ಜಿಯೋ ವೈಫೈ ಕಾಲಿಂಗ್ ಸೇವೆ ಆರಂಭ: ಯಾವುದೇ ಹೆಚ್ಚುವರಿ ಶುಲ್ಕವಿಲ್ಲ!

|

ಸದ್ಯ ದೇಶದೆಲ್ಲಡೆ ವೈಫೈ ಕಾಲಿಂಗ್ ಮಾತು ಕೇಳಿ ಬರುತ್ತಿದ್ದು, ಖಾಸಗಿ ಟೆಲಿಕಾಂ ಜಿಯೋ ಇದೀಗ ಅಧಿಕೃತವಾಗಿ ವೈಫೈ ಕಾಲಿಂಗ್ ಸೇವೆಯನ್ನು ಪರಿಚಯಿಸಿದೆ. ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವೈಫೈ ಕಾಲಿಂಗ್ ಸೌಲಬ್ಯವನ್ನು ಪಡೆಯಬಹುದಾಗಿದೆ. ವೈಫೈ ಕಾಲಿಂಗ್ ಸೇವೆಯು ವಾಯಿಸ್‌ ಮತ್ತು ವಿಡಿಯೊ ಕರೆ ಎರಡು ಸೌಲಭ್ಯಗಳನ್ನು ಒಳಗೊಂಡಿದೆ. ಈ ಬೆಳವಣಿಗೆ ಹೊಸ ಅಧ್ಯಾಯಕ್ಕೆ ನಾಂದಿ ಆಗಲಿದೆ.

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ಕಳೆದ ಕೆಲ ತಿಂಗಳಿಂದ ವೈಫೈ ಕಾಲಿಂಗ್ ಸೇವೆಯ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿತ್ತು. ಆದರೆ ಈಗ ಅಧಿಕೃತವಾಗಿ ವೈಫೈ ಸೇವೆಯನ್ನು ಲಾಂಚ್ ಮಾಡಿದೆ. ನೆಟವರ್ಕ ಸಂಪರ್ಕ ಇಲ್ಲದಿದ್ದಾಗಲೂ ಸಹ ವೈಫೈ ಕಾಲಿಂಗ್ ಸೇವೆ ಕೆಲಸಮಾಡಲಿದೆ ಎಂದು ಹೇಳಲಾಗಿದೆ. ಸದ್ಯ ಜಿಯೋ ವೈಫೈ ಕಾಲಿಂಗ್ ಸೇವೆಯನ್ನು ಸುಮಾರು 150 ಸ್ಮಾರ್ಟ್‌ಫೋನ್‌ ಮಾಡೆಲ್‌ಗಳು ಬೆಂಬಲಿಸುತ್ತವೆ. ಹಾಗಾದರೆ ಜಿಯೋ ವೈಫೈ ಕಾಲಿಂಗ್ ಸೇವೆ ಬಳಕೆ ಹೇಗೆ? ವೈಫೈ ಕಾಲಿಂಗ್ ಪ್ರಯೋಜನಗಳೆನು? ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ವೈಫೈ ಕಾಲಿಂಗ್ ಪ್ರಯೋಜನಗಳು

ವೈಫೈ ಕಾಲಿಂಗ್ ಪ್ರಯೋಜನಗಳು

ಟೆಲಿಕಾಂ ವಲಯದಲ್ಲಿ ವೈಫೈ ಕಾಲಿಂಗ್ ಇದೀಗ ಹೊಸ ಪರಿಚಯ ಜಿಯೋ, ಏರ್‌ಟೆಲ್ ಟೆಲಿಕಾಂ ವೈಫೈ ಕಾಲಿಂಗ್ ಸೇವೆಯನ್ನು ಆರಂಭಿಸಿವೆ. ವೈಫೈ ಕಾಲಿಂಗ್‌ನಲ್ಲಿ ವಾಯಿಸ್ ಗುಣಮಟ್ಟ ಸಾಮಾನ್ಯ ಕರೆಗಿಂತ ಅಧಿಕವಾಗಿರುತ್ತದೆ. ವೈಫೈ ಕಾಲಿಂಗ್‌ಗೆ ನೆಟವರ್ಕ ಕಡ್ಡಾಯವಾಗಿರುವುದಿಲ್ಲ. ಯಾವುದೇ ವೈಫೈ ಸೌಲಭ್ಯ ಬಳಸಿಯು ವಾಯಿಸ್ ಕರೆ ಮತ್ತು ವಿಡಿಯೊ ಕರೆ ಮಾಡಬಹುದಾಗಿದೆ.

ಯಾವ ಫೋನಿನಲ್ಲಿ ವೈಫೈ ಕಾಲಿಂಗ್ ಲಭ್ಯ

ಯಾವ ಫೋನಿನಲ್ಲಿ ವೈಫೈ ಕಾಲಿಂಗ್ ಲಭ್ಯ

ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಜಿಯೋ ವೈಫೈ ಕಾಲಿಂಗ್ ಸೇವೆಯು ದೊರೆಯುವುದಿಲ್ಲ. ಸದ್ಯ ಕೇವಲ 150 ಸ್ಮಾರ್ಟ್‌ಫೋನ್ ಮಾಡೆಲ್‌ಗಳಲ್ಲಿ ಮಾತ್ರ ವೈಫೈ ಕಾಲಿಂಗ್ ಸೇವೆಯು ಲಭ್ಯವಾಗುತ್ತಿದೆ. ಜಿಯೋ ವೈಬ್ ತಾಣದಲ್ಲಿ ಯಾವ ಫೋನ್‌ ವೈಫೈ ಕಾಲಿಂಗ್ ಸಪೋರ್ಟ್‌ ಹೊಂದಿದೆ ಎಂಬ ಬಗ್ಗೆ ತಿಳಿಯಬಹುದು.

ಜಿಯೋ ವೈಫೈ ಕಾಲಿಂಗ್ ಬಳಕೆ ಹೇಗೆ

ಜಿಯೋ ವೈಫೈ ಕಾಲಿಂಗ್ ಬಳಕೆ ಹೇಗೆ

* ಜಿಯೋ ವೈಫೈ Wi-Fi (VoWiFi) ಕಾಲಿಂಗ್ ಸಕ್ರಿಯ ಮಾಡುವುದು
* ಅದಕ್ಕಾಗಿ, ಮೊದಲು ಸ್ಮಾರ್ಟ್‌ಫೋನ್‌ ಅನ್ನು ಯಾವುದೇ ವೈಫೈ ನೆಟವರ್ಕಗೆ ಕನೆಕ್ಟ್ ಮಾಡಬೇಕು.
* ನಂತರ ಸೆಟ್ಟಿಂಗ್ ಮೆನು ತೆರೆಯುವುದು
* ಆಗ, ವೈಫೈ ಕಾಲಿಂಗ್ ಆಯ್ಕೆ ಕಾಣಿಸುತ್ತದೆ. ಅದನ್ನು ಸಕ್ರಿಯ ಮಾಡುವುದು. (ಸದ್ಯ ಆಯ್ದ ಫೋನ್‌ಗಳಿಲ್ಲಿ ಮಾತ್ರ ಈ ಆಯ್ಕೆ ಕಾಣಿಸುತ್ತದೆ)

Best Mobiles in India

English summary
Jio on Wednesday launched its anticipated Wi-Fi calling service to bring voice and video calls over a Wi-Fi network. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X