ಮೊದಲ 5G ಡೇಟಾ ಪ್ಯಾಕ್ ಲಾಂಚ್‌ ಮಾಡಿದ ಜಿಯೋ; ಬೆಲೆ ಎಷ್ಟು?

|

5G ಸೇವೆ ಭಾರತಕ್ಕೆ ಕಾಲಿಟ್ಟ ನಂತರ ಏರ್‌ಟೆಲ್‌ ಹಾಗೂ ಜಿಯೋ 5G ಸೇವೆ ಆರಂಭಿಸಿದೆ. ಈ ಮೂಲಕ ಬಳಕೆದಾರರು ವೇಗದ ಇಂಟರ್ನೆಟ್‌ ಬಳಕೆ ಮಾಡಬಹುದಾಗಿದೆ. ಅದರಲ್ಲೂ ಈಗ ವಿ ಹಾಗೂ ಬಿಎಸ್‌ಎನ್‌ಎಲ್‌ ಸಹ ಈ ಸೇವೆ ನೀಡಲು ಮುಂದಾಗಿರುವುದು ಇನ್ನಷ್ಟು ವಿಶೇಷ. ಅದರಲ್ಲೂ ಈ ಹಿಂದೆ 5G ಸೇವೆಯನ್ನು 4G ಸೇವೆ ರೀಚಾರ್ಜ್‌ ಯೋಜನೆಯಲ್ಲಿ ಪಡೆಯಬಹುದಾಗಿತ್ತು. ಆದರೆ, ಇನ್ಮುಂದೆ ಬೇರೆಯದೇ ರೀಚಾರ್ಜ್‌ ಪ್ಲ್ಯಾನ್‌ ಬಳಕೆದಾರರಿಗೆ ಲಭ್ಯವಾಗಲಿದೆ.

ಜಿಯೋ

ಹೌದು, ಜಿಯೋ ಮೊದಲ ಬಾರಿಗೆ 5G ಸೇವೆ ಸಂಬಂಧ ರೀಚಾರ್ಜ್‌ ಪ್ಲ್ಯಾನ್‌ ಒಂದನ್ನು ಲಾಂಚ್‌ ಮಾಡಿದೆ. ಈ ಸೇವೆಯ ಮೂಲಕ 6GB ಹೈ-ಸ್ಪೀಡ್ ಇಂಟರ್ನೆಟ್‌ ಲಭ್ಯವಾಗಲಿದೆ. ಹಾಗಿದ್ರೆ ಜಿಯೋದ ಇತರೆ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ 5G ಲಭ್ಯವಿರಲಿದೆಯೇ?, ಜಿಯೋ ಸಂಸ್ಥೆಯ ಮುಂದಿನ ನಿರ್ಧಾರ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

61 ರೂ. ನ ರೀಚಾರ್ಜ್‌ ಪ್ಲ್ಯಾನ್‌

61 ರೂ. ನ ರೀಚಾರ್ಜ್‌ ಪ್ಲ್ಯಾನ್‌

ಜಿಯೋ 61 ರೂ. ಪ್ರಿಪೇಯ್ಡ್ ಯೋಜನೆಯು 6GB ಹೈ-ಸ್ಪೀಡ್ 5G ಡೇಟಾವನ್ನು ನೀಡಲಿದ್ದು, ಟೆಲ್ಕೊ ವೆಬ್‌ಸೈಟ್‌ನಲ್ಲಿನ ಪಟ್ಟಿಯ ಪ್ರಕಾರ ಸಕ್ರಿಯ ಯೋಜನೆಯ ಮಾನ್ಯತೆಯನ್ನು ಹೊಂದಿರುತ್ತದೆ. ಈ ಸೇವೆ 119 ರೂ, 149 ರೂ, 179 ರೂ, 199 ರೂ ಹಾಗೂ 209 ರೂ, ಬೆಲೆಯ ಜಿಯೋ ಪ್ಲಾನ್‌ಗಳಿಗೂ ಅನ್ವಯಿಸುತ್ತದೆ.

ಡೇಟಾ

ಅನಿಯಮಿತ 5G ಡೇಟಾ ಪ್ಯಾಕ್‌ ಜಿಯೋ ಟ್ರೂ 5G ಅನ್ನು ಪ್ರಾರಂಭಿಸಿರುವ ನಗರಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಹಾಗೆಯೇ ಪಟ್ಟಿಯ ಪ್ರಕಾರ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗಿದೆ. ಮತ್ತೊಂದೆಡೆ ಏರ್‌ಟೆಲ್ ಮತ್ತು ವಿ ಕ್ರಮವಾಗಿ 65 ರೂ. ಮತ್ತು 58 ರೂ.ನ ಬೆಲೆಯ ಪ್ಲ್ಯಾನ್‌ನಲ್ಲಿ 4GB ಮತ್ತು 3GB ಡೇಟಾವನ್ನು ನೀಡುತ್ತಿರುವುದು ಗಮನಿಸಬೇಕಾದ ಅಂಶವಾಗಿದೆ.

5G

5G

ಇನ್ನು ಜಿಯೋ ಇತ್ತೀಚೆಗೆ ತನ್ನ 5G ಸೇವೆಯನ್ನು ಭಾರತದಾದ್ಯಂತ 72 ನಗರಗಳಿಗೆ ವಿಸ್ತರಣೆ ಮಾಡಿದ್ದು, ಡಿಸೆಂಬರ್ 2023 ರ ವೇಳೆಗೆ ತನ್ನ 5G ಸ್ವತಂತ್ರ (SA) ನೆಟ್‌ವರ್ಕ್‌ನೊಂದಿಗೆ ಇಡೀ ದೇಶವನ್ನು ಆವರಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿರುವ ಏರ್‌ಟೆಲ್ 5G ನಾನ್ ಸ್ಟಾಂಡಲೋನ್ (NSA) ನೆಟ್‌ವರ್ಕ್ ಅನ್ನು ನಿಯೋಜಿಸುತ್ತಿದೆ.

ಏರ್‌ಟೆಲ್

ಏರ್‌ಟೆಲ್

ಭಾರ್ತಿ ಏರ್‌ಟೆಲ್ ಮತ್ತು ಜಿಯೋ ಮಾರ್ಚ್ 2024 ರ ವೇಳೆಗೆ 100-150 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರನ್ನು 5G ಗೆ ಪರಿವರ್ತಿಸುವ ಗುರಿಯನ್ನು ಹೊಂದಿವೆ ಎಂದು ತಿಳಿದುಬಂದಿದೆ. ಈ ಮೂಲಕ ಇವು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿವೆ. ಇದರಿಂದ ಸಾಕಷ್ಟು ಡೇಟಾ ಅನುಮತಿಗಳು ಮುಂದಿನ ಪೀಳಿಗೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಅಗತ್ಯವಾಗಿದೆ ಎಂದು ಹೇಳಬಹುದಾಗಿದೆ.

5G ಸೇವೆ ಆರಂಭಿಸಿದ ವಿ

5G ಸೇವೆ ಆರಂಭಿಸಿದ ವಿ

ಇನ್ನು ವಿ ಸಹ ಇಂದು 5G ಸೇವೆ ಆರಂಭಿಸಿರುವ ಬಗ್ಗೆ ಮಾಹಿತಿ ನೀಡಿದೆ. ಆದರೆ ,ಈ ಸಂಬಂಧ ಅಧಿಕೃತವಾಗಿ ಮಾಧ್ಯಮಗಳು ಹಾಗೂ ಬಳಕೆದಾರರಿಗೆ ತಿಳಿಸದ ಹಿನ್ನೆಲೆ ವಿ ನಿಜವಾಗಿಯೂ ಈ ಸೇವೆ ಆರಂಭಿಸಿದೆಯಾ ಎಂಬ ಪ್ರಶ್ನೆ ವಿ ಬಳಕೆದಾರರಿಗೆ ಮೂಡಿದೆ. ಅಂದಹಾಗೆ ಕ್ರೌಡ್‌ಸೋರ್ಸ್ಡ್ 5G ಮ್ಯಾಪ್‌ನಲ್ಲಿ ವಿ ನ 5G ಯನ್ನು ಎಲ್ಲೂ ತೋರಿಸುತ್ತಿಲ್ಲ. ಆದರೆ, 5G ಸೇವೆಯನ್ನು ದೆಹಲಿಯಲ್ಲಿ ನೀಡುತ್ತಿರುವುದಾಗಿ ಘೋಷಣೆ ಮಾಡಿರುವುದು ಮಾತ್ರ ಬಹಳ ಗೊಂದಲಮಯವಾಗಿದೆ.

ಕ್ರೌಡ್‌ಸೋರ್ಸ್ಡ್

ಇನ್ನು ಕ್ರೌಡ್‌ಸೋರ್ಸ್ಡ್ 5G ಮ್ಯಾಪ್‌ ಜಿಯೋ ಮತ್ತು ಏರ್‌ಟೆಲ್‌ನ 5G ಸೇವೆ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ವಿ ಟ್ವೀಟ್‌ ನಲ್ಲಿ ಉಲ್ಲೇಖಿಸಿರುವ ಮಾಹಿತಿ ಗಮನಿಸಿದರೆ ಈ 5G ವಾಣಿಜ್ಯಿಕವಾಗಿ ಲಭ್ಯವಿದೆಯೇ? ಅಥವಾ ಮೌನವಾಗಿ ಬೀಟಾ ಪರೀಕ್ಷೆಯನ್ನು ಮಾಡುತ್ತಿದೆಯೇ ಎನ್ನುವ ಪ್ರಶ್ನೆ ಕೂಡ ಎಲ್ಲರ ಮನದಲ್ಲಿ ಮೂಡಿದೆ.

Best Mobiles in India

English summary
Jio launches first 5G data pack.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X