ಜಿಯೋ, ವೊಡಾಫೋನ್, ಏರ್‌ಟೆಲ್,ನ 999ರೂ. ಪ್ಲ್ಯಾನ್‌ನಲ್ಲಿ ಯಾವುದು ಸೂಕ್ತ!

|

ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ ನಾಗಾಲೋಟದಲ್ಲಿ ಮುನ್ನುಗ್ಗುತ್ತಲಿದ್ದು, ಇದಕ್ಕೆ ಅನುಗುಣವಾಗಿ ಏರ್‌ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳು ಸಹ ಪೈಪೋಟಿಯ ಓಟದಲ್ಲಿ ಹಿಂದೆ ಬಿದ್ದಿಲ್ಲ. ಸದ್ಯ ಟೆಲಿಕಾಂ ಕಂಪನಿಗಳ ನಡುವಣ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿದ್ದು, ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಂಪೆನಿಗಳು ಹವಣಿಸುತ್ತಿವೆ. ಈ ನಿಟ್ಟಿನಲ್ಲಿ ಬಹುತೇಕ ಸಾಮ್ಯತೆಯ ಪ್ಲ್ಯಾನ್‌ಗಳು ಪರಿಚಯಿಸುತ್ತಲಿವೆ

ಜಿಯೋ, ವೊಡಾಫೋನ್, ಏರ್‌ಟೆಲ್,ನ 999ರೂ. ಪ್ಲ್ಯಾನ್‌ನಲ್ಲಿ ಯಾವುದು ಸೂಕ್ತ!

ಹೌದು, ಜಿಯೋ, ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳ ಉಚಿತ ಡೇಟಾ ಮತ್ತು ಉಚಿತ ಕರೆ ಸೌಲಭ್ಯಗಳ ತಿಂಗಳ ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಈಗಾಗಲೇ ಜನಪ್ರಿಯವಾಗಿವೆ. ಇವುಗಳೊಂದಿಗೆ, ವಾರ್ಷಿಕ ವ್ಯಾಲಿಡಿಟಿಯ ಪ್ರೀಪೇಡ್ ಪ್ಲ್ಯಾನ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. 1699ರೂ.ಗಳ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌ ಕುರಿತು ಹಿಂದಿನ ಲೇಖನದಲ್ಲಿ ತಿಳಿಸಿದ್ದೆವು. ಹಾಗಾದರೇ ಇಂದಿನ ಲೇಖನದಲ್ಲಿ 999ರೂ.ಗಳ ವಾರ್ಷಿಕ ಪ್ಲ್ಯಾನ್‌ನಲ್ಲಿ ಲಭ್ಯವಾಗುವ ಪ್ರಯೋಜನೆಯನ್ನು ತಿಳಿಯಲು ಮುಂದೆ ನೋಡೋಣ ಬನ್ನಿರಿ.

<strong>ಓದಿರಿ : 'ವೈಲ್ಡ್‌ಫೈರ್‌ ಎಕ್ಸ್‌' ಬಜೆಟ್‌ ಫೋನ್‌ ಮೂಲಕದ ಮತ್ತೆ ಎಂಟ್ರಿಕೊಟ್ಟ 'ಎಚ್‌ಟಿಸಿ'!</strong>ಓದಿರಿ : 'ವೈಲ್ಡ್‌ಫೈರ್‌ ಎಕ್ಸ್‌' ಬಜೆಟ್‌ ಫೋನ್‌ ಮೂಲಕದ ಮತ್ತೆ ಎಂಟ್ರಿಕೊಟ್ಟ 'ಎಚ್‌ಟಿಸಿ'!

ವೊಡಾಫೋನ್ 999ರೂ.ಗಳ ಪ್ಲ್ಯಾನ್

ವೊಡಾಫೋನ್ 999ರೂ.ಗಳ ಪ್ಲ್ಯಾನ್

ವೊಡಾಫೋನ್ 999ರೂ.ಗಳ ಪ್ಲ್ಯಾನ್ ಪ್ರೀಪೇಡ್‌ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿಯನ್ನು ಲಭ್ಯವಾಗಲಿದೆ. 12GB ಉಚಿತ ಡೇಟಾ ಸೌಲಭ್ಯವು ಗ್ರಾಹಕರಿಗೆ ಸಿಗಲಿದೆ. ಈ ಅವಧಿಯಲ್ಲಿ ಅನಿಯಮಿತ ಕರೆಗಳು, 3600 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿದ್ದು, ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿ ಲೈವ್ ಟಿವಿ ಮತ್ತು ಮ್ಯೂಸಿಕ್ ಪ್ರಯೋಜನಗಳು ಲಭ್ಯವಾಗಲಿವೆ.

ಏರ್‌ಟೆಲ್ 998ರೂ.ಗಳ ಪ್ಲ್ಯಾನ್

ಏರ್‌ಟೆಲ್ 998ರೂ.ಗಳ ಪ್ಲ್ಯಾನ್

ಏರ್‌ಟೆಲ್ ಕಂಪೆನಿಯ 998ರೂ.ಗಳ ಪ್ರೀಪೇಡ್ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ 12GB ಉಚಿತ ಡೇಟಾ ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ಉಚಿತ ಕರೆಗಳು ದೊರೆಯಲಿದ್ದು, ಪ್ರತಿ 28 ದಿನಗಳಿಗೊಮ್ಮೆ 300 ಉಚಿತ ಎಸ್‌ಎಮ್‌ಎಸ್‌ಗಳು ಸಹ ಲಭ್ಯವಾಗಲಿವೆ. ಕಂಪನಿಯ Wynk ಮ್ಯೂಸಿಕ್ ಮತ್ತು ಏರ್‌ಟೆಲ್ ಟಿವಿ ಸದಸ್ಯತ್ವವು ಸಿಗಲಿದೆ.

<strong>ಓದಿರಿ : ವಾಟ್ಸಪ್‌ ಬಳಕೆದಾರರೇ ಇನ್ಮುಂದೆ ನಿಮ್ಮ ಬೆರಳ ಗುರುತು ವಾಟ್ಸಪ್‌ ಕೀಲಿ ಕೈ!</strong>ಓದಿರಿ : ವಾಟ್ಸಪ್‌ ಬಳಕೆದಾರರೇ ಇನ್ಮುಂದೆ ನಿಮ್ಮ ಬೆರಳ ಗುರುತು ವಾಟ್ಸಪ್‌ ಕೀಲಿ ಕೈ!

ಐಡಿಯಾ 999ರೂ.ಗಳ ಪ್ಲ್ಯಾನ್

ಐಡಿಯಾ 999ರೂ.ಗಳ ಪ್ಲ್ಯಾನ್

ಐಡಿಯಾ 999ರೂ.ಗಳ ಪ್ರೀಪೇಡ್‌ ಪ್ಲ್ಯಾನ್ ವೊಡಾಫೋನ್‌ನಂತೆಯೇ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 12GB ಉಚಿತ ಡೇಟಾ ಸೌಲಭ್ಯವು ಗ್ರಾಹಕರಿಗೆ ಸಿಗಲಿದೆ. ಈ ಅವಧಿಯಲ್ಲಿ ಅನಿಯಮಿತ ಕರೆಗಳು, 3600 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿದ್ದು, ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿ ಲೈವ್ ಟಿವಿ ಮತ್ತು ಮ್ಯೂಸಿಕ್ ಪ್ರಯೋಜನಗಳು ಲಭ್ಯವಾಗಲಿವೆ.

ಜಿಯೋ 999ರೂ.ಗಳ ಪ್ಲ್ಯಾನ್

ಜಿಯೋ 999ರೂ.ಗಳ ಪ್ಲ್ಯಾನ್

ರಿಲಾಯನ್ಸ್‌ ಜಿಯೋ 999ರೂ.ಗಳ ಪ್ರೀಪೇಡ್‌ ಪ್ಲ್ಯಾನ್ 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಮಾತ್ರ ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ 60GB ಉಚಿತ ಡೇಟಾ, ಪ್ರತಿದಿನ 100 ಉಚಿತ ಎಸ್ಎಮ್ಎಸ್‌ಗಳ ಪ್ರಯೋಜನ ದೊರೆಯಲಿದ್ದು, ಇದರೊಂದಿಗೆ ಉಚಿತ ಅನಿಯಮಿತ ಕರೆ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಜಿಯೋ ಲೈವ್ ಟಿವಿ, ಆಪ್‌ಗಳ ಸದಸ್ಯತ್ವ ದೊರೆಯಲಿದೆ.

ಸಾಮ್ಯತೆ ಅಧಿಕ

ಸಾಮ್ಯತೆ ಅಧಿಕ

ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ಜಿಯೋ ಟೆಲಿಕಾಂ ಸಂಸ್ಥೆಗಳು 999ರೂ.ಗಳ ಪ್ಲ್ಯಾನ್‌ ಬಹುತೇಕ ಒಂದೇ ಸಮನಾಗಿ ಕಂಡರೂ ಅವುಗಳ ಮಧ್ಯೆ ಸಣ್ಣ ಬದಲಾವಣೆಗಳಿವೆ. ಏರ್‌ಟೆಲ್, ವೊಡಾಫೋನ್, ಐಡಿಯಾ 365 ದಿನಗಳ ವ್ಯಾಲಿಡಿಟಿ ಹೊಂದಿದ್ದರೇ, ಜಿಯೋದ ವ್ಯಾಲಿಡಿಟಿ ಕೇವಲ 90ದಿನಗಳು ಮಾತ್ರ. ಹಾಗೆಯೇ ವೊಡಾಫೋನ್ ಮತ್ತು ಐಡಿಯಾ ಎರಡು ಒಂದೆ ಆಗಿವೆ. ಏರ್‌ಟೆಲ್‌ನ 998ರೂ. ಪ್ಲ್ಯಾನ್‌ ಸಹ ಹೆಚ್ಚೆನು ಬದಲಾವಣೆ ಹೊಂದಿಲ್ಲ.

<strong>ಓದಿರಿ :  ಸಾಮಾಜಿಕ ಜಾಗೃತಿಗಾಗಿ 'ಟಿಕ್‌ಟಾಕ್'‌ ಖಾತೆ ತೆರೆದ ಪೊಲೀಸ್‌ರು!</strong>ಓದಿರಿ : ಸಾಮಾಜಿಕ ಜಾಗೃತಿಗಾಗಿ 'ಟಿಕ್‌ಟಾಕ್'‌ ಖಾತೆ ತೆರೆದ ಪೊಲೀಸ್‌ರು!

Best Mobiles in India

English summary
comparison of the Jio, Vodafone Idea and Airtel telcos Rs 999 prepaid plan. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X