ಜಿಯೋದಿಂದ ಮತ್ತೆ ಆರು ಹೊಸ ಬ್ರಾಡ್‌ಬ್ಯಾಡ್‌ ಪ್ಲ್ಯಾನ್!..ಆರಂಭಿಕ ಬೆಲೆ 101ರೂ!

|

ದೇಶದ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಖಾಗಿ ಸಂಸ್ಥೆಗಳ ಅಬ್ಬರ ಜೋರಾಗಿಯೇ ಇದೆ. ಜಿಯೋ ಗಿಗಾಫೈಬರ್ ಎಂಟ್ರಿಯ ಬಳಿಕ ಹಲವು ಮಹತ್ತರ ಬದಲಾವಣೆಗಳು ನಡೆದಿವೆ. ಈ ನಿಟ್ಟಿನಲ್ಲಿ ಪ್ರಮುಖ ಟೆಲಿಕಾಂ ಸಂಸ್ಥೆಗಳು ಬ್ರಾಡ್‌ಬ್ಯಾಂಡ್‌ ಬೆಲೆಗಳಲ್ಲಿ ಇಳಿಕೆ ಮಾಡಿಕೊಂಡು ಅಗ್ಗದ ದರದ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಆದರೆ ಜಿಯೋ ಮತ್ತೆ ಈಗ ಹೊಸ ನಮೂನೆಯ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಘೋಷಿಸಿದೆ.

ಬ್ರಾಡ್‌ಬ್ಯಾಂಡ್

ಹೌದು, ಜಿಯೋ ಬ್ರಾಡ್‌ಬ್ಯಾಂಡ್ ಸಂಸ್ಥೆಯು ಇದೀಗ ಮತ್ತೆ ಆರು ಹೊಸ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ವೋಚರ್‌ ಅನ್ನು ಪರಿಚಯಿಸಿದ್ದು, ಇವುಗಳು ಟಾಪ್‌ಅಪ್‌ ಪ್ಲ್ಯಾನ್‌ಗಳಾಗಿವೆ. ಜಿಯೋದ ಪೇಯ್ಡ್ ಗ್ರಾಹಕರಿಗೆ ಹೆಚ್ಚುವರಿ ಡಾಟಾ ಪ್ರಯೋಜನಗಳನ್ನು ಒದಗಿಸಲಿವೆ. ಇನ್ನು ಆ ವೋಚರ್‌ಗಳು ಕ್ರಮವಾಗಿ 101ರೂ, 251ರೂ. 501ರೂ. 1001ರೂ. 2001ರೂ ಮತ್ತು 4001ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿವೆ. ಹಾಗಾದರೇ ಜಿಯೋದ ಈ ಆರು ಹೊಸ ಡಾಟಾ ವೋಚರ್ ಪ್ರಯೋಜನಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 101ರೂ ವೋಚರ್

ಜಿಯೋ 101ರೂ ವೋಚರ್

ಜಿಯೋದ ಹೊಸ ಆರು ಪ್ಲ್ಯಾನ್‌ಗಳಿಲ್ಲಿ ಇದು ಆರಂಭಿಕ ವೋಚರ್ ಆಗಿದ್ದು, ಒಟ್ಟು 20GB ಡಾಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಬ್ರಾಡ್‌ಬ್ಯಾಂಡ್‌ ಗ್ರಾಹಕರು ಹೆಚ್ಚುವರಿ ಡಾಟಾ ಸೌಲಭ್ಯ ಪಡೆಯಲು ಈ ವೋಚರ್ ನೆರವಾಗಲಿದೆ. ಪ್ರಾಥಮಿಕ ಪ್ಲ್ಯಾನಿನ ವ್ಯಾಲಿಡಿಟಿಯೇ ಅನ್ವಯವಾಗಲಿದೆ.

ಜಿಯೋ 251ರೂ. ವೋಚರ್

ಜಿಯೋ 251ರೂ. ವೋಚರ್

ಜಿಯೋದ 251ರೂ. ವೋಚರ್ ಒಟ್ಟು 55GB ಡಾಟಾ ಪ್ರಯೋಜನವನ್ನು ಒಳಗೊಂಡಿದ್ದು, ಪ್ರಾಥಮಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನ ವ್ಯಾಲಿಡಿಟಿಯ ಅವಧಿಯೇ ಅನ್ವಯವಾಗಲಿದೆ. ಹೆಚ್ಚುವರಿ ಡಾಟಾ ಬಳಕೆಗೆಯ ಅಗತ್ಯ ಇದ್ದರೇ ಈ ಪ್ಲ್ಯಾನ್ ಉಪಯುಕ್ತ ಅನಿಸಲಿದೆ.

ಜಿಯೋ 501ರೂ. ವೋಚರ್

ಜಿಯೋ 501ರೂ. ವೋಚರ್

ಜಿಯೋದ 501ರೂ. ವೋಚರ್ ಜಿಯೋ ಗ್ರಾಹಕರಿಗೆ ಒಟ್ಟು 125GB ಡಾಟಾ ಪ್ರಯೋಜನವನ್ನು ನೀಡುತ್ತದೆ. ಇದು ಸಹ ಹೆಚ್ಚುವರಿ ಡಾಟಾ ಬಳಕೆಗಾಗಿ ಇರುವ ಪ್ಲ್ಯಾನ್ ಆಗಿದ್ದು, ಪ್ರಾಥಮಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನ ವ್ಯಾಲಿಡಿಟಿಯ ಅವಧಿಯೇ ಅನ್ವಯವಾಗಲಿದೆ.

ಜಿಯೋ 1001ರೂ. ವೋಚರ್

ಜಿಯೋ 1001ರೂ. ವೋಚರ್

ಜಿಯೋದ ಹೊಸ ಆರು ಟಾಪ್‌ಅಪ್‌ ಪ್ಲ್ಯಾನ್‌ಗಳಿಲ್ಲಿ ಇದು ಒಂದಾಗಿದ್ದು, ಈ ಪ್ಲ್ಯಾನ್ ಒಟ್ಟು 275GB ಡಾಟಾ ಸೌಲಭ್ಯವನ್ನು ಪಡೆದುಕೊಂಡಿದೆ. ಜಿಯೋ ಬ್ರಾಡ್‌ಬ್ಯಾಂಡ್‌ ಗ್ರಾಹಕರು ಹೆಚ್ಚುವರಿ ಡಾಟಾ ಸೌಲಭ್ಯ ಪಡೆಯಲು ಈ ವೋಚರ್ ಅಗತ್ಯ ಅನಿಸಲಿದೆ. ಹಾಗೆಯೇ ಪ್ರಾಥಮಿಕ ಪ್ಲ್ಯಾನಿನ ವ್ಯಾಲಿಡಿಟಿಯೇ ಈ ಪ್ಲ್ಯಾನಿಗೂ ಅನ್ವಯವಾಗಲಿದೆ.

ಜಿಯೋ 2001ರೂ. ವೋಚರ್

ಜಿಯೋ 2001ರೂ. ವೋಚರ್

ಜಿಯೋದ 2001ರೂ. ವೋಚರ್ ದುಬಾರಿ ಬೆಲೆಯ ಟಾಪ್‌ಅಪ್‌ ಪ್ಲ್ಯಾನ್‌ ಆಗಿದ್ದು, ಈ ಪ್ಲ್ಯಾನ್ ಒಟ್ಟು 650GB ಡಾಟಾ ಪ್ರಯೋಜನವನ್ನು ಗ್ರಾಹಕರಿಗೆ ಒದಗಿಸಲಿದೆ. ಇನ್ನು ಪ್ರಾಥಮಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನ ವ್ಯಾಲಿಡಿಟಿಯ ಅವಧಿಯೇ ಇದಕ್ಕೂ ಸಹ ಅನ್ವಯವಾಗಲಿದೆ.

ಜಿಯೋ 4001ರೂ. ವೋಚರ್

ಜಿಯೋ 4001ರೂ. ವೋಚರ್

ಜಿಯೋದ ಹೊಸ ಟಾಪ್‌ಅಪ್‌ ಪ್ಲ್ಯಾನ್‌ಗಳಲ್ಲಿ 4001ರೂ. ವೋಚರ್ ಅತೀ ದುಬಾರಿ ಬೆಲೆಯ ಟಾಪ್‌ಅಪ್‌ ಪ್ಲ್ಯಾನ್ ಅನಿಸಿಕೊಂಡಿದೆ. ಹಾಗೆಯೇ ಈ ಪ್ಲ್ಯಾನ್ ಒಟ್ಟು 2000GB (2TB) ಡಾಟಾ ಪ್ರಯೋಜನವನ್ನು ಗ್ರಾಹಕರಿಗೆ ಒದಗಿಸಲಿದೆ. ಇನ್ನು ಪ್ರಾಥಮಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನ ವ್ಯಾಲಿಡಿಟಿಯ ಅವಧಿಯೇ ಇದಕ್ಕೂ ಸಹ ಅನ್ವಯವಾಗಲಿದೆ.

ಜಿಯೋದ 149ರೂ. ಪ್ಲ್ಯಾನ್‌ ಬೆಸ್ಟ್‌!..ಯಾಕೆ ಗೊತ್ತಾ?

ಜಿಯೋದ 149ರೂ. ಪ್ಲ್ಯಾನ್‌ ಬೆಸ್ಟ್‌!..ಯಾಕೆ ಗೊತ್ತಾ?

ದೇಶದಲ್ಲಿ ಟೆಲಿಕಾಂ ಸ್ಥಿತಿಗತಿಯ ಬೆಲೆ ಸದ್ಯ ಅಸ್ಥಿರವಾಗಿದ್ದು, ಏರ್‌ಟೆಲ್‌, ವೊಡಾಫೋನ್ ಮತ್ತು ಜಿಯೋ ಸಂಸ್ಥೆಗಳು ತಮ್ಮ ಪ್ರೀಪೇಡ್‌ ಪ್ಲ್ಯಾನ್‌ಗಳ ಬೆಲೆಯನ್ನು ಏರಿಕೆ ಮಾಡಿವೆ. ಅವುಗಳಲ್ಲಿ ದೀರ್ಘಾವಧಿಯ ಮತ್ತು ಅಧಿಕ ಡಾಟಾ ಪ್ಲ್ಯಾನ್‌ಗಳ ಬೆಲೆಯು ದುಪ್ಪಟ್ಟಾಗಿದೆ. ಇನ್ನು ಅಗ್ಗದ ದರದಲ್ಲಿ ಪ್ರತಿದಿನ 1GB ಡಾಟಾ ಸೌಲಭ್ಯದ ಪ್ಲ್ಯಾನ್‌ಗಳಲ್ಲಿ ಏರ್‌ಟೆಲ್‌, ವೊಡಾಫೋನ್‌ಗಿಂತ ಜಿಯೋ ಟೆಲಿಕಾಂ ಸಂಸ್ಥೆಯ ಪ್ಲ್ಯಾನ್‌ ಕಡಿಮೆ ಅನಿಸುತ್ತದೆ.

ಜಿಯೋದ 149ರೂ.

ಹೌದು, ಖಾಸಗಿ ಟೆಲಿಕಾಂ ಸಂಸ್ಥೆಗಳು ಇದೀಗ ದರ ಹೆಚ್ಚಳ ಮಾಡಿದ್ದರು, ಸಂಸ್ಥೆಗಳ ನಡುವೆ ಪೈಪೋಟಿ ಮುಂದುವರೆದಿದೆ. ಟೆಲಿಕಾಂ ಸಂಸ್ಥೆಗಳು ಕೆಲವು ಅಗ್ಗದ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು ಈ ಮೂಲಕ ಚಂದಾದಾರರನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿವೆ. ಮುಖ್ಯವಾಗಿ ಕಡಿಮೆ ಬೆಲೆಗೆ ಪ್ರತಿದಿನ 1GB ಡಾಟಾ ನೀಡುವುದು ಹಾಗೂ ಕನಿಷ್ಠ ತಿಂಗಳ ವ್ಯಾಲಿಡಿಟಿ ಅವಧಿ ಒದಗಿಸುವುದು ಅಜೆಂಡಾ ಮಾಡಿಕೊಂಡಿವೆ. ಈ ಪೈಕಿ ಜಿಯೋದ 149ರೂ. ಪ್ಲ್ಯಾನ್‌ ಆಕರ್ಷಕವಾಗಿ ಕಾಣುತ್ತದೆ. ಹಾಗಾದರೇ ಕಡಿಮೆ ದರದಲ್ಲಿ ಪ್ರತಿದಿನ 1GB ಡಾಟಾ ಸೌಲಭ್ಯ ಒದಗಿಸುವ ಪ್ಲ್ಯಾನ್‌ಗಳು ಬಗ್ಗೆ ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಜಿಯೋ 149ರೂ. ಪ್ಲ್ಯಾನ್‌

ಜಿಯೋ 149ರೂ. ಪ್ಲ್ಯಾನ್‌

ರಿಲಯನ್ಸ್ ಜಿಯೋದ 149.ರೂಗಳ ಪ್ರೀಪೇಡ್‌ ಪ್ಲ್ಯಾನ್‌ನಲ್ಲಿ ಚಂದಾದಾರರಿಗೆ ಪ್ರತಿದಿನ 1 ಜಿಬಿ ಡೇಟಾ ಸಿಗುತ್ತದೆ. ಇನ್ನು ಈ ಪ್ಲ್ಯಾನ್ 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಇದಲ್ಲದೆ, ಜಿಯೋ ಟು ಜಿಯೋ ಕರೆಗಳು ಉಚಿತವಾಗಿರಲಿವೆ ಮತ್ತು ಇತರೆ ಟೆಲಿಕಾಂ ಆಪರೇಟರ್‌ಗಳಿಗೆ 300 ನಿಮಿಷಗಳ ಉಚಿತ ಕರೆಗಳ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸಹ ದೊರೆಯುತ್ತವೆ.

ಏರ್‌ಟೆಲ್ 148ರೂ.ಪ್ಲ್ಯಾನ್‌

ಏರ್‌ಟೆಲ್ 148ರೂ.ಪ್ಲ್ಯಾನ್‌

ಏರ್‌ಟೆಲ್‌ನ 148ರೂ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇದರೊಂದಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 300ಎಸ್‌ಎಮ್‌ಎಸ್‌ ಜತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 2GB ಡೇಟಾ ಸಹ ಲಭ್ಯ. ಅದೇ ಏರ್‌ಟೆಲ್‌ನ 219ರೂ. ಪ್ಲ್ಯಾನ್‌ನಲ್ಲಿ ಪ್ರತಿದಿನ 1GB ಡಾಟಾ ಲಭ್ಯವಾಗುತ್ತದೆ.

ವೊಡಾಫೋನ್‌ 149ರೂ. ಪ್ಲ್ಯಾನ್‌

ವೊಡಾಫೋನ್‌ 149ರೂ. ಪ್ಲ್ಯಾನ್‌

ವೊಡಾಫೋನಿನ 149ರೂ. ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನಿಯಮಿತ ಕರೆಗಳ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 1.5GB ಡೇಟಾ ಹಾಗೂ ಪ್ರತಿದಿನ 300 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 1GB ಡೇಟಾ ಸೌಲಭ್ಯ ಲಭ್ಯವಾಗುವುದಿಲ್ಲ.

ಕೊನೆಯ ಮಾತು

ಕೊನೆಯ ಮಾತು

149ರೂ ಪ್ರೈಸ್‌ಟ್ಯಾಗ್‌ನ ಆಸುಪಾಸಿನಲ್ಲಿ ಪ್ರತಿದಿನ 1GB ಡಾಟಾ ಸೌಲಭ್ಯ ಜಿಯೋ ಟೆಲಿಕಾಂನಲ್ಲಿ ಲಭ್ಯವುದೆ. ಹೀಗಾಗಿ ಕಡಿಮೆ ದರದಲ್ಲಿ ಪ್ರತಿದಿನ 1GB ಡಾಟಾ ಪ್ರಯೋಜನ ಬಯಸುವ ಗ್ರಾಹಕರು ನೀವಾಗಿದ್ದರೇ ಜಿಯೋ ಆಯ್ಕೆಯೇ ಉತ್ತಮ ಎನ್ನಬಹುದು. ಜಿಯೋ 149ರೂ. ಪ್ಲ್ಯಾನಿನಲ್ಲಿ ಪ್ರತಿದಿನ 1GB ಡಾಟಾ ಸಿಗುತ್ತದೆ. ಇನ್ನು ಈ ಮೊತ್ತಕ್ಕೆ ಏರ್‌ಟೆಲ್‌ ಮತ್ತು ವೊಡಾಫೋನ್‌ಗಳ ಪ್ಲ್ಯಾನಿನಲ್ಲಿ ಪ್ರತಿದಿನ 1GB ಡಾಟಾ ಲಭ್ಯವಿಲ್ಲ.

Most Read Articles
Best Mobiles in India

English summary
Reliance Jio is offering a total of six new Data Vouchers to the paid JioFiber users. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X