ಬದಲಾದ ಸ್ವರೂಪದಲ್ಲಿ ಕೂ ಆಪ್‌: ಉನ್ನತ ಬ್ರೌಸಿಂಗ್ ಅನುಭವ!

|

ಜನಪ್ರಿಯ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿರುವ ಕೂ (koo) ಆಪ್ ಇದೀಗ ಹೊಸ ಅಪ್‌ಡೇಟ್‌ ಕಂಡಿದೆ. ಈ ಆಪ್‌ iOS ಮತ್ತು ಆಂಡ್ರಾಯ್ಡ್ ಎರಡರಲ್ಲೂ ಆಪ್‌ ಬಳಕೆಯ ಅನುಭವವನ್ನು ಉತ್ತಮಗೊಳಿಸಿದ್ದು, ಇನ್ನು ಒಳ್ಳೆಯ ಬ್ರೌಸಿಂಗ್ ಅನುಭವವನ್ನು ನೀಡುತ್ತಿದೆ.

ಬದಲಾದ ಸ್ವರೂಪದಲ್ಲಿ ಕೂ ಆಪ್‌: ಉನ್ನತ ಬ್ರೌಸಿಂಗ್ ಅನುಭವ!

ಹೊಸ ವಿನ್ಯಾಸವನ್ನು ಬಳಕೆದಾರ ಕೇಂದ್ರಿತವಾಗಿ ಮತ್ತು ವೀಕ್ಷಣೆಗೆ ಆಕರ್ಷಣೀಯವಾಗಿ ಅರ್ಥಗರ್ಭಿತವಾಗಿ ರಚಿಸಲಾಗಿದೆ. ಈ ಹಿಂದಿಗಿಂತ ಗಮನಾರ್ಹವಾದ ಹೊಸತನವಿದ್ದು ಹೊಸ ಇಂಟರ್ಫೇಸ್ ಸುಗಮವಾಗಿದೆ ಮತ್ತು ವೇದಿಕೆಯಲ್ಲಿನ ಅನ್ವೇಷಣೆಗಳು ಸುಲಭವಾಗಿದೆ. ಬಳಕೆದಾರರಿಗೆ ನಯವಾದ ಮತ್ತು ಪ್ರಸ್ತುತ ವಿದ್ಯಮಾನಗಳ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಹೊಸ ಬ್ರೌಸಿಂಗ್ ಅನುಭವವು ಒಟ್ಟಾರೆ ಬಳಕೆದಾರರ ಇಂಟರ್ಫೇಸನ್ನು ವರ್ಧಿಸುತ್ತದೆ. ಎಡ ಭಾಗದ ಖಾಲಿ ಜಾಗವನ್ನು ತೆಗೆದು ಹಾಕಿ ವಿಷಯವನ್ನು ಪ್ರತಿ ಅಂಚಿಗೂ ಹರಡುವಂತೆ ಮಾಡಲಾಗಿದ್ದು ಇದು ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿಗಳ ಹುಡುಕಾಟವನ್ನುಸುಲಭವಾಗಿಸುತ್ತದೆ. ಜೊತೆಗೆ ಇದು ಅನಗತ್ಯ ಶಬ್ದ ಮತ್ತು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಿ ಅಪ್ಲಿಕೇಶನ್ ಸ್ವಚ್ಚವಾಗಿ ಕಾಣುವಂತೆ ಮಾಡುತ್ತದೆ ಮತ್ತು ಬಳಕೆದಾರರ ಅನುಭವವು ಹೆಚ್ಚು ತಡೆರಹಿತವಾಗಿರುತ್ತದೆ. ಈ ಅನುಭವವು ಗರಿಷ್ಟಉಪಯುಕ್ತತೆ ಮತ್ತು ಅಪ್ಲಿಕೇಶನ್ ನಲ್ಲಿ ಬಳಕೆದಾರರು ಕಳೆಯುವ ಸಮಯವನ್ನು ಕೇಂದ್ರೀಕರಿಸಿದೆ.

ಬದಲಾದ ಸ್ವರೂಪದಲ್ಲಿ ಕೂ ಆಪ್‌: ಉನ್ನತ ಬ್ರೌಸಿಂಗ್ ಅನುಭವ!

ಕೂ, ವಿನ್ಯಾಸ ತಂಡದ ಮುಖ್ಯಸ್ಥರಾದ ಪ್ರಿಯಾಂಕ್ ಶರ್ಮಾ ಮಾತನಾಡಿ, 'ಬಳಕೆದಾರರ ಸಂತೋಷವೇ ನಮ್ಮ ಬ್ರಾಂಡ್ ನ ಮೂಲ ತತ್ವ,. ವಿಶೇಷವಾಗಿ ನಮ್ಮ ಬಳಕೆದಾರರ ಇಂಟರ್ಫೇಸ್‌ ವಿಷಯದಲ್ಲಿ, ಬಳಕೆದಾರರಿಗೆ ಉತ್ತಮವಾದ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಶ್ರಮಿಸುತ್ತೇವೆ. ತಲ್ಲೀನಗೊಳಿಸುವ ಬ್ರೌಸಿಂಗ್ ಅನುಭವದ ಪರಿಚಯವು ವಿಶ್ವದ ಅತ್ಯುತ್ತಮ ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ನಿರ್ಮಿಸುವ ಮೊದಲ ಹೆಜ್ಜೆಯಾಗಿದೆ. ನಾವು ಈಗಾಗಲೇ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ ಮತ್ತು ಇದು ಕೂ ನಲ್ಲಿ ಮತ್ತಷ್ಟು ಉತ್ತಮ ಬ್ರೌಸಿಂಗ್ ಅನುಭವಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಇನ್ನು ಮೊದಲ ಹೆಜ್ಜೆಯಷ್ಟೇ.

ಭಾರತದಲ್ಲಿ ಸ್ಥಳೀಯ ಭಾಷೆಗಳಲ್ಲಿನ ಸ್ವಯಂ ಅಭಿವ್ಯಕ್ತಿಗೆ ಕೂ ದೊಡ್ಡ ವೇದಿಕೆಯಾಗಿ ಹೊರಹೊಮ್ಮಿದೆ. ಇದು ಪ್ರಸ್ತುತ ಹಿಂದಿ, ಮರಾಠಿ, ಗುಜರಾತಿ, ಕನ್ನಡ, ತಮಿಳು, ಬೆಂಗಾಲಿ, ಅಸ್ಸಾಮಿ, ತೆಲುಗು, ಪಂಜಾಬಿ ಮತ್ತು ಇಂಗ್ಲಿಷ್‌ನಲ್ಲಿ ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅಧಿಕಾರ ನೀಡುತ್ತದೆ. ಪ್ಲಾಟ್‌ಫಾರ್ಮ್ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ತೃಪ್ತಿಯನ್ನು ಹೆಚ್ಚಿಸುವ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಪ್ರಾರಂಭಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಡಾರ್ಕ್ ಮೋಡ್, ಟಾಕ್-ಟು-ಟೈಪ್, ಚಾಟ್ ರೂಮ್‌ಗಳು, ಲೈವ್ ಇವುಗಳು ಇತ್ತೀಚೆಗೆ ಬಿಡುಗಡೆಯಾದ ಕೆಲವು ಪ್ರಮುಖ ವೈಶಿಷ್ಟ್ಯಗಳಾಗಿವೆ.

Best Mobiles in India

English summary
Koo App: Superior browsing experience with the new makeover.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X