ಶುರುವಾದ ಕೆಲವೇ ಸಮಯದಲ್ಲಿ ಜಿಯೋ ಫೋನ್ ಬುಕಿಂಗ್ ಸ್ಥಗಿತ: ಕಾರಣವೇನು...?

ಆಗಸ್ಟ್ 24 ರಿಂದಲೇ ಬುಕಿಂಗ್ ಆರಂಭವಾಗಿದ್ದು, ಆದರೆ ಬುಕಿಂಗ್ ಶುರುವಾದ ಒಂದೇ ದಿನದಲ್ಲಿ ಬುಕಿಂಗ್ ನಿಲ್ಲಿಸಲಾಗಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ಬಿಡುಗಡೆ ಮಾಡಿದ ಜಿಯೋ ಫೋನ್ ಆಗಸ್ಟ್ 24 ರಿಂದಲೇ ಬುಕಿಂಗ್ ಆರಂಭವಾಗಿದ್ದು, ಆದರೆ ಬುಕಿಂಗ್ ಶುರುವಾದ ಒಂದೇ ದಿನದಲ್ಲಿ ಬುಕಿಂಗ್ ನಿಲ್ಲಿಸಲಾಗಿದೆ. ಈಗಾಗಲೇ 4 ಮಿಲಿಯನ್ ಮಂದಿ ಈ ಫೋನ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ.

ಶುರುವಾದ ಕೆಲವೇ ಸಮಯದಲ್ಲಿ ಜಿಯೋ ಫೋನ್ ಬುಕಿಂಗ್ ಸ್ಥಗಿತ: ಕಾರಣವೇನು...?

ಓದಿರಿ: ಸೆಪ್ಟೆಂಬರ್ ನಿಂದ ಜಿಯೋ DTH ಶುರು: ಒಂದು ವರ್ಷ ಉಚಿತ ಸೇವೆ?

ಜಿಯೋ ಮೊದಲ ಬಾರಿಗೆ 50 ಲಕ್ಷ ಫೋನ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿತ್ತು. ಆದರೆ ಒಮ್ಮೆಗೆ 40ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಫೋನ್ ಬುಕ್ ಮಾಡಿದ ಹಿನ್ನೆಲೆಯಲ್ಲಿ ಜಿಯೋ ಬುಕಿಂಗ್ ನಿಲ್ಲಿಸಿದೆ ಎನ್ನಲಾಗಿದೆ.

ಆಗಸ್ಟ್ 24 ರ ಸಂಜೆ ಆರಂಭವಾಗಿದ್ದು:

ಆಗಸ್ಟ್ 24 ರ ಸಂಜೆ ಆರಂಭವಾಗಿದ್ದು:

ಜಿಯೋ ಫೋನ್ ಆಗಸ್ಟ್ 24 ರಂದು ಸಂಜೆಯಿಂದ ಬುಕಿಂಗ್ ಆರಂಭವಾಗಿತ್ತು. ಈ ಹಿಂದೆಯೇ ರಿಜಿಸ್ಟರ್ ಆಗಿದ್ದ ಗ್ರಾಹಕರಿಗೆ ಜಿಯೋ ಬುಕಿಂಗ್ ಆರಂಭವಾದ ಸೂಚನೆಯನ್ನು ನೀಡಿತ್ತು. ಈ ಹಿನ್ನಲೆಯಲ್ಲಿ ಒಮ್ಮೆಗೆ 40 ಲಕ್ಷ ಮಂದಿ ಬುಕಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ವಿವಿಧ ಮಾದರಿಯಲ್ಲಿ ಬುಕಿಂಗ್:

ವಿವಿಧ ಮಾದರಿಯಲ್ಲಿ ಬುಕಿಂಗ್:

ಜಿಯೋ ಫೋನ್ ಬುಕಿಂಗ್ ಅನ್ನು ಮೂರು ಮಾದರಿಯಲ್ಲಿ ಬುಕ್ ಮಾಡಬಹುದಾಗಿತ್ತು. ಜಿಯೋ ವೆಬ್, ಜಿಯೋ ಆಪ್ ಮತ್ತು ಜಿಯೋ ಸ್ಟೋರ್ ಗಳಲ್ಲಿ ಫೋನ್ ಬುಕ್ ಮಾಡಬಹುದಾಗಿತ್ತು.

ರೂ.500 ನೀಡಿ ಬುಕಿಂಗ್:

ರೂ.500 ನೀಡಿ ಬುಕಿಂಗ್:

ಜಿಯೋ ನೀಡಿರುವ ಮಾಹಿತಿಯಂತೆ ಈಗಾಗಲೇ ಜನರು ರೂ.500 ಆಡ್ವಾನ್ ನೀಡಿ ಜಿಯೋ ಫೋನ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ. ನೀವು ಸಹ ಮುಂದೆ ಜಿಯೋ ಫೋನ್ ಬುಕ್ ಮಾಡಬೇಕಾದರೆ ಇಷ್ಟೆ ಆಡ್ವಾನ್ಸ್ ನೀಡಬೇಕಾಗಿದೆ.

ಸದ್ಯಕ್ಕೆ ನಿಲ್ಲಿಸಿದ ಬುಕಿಂಗ್:

ಸದ್ಯಕ್ಕೆ ನಿಲ್ಲಿಸಿದ ಬುಕಿಂಗ್:

ಜಿಯೋ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿನ ಜನರು ಬುಕಿಂಗ್ ಮಾಡಿದ ಕಾರಣಕ್ಕಾಗಿ ಜಿಯೋ ಸದ್ಯಕ್ಕೆ ಜಿಯೋ ಫೋನ್ ಬುಕಿಂಗ್ ಅನ್ನು ನಿಲ್ಲಿಸಿದೆ ಎನ್ನಲಾಗಿದೆ. ಶೀಘ್ರವೇ ಬುಕ್ಕಿಂಗ್ ಅನ್ನು ಆರಂಭಿಸಲಿದೆ ಎನ್ನಲಾಗಿದೆ.

ಮತ್ತೇ ರಿಜಿಸ್ಟರ್ ಆಗಿ:

ಮತ್ತೇ ರಿಜಿಸ್ಟರ್ ಆಗಿ:

ಜಿಯೋ ಫೋನ್ ಕೊಳ್ಳಬೇಕು ಎಂದವರು ಮತ್ತೆ ರಿಜಿಸ್ಟರ್ ಆಗಬೇಕು ಎನ್ನಲಾಗಿದೆ. ಇದರಿಂದ ಜಿಯೋ ತನ್ನ ಫೋನ್ ಬುಕಿಂಗ್ ಆರಂಭವಾದ ನಂತರದಲ್ಲಿ ಬುಕಿಂಗ್ ಮಾಡಲು ಅವಕಾಶವನ್ನು ನೀಡಲು ಮುಂದಾಗಲಿದೆ ಎನ್ನಲಾಗಿದೆ.

Best Mobiles in India

Read more about:
English summary
Reliance Jio has paused bookings of the Jio Phone, with a message on its website saying that "millions" have already pre-booked a unit. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X