ಬಳಕೆದಾರರಿಗೆ ಉಪಯುಕ್ತ ಫೀಚರ್ ಪರಿಚಯಿಸಿದ 'ಕೂ' ಆಪ್‌!

|

ಜನಪ್ರಿಯ ಮೈಕ್ರೋಬ್ಲಾಗಿಂಗ್ ವೇದಿಕೆ ಆಗಿರುವ ಕೂ (Koo) ಇದೀಗ ಸ್ವಪ್ರೇರಿತವಾಗಿ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದಾದ ಒಂದು ವಿಶಿಷ್ಟ ಫೀಚರ್ ಅನ್ನು ಪರಿಚಯಿಸಿದೆ. ಅದುವೇ ಸ್ವಯಂ-ಪರಿಶೀಲನ ಫೀಚರ್ (Voluntary Self-Verification). ಈ ಮೂಲಕ ಕೂ ಆಪ್ ಈ ಫೀಚರ್ ಹೊಂದಿದ ವಿಶ್ವದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆ ಎನಿಸಿಕೊಂಡಿದೆ.

ಬಳಕೆದಾರರು

ಬಳಕೆದಾರರು ಯಾವುದೇ ಬಳಕೆದಾರ ಸರ್ಕಾರದಿಂದ ಅನುಮೋದಿಸಲ್ಪಟ್ಟ ಯಾವುದೇ ಗುರುತಿನ ಚೀಟಿ ಮೂಲಕ ಕೆಲವೇ ಕ್ಷಣಗಳಲ್ಲಿ ತಮ್ಮ ಪ್ರೊಫೈಲ ಅನ್ನು ಸ್ವಯಂ ಪರಿಶೀಲಿಸಿಕೊಳ್ಳಬಹುದಾಗಿದೆ. ಈ ಹೆಜ್ಜೆಯು ಬಳಕೆದಾರರು ತಮ್ಮ ಖಾತೆಗಳ ದೃಡೀಕರಣ ವನ್ನು ಸಾಬೀತು ಪಡಿಸಲು ಬಲ ತುಂಬುತ್ತದೆ. ಅವರು ಹಂಚಿಕೊಳ್ಳುವ ಅಭಿಪ್ರಾಯ, ಆಲೋಚನೆಗಳಿಗೆ ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಸ್ವಯಂ ಪರಿಶೀಲನೆಯಾಗಿದೆ ಎಂಬುದನ್ನು ಹಸಿರು ಟಿಕ್ ದೃಢಪಡಿಸುತ್ತದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ನಿಯಮ 4(7) ಕ್ಕೆ ಅನುಗುಣವಾಗಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ಮೊದಲ ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಕೂ ಆಗಿದೆ.

ಸರ್ಕಾರದಿಂದ

ಬಳಕೆದಾರರು ತಮ್ಮ ಸರ್ಕಾರೀ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ, ಓಟಿಪಿ ಯನ್ನು ನಮೂದಿಸಿ ಮತ್ತು ಯಶಸ್ವಿ ದೃಢೀಕರಣದ ನಂತರ, ತಮ್ಮ ಪ್ರೊಫೈಲ್‌ನಲ್ಲಿ ಹಸಿರು ಟಿಕ್‌ನೊಂದಿಗೆ ಸ್ವಯಂ-ಪರಿಶೀಲನೆಯನ್ನು ಪಡೆಯುತ್ತಾರೆ. ಇಡೀ ಪ್ರಕ್ರಿಯೆಯು ಕೆಲವೇ ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ದೃಢೀಕರಣ ಪ್ರಕ್ರಿಯೆ ಯನ್ನು ಸರ್ಕಾರದಿಂದ ಅಧಿಕೃತಗೊಂಡ ಮೂರನೇ ವ್ಯಕ್ತಿಗಳು ನಡೆಸುತ್ತಾರೆ. ಈ ಪ್ರಕ್ರಿಯೆಯ ಸಮಯದಲ್ಲಿ ಕೂ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ವೇದಿಕೆಯಲ್ಲಿ ಬಳಕೆದಾರರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಸ್ವಯಂಪ್ರೇರಿತ ಸ್ವಯಂ ಪರಿಶೀಲನೆ - ದೃಢೀಕರಣವನ್ನು ಉತ್ತೇಜಿಸುವ ಮೂಲಕ ಆನ್ಲೈನ್ ತಪ್ಪು ಮಾಹಿತಿ, ದ್ವೇಷದ ಮಾತು, ನಿಂದನೆ ಮತ್ತು ಬೆದರಿಸುವಿಕೆಯನ್ನು ತಡೆಯುವಲ್ಲಿ ಸಹ ಮಹತ್ವದ ಹೆಜ್ಜೆಯಾಗುತ್ತದೆ.

ಮಾಧ್ಯಮ

ಕೂ ಸಹ ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಅವರು, 'ಕೂ ಸಾಮಾಜಿಕ ಮಾಧ್ಯಮದಲ್ಲಿ ನಂಬಿಕೆ ಮತ್ತು ಸುರಕ್ಷತೆಯನ್ನು ಉತ್ತೇಜಸಿಸುವಲ್ಲಿ ಮುಂಚೂಣಿಯಲ್ಲಿದೆ. ಸ್ವಯಂ ಪರಿಶೀಲನಾ ವ್ಯವಸ್ಥೆಯನ್ನು ಪ್ರಾರಂಭಿಸುವ ವಿಶ್ವದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ನಾವು ತುಂಬಾ ಹೆಮ್ಮೆ ಪಡುತ್ತೇವೆ. ನಮ್ಮ ಸುರಕ್ಷಿತವಾದ ಪರಿಶೀಲನಾ ಪ್ರಕ್ರಿಯೆಯ ಮೂಲಕ ಬಳಕೆದಾರರು ಕೆಲವೇ ಕ್ಷಣಗಳಲ್ಲಿ ಸ್ವಯಂ ಪರಿಶೀಲಿಸಲ್ಪಡಬಹುದು. ಇದು ಬಳಕೆದಾರರಿಗೆ ಹೆಚ್ಚಿನ ದೃಡೀಕರಣ ವನ್ನು ನೀಡುವ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ವೇದಿಕೆಯಲ್ಲಿ ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ. ಹೆಚ್ಚಿನ ಸಾಮಾಜಿಕ ಮಾಧ್ಯಮಗಳು ಕೆಲವು ಖಾತೆಗಳಿಗೆ ಮಾತ್ರ ಈ ಅಧಿಕಾರವನ್ನು ನೀಡುತ್ತವೆ, ಆದರೆ ಕೂ ಪ್ರತಿಯೊಬ್ಬರಿಗೂ ಒಂದೇ ರೀತಿಯ ಸವಲತ್ತು ಹೊಂದಲು ಪ್ರತಿಯೊಬ್ಬ ಬಳಕೆದಾರರಿಗೂ ಅವಕಾಶ ನೀಡಿದ ಮೊದಲ ವೇದಿಕೆಯಾಗಿದೆ'.ಎಂದು ಹೇಳಿದರು.

ಗುಜರಾತಿ

ಇನ್ನು ಕೂ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆಯನ್ನು ಮಾರ್ಚ್ 2020 ರಲ್ಲಿ ಭಾರತೀಯರು ತಮ್ಮ ಮಾತೃಭಾಷೆಯಲ್ಲಿಯೇ ಆನ್‌ಲೈನ್‌ನಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರಾರಂಭಿಸಲಾಯಿತು. ಕೂ ಅಪ್ಲಿಕೇಶನ್‌ನ ಸ್ಮಾರ್ಟ್ ವೈಶಿಷ್ಟ್ಯಗಳು ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ. ಕ್ರಮವಾಗಿ ಅವು ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್ ಆಗಿವೆ. ಭಾರತದಲ್ಲಿ, 10% ಕ್ಕಿಂತ ಹೆಚ್ಚು ಜನರು ಇಂಗ್ಲಿಷ್‌ನಲ್ಲಿ ಮಾತನಾಡುವುದಿಲ್ಲ, ಕೂ ಅಪ್ಲಿಕೇಶನ್ ಭಾರತೀಯರ ಧ್ವನಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ ತಮ್ಮ ಆಲೋಚನೆಗಳನ್ನು ತಮ್ಮ ಆಯ್ಕೆಯ ಭಾಷೆಯಲ್ಲಿಯೇ ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುತ್ತದೆ.

Most Read Articles
Best Mobiles in India

English summary
Koo Becomes the First Social Media Platform in the World to Launch Voluntary Self-Verification for All Users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X