ಜಿಯೋ ಗ್ರಾಹಕರೇ ಗಮನಿಸಿ; ಇನ್ಮುಂದೆ ಈ ರೀಚಾರ್ಜ್ ಪ್ಲ್ಯಾನ್‌ಗಳು ಅಲಭ್ಯ!

|

ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಾಯನ್ಸ್‌ ಜಿಯೋ ಟೆಲಿಕಾಂ ಹಲವು ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಜಿಯೋ ಪ್ರೀಪೇಯ್ಡ್‌ ಯೋಜನಗಳ ಜೊತೆಗೆ ಜಿಯೋ ಫೋನ್‌ ಬಳಕೆದಾರರಿಗಾಗಿಯೂ ಭಿನ್ನ ಪ್ರೈಸ್‌ಟ್ಯಾಗ್‌ನ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಅಧಿಕ ಡೇಟಾ ಹಾಗೂ ವ್ಯಾಲಿಡಿಟಿಯಿಂದ ಉತ್ತಮ ಅನಿಸಿವೆ. ಆದ್ರೆ ಜಿಯೋ ಇದೀಗ ಕೆಲವು ಜಿಯೋ ಫೋನ್ ಪ್ಲ್ಯಾನ್‌ಗಳ ಲಭ್ಯತೆ ನಿಲ್ಲಿಸಿದೆ.

ಸಂಸ್ಥೆಯು

ಹೌದು, ಜಿಯೋ ಸಂಸ್ಥೆಯು ತನ್ನ ಜಿಯೋ ಫೋನ್ 99ರೂ. 153ರೂ. 297ರೂ ಮತ್ತು 594ರೂ. ರೀಚಾರ್ಜ್‌ ಪ್ಲ್ಯಾನ್‌ಗಳನ್ನು ತೆಗೆದು ಹಾಕಿದೆ. ಇತ್ತೀಚಿಗಷ್ಟೆ ಜಿಯೋ ಟೆಲಿಕಾಂ ಇತರೆ ಟೆಲಿಕಾಂ ಕರೆಗಳಿಗೆ ಇದ್ದ ಮಿತಿಯನ್ನು ತೆಗೆದು ಅನಿಯಮಿತ ಉಚಿತ ಕರೆ ಸೌಲಭ್ಯ ನೀಡಿದೆ. ಹೀಗಾಗಿ ಈ ನಾಲ್ಕು ಯೋಜನೆಗಳು ರೀಚಾರ್ಜ್‌ಗೆ ಉಪಯುಕ್ತವಾಗಿರಲಿಲ್ಲ. ಈ ನಿಟ್ಟಿನಲ್ಲಿ ಜಿಯೋ ಟೆಲಿಕಾಂ ಈ ಯೋಜನೆಗಳನ್ನು ತೆಗೆದು ಹಾಕಿದೆ. ಹಾಗಾದರೇ ಜಿಯೋ ಫೋನ್ ಗ್ರಾಹಕರಿಗೆ ರೀಚಾರ್ಜ್ ಮಾಡಿಸಲು ಸದ್ಯ ಲಭ್ಯ ಇರುವ ಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 75ರೂ. ಪ್ಲಾನ್

ಜಿಯೋ 75ರೂ. ಪ್ಲಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಈ ಯೋಜನೆಯು ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 125ರೂ. ರೀಚಾರ್ಜ್‌ ಪ್ಲಾನ್

ಜಿಯೋ 125ರೂ. ರೀಚಾರ್ಜ್‌ ಪ್ಲಾನ್

ಜಿಯೋದ ಈ 125ರೂ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಈ ಯೋಜನೆಯು ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 155ರೂ. ರೀಚಾರ್ಜ್‌ ಪ್ಲಾನ್

ಜಿಯೋ 155ರೂ. ರೀಚಾರ್ಜ್‌ ಪ್ಲಾನ್

ಜಿಯೋದ ಈ 155ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 1GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಈ ಯೋಜನೆಯು ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 185ರೂ. ರೀಚಾರ್ಜ್‌ ಪ್ಲಾನ್

ಜಿಯೋ 185ರೂ. ರೀಚಾರ್ಜ್‌ ಪ್ಲಾನ್

ಜಿಯೋದ ಈ 185ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 56GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 2GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಈ ಯೋಜನೆಯು ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

Best Mobiles in India

English summary
The removal of non-Jio voice calling charges resulted in four JioPhone plans becoming redundant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X