ಅನಾಥ ಮಕ್ಕಳಿಗೆ ಅಡುಗೆ ಮಾಡುವ ಬಾಣಸಿಗ ಈ 'ಯೂಟ್ಯೂಬರ್'!

|

ಪ್ರತಿಭೆಯನ್ನು ಪ್ರದರ್ಶಿಸಲು ಟೆಕ್ನಾಲಜಿ ಇಂದು ಹಲವು ಅವಕಾಶಗಳ ವೇದಿಕೆಯನ್ನು ಕಲ್ಪಿಸಿದ್ದು, ಅವುಗಳಲ್ಲಿ ಗೂಗಲ್ ಸಂಸ್ಥೆಯ ಯೂಟ್ಯೂಬ್‌ ಟ್ಯಾಲೆಂಟ್ ತೋರಿಸುವ ಜೊತೆಗೆ ಹಣ ಗಳಿಕೆಯನ್ನು ಮಾಡಬಹುದಾದ ವೇದಿಕೆ ಆಗಿದೆ. ಅನೇಕರು ಯೂಟ್ಯೂಬ್‌ನಲ್ಲಿ ವಿವಿಧ ವಿಷಯಗಳ ಯೂಟ್ಯೂಬ್ ಚಾನೆಲ್ ತೆರೆದು ಹಣಗಳಿಸುತ್ತಿದ್ದಾರೆ ಅವರ ನಡುವೆ 'ನವಾಬ್ಸ್ ಕಿಚನ್' ಯೂಟ್ಯೂಬ್ ಚಾನೆಲ್‌ನ ವ್ಯಕ್ತಿ ಮಾತ್ರ ಸ್ವಲ್ಪ ಭಿನ್ನವಾಗಿ ಕಾಣುತ್ತಾರೆ.

ಅನಾಥ ಮಕ್ಕಳಿಗೆ ಅಡುಗೆ ಮಾಡುವ ಬಾಣಸಿಗ ಈ 'ಯೂಟ್ಯೂಬರ್'!

ಹೌದು, ಹೈದ್ರಾಬಾದ ಮೂಲದ ಖ್ವಾಜಾ ಮೋಯಿನುದ್ದಿನ್ ಅವರು 'ನವಾಬ್ಸ್ ಕಿಚನ್' ಹೆಸರಿನ ಯೂಟ್ಯೂಬ್ ಚಾನಲ್‌ ನಡೆಸುತ್ತಿದ್ದು, ಇವರು ಮಾಡುವ ವೇರೈಟಿ ನಾನ್‌ವೆಜ್, ದೊಡ್ಡ ಗಾತ್ರದ ಕೇಕ್, ಅಮ್ಲೇಟ್‌ ಖ್ಯಾದ್ಯಗಳಿಂದ ಚಾನಲ್ ಸಬ್‌ಸ್ಕ್ರೈಬರ್ಸ್‌ ಸಂಖ್ಯೆ ಒಂದು ಮಿಲಿಯನ್‌ಗಿಂತಲೂ ಅಧಿಕವಾಗಿದೆ. ಈ ನಡುವೆ ಅವರು ಪ್ರತಿ ತಿಂಗಳು ಅನಾಥಾಶ್ರಮದ ಸುಮಾರು 1200 ಮಕ್ಕಳಿಗೆ ಅವರಿಗೆ ಇಷ್ಟವಾದ ತರಹೇವಾರಿ ತಿಂಡಿ ತಿನಿಸುಗಳನ್ನು ಮಾಡಿ ಕೊಡುವ ಬಾಣಸಿಗರಾಗಿದ್ದಾರೆ. ಆ ಮೂಲಕ ಅವರನ್ನು ಖುಷಿ ಪಡಿಸುವ ಕೆಲಸ ಮಾಡುತ್ತಿದ್ದಾರೆ.

ಅನಾಥ ಮಕ್ಕಳಿಗೆ ಅಡುಗೆ ಮಾಡುವ ಬಾಣಸಿಗ ಈ 'ಯೂಟ್ಯೂಬರ್'!

ಮೋಯಿನುದ್ದಿನ್ ಅವರು ಯೂಟ್ಯೂಬ್ ಚಾನಲ್ ಆರಂಭಿಸುವುದಕ್ಕೂ ಮೊದಲು ಹೈದ್ರಾಬಾದನ ಪ್ರಮುಖ ಸುದ್ದಿ ವಾಹಿನಿನೊಂದರಲ್ಲಿ ಪತ್ರಕರ್ತರಾಗಿರು. ಆದ್ರೆ ಮೋಯಿನುದ್ದಿನ್ ಅವರಿಗೆ ಸ್ವಂತ ಏನನ್ನಾದರೂ ಮಾಡಬೇಕೆ ಎನ್ನುವ ತುಡಿತ ಇತ್ತು. ಆಗ ಅವರ ಆಲೋಚನೆಗೆ ಬಂದದ್ದೆ ಅಡುಗೆ ಚಾನಲ್ ಶುರುಮಾಡುವ ಐಡಿಯಾ. ಹೀಗೆ ಶುರುವಾದ ಐಡಿಯಾ ಇಂದು ನಿರೀಕ್ಷೆಯಂತೆ ಜನಪ್ರಿಯತೆ ಗಳಿಸುತ್ತಿದೆ. ಅವರ ನವಾಬ್ಸ್ ಕಿಚನ್ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ನಾನ್‌ವೆಜ್ ಅಡುಗೆ

ನಾನ್‌ವೆಜ್ ಅಡುಗೆ

ಮೋಯಿನುದ್ದಿನ್ ಹೊರಾಂಗಣದಲ್ಲಿ ಅಡುಗೆ ಮಾಡುವುದು ವಿಶೇಷವಾಗಿದ್ದು, ಅವರು ಮಾಡುವ ಖ್ಯಾದ್ಯಗಳಲ್ಲಿ ನಾನ್‌ವೆಜ್ ಪ್ರಮುಖವಾದ ಅಡುಗೆ ಆಗಿದೆ. ನಾನ್‌ವೆಜ್‌ನಲ್ಲಿ ಸ್ಪೆಷಲ್ ತಂದೂರಿ, ಬಿರಿಯಾನಿ ರೆಸಪಿಗಳ ವಿಡಿಯೊಗಳು ಹೆಚ್ಚು. ದೊಡ್ಡ ಗಾತ್ರದಲ್ಲಿ ಇವರು ತಯಾರಿಸಿದ ಅಮ್ಲೆಟ್‌, ನೂಡೆಲ್ಸ್ ಮತ್ತು ಬ್ಲ್ಯಾಕ್‌ ಫಾರೆಸ್ಟ್‌ ಕೇಕ್ ವಿಡಿಯೊಗಳು ಹೆಚ್ಚು ವೀಕ್ಷಣೆ ಮಾಡಿದ್ದಾರೆ.

ಪತ್ರಕರ್ತನಾದ ಯೂಟ್ಯೂಬ್ ಸ್ಟಾರ್

ಪತ್ರಕರ್ತನಾದ ಯೂಟ್ಯೂಬ್ ಸ್ಟಾರ್

ಮೊದಲು ಪತ್ರಕರ್ತರಾಗಿದ್ದ ಮೋಯಿನುದ್ದಿನ್ ಆ ಹುದ್ದೆಯನ್ನು ಬಿಟ್ಟು, 2017ರಲ್ಲಿ ಗೆಳೆಯರಾದ ಶ್ರೀನಾಥ ಮತ್ತು ಭಗತ್ ಜೊತೆ ಸೇರಿ ನವಾಬ್ಸ್‌ ಕಿಚನ್ ಯೂಟ್ಯೂಬ್ ಚಾನಲ್ ಆರಂಭಿಸಿದರು. ಮೋಯಿನುದ್ದಿನ್ ತರಹೇವಾರಿ ಅಡುಗೆ ಮಾಡುತ್ತಾರೆ ಮತ್ತು ಅವರ ಗೆಳೆಯರು ವಿಡಿಯೊ ಮಾಡುವುದು ಮತ್ತು ಎಡಿಟ್ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

ಚಾನಲ್ ಮುಚ್ಚುವ ಸ್ಥಿತಿ

ಚಾನಲ್ ಮುಚ್ಚುವ ಸ್ಥಿತಿ

ಇರುವ ಉದ್ಯೋಗ ಬಿಟ್ಟು ಅಡುಗೆ ಚಾನಲ್ ಆರಂಭಿಸಿದ ಮೋಯಿನುದ್ದಿನ್ ಅವರಿಗೆ ಚಾನೆಲ್ ಶುರುಮಾಡಿದ ಸ್ಪಲ್ಪ ದಿನಗಳಲ್ಲೇ ಹಣಕಾಸಿನ ಸಂಕಷ್ಟ ಎದುರಾಯಿತು. ಆಗ ಅವರ ಬಳಿ ಕೇವಲ 5000ರೂಪಾಯಿಗಳು ಮಾತ್ರ ಉಳಿದಿದ್ದವು, ಕೊನೆಯದೊಂದು ವಿಡಿಯೊ ಮಾಡಿ ನವಾಬ್ ಕಿಚನ್ಸ್‌ ಅಡುಗೆ ಚಾನೆಲ್ ಮುಚ್ಚಿ ಮತ್ತೆ ಉದ್ಯೋಗಕ್ಕೆ ಹೋರಡುವ ಆಲೋಚನೆಗಳನ್ನು ಮಾಡಿದ್ದರು.

ಕೈ ಹಿಡಿದ ಕೊನೆ ವಿಡಿಯೊ

ಕೈ ಹಿಡಿದ ಕೊನೆ ವಿಡಿಯೊ

ಚಾನಲ್ ನಡೆಸಲು ಹಣವಿಲ್ಲದಾಗ ಮಾಡಿದ ಕೊನೆ ವಿಡಿಯೊದಲ್ಲಿ ಮೋಯಿನುದ್ದಿನ್ ಅವರು ಚಾನಲ್ ಮುಚ್ಚುವ ಸ್ಥಿತಿಯಲ್ಲಿದೆ. ಚಾನಲ್ ಉಳಿಯಲು ಹಣಕಾಸಿನ ನೆರವಿನ ಅಗತ್ಯವಿದೆ ಎಂದು ವೀಕ್ಷಕರಲ್ಲಿ ಕೇಳಿದ್ದರು. ಅಂದು ರಾತ್ರಿ ಮೋಯಿನುದ್ದಿನ್‌ ಅವರಿಗೆ 18 ಮೇಲ್‌ಗಳು ಬಂದಿದ್ದವು. ಮಕ್ಕಳಿಗೆ ಆಹಾರ ನೀಡುತ್ತಿರುವುದು ಖುಷಿ ಎನಿಸಿದೆ ಅದಕ್ಕಾಗಿ ಸಹಾಯ ನೀಡುತ್ತವೆ ಚಾನೆಲ್ ಮುಂದುವರೆಸಿ ಎಂದು ವೀಕ್ಷಕರು ತಿಳಿಸಿದ್ದರು.

ವಾರಕ್ಕೆ ಮೂರು ಅಡುಗೆ ವಿಡಿಯೊ

ವಾರಕ್ಕೆ ಮೂರು ಅಡುಗೆ ವಿಡಿಯೊ

ಅಡುಗೆ ಮಾಡುವುದನ್ನು ಇಷ್ಟಪಡುವ ಮೋಯಿನುದ್ದಿನ್‌ ಅವರು ಅಡುಗೆ ಹವ್ಯಾಸವನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಒಂದು ಅಡುಗೆ ವಿಡಿಯೊವನ್ನು ಸುಮಾರು 4-5 ಗಂಟೆಯಲ್ಲಿ ಶೂಟ್ ಮಾಡಿ ಮುಗಿಸುವ ಮೋಯಿನುದ್ದಿನ್ ಅವರು ಅಡುಗೆಗೆ ಬೇಕಾದ ತರಕಾರಿ ಹೆಚ್ಚುವುದರಿಂದ, ಕೊನೆಗೆ ಪಾತ್ರೆ ತೊಳೆಯುವವರೆಗೂ ಎಲ್ಲ ಕೆಲಸವನ್ನು ಅವರೇ ಮಾಡುತ್ತಾರೆ.

ಅನಾಥಾಶ್ರಮಗಳಿಗೆ ಆಹಾರ

ಅನಾಥಾಶ್ರಮಗಳಿಗೆ ಆಹಾರ

ಮೋಯಿನುದ್ದಿನ್ ಅವರು ಮಾಡಿರುವ ವಿವಿಧ ರುಚಿಕರ ಅಡುಗೆಯನ್ನು ಅನಾಥ ಮಕ್ಕಳಿಗೆ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ, ಹೀಗೆ ಪ್ರತಿ ತಿಂಗಳು ಸುಮಾರು 1200 ಅನಾಥಾಶ್ರಮಗಳ ಮಕ್ಕಳಿಗೆ ವಿಶೇಷ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಾರೆ. ಈ ಸಂಖ್ಯೆ ವಿಸ್ತರಿಸುತ್ತ ಸಾಗಿದೆ. ಮಕ್ಕಳಿಗಾಗಿ 25ಕಿ.ಗ್ರಾಂ ಬ್ಲ್ಯಾಕ್ ಫಾರೆಸ್ಟ್‌ ಕೇಕ್, ದೊಡ್ಡ ಪ್ರಮಾಣದಲ್ಲಿ ನೂಡೆಲ್ಸ್ ಮಾಡಿ ಕೊಟ್ಟಿದ್ದಾರೆ.

Best Mobiles in India

English summary
Moinuddin feeds over thousands of children belonging to various orphanages in the city. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X