ಜಿಯೋದಿಂದ ಹೊಸದಾಗಿ 'ವರ್ಕ್ ಫ್ರಮ್ ಹೋಮ್ ಪ್ಲಾನ್' ಬಿಡುಗಡೆ!

|

ರಿಲಾಯನ್ಸ್‌ ಜಿಯೋ ಟೆಲಿಕಾಂ ತನ್ನ ಬಳಕೆದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಮನೆಯಿಂದಲೇ ಕುಳಿತು ಕೆಲಸವನ್ನು ಮಾಡುತ್ತಿರುವವರಿಗಾಗಿಯೇ ಇದೀಗ ಆಕರ್ಷಕ 'ನ್ಯೂ ವರ್ಕ್ ಫ್ರಮ್ ಹೋಮ್ ಪ್ಲಾನ್' ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಲ್ಲದೇ, ಯಾವುದೇ ಡೇಟಾ ಖಾಲಿಯಾಗುವ ಚಿಂತೆ ಇಲ್ಲದೆ ವರ್ಷ ಪೂರ್ತಿ ಕೆಲಸ ಮಾಡಬಹುದಾಗಿದೆ.

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ಹೊಸದಾಗಿ ರೂ. 2,399ರ ಪ್ಲಾನ್‌ನಲ್ಲಿ ಪರಿಚಯಿಸಿದ್ದು, ಈ ಯೋಜನೆಯಲ್ಲಿ ಗ್ರಾಹಕರು ಈ ಹಿಂದಿನ ಪ್ಲಾನ್‌ಗಿಂತ ಶೇ. 33% ಅಧಿಕ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ನಿತ್ಯ ಅಧಿಕ ಡೇಟಾ ಬಳಕೆದಾರರಿಗೆ ಈ ಪ್ಲಾನ್ ಮೌಲ್ಯಯುತವಾಗಿರಲಿದೆ. ಈ ಪ್ಲಾನ್ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ ಎನ್ನಬಹುದಾಗಿದ್ದು, ಪ್ರತಿ ನಿತ್ಯ 2GB ಡೇಟಾವನ್ನು ನೀಡುವ ಪ್ಲಾನಿಗೆ ಗ್ರಾಹಕರು ಸರಾಸರಿ ಪ್ರತಿ ತಿಂಗಳು ನೀಡಬೇಕಾಗಿರುವುದು ರೂ. 200 ಮಾತ್ರ.

ಜಿಯೋ 2,399ರ ಪ್ಲಾನ್‌

ಜಿಯೋ 2,399ರ ಪ್ಲಾನ್‌

ಜಿಯೋದ ಹೊಸ 2,399ರೂ ಪ್ಲಾನ್‌ ಹಳೆಯ 2121ರೂ. ಪ್ಲ್ಯಾನ್‌ಗಿಂತ ಹೆಚ್ಚಿನ ಪ್ರಯೋಜನ ಪಡೆದಿದೆ. ಈ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಅನಿಯಮಿತ ಎಸ್‌ಎಮ್‌ಎಸ್‌, ವಾಯಿಸ್‌ ಕರೆಗಳು ಸೇರಿದಂತೆ ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇತರೆ ಟೆಲಿಕಾಂಗಳಿಗೂ ಹೋಲಿಸಿದರೂ ಇದು ಉತ್ತಮ ವಾರ್ಷಿಕ ಯೋಜನೆ ಅನಿಸಲಿದೆ.

ಹೊಸ ಡೇಟಾ ಆಡ್-ಆನ್ ಪ್ಯಾಕ್ ವಿಶೇಷತೆ

ಹೊಸ ಡೇಟಾ ಆಡ್-ಆನ್ ಪ್ಯಾಕ್ ವಿಶೇಷತೆ

ಜಿಯೋ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಹೊಸ ಆಡ್ ಆನ್ ಪ್ಯಾಕ್ ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಗ್ರಾಹಕರು ಯಾವುದೇ ಡೈಲಿ ಡೇಟಾ ಕ್ಯಾಪಿಂಗ್ ಇಲ್ಲದೇ ಡೇಟಾ ಬ್ರೌಸ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಪ್ಲಾನ್‌ಗಳು ಗ್ರಾಹಕರು ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯದ ಡೇಟವನ್ನು ಬಳಕೆಗೆ ನೀಡಲಿದೆ. ಅಲ್ಲದೇ ಈ ಪ್ಲಾನ್‌ನಲ್ಲಿ ಎಲ್ಲಾ ಬಳಕೆದಾರರು ತಮ್ಮ ನಿತ್ಯ ಬಳಕೆಯ ಡೇಟಾ ಖಾಲಿ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಜಿಯೋ ಆಡ್ ಆನ್ ಪ್ಲಾನ್ ವಿವರಗಳು

ಜಿಯೋ ಆಡ್ ಆನ್ ಪ್ಲಾನ್ ವಿವರಗಳು

ಜಿಯೋ ಟೆಲಿಕಾಂ ಹೊಸದಾಗಿ ಕೆಲವು ಡೇಟಾ ಆಡ್‌-ಆನ್ ಪ್ಯಾಕ್‌ಗಳನ್ನು ಸಹ ತಿಳಿಸಿದೆ. ಅವುಗಳು ಬೆಲೆ ಮತ್ತು ಡೇಟಾ ಪ್ರಯೋಜನಗಳು ಕ್ರಮವಾಗಿ ರೂ. 11ಕ್ಕೆ- 0.8 GB, ರೂ.21 ಕ್ಕೆ- 1 GB, ರೂ.31 ಕ್ಕೆ- 2 GB, ರೂ.51ಕ್ಕೆ - 6GB ಹಾಗೂ ರೂ.101 ಕ್ಕೆ - 12GB ಡೇಟಾ ಬಳಕೆಗೆ ದೊರೆಯಲಿದೆ.

ವರ್ಕ್‌ ಫ್ರಮ್ ಹೋಮ್ ಪ್ಯಾಕ್

ವರ್ಕ್‌ ಫ್ರಮ್ ಹೋಮ್ ಪ್ಯಾಕ್

ಹಾಗೆಯೇ ಜಿಯೋ ಟೆಲಿಕಾಂನ ಹೊಸ ವರ್ಕ್‌ ಫ್ರಮ್ ಹೋಮ್ ಪ್ಯಾಕ್‌ ನೋಡುವುದಾದರೇ ರೂ.151 ಕ್ಕೆ- 30GB, ರೂ.201 ಕ್ಕೆ - 40GB ಮತ್ತು ರೂ.251ಕ್ಕೆ - 50GB ಡೇಟಾ ಬಳಕೆಗೆ ಲಭ್ಯವಿರಲಿದೆ. ಈ ಪ್ಯಾಕ್‌ಗಳು ಮನೆಯಿಂದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಹೆಚ್ಚು ಅನುಕೂಲಕರ ಅನಿಸಲಿವೆ.

Most Read Articles
Best Mobiles in India

English summary
Jio has launched New work-From-Home plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X