ಜಿಯೋ ಲಿಂಕ್ ಪ್ಲ್ಯಾನ್‌: ಆರಂಭಿಕ ಬೆಲೆ 699ರೂ. ಅಧಿಕ ಡೇಟಾ ಸೌಲಭ್ಯ!

|

ದೇಶದ ಟೆಲಿಕಾಂ ವಲಯದಲ್ಲಿ ಅಗ್ಗದ ಬೆಲೆಗೆ ಡೇಟಾ ಯೋಜನೆಗಳನ್ನು ಪರಿಚಯಿಸಿ ಮುಂಚೂಣಿಯಲ್ಲಿ ಇರುವ ಜಿಯೋ, ಸದ್ಯದ ಲಾಕ್‌ಡೌನ್ ಸಂದರ್ಭದಲ್ಲಿಯೂ ಜನಪ್ರಿಯತೆ ಪಡೆದಿದೆ. ಇತರೆ ಖಾಸಗಿ ಟೆಲಿಕಾಂಗಳಿಗಿಂತ ಆಕರ್ಷಕ ಡೇಟಾ ಸೌಲಭ್ಯದ ಪ್ಲ್ಯಾನ್‌ ಒದಗಿಸಿದ್ದು, ಇತ್ತೀಚಿಗೆ ಎಟಿಎಮ್ ಸೆಂಟರ್‌ನಲ್ಲಿಯೂ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ಸೌಲಭ್ಯವನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಇದೀಗ ಮತ್ತೊಂದು ಕೊಡುಗೆ ಹೊರಹಾಕಿದೆ.

ಹೌದು, ಜಿಯೋ ಟೆಲಿಕಾಂ ತನ್ನ ಜಿಯೋ ಲಿಂಕ್ ಪ್ಲ್ಯಾನ್‌ಗಳ ರೀಚಾರ್ಜ್ ಬಗ್ಗೆ ತಿಳಿಸಿದೆ. ಸಂಸ್ಥೆಯು ಈ ಹಿಂದೆ ಪರಿಚಯಿಸಿದ್ದ, ಜಿಯೋ ಲಿಂಕ್ ಸೌಲಭ್ಯದ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ಲಭ್ಯ ಮಾಡಿದೆ. ಹೊಸದಾಗಿ ಜಿಯೋ ಲಿಂಕ್ ಮೊಡೆಮ್ ಲಭ್ಯವಿರುವುದಿಲ್ಲ ಆದರೆ ಈ ಹಿಂದೆ ಜಿಯೋ ಲಿಂಕ್ ಸೌಲಭ್ಯ ಹೊಂದಿರುವ ಗ್ರಾಹಕರು ಜಿಯೋ ಲಿಂಕ್ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಜಿಯೋ ಲಿಂಕ್ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏನಿದು ಜಿಯೋ ಲಿಂಕ್?

ಏನಿದು ಜಿಯೋ ಲಿಂಕ್?

ಜಿಯೋ ಲಿಂಕ್ 4G LET ಮೊಡೆಮ್ ಆಗಿದ್ದು ಅದು ಕೆಲವು ಪ್ರದೇಶಗಳಲ್ಲಿ ವ್ಯಾಪ್ತಿಯನ್ನು ಸುಧಾರಿಸುತ್ತದೆ. ಆದಾಗ್ಯೂ, ಜಿಯೋ ಲಿಂಕ್ ಜಿಯೋಫೈ ಹಾಟ್‌ಸ್ಪಾಟ್ ಸಾಧನಕ್ಕಿಂತ ಸಾಕಷ್ಟು ಭಿನ್ನವಾಗಿದೆ. ರಿಲಯನ್ಸ್ ಜಿಯೋ 4G ಸೇವೆಗಳನ್ನು ವಾಣಿಜ್ಯವಾಗಿ ಪ್ರಾರಂಭಿಸುವ ಮೊದಲು ರಿಲಯನ್ಸ್ ಇಂಡಸ್ಟ್ರೀಸ್ ಉದ್ಯೋಗಿಗಳಿಗೆ ಜಿಯೋಲಿಂಕ್ ಒದಗಿಸಲಾಗಿತ್ತು. ಈಗ ಸೇವೆಯನ್ನು ವಾಣಿಜ್ಯಿಕವಾಗಿ ಪ್ರಾರಂಭಿಸಲಾಗಿರುವುದರಿಂದ, ಈ ದಿನಗಳಲ್ಲಿ ಜಿಯೋಲಿಂಕ್ ಮೋಡೆಮ್‌ನ ಅಗತ್ಯವಿಲ್ಲ. ಆದ್ರೆ ನೀವು ಜಿಯೋಲಿಂಕ್ ಅನ್ನು ಹೊಂದಿದ್ದರೆ, ಜಿಯೋ ಲಿಂಕ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಬಹುದು.

ಪ್ಲ್ಯಾನ್‌ ಮಾಹಿತಿ

ಪ್ಲ್ಯಾನ್‌ ಮಾಹಿತಿ

ಜಿಯೋಲಿಂಕ್ ಒಟ್ಟು ಮೂರು ಯೋಜನೆಗಳ ಆಯ್ಕೆಯನ್ನು ಹೊಂದಿದ್ದು, ಅವುಗಳಲ್ಲಿ ಆರಂಭಿಕ ಪ್ಲ್ಯಾನ್ 699 ರೂ,ಆಗಿದೆ. ಈ ಮೂರು 699 ರೂ,ಪ್ಲ್ಯಾನ್ ಅಲ್ಪಾವಧಿಯ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 5ಜಿಬಿ ಡೇಟಾ ಸೌಲಭ್ಯವನ್ನು ಪಡೆದಿದ್ದು, ಒಂದು ತಿಂಗಳಿಗೆ 156ಜಿಬಿ ಡೇಟಾ ಒದಗಿಸುತ್ತದೆ. ಅದೇ ರೀತಿ ಜಿಯೋ ಲಿಂಕ್ 2,099.ರೂ ಪ್ಲ್ಯಾನ್ ಒಟ್ಟು ಮೂರು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪೂರ್ಣ ವ್ಯಾಲಿಡಿಟಿ (98 ದಿನಗಳು) ಅವಧಿಗೆ ಒಟ್ಟು 538GB ಡೇಟಾ ಪ್ರಯೋಜನ ಒದಗಿಸಲಿದೆ.

ಡೇಟಾ ಪ್ರಯೋಜನ

ಹಾಗೆಯೇ ಜಿಯೋ ಲಿಂಕ್ 4,199ರೂ. ಪ್ಲ್ಯಾನ್‌ ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು ಆರು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಲಭ್ಯವಾಗುತ್ತದೆ ಹಾಗೂ ಹೆಚ್ಚುವರಿಯಾಗಿ 96GB ಡೇಟಾ ಸಹ ಗ್ರಾಹಕರಿಗೆ ದೊರೆಯಲಿದೆ. ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 1076GB ಡೇಟಾ ಪ್ರಯೋಜನವು ಒದಗಿಸಲಿದೆ. ಇನ್ನು ಈ ಪ್ಲ್ಯಾನ್ 196 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Reliance Jio seems to be no longer providing JioLink device, so only existing users can make use of these plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X