ರಾಜ್ಯದ ಎಲ್ಲಾ ಬಸ್‌ಗಳಲ್ಲಿ ಉಚಿತ ವೈಫೈ!..ಗ್ರಾಮೀಣ ಪ್ರದೇಶದಲ್ಲಿಯೂ!!

Written By:

ದೇಶದಲ್ಲಿಯೇ ಅತ್ಯುತ್ತಮ ಸರ್ಕಾರಿ ಸಾರಿಗೆ ಎಂದು ಹೆಸರು ಪಡೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ಪೂರ್ತಿ ಡಿಜಿಟಲ್‌ ಕಡೆಗೆ ತೆರೆದುಕೊಳ್ಳುತ್ತಿದೆ. ಹೌದು, ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೆಎಸ್‌ಆರ್‌ಟಿಸಿ ಸಂಸ್ಥೆ ಎಲ್ಲಾ ಬಸ್‌ನಿಲ್ದಾಣಗಳು ಮತ್ತು ಬಸ್‌ಗಳಲ್ಲಿ ಉಚಿತ ವೈಫೈ ಸೇವೆಯನ್ನು ನೀಡಲು ನಿರ್ಧರಿಸಿದೆ.

ಕೆಎಸ್‌ಆರ್‌ಟಿಸಿಯ 18,704 ಬಸ್‌ಗಳು ಮತ್ತು 458 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲು ಟೆಂಡರ್‌ ಕರೆಯಲಾಗಿದ್ದು, ಮುಂದಿನ ಕೆಲವು ತಿಂಗಳಿನಲ್ಲಿಯೇ ಎಲ್ಲಾ ಬಸ್‌ ಮತ್ತು ಬಸ್‌ ನಿಲ್ದಾಣಗಳಲ್ಲಿ ಉಚಿತ ವೈಫೈ ಪಡೆಯಬಹುದಾಗಿದೆ. ಐರಾವತ ಮತ್ತು ಮಲ್ಟಿ ಆಕ್ಸೆಲ್ ಬಸ್‌ಗಳಲ್ಲಿ ಮಾತ್ರವಲ್ಲದೆ. ವೇಗದೂತ ಮತ್ತು ಸಾಮಾನ್ಯ ಬಸ್‌ಗಳಲ್ಲಿಯೂ ವೈಫೈ ಸೌಲಭ್ಯ ನೀಡಲು ಕೆಎಸ್‌ಆರ್‌ಟಿಸಿ ಚಿಂತಿಸಿದೆ. ಇನ್ನು ಉಚಿತ ವೈಫೈ ನೀಡಲು 40 ಕ್ಕೂ ಹೆಚ್ಚು ಕಂಪೆನಿಗಳು ಮುಂದೆ ಬಂದಿವೆ ಎನ್ನಲಾಗಿದೆ.

ರಾಜ್ಯದ ಎಲ್ಲಾ ಬಸ್‌ಗಳಲ್ಲಿ ಉಚಿತ ವೈಫೈ!..ಗ್ರಾಮೀಣ ಪ್ರದೇಶದಲ್ಲಿಯೂ!!

ಲಾಂಚ್‌ ಆಯ್ತು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!! ಊಹಾಪೋಹಕ್ಕೆ ತೆರೆಎಳೆದ "ನೋಕಿಯಾ 6"!!!

ವರ್ಷದ ಹಿಂದೆ ಪ್ರಾಯೋಗಿಕವಾಗ ಹಲವಡೆ ಉಚಿತ ವೈಫೈ ನೀಡಿದ್ದ ಕೆಎಸ್‌ಆರ್‌ಟಿಸಿ, ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಈ ನೂತನ ಯೋಜನೆಯನ್ನು ಹಾಕಿಕೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಉಚಿತವಾಗಿ ನೀಡಲಿರುವ ವೈಫೈ ಸೌಲಭ್ಯ 1 ಗಂಟೆಗಳು ಲಭ್ಯವಿದ್ದು, ಒಂದು ಗಂಟೆಯ ನಂತರ ಇಂಟರ್‌ನೆಟ್ ಉಪಯೋಗಿಸಲು ಹಣ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

ರಾಜ್ಯದ ಎಲ್ಲಾ ಬಸ್‌ಗಳಲ್ಲಿ ಉಚಿತ ವೈಫೈ!..ಗ್ರಾಮೀಣ ಪ್ರದೇಶದಲ್ಲಿಯೂ!!

ವೈಫೈ ಸೌಲಭ್ಯ ನೀಡುವುದರಿಂದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿದೆ. ಇನ್ನು ವೈಫೈ ನೀಡಲು ಕೆಎಸ್‌ಆರ್‌ಟಿಸಿ ಸಂಸ್ಥೆ ಯಾವುದೇ ಖರ್ಚು ಮಾಡುತ್ತಿಲ್ಲ. ಇವೆಲ್ಲವನ್ನು ಉಚಿತ ವೈಫೈ ನೀಡುವ ಸಂಸ್ಥೆಗಳೇ ಭರಿಸುತ್ತವೆ. ಹಾಗಾಗಿ, ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ ನೀಡುವುದಾಗಿ. ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್‌ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.

English summary
now u can use 1 hour free Wifi daily in KSRTC Bus. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot