ಈ ಪೋರ್ಟಲ್‌ನಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಸುಲಭವಾಗಿ ತಿಳಿಯಬಹುದು!

|

ಸರ್ಕಾರವು ಜನರಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ವೆಬ್‌ ಪೋರ್ಟಲ್‌ ಸೌಲಭ್ಯ ಇದೆ. ಅದಕ್ಕಾಗಿ ಕರ್ನಾಟಕ ಸರ್ಕಾರವು ಕರ್ನಾಟಕ ಸುವಿಧಾ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ಮೂಲಕ ಜನರು ಸರ್ಕಾರವು ಪ್ರಾರಂಭಿಸುವ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.

ಸಹಾಯ

ಸುವಿಧಾ ಪೋರ್ಟಲ್ ಮೂಲತಃ ಒಂದು ಸಮಗ್ರ ವೇದಿಕೆಯಾಗಿದ್ದು ಅದು ಜನರಿಗೆ ಯೋಜನೆಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಸುವಿಧಾ ಪೋರ್ಟಲ್, ಸೇವಾ ಸಿಂಧು ಪೋರ್ಟಲ್‌ಗಿಂತ ಭಿನ್ನವಾಗಿದೆ. ಸೇವಾ ಸಿಂಧು ಪೋರ್ಟಲ್ ಪ್ರಮಾಣಪತ್ರಗಳು ಅಥವಾ ದಾಖಲೆಗಳಂತಹ ಸೇವೆಗಳಿಗೆ ಮೀಸಲಾಗಿದೆ. ಇನ್ನು ಸುವಿಧಾ ಪೋರ್ಟಲ್ ನೇರ ಪ್ರಯೋಜನವನ್ನು ಒಳಗೊಂಡಿರುವ ಕಲ್ಯಾಣ ಯೋಜನೆಗಳಿಗಾಗಿ ಇದೆ.

ಪೋರ್ಟಲ್

ಕರ್ನಾಟಕದಲ್ಲಿ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹೆಚ್ಚಿನ ಯೋಜನೆಗಳು ಇನ್ನೂ ಮ್ಯಾನುವಲಿ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಕೆಲವೊಮ್ಮೆ ಫಲಾನುಭವಿಗಳ ಸಂಖ್ಯೆಯು ನಿಗದಿಪಡಿಸಿದ ಬಜೆಟ್ ಅನ್ನು ಮೀರುತ್ತದೆ. ಈ ಸಂದರ್ಭದಲ್ಲಿ, ಈ ಪೋರ್ಟಲ್ ಯೋಜನೆಯ ಪ್ರಯೋಜನವನ್ನು ಹೆಚ್ಚು ಅಗತ್ಯವಿರುವ ಜನರಿಗೆ ಆದ್ಯತೆ ನೀಡುತ್ತದೆ. ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಅರ್ಹ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಬಹುದು ಎಂಬುದನ್ನು ಈ ಪೋರ್ಟಲ್ ಖಚಿತಪಡಿಸುತ್ತದೆ.

ಕಲ್ಯಾಣ

ಕರ್ನಾಟಕ ಸುವಿಧಾ ಪೋರ್ಟಲ್ ನೇರ ಲಾಭ ವರ್ಗಾವಣೆಯೊಂದಿಗೆ ಸಹ ಸಂಪರ್ಕ ಹೊಂದಿದೆ. ಆದ್ದರಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿ ಮಾಡಲಾಗುತ್ತದೆ. ಈಗಾಗಲೇ ಹಲವು ಕಲ್ಯಾಣ ಯೋಜನೆಗಳನ್ನು ಈ ಹೊಂದಿದ್ದು, ಶೀಘ್ರದಲ್ಲೇ ಮತ್ತಷ್ಟು ಕಲ್ಯಾಣ ಯೋಜನೆಗಳು ಈ ಪೋರ್ಟಲ್‌ನಲ್ಲಿ ಆನ್‌ಬೋರ್ಡ್ ಆಗಲಿವೆ. ಕರ್ನಾಟಕ ಸುವಿಧಾ ಪೋರ್ಟಲ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯೋಣ ಬನ್ನಿರಿ.

ಕರ್ನಾಟಕ ಸುವಿಧಾ ಪೋರ್ಟಲ್‌

ಕರ್ನಾಟಕ ಸುವಿಧಾ ಪೋರ್ಟಲ್‌

ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಡಿ ಅರ್ಜಿ ಸಲ್ಲಿಸಲು ಸೌಲಭ್ಯಗಳನ್ನು ಒದಗಿಸುವುದು ಕರ್ನಾಟಕ ಸುವಿಧಾ ಪೋರ್ಟಲ್‌ನ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಜನರು ಯೋಜನೆಗಳ ಪ್ರಯೋಜನವನ್ನು ಪಡೆಯಲು ವಿವಿಧ ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ ಇದರಿಂದ ಜನರ ಸಮಯವು ಉಳಿಯುತ್ತೆ ಹಾಗೂ ಪಾರದರ್ಶಕ ವ್ಯವಸ್ಥೆ ಸಹ ತರುತ್ತದೆ. ಜನರು ತಮ್ಮ ಡೇಟಾವನ್ನು ಪೋರ್ಟಲ್‌ನಲ್ಲಿ ಒಮ್ಮೆ ಮಾತ್ರ ನಮೂದಿಸಬೇಕಾಗುತ್ತದೆ.

ಕರ್ನಾಟಕ ಸುವಿಧಾ ಪೋರ್ಟಲ್‌ನಲ್ಲಿ ನೋಂದಾಯಿಸಲು ಹೀಗೆ ಮಾಡಿ:

ಕರ್ನಾಟಕ ಸುವಿಧಾ ಪೋರ್ಟಲ್‌ನಲ್ಲಿ ನೋಂದಾಯಿಸಲು ಹೀಗೆ ಮಾಡಿ:

ಹಂತ 1: ಕರ್ನಾಟಕ ಸುವಿಧಾ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಂದರೆ suvidha.karnataka.gov.in.
ಹಂತ 2: ಹೋಮ್‌ ಪುಟದಲ್ಲಿ, ನೀವು ಸೈನ್ ಅಪ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಹಂತ 3: ಸೈನ್ ಅಪ್ ಪುಟವನ್ನು ಸ್ಕ್ರೀನ್‌ ಮೇಲೆ ಕಾಣಿಸುತ್ತದೆ.
ಹಂತ 4: ಈ ಪುಟದಲ್ಲಿ, ನಿಮ್ಮ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
ಹಂತ 5: ಈಗ ನೀವು ವಿನಂತಿ OTP ಅನ್ನು ಕ್ಲಿಕ್ ಮಾಡಬೇಕು

ಕ್ಲಿಕ್

ಹಂತ 6: ಅದರ ನಂತರ, ನೀವು OTP ಬಾಕ್ಸ್‌ಗೆ OTP ಅನ್ನು ನಮೂದಿಸಬೇಕು
ಹಂತ 7: ಈಗ ನೀವು ಸೈನ್ ಅಪ್ ಮೇಲೆ ಕ್ಲಿಕ್ ಮಾಡಬೇಕು
ಹಂತ 8: ನೋಂದಣಿ ಅರ್ಜಿ ನಿಮ್ಮ ಮುಂದೆ ಕಾಣಿಸುತ್ತದೆ
ಹಂತ 9: ನೋಂದಣಿ ಅರ್ಜಿನಲ್ಲಿ, ನೀವು ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಬೇಕು
ಹಂತ 10: ಈಗ ನೀವು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು
ಹಂತ 11: ಅದರ ನಂತರ, ನೀವು ರಿಜಿಸ್ಟರ್ ಅನ್ನು ಕ್ಲಿಕ್ ಮಾಡಬೇಕು

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

* ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
* ಆಧಾರ್ ಕಾರ್ಡ್
* ನಿವಾಸ ಪ್ರಮಾಣಪತ್ರ
* ಆದಾಯ ಪುರಾವೆ
* ವಯಸ್ಸಿನ ಪುರಾವೆ
* ಪಾಸ್‌ಪೋರ್ಟ್ ಸೈಜ್‌ ಪೋಟೊ
* ಮೊಬೈಲ್ ನಂಬರ
* ಇ-ಮೇಲ್ ಐಡಿ
* ಪಡಿತರ ಚೀಟಿ
* ಜಾತಿ ಪ್ರಮಾಣಪತ್ರ ಇತ್ಯಾದಿ

ಕರ್ನಾಟಕ ಸುವಿಧಾ ಪೋರ್ಟಲ್‌ನಲ್ಲಿ ಲಾಗಿನ್ ಮಾಡುವ ವಿಧಾನ:

ಕರ್ನಾಟಕ ಸುವಿಧಾ ಪೋರ್ಟಲ್‌ನಲ್ಲಿ ಲಾಗಿನ್ ಮಾಡುವ ವಿಧಾನ:

* ಕರ್ನಾಟಕ ಸುವಿಧಾ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
* ಹೋಮ್‌ಪೇಜ್‌ನಲ್ಲಿ, ನೀವು ಸೈನ್ ಇನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ಅದರ ನಂತರ ಹೊಸ ಸೈನ್ ಇನ್ ಪುಟವು ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುತ್ತದೆ.
* ಈಗ, ನೀವು ನಿಮ್ಮ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ ಅನ್ನು ನಮೂದಿಸಬೇಕು
* ಈಗ ನೀವು ಲಾಗಿನ್ ಅನ್ನು ಕ್ಲಿಕ್ ಮಾಡಬೇಕು
* ಈ ವಿಧಾನವನ್ನು ಅನುಸರಿಸುವ ಮೂಲಕ ನೀವು ಪೋರ್ಟಲ್‌ನಲ್ಲಿ ಲಾಗಿನ್ ಮಾಡಬಹುದು.

ಎಂಪರಿವಾಹನ-mParivahan

ಎಂಪರಿವಾಹನ-mParivahan

ಪ್ರತಿಯೊಬ್ಬ ವಾಹನ ಚಾಲಕರಿಗೂ ಈ ಆಪ್ ಉಪಯುಕ್ತವಾಗಿದೆ. ಚಾಲನಾ ಪರವಾನಗಿಯ ಪ್ರತಿ, ವಾಹನ ನೋಂದಣಿ ಪ್ರಮಾಣ ಪತ್ರಗಳ ಡಿಜಿಟಲ್ ಪ್ರತಿಯನ್ನು ಈ ಆಪ್‌ನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಟ್ರಾಫಿಕ್ ಪೊಲೀಸ್‌ರು ತಪಾಸಣೆಗೆ ತಡೆದಾಗ ಈ ಆಪ್‌ನಲ್ಲಿನ ಡಿಜಿಟಲ್ ದಾಖಲೆಗಳನ್ನು ತೋರಿಸಬಹುದಾಗಿದೆ.

ಕನ್ಸೂಮರ್ ಆಪ್- Consumer app

ಕನ್ಸೂಮರ್ ಆಪ್- Consumer app

ಕನ್ಸೂಮರ್ ಆಪ್ ಒಂದು ಗ್ರಾಹಕ ಸ್ನೇಹಿ ಆಪ್ ಆಗಿದ್ದು, ಈ ಆಪ್‌ನಲ್ಲಿ ಗ್ರಾಹಕರು ಅವರ ಕುಂದು ಕೊರತೆಗಳನ್ನು ಹಾಗೂ ತೊಂದರೇ ಆಗಿದ್ದರೇ ಆ ಬಗ್ಗೆ ದೂರು ಸಲ್ಲಿಸಬಹುದಾಗಿದೆ. ಹಿಂದಿ ಮತ್ತು ಇಂಗ್ಲಿಷ ಭಾಷೆಗಳ ಬೆಂಬಲ ಪಡೆದಿರುವ ಈ ಆಪ್‌ ಸುಮಾರು 60 ದಿನಗಳಲ್ಲಿ ಗ್ರಾಹಕರ ಕಂಪ್ಲೈಂಟ್ ಕ್ಲಿಯರ್ ಮಾಡುವ ವ್ಯವಸ್ಥೆಯನ್ನು ಹೊಂದಿದೆ.

ಮೈಗೋವ್- MyGov

ಮೈಗೋವ್- MyGov

ಈ ಆಪ್ ಸರ್ಕಾರದ ಕೆಲಸಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವ ಸಲುವಾಗಿ ಬಿಡುಗಡೆಯಾಗಿದೆ. ಬಳಕೆದಾರರು ವಿವಿಧ ಮಂತ್ರಾಲಯಗಳಿಗೆ ಮತ್ತು ಸಹಭಾಗಿತ್ವದ ಸಂಸ್ಥೆಗಳಿಗೆ ಹೊಸ ಐಡಿಯಾಗಳನ್ನು, ಕಮೆಂಟ್ , ಸಲಹೆಗಳನ್ನು ನೀಡಬಹುದಾಗಿದೆ. ಅದಲ್ಲದೇ ಹೊಸ ಯೋಜನೆಯ ಅಥವಾ ಕಾಯ್ದೆಯ ರೂಪಿಸುವಲ್ಲಿ ನೇರವಾಗಿ ಭಾಗವಹಿಸಬಹುದು.

Best Mobiles in India

English summary
Karnataka Suvidha Portal 2022: How to Online Registration and More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X