ಜಿಯೋದಿಂದ ಮತ್ತೆ ಎರಡು ನಗರಗಳಿಗೆ 5G ಸೇವೆ ವಿಸ್ತರಣೆ!..ಇಲ್ಲಿದೆ ಮಾಹಿತಿ!

|

ಕೊಚ್ಚಿ ನಗರ ಮತ್ತು ಗುರುವಾಯೂರ್ ದೇವಾಲಯದ ಆವರಣದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋದಿಂದ ಟ್ರೂ 5G ಸೇವೆಗಳನ್ನು ಕೇರಳದಲ್ಲಿ ಪ್ರಾರಂಭಿಸಲಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಡಿಸೆಂಬರ್ 20ನೇ ತಾರೀಕಿನ ಮಂಗಳವಾರದಂದು ಕೊಚ್ಚಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕಾಗಿ ಜಿಯೋ ಟ್ರೂ 5G ಮತ್ತು ಜಿಯೋ ಟ್ರೂ 5G ಚಾಲಿತ ವೈ-ಫೈ ಸೇವೆಗಳನ್ನು ಡಿಜಿಟಲ್ ಆಗಿ ತಿರುವನಂತಪುರದಿಂದ ಪ್ರಾರಂಭಿಸಿದರು.

ಕ್ರಾಂತಿಕಾರಿ

ಜಿಯೋ ಸಮುದಾಯ ಕ್ಲಿನಿಕ್ ವೈದ್ಯಕೀಯ ಕಿಟ್ ಮತ್ತು ಕ್ರಾಂತಿಕಾರಿ ಎಆರ್‌ (AR)- ವಿಆರ್‌ (VR) ಸಾಧನವಾದ ಜಿಯೋ ಗ್ಲಾಸ್ (Jio Glass) ಮೂಲಕ ಆರೋಗ್ಯ ಕ್ಷೇತ್ರದಲ್ಲಿ 5G ಬಳಕೆಯ ಪ್ರಯೋಜನಗಳನ್ನು ಜಿಯೋ ಪ್ರದರ್ಶಿಸಿದೆ. ಈ ಪ್ರಯೋಜನಗಳು ಕೇರಳದ ಜನರ ಜೀವನದಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತರುತ್ತವೆ.

ತಿರುವನಂತಪುರದಲ್ಲಿ

ಕೇರಳದಲ್ಲಿ 5ಜಿ ನೆಟ್‌ವರ್ಕ್ ಅನ್ನು ನಿಯೋಜಿಸಲು ಜಿಯೋ ರೂ. 6000 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ ಮತ್ತು ಇದು ನಮ್ಮ ರಾಜ್ಯದ ಬಗ್ಗೆ ಅವರ ಬದ್ಧತೆಯನ್ನು ತೋರಿಸುತ್ತದೆ. ಅವರು ಈ ತಿಂಗಳ ಅಂತ್ಯದ ವೇಳೆಗೆ ತಿರುವನಂತಪುರದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ, ನಂತರ ಜನವರಿ 2023ರ ವೇಳೆಗೆ ತ್ರಿಶೂರ್, ಕೋಳಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ವಿಸ್ತರಿಸಲಿದ್ದಾರೆ. 2023ರ ಡಿಸೆಂಬರ್ ವೇಳೆಗೆ ಕೇರಳದ ಪ್ರತಿ ಹೋಬಳಿ ಮತ್ತು ತಾಲೂಕುಗಳು ಜಿಯೋ 5G ಸೇವೆಗಳನ್ನು ಹೊಂದಿರುತ್ತವೆ.

ವ್ಯಾಪಾರದ

ಜಿಯೋ ಟ್ರೂ 5G ಸೇವೆಗಳ ಪ್ರಾರಂಭದೊಂದಿಗೆ ಕೇರಳವು ಅತ್ಯುತ್ತಮ ದೂರಸಂಪರ್ಕ ಜಾಲವನ್ನು ಮಾತ್ರ ಪಡೆಯುತ್ತಿಲ್ಲ, ಆದರೆ ಇ-ಆಡಳಿತ, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಮತ್ತು ಎಸ್‌ಎಂಇ ವ್ಯಾಪಾರದ ಕ್ಷೇತ್ರಗಳಲ್ಲಿ ಬೆಳವಣಿಗೆಯ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ನಾಗರಿಕರು ಮತ್ತು ಸರ್ಕಾರವು ನೈಜ ಸಮಯದ ಆಧಾರದ ಮೇಲೆ ಸಂಪರ್ಕದಲ್ಲಿರಲು 5ಜಿ ಅನುವು ಮಾಡಿಕೊಡುತ್ತದೆ. ಅಂತಿಮ ಬಳಕೆದಾರರಿಗೆ ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ.

ಆರ್ಟಿಫಿಷಿಯಲ್

ಕೇರಳ ಸರ್ಕಾರವು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯ ಮೇಲೆ ವಿಶೇಷ ಗಮನ ಹೊಂದಿದೆ ಮತ್ತು ರಾಜ್ಯದಲ್ಲಿ 5G ಸೇವೆಗಳ ಆಗಮನವು ಐಒಟಿ (IoT), ಬ್ಲಾಕ್‌ಚೈನ್ (Blockchain), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ (AI), ಮಶೀನ್‌ ಲರ್ನಿಂಗ್ ಮತ್ತು ಡೇಟಾ ಅನಾಲಿಟಿಕ್ಸ್‌ನಂತಹ ನವ ತಂತ್ರಜ್ಞಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಟಾರ್ಟ್-ಅಪ್‌ಗಳಿಗೆ ಉತ್ತಮ ಉತ್ತೇಜನ ನೀಡುತ್ತದೆ. 5G ಆಗಮನವು ಕೇರಳದಲ್ಲಿ ಈ ಸ್ಟಾರ್ಟ್‌ಅಪ್‌ಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ ಹಾಗೂ ಅವುಗಳ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುವುದಕ್ಕೆ ರೆಕ್ಕೆಗಳನ್ನು ನೀಡುತ್ತದೆ.

ಜಿಯೋ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು ಮಾತನಾಡಿ, 'ಕೇರಳದ ಕೊಚ್ಚಿ ಮತ್ತು ಗುರುವಾಯೂರ್ ದೇವಸ್ಥಾನದಲ್ಲಿ ಜಿಯೋ ಟ್ರೂ 5G ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಶೀಘ್ರದಲ್ಲೇ ಜಿಯೋ ಟ್ರೂ 5G ನೆಟ್‌ವರ್ಕ್ ಕೇರಳದ ಉದ್ದಗಲಕ್ಕೂ ವಿಸ್ತರಿಸಲಿದೆ. ಇಲ್ಲಿ ಇರುವ ಏಕೈಕ 5G ನೆಟ್‌ವರ್ಕ್ ಜಿಯೋ ಆಗಿದೆ,' ಎಂದಿದ್ದಾರೆ.

ತಲುಪಿಸಲು

ಪ್ರತಿ ಭಾರತೀಯರಿಗೂ ಟ್ರೂ-5G ಅನ್ನು ತಲುಪಿಸಲು ಜಿಯೋ ಇಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೇರಳವನ್ನು ಡಿಜಿಟಲೈಸ್ ಮಾಡಲು, ಅದನ್ನು ಮುಂದಕ್ಕೆ ಒಯ್ಯಲು ಬೆಂಬಲ ನೀಡಿದ ಮುಖ್ಯಮಂತ್ರಿ ಮತ್ತು ಕೇರಳ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.

ಜಿಬಿಪಿಎಸ್

ಡಿಸೆಂಬರ್ 20ರಿಂದ ಕೊಚ್ಚಿ ಮತ್ತು ಗುರುವಾಯೂರ್‌ನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ, ಆ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್ + ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಬಹುದು.

Best Mobiles in India

English summary
HON'BLE CHIEF MINISTER OF KERALA SHRI. PINARAYI VIJAYAN INAUGURATES JIO TRUE 5G IN KOCHI CITY & GURUVAYUR TEMPLE.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X