಸಂಸ್ಥೆಗಳಾದ ಹಾತ್‌ವೇ 7 ಸ್ಥಾನ, ಅಲೈನ್ಸ್ ಬ್ರಾಡ್‌ಬ್ಯಾಂಡ್ 11 ನೇ ಸ್ಥಾನ, ಎಂಟಿಎನ್‌ಎಲ್‌ 13ನೇ ಸ್ಥಾನದಲ್ಲಿದ್ದು ಮತ್ತು ಬಿಎಸ್‌ಎನ್‌ಎಲ್‌ ಸಂಸ್ಥೆಯು 14ನೇ ಸ್ಥಾನದಲ್ಲಿದೆ.

ಜಿಯೋ ಗಿಗಾಫೈಬರ್‌ ವಿಸ್ತರಣೆ

ಜಿಯೋ ಗಿಗಾಫೈಬರ್‌ ವಿಸ್ತರಣೆ

ಜಿಯೋ ಗಿಗಾಫೈಬರ್‌ ಇಂಟರ್ನೆಟ್‌ ಸೇವೆಯನ್ನು ಮನೆಗಳಿಗೆ, ವ್ಯಾಪಾರಸ್ಥರ ಅಂಗಡಿಗಳಿಗೆ, ಚಿಕ್ಕ ಪುಟ್ಟ ಎಂಟರ್ಪ್ರೈಸ್ ಕಂಪನಿಗಳು ಸೇರಿದಂತೆ ದೊಡ್ಡ ಕಂಪನಿಗಳಿಗೂ ಸಹ ವಿಸ್ತರಿಸು ಯೋಜನೆ ಆರಂಭವಾಗಲಿದೆ ಎನ್ನುವ ಸುದ್ದಿಯನ್ನು ಇತ್ತೀಚಿಗೆ ಜಿಯೋ ಸಂಸ್ಥೆಯ ತಿಳಿಸಿದೆ.

Best Mobiles in India

English summary
Reliance Jio GigaFiber, yet to be available commercially, has topped the list for highest speed provided by Internet service providers (ISPs) in India, according to a Netflix report.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X