ಜಿಯೋಫೋನ್‌ ನೆಕ್ಸ್ಟ್‌ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ!

|

ರಿಲಯನ್ಸ್ ಸಂಸ್ಥೆಯು ಗಣೇಶ ಚತುರ್ಥಿಯ ದಿನದಂದು (ಸೆಪ್ಟೆಂಬರ್ 10 ರಂದು) ಬಹುನಿರೀಕ್ಷಿತ ಜಿಯೋಫೋನ್ ನೆಕ್ಸ್ಟ್ ಅನ್ನು ಬಿಡುಗಡೆ ಮಾಡಲು ಸಕಲ ರೀತಿ ಸಜ್ಜಾಗಿದೆ. ರಿಲಯನ್ಸ್ ಟೆಲಿಕಾಂ ಟೆಕ್ ದಿಗ್ಗಜ ಗೂಗಲ್ ಸಹಯೋಗದೊಂದಿಗೆ ಜಿಯೋಫೋನ್‌ ನೆಕ್ಸ್ಟ್ ಸ್ಮಾರ್ಟ್‌ಫೋನ್‌ ಅನ್ನು ಅಭಿವೃದ್ಧಿಪಡಿಸಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಈ ಫೋನ್ ವಿಶ್ವದಲ್ಲೇ ಅಗ್ಗದ ದರದ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಳ್ಳುವ ಲಕ್ಷಣಗಳನ್ನು ಹೊರಹಾಕಿದೆ.

ಬಳಕೆದಾರರಿಗಾಗಿ

ಹೌದು, ಭಾರೀ ಕುತೂಹಲ ಮೂಡಿಸಿದ್ದ ಜಿಯೋಫೋನ್ ನೆಕ್ಸ್ಟ್ ಅನ್ನು ಈ ವರ್ಷದ ಆರಂಭದಲ್ಲಿ ರಿಲಯನ್ಸ್‌ ಕಂಪನಿಯ AGM ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿತು. ಆದರೆ ಸೆಪ್ಟೆಂಬರ್ 10 ರಂದು ಬರುವ ಗಣೇಶ ಚತುರ್ಥಿಯಂದು ಫೋನ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಘೋಷಿಸಿತ್ತು. ಈ ಫೋನ್ ಭಾರತೀಯ ಬಳಕೆದಾರರಿಗಾಗಿ ಕಸ್ಟಮೈಸ್ ಮಾಡಿದ ಕೆಲವು ವಿಶೇಷ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡಲಿದೆ. ಹಾಗೆಯೇ ಈ ಫೋನ್ ರಿಯಲ್‌ ಟೈಮ್ ಟ್ರಾನ್ಸಲೇಶನ್ ನೊಂದಿಗೆ ಬರುವ ನಿರೀಕ್ಷೆಯಿದೆ.

ಬೆಲೆ ಕೇಳಿದ್ರೆ ಗ್ರಾಹಕರು ಹುಬ್ಬೇರಿಸುವುದು ಪಕ್ಕಾ

ಬೆಲೆ ಕೇಳಿದ್ರೆ ಗ್ರಾಹಕರು ಹುಬ್ಬೇರಿಸುವುದು ಪಕ್ಕಾ

ಈಗಾಗಲೇ ಅಗ್ಗದ ದರದಲ್ಲಿ ಹಲವು ಸೇವೆಗಳನ್ನು ಪರಿಚಯಿಸಿ ರಿಲಯನ್ಸ್‌ ಗ್ರಾಹಕರ ಮೆಚ್ಚುಗೆ ಪಡೆದಿದೆ. ಹೀಗಾಗಿ ಸಂಸ್ಥೆಯ ಬಹುನಿರೀಕ್ಷಿತ ಜಿಯೋಫೋನ್ ನೆಕ್ಸ್ಟ್‌ ಬೆಲೆಯ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ. ಲೀಕ್ ಮಾಹಿತಿಯಂತೆ ಜಿಯೋಫೋನ್ ನೆಕ್ಸ್ಟ್ ಫೋನ್ 3,499ರೂ.ಗಳ ಬೆಲೆಯೊಂದಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯೂ, ರಿಲಯನ್ಸ್ ಜಿಯೋ ಕೊಡುಗೆಗಳ ಮೂಲಕ ಇನ್ನಷ್ಟು ಇನ್ನಷ್ಟು ವಿಶೇಷ ಬೆಲೆಯಲ್ಲಿ ಗ್ರಾಹಕರಿಗೆ ಈ ಫೋನ್ ಲಭ್ಯವಾಗುವ ಸಾಧ್ಯತೆಗಳಿವೆ.

ಜಿಯೋ ಫೋನ್ ನೆಕ್ಟ್ ಫೀಚರ್ಸ್‌ ಏನು?

ಜಿಯೋ ಫೋನ್ ನೆಕ್ಟ್ ಫೀಚರ್ಸ್‌ ಏನು?

ಲೀಕ್ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಒಎಸ್‌ನಿಂದ ರನ್ ಆಗಲಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಇರಬಹುದು. ಎಚ್‌ಡಿ ಡಿಸ್‌ಪ್ಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಈ ಫೋನ್ ಮಾಡೆಲ್ LS-5701-J ನಂಬರ್ ಹೊಂದಿದೆ. ಗೂಗಲ್‌ನ ಗೋ ಎಡಿಷನ್ ಆಂಡ್ರಾಯ್ಡ್ 11 ಒಎಸ್, 720x1,440 ಪಿಕ್ಸೆಲ್ ಪ್ರದರ್ಶಕ, ಕ್ವಾಲಕಾಂ QM215 ಎಸ್ಒಸಿ ಅನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೋರಿಕೆಯಾಗಿದೆ

ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ 64-ಬಿಟ್, ಕ್ವಾಡ್ ಕೋರ್ ಕ್ವಾಲ್ಕಮ್ ಪ್ರೊಸೆಸರ್ ಜೊತೆಗೆ ಕ್ವಾಲಕಾಮ್ ಅಡ್ರಿನೊ 308 ಜಿಪಿಯು ಹೊಂದಿದೆ. ಇದನ್ನು ಕಡಿಮೆ-ಮಟ್ಟದ ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂತರ್ನಿರ್ಮಿತ ಕ್ವಾಲಕಾಮ್ ಸ್ನಾಪ್‌ಡ್ರಾಗನ್ X5 LTE ಮೋಡೆಮ್‌, ಬ್ಲೂಟೂತ್ v4.2, GPS, 1080ಪಿ ವಿಡಿಯೋ ರೆಕಾರ್ಡಿಂಗ್, ಎಲ್‌ಡಿಪಿಆರ್ 3 ರ್ಯಾಮ್, ಮತ್ತು ಇಎಂಎಂಸಿ 4.5 ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ.

ವಿಡಿಯೋ

ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ 13 ಮೆಗಾ ಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಹಿಂಬದಿಯಲ್ಲಿ ಇರಲಿದೆದ್ದರೆ, ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗೆ ನೆರವಾಗಲು 8 ಮೆಗಾ ಪಿಕ್ಸೆಲ್ ಇರಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಸ್ನ್ಯಾಪ್‌ಚಾಟ್ ಇಂಟಿಗ್ರೇಷನ್ ಜತೆಗೆ ಗೂಗಲ್ ಕ್ಯಾಮೆರಾ ಗೋ ಫೀಚರ್ ಹೊಂದಿರುವ ನೂತನ ಆವೃತ್ತಿಯು ಈ ಫೋನಿನಲ್ಲಿ ಪ್ರಿ ಇನ್‌ಸ್ಟಾಲ್‌ ಆಗಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಿಯೋ ಫೋನ್ ರೀಚಾರ್ಜ್ ಪ್ಲ್ಯಾನ್‌:

ಜಿಯೋ ಫೋನ್ ರೀಚಾರ್ಜ್ ಪ್ಲ್ಯಾನ್‌:

ಜಿಯೋ 75ರೂ. ಪ್ಲಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 125ರೂ. ಪ್ಲಾನ್
ಜಿಯೋದ ಈ 125ರೂ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

Best Mobiles in India

English summary
JioPhone Next To Launch On September 10: Expected Price And Specs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X