ಭಾರತದಲ್ಲಿ ಸೋನಿಕ್ TWS ಇಯರ್‌ಬಡ್ಸ್‌ ಲಾಂಚ್‌; ಪ್ರೀಮಿಯಂ ನೋಟ

|

ಭಾರತದಲ್ಲಿ ಈಗಾಗಲೇ ಹಲವಾರು ಕಂಪೆನಿಗಳು ಹಲವಾರು ಫೀಚರ್ಸ್‌ ಆಯ್ಕೆ ನೀಡಿ ತಮ್ಮ ಇಯರ್‌ಬಡ್ಸ್‌ ಗಳನ್ನು ಲಾಂಚ್‌ ಮಾಡಿವೆ. ಅದರಲ್ಲೂ ಬಾರತೀಯರು ಕೈಗೆಟಕುವ ಬೆಲೆ ಹಾಗೂ ಬ್ಯಾಟರಿ ಸಾಮರ್ಥ್ಯ, ಗುಣಮಟ್ಟಕ್ಕೆ ಹೆಚ್ಚಿನ ಗಮನ ಹರಿಸುವುದರಿಂದ ಇದರ ಆಧಾರದ ಮೇಲೆಯೇ ಕೆಲವು ಕಂಪೆನಿಗಳು ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡುತ್ತಿರುವುದು ಸಂತಸದ ವಿಚಾರ. ಇದರೊಂದಿಗೆ ಜಸ್ಟ್ ಕೊರ್ಸೆಕಾ ತನ್ನ ನಾವೀನ್ಯತೆ, ವಿನ್ಯಾಸ ಮತ್ತು ಗುಣಮಟ್ಟದ ಆಧಾರದ ಮೇಲೆ ತನ್ನ ಡಿವೈಸ್‌ಗಳನ್ನು ಲಾಂಚ್‌ ಮಾಡುತ್ತಿದ್ದು, ಈಗ ಇದೇ ಆಧಾರದಲ್ಲಿ ಹೊಸ ಇಯರ್‌ಬಡ್ಸ್‌ಒಂದನ್ನು ಲಾಂಚ್‌ ಮಾಡಿದೆ.

ಕಂಪೆನಿ

ಭಾರತದಲ್ಲಿ ಈಗಾಗಲೇ ಹಲವಾರು ಕಂಪೆನಿಗಳು ಹಲವಾರು ಫೀಚರ್ಸ್‌ ಆಯ್ಕೆ ನೀಡಿ ತಮ್ಮ ಇಯರ್‌ಬಡ್ಸ್‌ ಗಳನ್ನು ಲಾಂಚ್‌ ಮಾಡಿವೆ. ಅದರಲ್ಲೂ ಬಾರತೀಯರು ಕೈಗೆಟಕುವ ಬೆಲೆ ಹಾಗೂ ಬ್ಯಾಟರಿ ಸಾಮರ್ಥ್ಯ, ಗುಣಮಟ್ಟಕ್ಕೆ ಹೆಚ್ಚಿನ ಗಮನ ಹರಿಸುವುದರಿಂದ ಇದರ ಆಧಾರದ ಮೇಲೆಯೇ ಕೆಲವು ಕಂಪೆನಿಗಳು ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡುತ್ತಿರುವುದು ಸಂತಸದ ವಿಚಾರ. ಇದರೊಂದಿಗೆ ಜಸ್ಟ್ ಕೊರ್ಸೆಕಾ ತನ್ನ ನಾವೀನ್ಯತೆ, ವಿನ್ಯಾಸ ಮತ್ತು ಗುಣಮಟ್ಟದ ಆಧಾರದ ಮೇಲೆ ತನ್ನ ಡಿವೈಸ್‌ಗಳನ್ನು ಲಾಂಚ್‌ ಮಾಡುತ್ತಿದ್ದು, ಈಗ ಇದೇ ಆಧಾರದಲ್ಲಿ ಹೊಸ ಇಯರ್‌ಬಡ್ಸ್‌ಒಂದನ್ನು ಲಾಂಚ್‌ ಮಾಡಿದೆ.

ಕೊರ್ಸೆಕಾ

ಹೌದು, ಭಾರತದಲ್ಲಿ ಜಸ್ಟ್ ಕೊರ್ಸೆಕಾ ಸಂಸ್ಥೆ ಸೋನಿಕ್ TWS ಇಯರ್‌ಬಡ್‌ಗಳನ್ನು ಲಾಂಚ್‌ ಮಾಡಿದ್ದು, ಈ ಇಯರ್‌ಬಡ್ಸ್‌ ಪ್ರೀಮಿಯಂ ಆಗಿ ಕಾಣುತ್ತಿದೆ. ಚಿನ್ನದಿಂದ ಮಾಡಿದ ಡಿವೈಸ್‌ನಂತೆ ಇದು ಕಂಡುಬರುತ್ತಿದ್ದು, ಮೂರು ಬಣ್ಣದ ವೇರಿಯಂಟ್‌ನಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಇಯರ್‌ಬಡ್ಸ್‌ ಒಂದು ಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ ಐದು ಗಂಟೆಗಳ ಪ್ಲೇ ಬ್ಯಾಕ್‌ ನೀಡಲಿದೆ. ಹಾಗಿದ್ರೆ ಇದರ ಬೆಲೆ ಎಷ್ಟು?, ಪ್ರಮುಖ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಜಸ್ಟ್ ಕೊರ್ಸೆಕಾ ಸೋನಿಕ್ TWS ಇಯರ್‌ಬಡ್‌ ಆರ್ಗ್ಯಾನಿಕ್‌ ಗ್ಲಾಸ್‌ ಮತ್ತು ಪ್ರೀಮಿಯಂ ಮಿಶ್ರಲೋಹದ ಸಂಯೋಜನೆಯೊಂದಿಗೆ ನಿರ್ಮಿಸಲಾಗಿದ್ದು, ಬಳಕೆ ಮಾಡುವಾದ ವಿಶೇಷ ಅನುಭವ ನೀಡಲಿದೆ. ಹಾಗೆಯೇ ವರ್ಧಿತ ಆಡಿಯೊ ಗುಣಮಟ್ಟದೊಂದಿಗೆ ಹಿತಕರವಾದ ಫಿಟ್‌ ಅನುಭವವನ್ನು ಇದು ನೀಡಲಿದೆ.

ಇಯರ್‌ಬಡ್‌

ಈ ಇಯರ್‌ಬಡ್‌ ಟಚ್ ಸೆನ್ಸಿಟಿವ್ ಬಟನ್‌ ಆಯ್ಕೆ ಪಡೆದುಕೊಂಡಿದ್ದು, ಇದು ವಾಯ್ಸ್‌ ಅಸಿಸ್ಟೆಂಟ್‌ ಆಕ್ಟಿವ್‌ ಮಾಡಲು, ಕರೆಗೆ ಉತ್ತರಿಸಲು, ಮ್ಯೂಸಿಕ್‌ ಟ್ರ್ಯಾಕ್ ಬದಲಾವಣೆ ಮಾಡಲು ಹಾಗೂ ವಾಲ್ಯೂಮ್ ಹೊಂದಾಣಿಕೆ ಮಾಡಲು ಸಹಕಾರಿಯಾಗಿದೆ. ಜೊತೆಗೆ ಎರಡೂ ಇಯರ್‌ಬಡ್‌ಗಳು 10mm ಟ್ರಂಪೆಟ್ ಡ್ರೈವರ್‌ಗಳೊಂದಿಗೆ ಸಜ್ಜುಗೊಂಡಿದ್ದು, ಒಳ್ಳೆಯ ಸೌಂಡ್‌ ನೀಡಲಿವೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಒಮ್ಮೆ ಚಾರ್ಜಿಂಗ್‌ ಕೇಸ್‌ ಅನ್ನು ಪೂರ್ಣ ಚಾರ್ಜ್‌ ಮಾಡಿದರೆ ಈ ಇಯರ್‌ಬಡ್ಸ್‌ 22 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಈ ಚಾರ್ಜಿಂಗ್‌ ಕೇಸ್‌ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್ ಪೋರ್ಟ್‌ ಬಳಕೆದಾರರಿಗೆ 90 ನಿಮಿಷಗಳಲ್ಲಿ ಬ್ಯಾಟರಿಯನ್ನು ಪೂರ್ಣ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಇದರ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಇದರ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಈ ಇಯರ್‌ಬಡ್ಸ್‌ಗೆ 4,999 ರೂ. ಗಳ ಆಫರ್‌ ಬೆಲೆ ನಿಗದಿ ಮಾಡಲಾಗಿದೆ. ಅದರಲ್ಲೂ ಆಕರ್ಷಕವಾಗಿರುವ ಗೋಲ್ಡ್‌ ಆವೃತ್ತಿ ಮೊದಲ 500 ಗ್ರಾಹಕರಿಗೆ ಮಾತ್ರ ಲಭ್ಯವಿದೆ ಎಂದು ಕಂಪೆನಿ ಹೇಳಿಕೆ ನೀಡಿದೆ. ಇದರ ಜೊತೆಗೆ ಈ ಇಯರ್‌ಬಡ್ಸ್ ಕಪ್ಪು, ನೀಲಿ ಬಣ್ಣದೊಂದಿಗೆ ಮೂರು ವೇರಿಯಂಟ್‌ನಲ್ಲಿ ಲಭ್ಯವಿದೆ. ನಿಮಗೆ ಈ ಇಯರ್‌ಬಡ್ಸ್‌ ಬೇಕೆಂದರೆ ಕಂಪೆನಿಯ ಅಧಿಕೃತ ಸೈಟ್‌ ಹಾಗೂ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಇತರೆ ರಿಟೇಲರ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಭಾರತ

ಭಾರತದಲ್ಲಿ ಕೆಲವು ದಿನಗಳ ಹಿಂದೆ ಪ್ಲೇ ಕಂಪೆನಿ ಮತ್ತೊಂದು TWS ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಿದ್ದು, ಇದು ಪ್ಲೇಗೋ ಸರಣಿಗೆ ಸೇರಿಕೊಂಡಿದೆ. ಈ ಹೊಸ ಇಯರ್‌ಬಡ್ಸ್‌ಗೆ ಪ್ಲೇಗೋ ಡುರಾ ಎಂದು ಹೆಸರಿಸಲಾಗಿದ್ದು, ಈ ಇಯರ್‌ಬಡ್ಸ್ 10 ಗಂಟೆಗಳ ಚಾರ್ಜಿಂಗ್ ನೊಂದಿಗೆ ಒಟ್ಟು 30 ಗಂಟೆಗಳ ಪ್ಲೇ ಟೈಮ್‌ ನೀಡಲಿದೆ. ಇದರೊಂದಿಗೆ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಆಯ್ಕೆ ಹಾಗೂ ಟಚ್‌ ಕಂಟ್ರೋಲ್ ಸೌಲಭ್ಯ ಪಡೆದಿದೆ.

ಪ್ಲೇಗೋ ಡುರಾ

ಪ್ಲೇಗೋ ಡುರಾ ಇಯರ್‌ಬಡ್ಸ್‌ಗೆ ಭಾರತದಲ್ಲಿ 1,499 ರೂ. ಗಳನ್ನು ನಿಗದಿ ಮಾಡಲಾಗಿದ್ದು, ಇದನ್ನೂ ಸಹ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಇನ್ನಿತರೆ ಇ- ಕಾಮರ್ಸ್‌ ಸೈಟ್‌ ಸೇರಿದಂತೆ ರಿಟೇಲರ್‌ ಸ್ಟೋರ್‌ಗಳಲ್ಲಿಯೂ ಖರೀದಿ ಮಾಡಬಹುದಾಗಿದೆ. ಈ ಇಯರ್‌ಬಡ್ಸ್‌ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
Just Corseca launches Sonique TWS earbuds in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X