ಭಾರತದಲ್ಲಿ ಕೊಡಾಕ್‌ CA ಪ್ರೊ ಸ್ಮಾರ್ಟ್‌ಟಿವಿ ಸರಣಿ ಲಾಂಚ್‌! ಬೆಲೆ ಎಷ್ಟು?

|

ಸ್ಮಾರ್ಟ್‌ಟಿವಿ ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಲೇ ಇದೆ. ಹೆಚ್ಚಿನ ಗಾತ್ರದ ಟಿವಿಗಳಿಂದ ಹಿಡಿದು ಹೊಸ ಟೆಕ್ನಾಲಜಿಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಲಲೆ ಇವೆ. ಆದರೂ ಕೂಡ ಗ್ರಾಹಕರು ಜನಪ್ರಿಯ ಬ್ರಾಂಡ್‌ಗಳ ಸ್ಮಾರ್ಟ್‌ಟಿವಿಗಳನ್ನು ಖರೀದಿಸಲು ಬಯಸುತ್ತಾರೆ. ಇದರಲ್ಲಿ ಕೊಡಾಕ್‌ ಕಂಪೆನಿ ಕೂಡ ಒಂದಾಗಿದೆ, ಕೊಡಾಕ್‌ ಕಂಪೆನಿ ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಆಯ್ಕೆಯ ಸ್ಮಾರ್ಟ್‌ಟಿವಿ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಕೊಡಾಕ್‌ ಸಿಎ ಪ್ರೊ ಆಂಡ್ರಾಯ್ಡ್ ಟಿವಿ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಕೊಡಾಕ್‌

ಹೌದು, ಕೊಡಾಕ್‌ ಕಂಪೆನಿ ಭಾರತದಲ್ಲಿ ಹೊಸ ಕೊಡಾಕ್‌ CA ಪ್ರೊ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ ಮಾಡಿದೆ. ಈ ಸರಣಿಯು 43-ಇಂಚಿನ ಮತ್ತು 50-ಇಂಚಿನ ಡಿಸ್‌ಪ್ಲೇ ಗಾತ್ರಗಳ ಆಯ್ಕೆಯಲ್ಲಿ ಬರುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿವೆ. ಹೊಸ ಕೊಡಾಕ್ CA ಪ್ರೊ ಸರಣಿಯು 4K ಅಲ್ಟ್ರಾ-HD ಡಿಸ್ಪ್ಲೇಗಳನ್ನು ಹೊಂದಿದೆ ಮತ್ತು 40W ಸೌಂಡ್ ಔಟ್‌ಪುಟ್‌ನೊಂದಿಗೆ ಬರುತ್ತದೆ. ಇನ್ನುಳಿದಂತೆ ಕೊಡಾಕ್‌ CA ಪ್ರೊ ಸರಣಿಯು ಯಾವೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೊಡಾಕ್‌

ಕೊಡಾಕ್‌ ಪರಿಚಯಿಸಿರುವ ಹೊಸ ಸಿಎ ಪ್ರೊ ಆಂಡ್ರಾಯ್ಡ್‌ ಟಿವಿ ಸರಣಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್, ಝೀ5, ಸೋನಿ ಎಲ್ಐವಿ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಜೊತಗೆ ರಿಮೋಟ್ ಕಂಟ್ರೋಲ್ ಮೂಲಕ ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೊ, ಯೂಟ್ಯೂಬ್‌ ಮತ್ತು Google Play ಗಾಗಿ ಮೀಸಲಾದ ಹಾಟ್‌ಕೀಗಳೊಂದಿಗೆ ಬರುತ್ತದೆ. ಕೊಡಾಕ್ ಸಿಎ ಪ್ರೊ ಆಂಡ್ರಾಯ್ಡ್ ಟಿವಿ ಹೊಸ ಅನುಭವ ನೀಡಲಿದೆ ಎಂದು ಹೇಳಲಾಗಿದೆ.

ಕೊಡಾಕ್ ಸಿಎ ಪ್ರೊ ಸರಣಿ ವಿಶೇಷ

ಕೊಡಾಕ್ ಸಿಎ ಪ್ರೊ ಸರಣಿ ವಿಶೇಷ

ಕೊಡಾಕ್ ಸಿಎ ಪ್ರೊ ಆಂಡ್ರಾಯ್ಡ್ ಟಿವಿ ಸರಣಿಯು 43-ಇಂಚಿನ ಮತ್ತು 50-ಇಂಚಿನ ಆಯ್ಕೆಯ ಎರಡು ಡಿಸ್‌ಪ್ಲೇ ಗಾತ್ರಗಳಲ್ಲಿ ಬರುತ್ತದೆ. ಈ ಸ್ಮಾರ್ಟ್‌ಟಿವಿ 4K ಅಲ್ಟ್ರಾ-HD ಡಿಸ್‌ಪ್ಲೇ ಹೊಂದಿದೆ. ಕೊಡಾಕ್‌ CA ಪ್ರೊ ಸರಣಿಯು ARM ಕಾರ್ಟೆಕ್ಸ್ A53 ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ USB 2.0, HDMI 3 (ARC, CEC), 5GHz ಇಂಟರ್ನೆಟ್ ಬ್ಯಾಂಡ್‌ವಿಡ್ತ್‌ಗಾಗಿ ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ v5 ನಂತಹ ಮಲ್ಟಿ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಲಿದೆ. ಇದಲ್ಲದೆ ಕೊಡಾಕ್ CA ಪ್ರೊ ಸರಣಿಯು 40W ವಾಯ್ಸ್‌ ಔಟ್‌ಪುಟ್ ಅನ್ನು ಹೊಂದಿದ್ದು, ಡಾಲ್ಬಿ ಆಡಿಯೊವನ್ನು ಬೆಂಬಲಿಸುತ್ತದೆ. ಇದು ಸ್ಪೀಕರ್‌ಗಳು, ಹೆಡ್‌ಫೋನ್‌ಗಳು, ಗೇಮ್ ಕಂಟ್ರೋಲರ್‌ಗಳು, ಮೌಸ್ ಮತ್ತು ಕೀಬೋರ್ಡ್‌ಗಳಿಗೆ ಹೆಚ್ಚುವರಿ ಡಿವೈಸ್‌ ಬೆಂಬಲವನ್ನು ಒದಗಿಸುತ್ತದೆ. ಇದು Dolby MS12 ಮತ್ತು DTS TruSurround ಗೆ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಟಿವಿಯಲ್ಲಿ 6,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳಿಗೆ ಬೆಂಬಲಿಸುವ ಸಾಮರ್ಥ್ಯವನ್ನು ನೀಡಲಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್, ಝೀ5, ಸೋನಿ ಎಲ್ಐವಿ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಜೊತಗೆ ರಿಮೋಟ್ ಕಂಟ್ರೋಲ್ ಮೂಲಕ ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೊ, ಯೂಟ್ಯೂಬ್‌ ಮತ್ತು Google Play ಗಾಗಿ ಮೀಸಲಾದ ಹಾಟ್‌ಕೀಗಳೊಂದಿಗೆ ಬರುತ್ತದೆ.

ಭಾರತದಲ್ಲಿ ಕೊಡಾಕ್ ಸಿಎ ಪ್ರೊ ಸರಣಿಯ ಬೆಲೆ, ಲಭ್ಯತೆ

ಭಾರತದಲ್ಲಿ ಕೊಡಾಕ್ ಸಿಎ ಪ್ರೊ ಸರಣಿಯ ಬೆಲೆ, ಲಭ್ಯತೆ

ಭಾರತದಲ್ಲಿ ಬಿಡುಗಡೆ ಆಗಿರುವ ಹೊಸ ಕೊಡಾಕ್ ಸಿಎ ಪ್ರೊ ಸರಣಿಯ ಬೆಲೆ 43-ಇಂಚಿನ ಮಾದರಿಗೆ 27,999ರೂ ನಿಗದಿಪಡಿಸಲಾಗಿದೆ. ಇನ್ನು ಕೊಡಾಕ್‌ ಸಿಎ ಪ್ರೊ 50 ಇಂಚಿನ ಮಾದರಿಯ ಬೆಲೆ 33,999ರೂ.ಆಗಿದೆ. ಈ ಸ್ಮಾರ್ಟ್‌ಟಿವಿಗಳು ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ ಪ್ರಯುಕ್ತ ಇದೇ ಅಕ್ಟೋಬರ್ 28 ರಂದು ಮಾರಾಟವಾಗಲಿವೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿಯ ಮೇಲೆ ಲಾಂಚ್ ಆಫರ್‌ಗಳು ಕೂಡ ಲಬ್ಯವಿದೆ. ಇದರಲ್ಲಿ ಎಸ್‌ಬಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.

Best Mobiles in India

English summary
Kodak CA Pro Android TV Series Launched in India.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X