Subscribe to Gizbot

ಪ್ರೈಮ್ ರೀಚಾರ್ಜ್‌ಗೂ ಆಫರ್ ನೀಡಿದ ಜಿಯೋ!! ಏನದು?

Written By:

ಜಿಯೋವಿನ ಉಚಿತ ಸೇವೆ ಮುಗಿಯಲು ಇನ್ನೇನು ಕೆಲವೇ ದಿವಸಗಳು ಬಾಕಿ ಇದ್ದು, ಜಿಯೊವಿನ ಅನ್‌ಲಿಮಿಟೆಡ್ ಸೇವೆಗಳನ್ನು ಪಡೆಯಲು ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಕೊಳ್ಳಬೇಕಿದೆ.! ಹಾಗಾಗಿ, ಏರ್‌ಟೆಲ್ ಮತ್ತು BSNL ಸೇರಿದಂತೆ ಎಲ್ಲಾ ಕಂಪೆನಿಗಳೂ ಜಿಯೋ ಪ್ರೈಮ್ ಆಫರ್ ರೀತಿಯಲ್ಲಿಯೇ ಆಫರ್ಗಳನ್ನು ಬಿಡುಗಡೆ ಮಾಡುತ್ತಿದ್ದು, ಜಿಯೋ ಸ್ವಲ್ಪಮಟ್ಟಿಗೆ ತಳಮಳಗೊಂಡಿದೆ.!!

ಹೌದು, ಏರ್‌ಟೆಲ್ ಸಹ ಪ್ರೈಮ್ ರೀತಿಯದೇ ಆಫರ್ ನೀಡಿದ್ದರಿಂದ ಇತ್ತೀಚಿಗೆ ಬೈ ಒನ್ ಗೆಟ್‌ ಒನ್ ಆಫರ್ ನೀಡಿದ್ದ ಜಿಯೋ, ತನ್ನ ಬಳಕೆದಾರರಿಗೆ ಹೆಚ್ಚಿನ ಡೇಟಾ ಬಳಕೆಗೆ ಅವಕಾಶ ನೀಡಿತ್ತು, ಇನ್ನೇನು ಜಿಯೋ ಪ್ರೈಮ್ ಶುರುವಾಗುವ ಸಮಯ ಬಂದಿದ್ದು, ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಆಫರ್ ನೀಡಿದೆ.!!

ಪ್ರೈಮ್ ರೀಚಾರ್ಜ್‌ಗೂ ಆಫರ್ ನೀಡಿದ ಜಿಯೋ!! ಏನದು?

ಭಾರತದ ಚೀಪೆಸ್ಟ್ 4G ಸ್ಮಾರ್ಟ್‌ಫೋನ್ ಮೈಕ್ರೊಮ್ಯಾಕ್ಸ್ "ಭಾರತ್ 2"!! ಬೆಲೆ ಎಷ್ಟು?

ಜಿಯೋ ಗ್ರಾಹಕರು ಪ್ರೈಮ್ ರೀಚಾರ್ಜ್ ಮಾಡಿಸಲು ಇತರೆ ಕಂಪೆನಿಯ ಆಫರ್‌ಗಳು ಅಡ್ಡಗಾಲಾಕುತ್ತಿವೆ. ಹಾಗಾಗಿ, 99 ರೂಪಾಯಿ ಪ್ರೈಮ್ ರೀಚಾರ್ಜ್‌ಗೂ ಆಫರ್ ನೀಡಿದೆ. ಜಿಯೋ ವಾಲೆಟ್‌ನಿಂದ 99 ರೂಪಾಯಿ ಪ್ರೈಮ್ ರೀಚಾರ್ಜ್‌ ಮಾಡಿದರೆ 50 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.!!

ಪ್ರೈಮ್ ರೀಚಾರ್ಜ್‌ಗೂ ಆಫರ್ ನೀಡಿದ ಜಿಯೋ!! ಏನದು?

ಎಲ್ಲಾ ಟೆಲಿಕಾಂಗಳಿಗೂ ಏಟಿಗೆ ಎದಿರೇಟು ನೀಡುತ್ತಿರುವ ಅಂಬಾನಿ, ಜಿಯೋ ಪ್ರೈಮ್ ರೀಚಾರ್ಜ್‌ ಬಗ್ಗೆ ಕಾದು ನೋಡುತ್ತಿದ್ದಾರೆ. ಮಾರ್ಚ್ 31 ರ ನಂತರ ಜಿಯೋ ಬಳಕೆದಾರರು ಪ್ರೈಮ್ ಬಳಕೆದಾರರಾಗಲು ಇಚ್ಚಿಸದಿದ್ದಲ್ಲಿ ಮತ್ತೆ ಬೇರೆ ಆಫರ್ ನೀಡಬಹುದು ಎಂಬ ಮಾಹಿತಿ ಹರಿದಾಡಿದೆ.

Read more about:
English summary
JioMoney Rs 50 Cashback offer. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot