Subscribe to Gizbot

ಜಿಯೋದಿಂದ 120 GB 4G ಡೇಟಾ ಉಚಿತ: ಪಡೆದುಕೊಳ್ಳುವುದು ಹೇಗೆ..?

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆ ಆರಂಭಿಸಿ ಆರು ತಿಂಗಳ ನಂತರ ತನ್ನ ಗ್ರಾಹಕರಿಗೆ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿ, ದರಗಳನ್ನು ವಿಧಿಸಲು ಆರಂಭಿಸಿದೆ. ಇದೇ ಸಮಯದಲ್ಲಿ ಇತರೆ ಕಂಪನಿಗಳು ಸಹ ಜಿಯೋ ಆಫರ್‌ಗೆ ಬದಲಾಗಿ ತಾವು ಸಹ ಒಂದರ ಮೇಲೊಂದು ಆಫರ್‌ಗಳನ್ನು ನೀಡಲು ಮುಂದಾದ ಹಿನ್ನೆಲೆಯಲ್ಲಿ ಜಿಯೋ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

ಜಿಯೋದಿಂದ 120 GB 4G ಡೇಟಾ ಉಚಿತ: ಪಡೆದುಕೊಳ್ಳುವುದು ಹೇಗೆ..?

ಓದಿರಿ: ಜಿಯೋ ಪ್ರೈಮ್ ಸದಸ್ಯರಾಗಲಿಲ್ಲವೆಂದರೆ ಆಗುವುದೇನು..? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...!

ಜಿಯೋ ತನ್ನ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿ ಪ್ರೈಮ್ ಸದಸ್ಯರಿಗೆ 'ಬೈ ಓನ್ ಗೆಟ್ ಓನ್' (ಒಂದನ್ನು ಖರೀದಿಸಿ ಮತ್ತೊಂದನ್ನು ಉಚಿತವಾಗಿ ಪಡೆಯಿರಿ) ಆಫರ್ ನೀಡಿತು. ಇದರ ಅನ್ವಯ ತನ್ನ ಗ್ರಾಹಕರು ಪ್ರತಿ ತಿಂಗಳು ರೀಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ಹೆಚ್ಚಿನ ಲಾಭವನ್ನು ನೀಡಲು ಮುಂದಾಯಿತು. ಅದರಂತೆ ಈಗ ತನ್ನ ಗ್ರಾಹಕರಿಗೆ 120 GB 4G ಡೇಟಾವನ್ನು ಉಚಿತವಾಗಿ ನೀಡುತ್ತಿದೆ.

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
120 GB 4G ಡೇಟಾ ಲೆಕ್ಕಾಚಾರ..!

120 GB 4G ಡೇಟಾ ಲೆಕ್ಕಾಚಾರ..!

ಜಿಯೋ ತನ್ನ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡ ಗ್ರಾಹಕರಿಗಾಗಿ ಬೈ ಓನ್ ಗೆಟ್ ಓನ್' ಆಫರ್ ನೀಡಿದ್ದು, ಇದರ ಅನ್ವಯ ಪ್ರತಿ ತಿಂಗಳು 303 ರೂ.ಗಳ ರೀಚಾರ್ಜ್ ಮಾಡಿಸಿದವರಿಗೆ 5GB 4G ಡೇಟಾವನ್ನು ಹಾಗೂ 499 ರೂ. ರೀಚಾರ್ಜ್ ಮಾಡಿಸಿದವರಿಗೆ 10 GB ಡೇಟಾವನ್ನು ಉಚಿತವಾಗಿ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ಒಟ್ಟು ಒಂದು ವರ್ಷದಲ್ಲಿ 120 GB 4G ಡೇಟಾ ಪಡೆದುಕೊಳ್ಳಲಿದ್ದಾರೆ.

303 ರೂ. ರಿಚಾರ್ಜ್ ಮಾಡಿಸಿದವರಿಗೆ 60 GB:

303 ರೂ. ರಿಚಾರ್ಜ್ ಮಾಡಿಸಿದವರಿಗೆ 60 GB:

ಜಿಯೋ ಪ್ರೈಮ್ ಸದಸ್ಯರು ಪ್ರತಿ ತಿಂಗಳು 303 ರೂ. ರೀಚಾರ್ಜ್ ಮಾಡಿಸುವ ಮೂಲಕ 28 ದಿನಗಳ ಕಾಲಾವಧಿಗೆ ಪ್ರತಿ ನಿತ್ಯ 1GB ಡೇಟಾದಂತೆ 28 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಬೈ ಓನ್ ಗೆಟ್ ಓನ್' ಆಫರ್ ಅನ್ವಯ ಪ್ರತಿ ತಿಂಗಳು 5 GB ಡೇಟಾವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿದ್ದು, ಇದರಿಂದ ಒಟ್ಟು 60 GB ಡೇಟಾವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಒಟ್ಟು ವರ್ಷಕ್ಕೆ 3,636 ರೂ.ಗಳನ್ನು ಪಾವತಿ ಮಾಡಬೇಕಾಗಿದೆ.

499 ರೂ. ರೀಚಾರ್ಜ್ ಮಾಡಿಸಿದವರಿಗೆ 120 GB ಡೇಟಾ:

499 ರೂ. ರೀಚಾರ್ಜ್ ಮಾಡಿಸಿದವರಿಗೆ 120 GB ಡೇಟಾ:

ಜಿಯೋ ಪ್ರೈಮ್ ಸದಸ್ಯರು ಪ್ರತಿ ತಿಂಗಳು 499 ರೂ. ರೀಚಾರ್ಜ್ ಮಾಡಿಸುವ ಮೂಲಕ 28 ದಿನಗಳ ಕಾಲಾವಧಿಗೆ ಪ್ರತಿ ನಿತ್ಯ 2 GB ಡೇಟಾದಂತೆ 56 GB ಡೇಟಾವನ್ನು, ಇದರೊಂದಿಗೆ ಬೈ ಓನ್ ಗೆಟ್ ಓನ್' ಆಫರ್ ಅನ್ವಯ ಪ್ರತಿ ತಿಂಗಳು 10 GB ಡೇಟಾವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿದ್ದು, ಇದರಿಂದ ಒಟ್ಟು 120 GB ಡೇಟಾವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಒಟ್ಟು ವರ್ಷಕ್ಕೆ 5,988 ರೂ.ಗಳನ್ನು ಪಾವತಿಸಬೇಕಾಗಿದೆ.

ಮಾರ್ಚ್ 31 ರ ನಂತರ ಈ ಕೊಡುಗೆ ಇಲ್ಲ:

ಮಾರ್ಚ್ 31 ರ ನಂತರ ಈ ಕೊಡುಗೆ ಇಲ್ಲ:

ಜಿಯೋ ಪ್ರೈಮ್ ಸದಸ್ಯರು ಈ 120 GB ಡೇಟಾ ಲಾಭವನ್ನು ಪಡೆದುಕೊಳ್ಳಲು ಇರುವುದು ಮಾರ್ಚ್ 31 ರ ಮಾತ್ರ ಅವಕಾಶ. ಮಾರ್ಚ್ 31ರ ನಂತರ ಈ ಕೊಡುಗೆಯೂ ಸ್ಥಗಿತವಾಗಲಿದೆ. ಇಲ್ಲದೇ ಇಷ್ಟು ಡೇಟಾವನ್ನು ಇಷ್ಟು ಕಡಿಮೆ ಬೆಲೆಗೆ ಬೇರೆ ಯಾವುದೇ ನೆಟ್‌ವರ್ಕ್‌ಗಳು ನೀಡುತ್ತಿಲ್ಲ ಎಂದೇ ಹೇಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
Reliance Jio announced its Buy One Get One Free offer earlier this month, giving users 5GB of free data with a recharge of Rs. 303, and 10GB data free at Rs. 499. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot