ಜಿಯೋ ಟಿವಿ ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್‌ಗಿಂತ ದುಪ್ಪಟ್ಟು ಮುಂದೆ; ಅಧಿಕ ಲೈವ್‌ ಚಾನೆಲ್‌ಗಳು!

|

ಅಗ್ಗದ ಡೇಟಾ ಯೋಜನೆಗಳನ್ನು ಪರಿಚಯಿಸುವ ಮೂಲಕ ರಿಲಾಯನ್ಸ್ ಜಿಯೋ ದೇಶದ ಟೆಲಿಕಾಂ ವಲಯದಲ್ಲಿ ಸಂಚಲನವನ್ನೇ ಸೃಷ್ಠಿಸಿದೆ. ಡೇಟಾ ಜೊತೆಗೆ ಹಲವು ಇತರೆ ಸೇವೆಗಳನ್ನು ಒಳಗೊಂಡಿದ್ದು, ತನ್ನ ಗ್ರಾಹಕರಿಗೆ ಭರಪೂರ ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳಲ್ಲಿ ಒಂದಾದ ಜಿಯೋ ಟಿವಿ-Jio Tv ಸೇವೆಯು ಜನಪ್ರಿಯ ಚಾನೆಲ್‌ಗಳನ್ನ, ಲೈವ್‌ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಸೌಲಭ್ಯ ಒದಗಿಸಿದೆ. ಈ ಲಾಕ್‌ಡೌನ್‌ ಅವಧಿಯಲ್ಲಿ ಜಿಯೋ ಟಿವಿ ಸೇವೆಗಳ ಲಿಸ್ಟಿಗೆ ಮತ್ತೆ ಹೊಸ ಚಾನೆಲ್‌ಗಳು ಸೇರಿವೆ.

ಜಿಯೋ ಟಿವಿ

ಹೌದು, ಈಗಾಗಲೆ ಹಲವು ಚಾನೆಲ್‌ಗಳ ಸೇವೆ ಒದಗಿಸಿರುವ ಜಿಯೋ ಟಿವಿ ಆಪ್‌ನಲ್ಲಿ ಇದೀಗ 9x Jhakaas ಮತ್ತು Sangeet Marathi ಚಾನೆಲ್‌ಗಳು ಹೊಸದಾಗಿ ಸೇರಿವೆ. ಈ ಮೂಲಕ ಜಿಯೋ ಟಿವಿ 13 ಪ್ರಕಾರಗಳಲ್ಲಿ 688 ಕ್ಕೂ ಹೆಚ್ಚು ಚಾನೆಲ್‌ಗಳನ್ನು ಹೊಂದಿದೆ. ಹಾಗೂ ತನ್ನ ಪ್ರಮುಖ ಪ್ರತಿಸ್ಪರ್ಧಿ ಏರ್‌ಟೆಲ್‌ನ ''ಏರ್‌ಟೆಲ್ ಎಕ್ಸ್‌ಸ್ಟ್ರೀಮ್'' ಅಪ್ಲಿಕೇಶನ್‌ಗಿಂತ ಬಹಳ ಮುಂದೆ ಇದೆ. ಅಂದಹಾಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್‌ 380 ಚಾನೆಲ್‌ ಹೊಂದಿದೆ. ಜಿಯೋ ಟಿವಿ ಹಾಗೂ ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಆಪ್‌ಗಳ ನಡುವಿನ ಭಿನ್ನತೆಗಳ ಬಗ್ಗೆ ಮುಂದೆ ತಿಳಿಯಿರಿ.

ಹೆಚ್‌ಡಿ ಚಾನೆಲ್‌ಗಳ ಪ್ರಸಾರದಲ್ಲಿಯು ಜಿಯೋ ಮುಂದೆ

ಹೆಚ್‌ಡಿ ಚಾನೆಲ್‌ಗಳ ಪ್ರಸಾರದಲ್ಲಿಯು ಜಿಯೋ ಮುಂದೆ

ಪ್ರಸ್ತುತ ಗ್ರಾಹಕರು ಹೈ-ಡೆಫಿನಿಷನ್ (ಹೆಚ್‌ಡಿ) ಟಿವಿ ಚಾನೆಲ್‌ ವೀಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಈ ವಿಭಾಗದಲ್ಲಿನ ಜಿಯೋ ಮತ್ತು ಏರ್‌ಟೆಲ್‌ ಪ್ಲಾಟ್‌ಫಾರ್ಮ್‌ಗಳ ನಡುವಿನ ವ್ಯತ್ಯಾಸಗಳು ಇವೆ. ಜಿಯೋ ಟಿವಿ ಒಟ್ಟು 158 ಹೆಚ್‌ಡಿ ಚಾನೆಲ್‌ಗಳ ಪ್ರಸಾರದ ಸೌಲಭ್ಯವನ್ನು ಪಡೆದಿದ್ದರೇ, ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಆಪ್‌ನಲ್ಲಿ 64 ಹೆಚ್‌ಡಿ ಚಾನೆಲ್‌ಗಳು ಲಭ್ಯ ಆಗುತ್ತವೆ. ಹೀಗಾಗಿ ಹೆಚ್‌ಡಿ ಚಾನೆಲ್‌ಗಳಲ್ಲಿಯು ಜಿಯೋ ತನ್ನ ಪ್ರಾಬಲ್ಯ ಹೊಂದಿದೆ.

ಕಾರ್ಟೂನ್ ಚಾನೆಲ್ಸ್‌

ಕಾರ್ಟೂನ್ ಚಾನೆಲ್ಸ್‌

ಜಿಯೋ ಟಿವಿ ಆಪ್‌ನಲ್ಲಿ ಪ್ರಾದೇಶಿಕ ಚಾನೆಲ್‌ಗಳ ಜೊತೆಗೆ ಕಾರ್ಟೂನ್ ಚಾನೆಲ್‌ಗಳು ಸಹ ಲಭ್ಯವಾಗಲಿವೆ. ಕಾರ್ಟೂನ್‌ ನೆಟ್‌ವರ್ಕ್, ಪೊಗೊ, ನಿಕ್ ಮತ್ತು ಬಿಬಿಸಿ ಅರ್ಥ್ ಸೇರಿದಂತೆ ಇನ್ನೂ ಹಲವಾರು ಚಾನೆಲ್‌ಗಳ ಪಟ್ಟಿಯನ್ನು ಜಿಯೋ ಟಿವಿ ಆಪ್‌ ಒಳಗೊಂಡಿದೆ.

ಪ್ರಾದೇಶಿಕ ಭಾಷೆಗಳ ಚಾನೆಲ್‌ಗಳು

ಪ್ರಾದೇಶಿಕ ಭಾಷೆಗಳ ಚಾನೆಲ್‌ಗಳು

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್‌ಗೆ ಹೋಲಿಸಿದರೆ, ಜಿಯೋ ಟಿವಿ ಅಧಿಕ ಪ್ರಾದೇಶಿಕ ಭಾಷೆಗಳ ಚಾನೆಲ್‌ಗಳು ಸೌಲಭ್ಯ ಪಡೆದಿದೆ. ಜಿಯೋ ಟಿವಿ ಆಪ್‌ನಲ್ಲಿ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಪ್ರತಿಯೊಂದು ಭಾಷೆಯಲ್ಲೂ ಹೆಚ್ಚಿನ ಚಾನೆಲ್‌ಗಳನ್ನು ಹೊಂದಿದೆ. ಆದ್ರೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ತನ್ನ ವೇದಿಕೆಯಲ್ಲಿ 107 ಹಿಂದಿ ಚಾನೆಲ್‌ಗಳು, ಹಾಗೂ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 41 ತಮಿಳು ಚಾನೆಲ್‌ಗಳನ್ನು ಹೊಂದಿದೆ. (ಜಿಯೋ ಟಿವಿ 211 ಹಿಂದಿ ಚಾನೆಲ್‌ಗಳು ಹಾಗೂ 61 ತಮಿಳ ಚಾನೆಲ್‌ಗಳು)

ವಿಡಿಯೊ ಕಂಟೆಂಟ್‌

ವಿಡಿಯೊ ಕಂಟೆಂಟ್‌

ಜಿಯೋ ಮತ್ತು ಏರ್‌ಟೆಲ್‌ ಪ್ಲಾಟ್‌ಫಾರ್ಮ್‌ಗಳು ಹೆಚ್ಚಾಗಿ ಒಂದೇ ರೀತಿಯ ವಿಷಯ ಪಾಲುದಾರರನ್ನು ಹೊಂದಿವೆ, ಆದಾಗ್ಯೂ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಕ್ಯೂರಿಯಾಸಿಟಿ ಸ್ಟ್ರೀಮ್ ಮತ್ತು ಹೂಕ್‌ನೊಂದಿಗೆ ವಿಶೇಷವಾದ ಒಪ್ಪಂದಗಳನ್ನು ಹೊಂದಿದ್ದರೆ, ಜಿಯೋ ಟಿವಿ ಸನ್‌ಎನ್‌ಎಕ್ಸ್‌ಟಿ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ಗೆ ವಿಶೇಷ ಪ್ರವೇಶವನ್ನು ಹೊಂದಿದೆ. Zee-ನೆಟವರ್ಕ್ ಸಂಸ್ಥೆಯ 32 ಚಾನೆಲ್‌ಗಳು ಏರ್‌ಟೆಲ್‌ನಲ್ಲಿ ಲಭ್ಯ ಇವೆ. ಜಿಯೋ ಟಿವಿಯಲ್ಲಿ 29 ಚಾನೆಲ್‌ಗಳು ಲಭ್ಯವಾಗುತ್ತವೆ.

Most Read Articles
Best Mobiles in India

English summary
JioTV hosts 158 HD channels on its platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X