ಕ್ಯಾಸ್ಪರ್ಸ್ಕಿ ಯಿಂದ ಶಾಕಿಂಗ್ ಸುದ್ದಿ; ಸೈಬರ್ ಅಪರಾಧಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ

|

ಹೌದು, ಕ್ಯಾಸ್ಪರ್ಸ್ಕಿ ಪ್ರಮುಖ ಸೆಕ್ಯೂರಿಟಿ ಅಪ್ಲಿಕೇಶನ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಪ್ರತಿವರ್ಷವು ಡಿವೈಸ್‌ಗಳ ಭದ್ರತಾ ವಿಷಯ ಸಂಬಂಧ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಅದೇ ರೀತಿಯಲ್ಲಿ ಈ ವರ್ಷವೂ ಮಾಹಿತಿ ನೀಡಿದ್ದು, ಕಳೆದ 10 ತಿಂಗಳುಗಳಲ್ಲಿ ಪ್ರತಿದಿನ ಸರಾಸರಿ 400,000 ಹೊಸ ದುರುದ್ದೇಶಪೂರಿತ ಫೈಲ್‌ಗಳನ್ನು ಪತ್ತೆ ಮಾಡಿದೆ. ಪ್ರಮುಖ ವಿಷಯ ಎಂದರೆ ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 5% ಹೆಚ್ಚಳವಾಗಿದೆ.

ಕ್ಯಾಸ್ಪರ್ಸ್ಕಿ

ಹೌದು, ಕ್ಯಾಸ್ಪರ್ಸ್ಕಿ ಪ್ರಮುಖ ಸೆಕ್ಯೂರಿಟಿ ಅಪ್ಲಿಕೇಶನ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಪ್ರತಿವರ್ಷವು ಡಿವೈಸ್‌ಗಳ ಭದ್ರತಾ ವಿಷಯ ಸಂಬಂಧ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಅದೇ ರೀತಿಯಲ್ಲಿ ಈ ವರ್ಷವೂ ಮಾಹಿತಿ ನೀಡಿದ್ದು, ಕಳೆದ 10 ತಿಂಗಳುಗಳಲ್ಲಿ ಪ್ರತಿದಿನ ಸರಾಸರಿ 400,000 ಹೊಸ ದುರುದ್ದೇಶಪೂರಿತ ಫೈಲ್‌ಗಳನ್ನು ಪತ್ತೆ ಮಾಡಿದೆ. ಪ್ರಮುಖ ವಿಷಯ ಎಂದರೆ ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 5% ಹೆಚ್ಚಳವಾಗಿದೆ.

ಕ್ಯಾಸ್ಪರ್ಸ್ಕಿಯ ವಾರ್ಷಿಕ ಭದ್ರತಾ ಬುಲೆಟಿನ್

ಕ್ಯಾಸ್ಪರ್ಸ್ಕಿಯ ವಾರ್ಷಿಕ ಭದ್ರತಾ ಬುಲೆಟಿನ್

ಕ್ಯಾಸ್ಪರ್ಸ್ಕಿ ತಜ್ಞರು ಈ ಸಂಬಂಧ ವರದಿ ಮಾಡಿದ್ದು, ಪ್ರತಿದಿನ ಪತ್ತೆಯಾದ ransomware ಅನುಪಾತದಲ್ಲಿ 181% ಹೆಚ್ಚಳವನ್ನು ಕಂಡುಕೊಂಡಿದ್ದಾರೆ. ಈ ಸಂಶೋಧನೆಗಳು ಕ್ಯಾಸ್ಪರ್ಸ್ಕಿಯ ವಾರ್ಷಿಕ ಭದ್ರತಾ ಬುಲೆಟಿನ್‌ನ ಭಾಗವಾಗಿದ್ದು, ಕ್ಯಾಸ್ಪರ್ಸ್ಕಿ ಸೈಬರ್‌ ಸೆಕ್ಯುರಿಟಿ ಉದ್ಯಮದಲ್ಲಿನ ಪ್ರಮುಖ ಬದಲಾವಣೆಗಳ ಕುರಿತು ಭವಿಷ್ಯ ಮತ್ತು ವಿಶ್ಲೇಷಣಾತ್ಮಕ ವರದಿಗಳನ್ನು ನೀಡುತ್ತಾ ಬರುತ್ತಿದೆ.

ಒಟ್ಟು 122 ಮಿಲಿಯನ್ ದುರುದ್ದೇಶಪೂರಿತ ಫೈಲ್‌ ಪತ್ತೆ

ಒಟ್ಟು 122 ಮಿಲಿಯನ್ ದುರುದ್ದೇಶಪೂರಿತ ಫೈಲ್‌ ಪತ್ತೆ

ಕ್ಯಾಸ್ಪರ್ಸ್ಕಿ ಒಟ್ಟಾರೆಯಾಗಿ 2022 ರಲ್ಲಿ ಸರಿಸುಮಾರು 122 ಮಿಲಿಯನ್ ದುರುದ್ದೇಶಪೂರಿತ ಫೈಲ್‌ಗಳನ್ನು ಪತ್ತೆ ಮಾಡಿದೆ, ಹಿಂದಿನ ವರ್ಷಕ್ಕಿಂತ 6 ಮಿಲಿಯನ್ ಹೆಚ್ಚು ಫೈಲ್‌ಗಳು ಈ ವರ್ಷ ಪತ್ತೆಯಾಗಿವೆ. ಇದರೊಂದಿಗೆ ಕಂಪೆನಿಯ ಭದ್ರತಾ ಪರಿಹಾರದ ವಿಭಾಗದ ದಿನಕ್ಕೆ ಸರಾಸರಿ 9,500 ಎನ್‌ಕ್ರಿಪ್ಟಿಂಗ್ ಫೈಲ್‌ಗಳನ್ನು ಪತ್ತೆ ಮಾಡುತ್ತದಂತೆ. ಹಾಗೆಯೇ ಸೋಂಕಿತ ಡಿವೈಸ್‌ಗಳಲ್ಲಿ ಮಾಲ್ವೇರ್ ಅಥವಾ ಅನಗತ್ಯ ಆಪ್‌ಗಳ ಹೊಸ ಆವೃತ್ತಿಗಳನ್ನು ಇನ್‌ಸ್ಟಾಲ್‌ ಮಾಡುವ ದುರುದ್ದೇಶಪೂರಿತ ಪ್ರೋಗ್ರಾಂಗಳಾದ ಡೌನ್‌ಲೋಡರ್‌ಗಳ ಪಾಲು 142% ಹೆಚ್ಚಳವಾಗಿದೆ ಎಂದು ತಿಳಿಸಿದೆ.

ವಿಂಡೋಸ್‌ ಡಿವೈಸ್‌ಗಳೇ ಟಾರ್ಗೆಟ್‌

ವಿಂಡೋಸ್‌ ಡಿವೈಸ್‌ಗಳೇ ಟಾರ್ಗೆಟ್‌

ಈ ಪ್ರಕ್ರಿಯೆಯಲ್ಲಿ ಹೆಚ್ಚಾಗಿ 85% ವಿಂಡೋಸ್ ಡಿವೈಸ್‌ಗಳನ್ನೇ ಟಾರ್ಗೆಟ್‌ ಮಾಡಿಕೊಳ್ಳಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ವಿಂಡೋಸ್‌ ಡಿವೈಸ್‌ನಲ್ಲಿ ಸರಾಸರಿ 320,000 ದುರುದ್ದೇಶಪೂರಿತ ಫೈಲ್‌ಗಳನ್ನು ಪತ್ತೆ ಮಾಡಲಾಗಿದೆ. ಅದರಲ್ಲೂ ಪ್ರಮುಖ ವಿಷಯ ಎಂದರೆ ಮೈಕ್ರೋಸಾಫ್ಟ್ ಆಫೀಸ್ ಫಾರ್ಮ್ಯಾಟ್‌ಗಳಲ್ಲಿನ ದುರುದ್ದೇಶಪೂರಿತ ಫೈಲ್‌ಗಳ ಸಂಖ್ಯೆಯನ್ನು ಪ್ರತಿದಿನ ಹೆಚ್ಚಿಗೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ನಲ್ಲಿ 10% ಹೆಚ್ಚಳ

ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ನಲ್ಲಿ 10% ಹೆಚ್ಚಳ

ಹಾಗೆಯೇ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್ ಅನ್ನು ಗುರಿಯಾಗಿಸುವ ದುರುದ್ದೇಶಪೂರಿತ ಫೈಲ್‌ಗಳ ಹಂಚಿಕೆಯಲ್ಲಿ ಈ ವರ್ಷ 10% ಹೆಚ್ಚಳವಾಗಿದೆ. ಇದರ ಪರಿಣಾಮ ಆಂಡ್ರಾಯ್ಡ್ ಬಳಕೆದಾರರು ಸೈಬರ್ ಅಪರಾಧಿಗಳ ಕಳ್ಳಕಣ್ಣಿಗೆ ಗುರಿಯಾಗಿದ್ದಾರೆ.

ಕ್ಯಾಸ್ಪರ್ಸ್ಕಿಯ ವಾರ್ಷಿಕ ಭದ್ರತಾ ಬುಲೆಟಿನ್ ನಿಂದ ಹಲವು ಅನುಕೂಲ

ಕ್ಯಾಸ್ಪರ್ಸ್ಕಿಯ ವಾರ್ಷಿಕ ಭದ್ರತಾ ಬುಲೆಟಿನ್ ನಿಂದ ಹಲವು ಅನುಕೂಲ

ಕ್ಯಾಸ್ಪರ್ಸ್ಕಿಯ ವಾರ್ಷಿಕ ಭದ್ರತಾ ಬುಲೆಟಿನ್ ಸೈಬರ್ ಸೆಕ್ಯುರಿಟಿ ಉದ್ಯಮದಲ್ಲಿನ ಪ್ರಮುಖ ಬದಲಾವಣೆಗಳ ವರದಿಗಳು ತಿಳಿಯುವಂತೆ ಮಾಡುತ್ತದೆ. ಹಾಗೆಯೇ ಸೈಬರ್ ಭದ್ರತೆಯ ವಿವಿಧ ಅಂಶಗಳ ಮೇಲೆ ವಿಶ್ಲೇಷಣೆ ಮತ್ತು ಸಂಶೋಧನೆಗಳನ್ನು ಇದು ನಡೆಸುತ್ತದೆ. ಈ ಮೂಲಕ ಬಳಕೆದಾರರು ಎಚ್ಚೆತ್ತುಕೊಳ್ಳಲು ಸಹಕಾಯಕವಾಗಲಿದೆ.

ದುರುದ್ದೇಶಪೂರಿತ ಫೈಲ್‌ ಎಂದರೇನು?

ದುರುದ್ದೇಶಪೂರಿತ ಫೈಲ್‌ ಎಂದರೇನು?

ಕ್ಯಾಕರ್ಸ್‌ಗಳು ತಮ್ಮ ಇಷ್ಟಗಳನ್ನೂ ಪೂರೈಕೆ ಮಾಡಲು ಅಥವಾ ಬಳಕೆದಾರರಿಗೆ ಬೆದರಿಕೆ ಉಂಟು ಮಾಡಲು ಮಾಲ್‌ವೇರ್ ದಾಳಿ ನಡೆಸುತ್ತಾರೆ. ಇವು ನೀವು ಏನಾದರೂ ಡೌನ್ಲೋಡ್‌ ಮಾಡುವಾಗ ಜೊತೆಗೆ ಬಂದು ನಿಮ್ಮ ಡಿವೈಸ್‌ ಸೇರಿಕೊಳ್ಳುತ್ತವೆ. ಅದರಲ್ಲೂ ಇದಕ್ಕೆ ಹೆಚ್ಚು ಗುರಿಯಾಗುವವರು ದುರ್ಬಲ ಪಾಸ್‌ವರ್ಡ್‌ಗಳನ್ನು ಹೊಂದಿರುವರು. ಈ ದುರ್ಬಲ ಪಾಸ್‌ವರ್ಡ್‌ ಇದ್ದರೆ ಈ ಫೈಲ್‌ಗಳಿಂದ ಸುಲಭವಾಗಿ ಭೇದಿಸಬಹುದಾಗಿದೆ.

ಪಾಸ್‌ವರ್ಡ್‌ ಸ್ಟ್ರಾಂಗ್‌ ಆಗಿ ಇರಲಿ

ಪಾಸ್‌ವರ್ಡ್‌ ಸ್ಟ್ರಾಂಗ್‌ ಆಗಿ ಇರಲಿ

ಹಾಗೆಯೇ ಸಿಸ್ಟಮ್‌ಗಳಲ್ಲಿ ಹ್ಯಾಕರ್ಸ್‌ಗಳು ಆಳಕ್ಕೆ ಇಳಿಯಲು ಕಾರಣವಾಗುತ್ತದೆ. ಇದರಲ್ಲಿ ಸಂಸ್ಥೆ ಅಥವಾ ವ್ಯವಹಾರದ ದೈನಂದಿನ ಕಾರ್ಯಾಚರಣೆಗಳನ್ನು ಅಡ್ಡಿಪಡಿಸಬಹುದು. ಇತರ ಪ್ರಕಾರದ ಮಾಲ್‌ವೇರ್‌ಗಳು ಪ್ರಮುಖ ಫೈಲ್‌ಗಳನ್ನು ಲಾಕ್ ಮಾಡಬಹುದು, ಜಾಹೀರಾತುಗಳ ಮೂಲಕ ನಿಮ್ಮನ್ನು ಸ್ಪ್ಯಾಮ್ ಮಾಡಬಹುದು, ನಿಮ್ಮ ಕಂಪ್ಯೂಟರ್ ಅನ್ನು ನಿಧಾನಗೊಳಿಸಬಹುದು ಅಥವಾ ದುರುದ್ದೇಶಪೂರಿತ ವೆಬ್‌ಸೈಟ್‌ಗಳಿಗೆ ನಿಮ್ಮನ್ನು ಮರುನಿರ್ದೇಶಿಸಬಹುದಾಗಿದೆ. ಇದರಿಂದ ನೀವು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದರೆ ಅನವಶ್ಯಕ ಫೈಲ್‌ಗಳನ್ನು ಇನ್‌ಸ್ಟಾಲ್‌ ಮಾಡಬೇಡಿ, ಹಾಗೆಯೇ ನಿಮ್ಮ ಎಲ್ಲಾ ಖಾತೆಗಳಿಗೆ ಪಾಸ್‌ವರ್ಡ್‌ ಅನ್ನು ಸ್ಟ್ರಾಂಗ್‌ ಆಗಿ ರಚಿಸಿ.

Best Mobiles in India

English summary
Kaspersky release Report about Cybercriminals attacks users with 400,000 new malicious files daily.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X