ಜಿಯೋದಿಂದ ಕಡಿಮೆ ಬೆಲೆಗೆ ವಾರ್ಷಿಕ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌!

|

ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಿಲಾಯನ್ಸ್ ಜಿಯೋ, ತನ್ನ ಜಿಯೋ ಫೈಬರ್ ಮೂಲಕ ಬ್ರಾಡ್‌ಬ್ಯಾಂಡ್‌ ವಲಯದಲ್ಲಿಯೂ ಅಬ್ಬರಿಸಿದೆ. ಜಿಯೋ ಹಲವು ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ಹಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿದೆ. ಆದ್ರೀಗ ವಾರ್ಷಿಕ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಕಡಿಮೆ ಬೆಲೆಯಿಂದ ಆರಂಭಿಸಿದ್ದು, ತನ್ನ ಚಂದಾದಾರರಿಗೆ ಈ ಲಾಕ್‌ಡೌನ್ ಅವಧಿಯಲ್ಲಿ ಖುಷಿ ನೀಡಿದೆ.

ಜಿಯೋ ಸಂಸ್ಥೆ

ಹೌದು, ಜಿಯೋ ಸಂಸ್ಥೆಯು ಒಟ್ಟು ಆರು ಭಿನ್ನ ಪ್ರಯೋಜನಗಳ ವಾರ್ಷಿಕ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಆರಂಭಿಕ ಬ್ರಾಡ್‌ಬ್ಯಾಂಡ್‌ ಯೋಜನೆಯು 8,388ರೂ.ಆಗಿದ್ದು, (ಜಿಎಸ್‌ಟಿ ಹೊರತುಪಡಿಸಿ). 1.2 ಲಕ್ಷದ ವರೆಗಿನ ಬ್ರಾಡ್‌ಬ್ಯಾಂಡ್‌ ಯೋಜನೆಯ ಆಯ್ಕೆಯು ಒಳಗೊಂಡಿದೆ. ಇನ್ನು ಈ ಬ್ರಾಡ್‌ಬ್ಯಾಂಡ್‌ ಯೋಜನೆಗಳು ವೇಗದ ಇಂಟರ್ನೆಟ್ ಸೌಲಭ್ಯ ಹೊಂದಿರಲಿದ್ದು, ಹೆಚ್ಚುವರಿಯಾಗಿ OTT ಅಪ್ಲಿಕೇಶನ್‌ಗಳ ಪ್ರಯೋಜನ ಒದಗಿಸಲಿದೆ. ವಾರ್ಷಿಕ ಯೋಜನೆಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ವಾರ್ಷಿಕ ಯೋಜನೆಗಳು

ವಾರ್ಷಿಕ ಯೋಜನೆಗಳು

ಜಿಯೋ ಫೈಬರ್‌ನ ಆರಂಭಿಕ ವಾರ್ಷಿಕ ಬ್ರಾಡ್‌ಬ್ಯಾಂಡ್ ಯೋಜನೆಯು ಪ್ರಸ್ತುತ 8,388ರೂ.(GST ಹೊರತುಪಡಿಸಿ) ಲಭ್ಯವಾಗಲಿದೆ. ಈ ಯೋಜನೆಯು ಸುಮಾರು ಒಂದು ವರ್ಷ (360 ದಿನಗಳು) ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆಯಲ್ಲಿ ತಿಂಗಳಿಗೆ 200GB + 50GB ಯೊಂದಿಗೆ 100 Mbps ಡೌನ್‌ಲೋಡ್ ವೇಗವನ್ನು ನೀಡುತ್ತದೆ. ಅಲ್ಲದೇ ಹೆಚ್ಚುವರಿಯಾಗಿ, ಜಿಯೋಸಾವನ್ ಮತ್ತು ಜಿಯೋ ಸಿನೆಮಾದ ಉಚಿತ ಒಟಿಟಿ ಚಂದಾದಾರಿಕೆಯನ್ನು ಒದಗಿಸುತ್ತದೆ. ಇದರೊಂದಿಗೆ ಬಳಕೆದಾರರು ಉಚಿತ ವಾಯಿಸ್‌ ಕರೆಗಳು ಮತ್ತು ಹೋಮ್ ನೆಟ್‌ವರ್ಕಿಂಗ್ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

ಜಿಯೋ ಬ್ರೋಂಜ್ ವಾರ್ಷಿಕ ಪ್ಲ್ಯಾನ್

ಜಿಯೋ ಬ್ರೋಂಜ್ ವಾರ್ಷಿಕ ಪ್ಲ್ಯಾನ್

ಜಿಯೋಫೈಬರ್ ಬ್ರೋಂಜ್ ವಾರ್ಷಿಕ ಪ್ಲ್ಯಾನಿನಲ್ಲಿ ಬಳಕೆದಾರರು ತಿಂಗಳಿಗೆ 100 Mbps ಮತ್ತು 200GB + 50GB ವೇಗವನ್ನು ಪಡೆಯುತ್ತಾರೆ. ಇದು ಮಾತ್ರವಲ್ಲ, ಬಳಕೆದಾರರು ಜಿಯೋಸಾವನ್ ಮತ್ತು ಜಿಯೋ ಸಿನೆಮಾದ ಒಟಿಟಿ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ. ಯೋಜನೆಯನ್ನು ಆರಿಸಿಕೊಳ್ಳುವ ಬಳಕೆದಾರರು ಉಚಿತ ಧ್ವನಿ ಕರೆಗಳು ಮತ್ತು ಹೋಮ್ ನೆಟ್‌ವರ್ಕಿಂಗ್ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಜಿಯೋ ಫೈಬರ್ ಬ್ರೋಂಜ್ ಪ್ರಿಪೇಯ್ಡ್ ಯೋಜನೆ 8,388ರೂ.ಗೆ (GST ಹೊರತುಪಡಿಸಿ) ಲಭ್ಯವಾಗಲಿದೆ. ಮತ್ತು ಈ ಯೋಜನೆಯ ವ್ಯಾಲಿಡಿಟಿಯು 360 ದಿನಗಳು.

ಜಿಯೋ ಸಿಲ್ವರ್ ವಾರ್ಷಿಕ ಪ್ಲ್ಯಾನ್

ಜಿಯೋ ಸಿಲ್ವರ್ ವಾರ್ಷಿಕ ಪ್ಲ್ಯಾನ್

ಜಿಯೋಫೈಬರ್‌ನ ಸಿಲ್ವರ್ ಯೋಜನೆ ಗ್ರಾಹಕರ ಕೈಗೆಟುಕುವ ವಾರ್ಷಿಕ ಪ್ರಿಪೇಯ್ಡ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಬಳಕೆದಾರರು ತಿಂಗಳಿಗೆ 100 Mbps ಮತ್ತು 400GB + 200GB ವೇಗವನ್ನು ಪಡೆಯುತ್ತಾರೆ. ಉಚಿತ ವಾಯಿಸ್ ಕರೆ ಮತ್ತು ಹೋಮ್ ನೆಟ್‌ವರ್ಕಿಂಗ್ ಪ್ರಯೋಜನಗಳನ್ನು ಸಹ ಸಿಲ್ವರ್ ಯೋಜನೆಯಲ್ಲಿ ಸೇರಿಸಲಾಗಿದೆ. ಜಿಯೋಫೈಬರ್ ಸಿಲ್ವರ್ ಪ್ರಿಪೇಯ್ಡ್ ಯೋಜನೆಯ ಬೆಲೆಯು 10,188ರೂ.(ಜಿಎಸ್‌ಟಿ ಹೊರತುಪಡಿಸಿ)ಆಗಿದೆ.

ಜಿಯೋ ಗೋಲ್ಡ್‌ ವಾರ್ಷಿಕ ಪ್ಲ್ಯಾನ್

ಜಿಯೋ ಗೋಲ್ಡ್‌ ವಾರ್ಷಿಕ ಪ್ಲ್ಯಾನ್

ಜಿಯೋ ಗೋಲ್ಡ್‌ ವಾರ್ಷಿಕ ಪ್ಲ್ಯಾನ್ ಯೋಜನೆಯಡಿಯಲ್ಲಿ, ಬಳಕೆದಾರರು 250 Mbps ವೇಗವನ್ನು ಪಡೆಯುತ್ತಾರೆ. ಈ ಯೋಜನೆಯು ಬಳಕೆದಾರರಿಗೆ ಅವರ ಅಗತ್ಯಗಳಿಗೆ ಅನುಗುಣವಾಗಿ 360 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಹಾಗೂ ಬಳಕೆದಾರರು ತಿಂಗಳಿಗೆ 1000GB + 250GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಅವರು ವರ್ಷಕ್ಕೆ 1200 ರೂ ಮೌಲ್ಯದ ಟಿವಿ ವಿಡಿಯೋ ಕರೆ ಮತ್ತು ಗೇಮಿಂಗ್ ಅನ್ನು ಸಹ ಪಡೆಯುತ್ತಾರೆ. 360 ದಿನಗಳ ಮಾನ್ಯತೆಯೊಂದಿಗೆ ಗೋಲ್ಡ್ ಪ್ರಿಪೇಯ್ಡ್ ಯೋಜನೆಯ ಬೆಲೆಯು ಜಿಎಸ್‌ಟಿ ಹೊರತುಪಡಿಸಿ 15,588ರೂ. ಆಗಿದೆ. ಇದೇ ಯೋಜನೆ 720 ದಿನಗಳ ಮಾನ್ಯತೆಗೆ ಬೇಕಿದ್ದರೇ 31,176ರೂ.(ಜಿಎಸ್‌ಟಿ ಹೊರತುಪಡಿಸಿ).

ಜಿಯೋ ಡೈಮಂಡ್ ವಾರ್ಷಿಕ ಯೋಜನೆ

ಜಿಯೋ ಡೈಮಂಡ್ ವಾರ್ಷಿಕ ಯೋಜನೆ

ಜಿಯೋಫೈಬರ್‌ನ ಡೈಮಂಡ್ ವಾರ್ಷಿಕ ಯೋಜನೆಯು ವೇಗದ ಇಂಟರ್ನೆಟ್ ಅಗತ್ಯತೆ ಬಯಸುವ ಗ್ರಾಹಕರಿಗೆ ಸೂಕ್ತ. ಈ ಡೈಮಂಡ್ ಪ್ರಿಪೇಯ್ಡ್ ಯೋಜನೆ ಇಂಟರ್ನೆಟ್ ವೇಗವನ್ನು 500 Mbps ಮತ್ತು ತಿಂಗಳಿಗೆ 2500GB + 250GB ಡೇಟಾವನ್ನು ನೀಡುತ್ತದೆ. ಬಳಕೆದಾರರು ಟಿವಿ ವಿಡಿಯೋ ಕರೆ ಮತ್ತು ಗೇಮಿಂಗ್ ಸೇವೆಯನ್ನು ಸಹ ಪಡೆಯುತ್ತಾರೆ, ಅದು ವರ್ಷಕ್ಕೆ 1200 ರೂ. ಉಚಿತ ವಾಯಿಸ್‌ ಕರೆ ಮತ್ತು ಒಟಿಟಿ ಪ್ರಯೋಜನಗಳನ್ನು ಸಹ ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆಯ ಬೆಲೆಯು ಜಿಎಸ್‌ಟಿ ಹೊರತುಪಡಿಸಿ 29,988ರೂ. ಆಗಿದೆ. ವ್ಯಾಲಿಡಿಟಿಯು ಅವಧಿಯು 360 ದಿನಗಳಾಗಿವೆ.

ಜಿಯೋ ಪ್ಲಾಟಿನಂ ವಾರ್ಷಿಕ ಯೋಜನೆ

ಜಿಯೋ ಪ್ಲಾಟಿನಂ ವಾರ್ಷಿಕ ಯೋಜನೆ

ಜಿಯೋ ಪ್ಲಾಟಿನಂ ವಾರ್ಷಿಕ ಯೋಜನೆಯಲ್ಲಿ ಬಳಕೆದಾರರು ತಿಂಗಳಿಗೆ 1 Gbps ಮತ್ತು ಅನಿಯಮಿತ 5000GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಎಲ್ಲಾ ಒಟಿಟಿ ಪ್ರಯೋಜನಗಳನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆಯನ್ನು ಆರಿಸಿಕೊಳ್ಳುವ ಬಳಕೆದಾರರು ವರ್ಷಕ್ಕೆ 999 ರೂಗಳ ವೆಚ್ಚದ ಐದು ಡಿವೈಸ್‌ಗಳಿಗೆ ಭದ್ರತೆಯನ್ನು ಪಡೆಯುತ್ತಾರೆ. ಇದಲ್ಲದೆ, ಉಚಿತ ವಾಯಿಸ್‌ ಕರೆ ಪ್ರಯೋಜನಗಳು ಮತ್ತು ಡಬಲ್ ಡೇಟಾ ಪ್ರಯೋಜನಗಳನ್ನು ಸಹ ಈ ಕೊಡುಗೆಯಲ್ಲಿ ಸೇರಿಸಲಾಗಿದೆ. ಜಿಎಸ್‌ಟಿ ಹೊರತುಪಡಿಸಿ ಪ್ಲಾಟಿನಂ ಪ್ರಿಪೇಯ್ಡ್ ಯೋಜನೆಯ ಬೆಲೆ 47,988ರೂ. ಆಗಿದೆ.

ಜಿಯೋ ಟೈಟಾನಿಯಂ ವಾರ್ಷಿಕ ಪ್ಲ್ಯಾನ್

ಜಿಯೋ ಟೈಟಾನಿಯಂ ವಾರ್ಷಿಕ ಪ್ಲ್ಯಾನ್

ಜಿಯೋ ಟೈಟಾನಿಯಂ ವಾರ್ಷಿಕ ಪ್ಲ್ಯಾನ್, ಜಿಯೋ ಫೈಬರ್‌ನ ಅತ್ಯಂತ ದುಬಾರಿ ವಾರ್ಷಿಕ ಯೋಜನೆಯಾಗಿದೆ. ಅತೀ ವೇಗದ ಹಾಗೂ ತಡೆರಹಿತ ನೆಟ್‌ವರ್ಕ್ ಪ್ರಯೋಜನ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಬೆಸ್ಟ್ ಅನಿಸಲಿದೆ. ಲಭ್ಯವಾಗಲಿದೆ. ಟೈಟಾನಿಯಂ ಯೋಜನೆಯಲ್ಲಿ ಗ್ರಾಹಕರು 1 Gbps ವೇಗದಲ್ಲಿ ತಿಂಗಳಿಗೆ 10,000 GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಜಿಯೋ ಫೈಬರ್‌ನ ಈ ಯೋಜನೆಯಲ್ಲಿ 60,000 GB ಡಬಲ್ ಡಾಟಾ ಆಫರ್ ಅನ್ನು ಸಹ ನೀಡಲಾಗುತ್ತದೆ. ಜೊತೆಗೆ ಗ್ರಾಹಕರು ವರ್ಷಕ್ಕೆ 1,200 ರೂ. ಮೌಲ್ಯದ ಟಿವಿ ವಿಡಿಯೋ ಕಾಲಿಂಗ್, ಗೇಮಿಂಗ್ ಸೇವೆಗಳನ್ನು ಪಡೆಯುತ್ತಾರೆ, ಮತ್ತು ಹೋಮ್ ನೆಟ್‌ವರ್ಕಿಂಗ್ ಮತ್ತು ಉಚಿತ ವಾಯಿಸ್‌ ಕರೆ ಪ್ರಯೋಜನಗಳನ್ನು ಯೋಜನೆಯಲ್ಲಿ ಸೇರಿಸಲಾಗಿದೆ. 360 ದಿನಗಳವರೆಗೆ ಜಿಎಸ್‌ಟಿಯನ್ನು ಹೊರತುಪಡಿಸಿ ಟೈಟಾನಿಯಂ ಪ್ರಿಪೇಯ್ಡ್ ಯೋಜನೆಯ ಬೆಲೆ 1,01,988ರೂ. ಆಗಿದೆ.

Best Mobiles in India

English summary
JioFiber users will get Extra GBs in their annual plans for six months in the form of introductory benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X