Subscribe to Gizbot

ಧನ್ ಧನಾ ಧನ್ ಆಫರ್: ಸಿಗುತ್ತಿಲ್ಲ ಸಂಪೂರ್ಣ ಡೇಟಾ ಏನೀದು ಜಿಯೋ ಕಥೆ..!?

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಸಮ್ಮರ್‌ ಸರ್ಪ್ರೈಸ್ ಆಫರ್ ಅನ್ನು ಬಲವಂತವಾಗಿ ಹಿಂಪಡೆದ ಕಾರಣದಿಂದಾಗಿ ಮತ್ತೇ ಹೊಸದಾಗಿ ನೀಡಿದ 'ಧನ್ ಧನಾ ಧನ್' ಆಫರ್‌ನಲ್ಲಿ ಗ್ರಾಹಕರಿಗೆ ಎರಡು ಆಯ್ಕೆಯನ್ನು ನೀಡಿತ್ತು. ಎರಡಕ್ಕೂ ಬೇರೆ-ಬೇರೆ ದರವನ್ನು ವಿಧಿಸಿತ್ತು. ಆದರೆ ಹಲವು ಗ್ರಾಹಕರಿಗೆ ದುಡ್ಡು ಜಾಸ್ತಿಕೊಟ್ಟು ರೀಚಾರ್ಜ್ ಮಾಡಿಸಿದರು ದೊರೆಯುತ್ತಿರುವ ಸೇವೆ ಮಾತ್ರ ಕಡಿಮೆಯದ್ದು ಎನ್ನುವ ದೂರೊಂದು ಕೇಳಿಬಂದಿದೆ.

ಧನ್ ಧನಾ ಧನ್ ಆಫರ್: ಸಿಗುತ್ತಿಲ್ಲ ಸಂಪೂರ್ಣ ಡೇಟಾ ಏನೀದು ಜಿಯೋ ಕಥೆ..!?

ಜಿಯೋ ಮೊದಲು ಪ್ರೈಮ್ ಸದಸ್ಯತ್ವ ಪಡೆದುಕೊಂಡವರನ್ನು ಸಂತೋಷಪಡಿಸುವ ಸಲುವಾಗಿ ಸಮ್ಮರ್ ಸರ್ಪ್ರೈಸ್ ಆಫರ್ ನಲ್ಲಿ ಹಲವು ಆಯ್ಕೆಗಳನ್ನು ತನ್ನ ಗ್ರಾಹಕರ ಮುಂದೆ ಇಟ್ಟಿತ್ತು. ಆದರೆ ಇದು ಇತರೆ ಕಂಪನಿಗಳ ಕೆಂಗಣ್ಣಿಗೆ ಬಿದ್ದ ಪರಿಣಾಮ ಟ್ರಾಯ್ ಒತ್ತಡ ಹೇರಿ ಈ ಆಫರ್ ಹಿಂಪಡೆಯುವಂತೆ ಮಾಡಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಜಿಯೋ ಧನ್ ಧನಾ ಧನ್ ಆಫರ್ ಕೊಟ್ಟಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.303ಕ್ಕೆ 1 GB, ರೂ. 509ಕ್ಕೆ 2 GB:

ರೂ.303ಕ್ಕೆ 1 GB, ರೂ. 509ಕ್ಕೆ 2 GB:

ಜಿಯೋ ಧನ್ ಧನಾ ಧನ್ ಆಫರ್ ನಲ್ಲಿ ಜಿಯೋ 84 ದಿನಗಳ ಕಾಲದ ಅವಧಿಗೆ ಉಚಿತ ಕರೆ, ಎಸ್‌ಎಂಎಸ್ ಮತ್ತು ಪ್ರತಿ ನಿತ್ಯ 1GB ಡೇಟಾವನ್ನು ಪಡೆಯುವುದಕ್ಕೆ ರೂ.303 ಹಾಗೂ ಇದೇ ಮಾದರಿಯಲ್ಲಿ ಪ್ರತಿ ನಿತ್ಯ 2GB 4G ಡೇಟಾವನ್ನು ಪಡೆಯಲು ರೂ.509ಗಳನ್ನು ಪಾವತಿ ಮಾಡುವ ಅವಕಾಶವನ್ನು ನೀಡಿತ್ತು.

ಆದರೆ ರೂ. 509ಕ್ಕೆ 1 GB ಮಾತ್ರ:

ಆದರೆ ರೂ. 509ಕ್ಕೆ 1 GB ಮಾತ್ರ:

ಸದ್ಯ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡವರು ಧನ್ ಧನಾ ಧನ್ ಆಫರ್ ರೀಜಾಜ್ ಮಾಡಿಸಿ ಕೊಂಡಿದ್ದಾರೆ. ಆದರೆ ಇದರಲ್ಲಿ ಹಲವರು 509 ರೂ. ನೀಡಿ ರೀಚಾರ್ಜ್ ಮಾಡಿಸಿಕೊಂಡು ದಿನಕ್ಕೆ 2GB ಡೇಟಾ ಬರಲಿದೆ ಎಂಬ ಸಂತೋಷದಲ್ಲಿದ್ದರೆ ಜಿಯೋ ಮಾತ್ರ ಕೇವಲ 1GB ಮಾತ್ರ ಡೇಟಾ ನೀಡಿದೆ ಎನ್ನಲಾಗಿದೆ.

ಶೀಘ್ರವೇ ಇದಕ್ಕೆ ಪರಿಹಾರ:

ಶೀಘ್ರವೇ ಇದಕ್ಕೆ ಪರಿಹಾರ:

ಈ ಕುರಿತು ಮಾಹಿತಿ ನೀಡಿರುವ ಜಿಯೋ ಸಿಬ್ಬಂದಿ, ಸಮ್ಮರ್ ಸರ್ಪೈರ್ಸ್ ಮತ್ತು ಧನ್ ಧನಾ ಧನ್ ಆಫರ್ ನಡುವಿನ ವ್ಯತ್ಯಾಸದಿಂದ ಹೀಗಾಗಿದೆ. ಇದಕ್ಕೇ ಶೀಘ್ರವೇ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇದು ತಾಂತ್ರಿಕ ದೊಷದಿಂದ ಉಂಟಾಗಿರುವ ಸಮಸ್ಯೆ ಎಂದಿದ್ದಾರೆ.

ಗ್ರಾಹಕರಿಗೆ ಮೋಸವಾಗುವುದಿಲ್ಲ:

ಗ್ರಾಹಕರಿಗೆ ಮೋಸವಾಗುವುದಿಲ್ಲ:

ಈಗಾಗಲೇ ಜಿಯೋ ನಂಬಿ ರೂ.509ಕ್ಕೆ ರಿಚಾರ್ಜ್ ಮಡಿಸಿದವರಿಗೆ ಜಿಯೋ ಎಂದಿಗೂ ಮೋಸ ಮಾಡುವುದಿಲ್ಲ ಎನ್ನಲಾಗಿದೆ. ಈಗಾಗಲೇ ಈ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ನಡೆದಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio users are getting 1GB data despite recharges of Rs. 509, This happens because the users have not been ported to new plans by Jio to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot