ಜಿಯೋ ಫೈಬರ್ ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್‌: ವಾರ್ಷಿಕ ಪ್ಲ್ಯಾನ್‌ಗಳಿಗೆ ಕೊಡುಗೆ!

|

ದೇಶದ ಟೆಲಿಕಾಂ ವಲುದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ ಕಂಪನಿಯು ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ನಲ್ಲಿ ಈಗಾಗಲೇ ಹಲವು ಕೊಡುಗೆಗಳನ್ನು ಪರಿಚಯಿಸಿದೆ. ಅದರ ಬೆನ್ನಲ್ಲೇ ಜಿಯೋ ಫೈಬರ್ ಈಗ ಮತ್ತೆ ಹೊಸ ಕೊಡುಗೆಯೊಂದಿಗೆ ಮರಳಿದೆ. ಕಂಪನಿಯು ತನ್ನ ಗ್ರಾಹಕರಿಗೆ ತಮ್ಮ ದೀರ್ಘಕಾಲೀನ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ 30 ದಿನಗಳವರೆಗೆ ಹೆಚ್ಚುವರಿ ಕೊಡುಗೆ ಘೋಷಿಸಿದೆ. ಜಿಯೋ ಫೈಬರ್ ಬಳಕೆದಾರರಿಗೆ ಒಂದು ತಿಂಗಳ ಯೋಜನೆಗಳಿಂದ ವಾರ್ಷಿಕ ಯೋಜನೆಗಳಿಗೆ ವಿಭಿನ್ನ ವೇಗ ಮತ್ತು ಪ್ರಯೋಜನಗಳೊಂದಿಗೆ ಆಯ್ಕೆ ಮಾಡುವ ಆಯ್ಕೆಗಳನ್ನು ನೀಡುತ್ತದೆ.

ಉಚಿತ

ಹೌದು, ಜಿಯೋ ಫೈಬರ್ ಟೆಲಿಕಾಂ ತನ್ನ ಕೆಲವು ಆಯ್ದ ಬ್ರಾಡ್‌ಬ್ಯಾಂಡ್‌ ಯೋಜನೆಗಳಿಗೆ ಹೆಚ್ಚುವರಿ ವ್ಯಾಲಿಡಿಟಿ ಕೊಡುಗೆಯನ್ನು ನೀಡಿದೆ. ಕಂಪನಿಯ ದೀರ್ಘಕಾಲೀನ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ತೆಗೆದುಕೊಳ್ಳುವ ಬಳಕೆದಾರರು ಹೆಚ್ಚುವರಿ ಒಂದು ತಿಂಗಳ ಸೇವೆಯನ್ನು ಉಚಿತವಾಗಿ ಪಡೆಯಬಹುದು. ವಾರ್ಷಿಕ ಯೋಜನೆಗೆ ಹೋಗುವ ಜಿಯೋ ಫೈಬರ್ ಬಳಕೆದಾರರು ಕಂಪನಿಯಿಂದ 30 ದಿನಗಳ ಉಚಿತ ಸೇವೆಯನ್ನು ಪಡೆಯಬಹುದು. ಇದಲ್ಲದೆ, ಅರೆ-ವಾರ್ಷಿಕ ಯೋಜನೆಯನ್ನು ಖರೀದಿಸುವ ಬಳಕೆದಾರರು 15 ದಿನಗಳ ಉಚಿತ ಸೇವೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ರೀತಿಯಾಗಿ

ಜಿಯೋ ಫೈಬರ್ ವಾರ್ಷಿಕ ಯೋಜನೆಗಳಿಗಾಗಿ, ಪ್ರಯೋಜನವನ್ನು ಎರಡು ರೀತಿಯಾಗಿ ಕೊಡುಗೆ ನೀಡಲಾಗಿದೆ. ಅವುಗಳಯ ಕ್ರಮವಾಗಿ 360 ದಿನಗಳ ವ್ಯಾಲಿಡಿಟಿಯ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಹೆಚ್ಚುವರಿಯಾಗಿ 30 ದಿನಗಳು ಉಚಿತವಾಗಿ ಲಭ್ಯ ಆಗಲಿದೆ. ಹಾಗೆಯೇ 180 ದಿನಗಳ ವ್ಯಾಲಿಡಿಲಿಯ ಅರೆ ವಾರ್ಷಿಕ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ಹೆಚ್ಚುವರಿಯಾಗಿ 15 ದಿನಗಳ ವ್ಯಾಲಿಡಿಟಿ ಉಚಿತವಾಗಿ ದೊರೆಯಲಿದೆ. ಇನ್ನು ಈ ಯೋಜನೆಗಳ ಇತರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಪಾವತಿಯಾಗಿ

ಈ ಯೋಜನೆಯ ಮಾಸಿಕ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಉದಾಹರಣೆಗೆ, ವಾರ್ಷಿಕ 30 ಎಮ್‌ಬಿಪಿಎಸ್ ಯೋಜನೆಯನ್ನು ಆರಿಸಿಕೊಳ್ಳುವ ಬಳಕೆದಾರರು 5,694 ರೂ.ಗಳನ್ನು ಒಂದು ಬಾರಿ ಪಾವತಿಯಾಗಿ ಪಾವತಿಸಬೇಕಾಗುತ್ತದೆ. ಇದರರ್ಥ ಬಳಕೆದಾರರು ಭರಿಸಬೇಕಾದ ಮಾಸಿಕ ವೆಚ್ಚ 474ರೂ. ಆದರೆ ಈ ಹೆಚ್ಚುವರಿ ಒಂದು ತಿಂಗಳ ಕೊಡುಗೆಯೊಂದಿಗೆ, ಯೋಜನೆಯ ಮಾಸಿಕ ವೆಚ್ಚವು 438 ರೂ.ಗಳಿಗೆ ಇಳಿಯುತ್ತದೆ. ಮೇಲೆ ತಿಳಿಸಿದ ಎಲ್ಲಾ ಬೆಲೆಗಳು ತೆರಿಗೆಗಳನ್ನು ಸೇರಿಸಿದ ನಂತರ ಎಂಬುದನ್ನು ಗಮನಿಸಿ.

ಹಾಟ್‌ಸ್ಟಾರ್

ಜಿಯೋ ಫೈಬರ್‌ನ ಅರೆ ವಾರ್ಷಿಕ ಬ್ರಾಡ್‌ಬ್ಯಾಂಡ್‌ ಯೋಜನೆಗಳು ಜನಪ್ರಿಯ ಒಟಿಟಿ ಅಪ್ಲಿಕೇಶನ್‌ಗಳಾದ ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ವೂಟ್ ಸೆಲೆಕ್ಟ್, ಲಯನ್ಸ್‌ಗೇಟ್ ಪ್ಲೇ ಮತ್ತು ಡಿಸ್ಕವರಿ + ಗೆ ಚಂದಾದಾರಿಕೆಯೊಂದಿಗೆ ಬರುತ್ತವೆ.ಹಾಗೆಯೇ ಕೆಲವು ಜಿಯೋ ಫೈಬರ್ ವಾರ್ಷಿಕ ಯೋಜನೆಗಳು ಸಹ ಅಮೆಜಾನ್ ಪ್ರೈಮ್‌ ವಿಡಿಯೋ, ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌ ಸೇರಿದಂತೆ ಇನ್ನು ಕೆಲವು ಜನಪ್ರಿಯ ಓಟಿಟಿ ಆಪ್‌ಗಳನ್ನು ಒಳಗೊಂಡಿದೆ. ಅಂದಹಾಗೇ ಜಿಯೋ ಫೈಬರ್ ವಾರ್ಷಿಕ ಬ್ರಾಡ್‌ಬ್ಯಾಂಡ್‌ ಯೋಜನೆ ಆರಂಭಿಕ ಬೆಲೆಯು ಜಿಎಸ್‌ಟಿ ದರ ಹೊರತುಪಡಿಸಿ 4,788ರೂ.ಆಗಿದೆ. ಅದೇ ರೀತಿ ಅರ್ಧ ವಾರ್ಷಿಕ ಬ್ರಾಡ್‌ಬ್ಯಾಂಡ್‌ ಯೋಜನೆ ಆರಂಭಿಕ ಬೆಲೆಯು ಜಿಎಸ್‌ಟಿ ದರ ಹೊರತುಪಡಿಸಿ 2,394ರೂ. ಆಗಿದೆ.

ಯೋಜನೆ

ಜಿಯೋ ಟೆಲಿಕಾಂ ನೀಡಿರುವ ಈ ವಿಶೇಷ ಕೊಡುಗೆಗೆ ಉತ್ತಮ ಪ್ರತಿಕ್ರಿಯೆ ಪಡೆದರೆ ದೀರ್ಘಾವಧಿಯ ಬ್ರಾಡ್‌ಬ್ಯಾಂಡ್‌ ಯೋಜನೆಗಳಿಗೆ ಆಫರ್ ಅನಿರ್ದಿಷ್ಟವಾಗಿ ಉಳಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದಾಗ್ಯೂ, ವಾರ್ಷಿಕ ಯೋಜನೆ ಅಥವಾ ಅರೆ-ವಾರ್ಷಿಕ ಯೋಜನೆಗೆ ಗ್ರಾಹಕರನ್ನು ಸೆಳೆಯಲು ಹೆಚ್ಚುವರಿ ವ್ಯಾಲಿಡಿಟಿ ಘೋಷಣೆಯು ಪರಿಣಾಮಕಾರಿ ಆಗಲಿದೆಯೇ ಎನ್ನುವ ಪ್ರಶ್ನೆ ಗ್ರಾಹಕರಲ್ಲಿ ಮೂಡುತ್ತದೆ.

Most Read Articles
Best Mobiles in India

English summary
JioFiber Long-Term Plans Avaliable With Extra 30 Days Validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X