ಟಾಪ್‌ 10 ಅತ್ಯುತ್ತಮ ಸ್ಪೀಕರ್‌ಗಳು: ಬೆಲೆ, ಫೀಚರ್ಸ್ ವಿವರ

|

ಮನೆ, ಕಾರು ಹಾಗೂ ಸಣ್ಣ ಸಮಾರಂಭಗಳಲ್ಲಿ ಸ್ಪೀಕರ್‌ಗಳು ಸಂಭ್ರಮವನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿವೆ. ಈಗಾಗಲೇ ಸೋನಿ, ಫಿಲಿಪ್ಸ್‌, ಹಾಗೂ ಬೋಲ್ಟ್‌ ಕಂಪೆನಿಯ ಸ್ಪೀಕರ್‌ಗಳು ಹೆಚ್ಚು ಜನಪ್ರಿಯಗೊಂಡಿವೆ. ಇದರ ಜೊತೆಗೆ ಈ ಸ್ಪೀಕರ್‌ಗಳಿಗೆ ಹೆಚ್ಚಿನ ಬೇಡಿಕೆ ಸಹ ನಿರ್ಮಾಣ ಆಗಿದೆ.

ಬ್ಲೂಟೂತ್‌

ಹೌದು, ಎಫ್‌ಎಂ, ಬ್ಲೂಟೂತ್‌ ಆಯ್ಕೆ, ವೈ-ಫೈ ಬೆಂಬಲಿಸುವ, ಸ್ಟೀರಿಯೋ ಆಯ್ಕೆ ಇರುವ, ವೈರ್ಡ್‌ ಹಾಗೂ ವಾಯರ್‌ಲೆಸ್‌ ಆಯ್ಕೆಯ ಸ್ಪೀಕರ್‌ಗಳನ್ನು ಕೊಂಡುಕೊಳ್ಳಲು ಮುಂದಾದರೆ ಈ ಲೇಖನ ನಿಮಗೆ ಸಹಾಯಕವಾಗಿದೆ. ಇದರ ಜೊತೆಗೆ ಪ್ರಮುಖ ಸ್ಪೀಕರ್‌ಗಳ ಸಾಮಾನ್ಯ ದರ ಹಾಗೂ ರಿಯಾಯಿತಿ ದರ ಜೊತೆ ಕೆಲವು ಫೀಚರ್ಸ್‌ ನೀಡಲಾಗಿದೆ.

ಬೋಟ್ ಸ್ಟೋನ್ 1500

ಬೋಟ್ ಸ್ಟೋನ್ 1500

ಬೋಟ್ ಸ್ಟೋನ್ 1500 ಸ್ಪೀಕರ್‌ ಸಾಮಾನ್ಯ ಬೆಲೆ 12,999ರೂ. ಗಳಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 4,399ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಬ್ಲೂಟೂತ್ ಸ್ಪೀಕರ್‌ ಮೊಬೈಲ್ ಹಾಗೂ ಟ್ಯಾಬ್ಲೆಟ್, ಲ್ಯಾಪ್‌ಟಾಪ್‌ಗಳಿಗೆ ಹೊಂದಿಕೆಯಾಗುತ್ತದೆ.

ಬೋಟ್‌ ಸ್ಟೋನ್ 1200

ಬೋಟ್‌ ಸ್ಟೋನ್ 1200

ಬೋಟ್‌ ಸ್ಟೋನ್ 1200 ಪೋರ್ಟಬಲ್ ಸ್ಪೀಕರ್‌ ಅನ್ನು ಅಮೆಜಾನ್‌ನಲ್ಲಿ 6,999ರೂ. ನಿಗದಿ ಮಾಡಲಾಗಿದ್ದು, 2,499ರೂ. ಗಳಿಗೆ ಖರೀದಿ ಮಾಡಬಹುದು. ಇನ್ನು ಈ ಸ್ಪೀಕರ್‌ ಬ್ಲೂಟೂತ್ ಆವೃತ್ತಿ 5 ಅನ್ನು ಹೊಂದಿದ್ದು, 3600 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ಬೋಟ್ ಸ್ಟೋನ್ 650

ಬೋಟ್ ಸ್ಟೋನ್ 650

ಬೋಟ್ ಸ್ಟೋನ್ 650 ಸ್ಪೀಕರ್‌ 4,900ರೂ. ಗಳ ಸಾಮಾನ್ಯ ಬೆಲೆ ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 1,499ರೂ. ಗಳಿಗೆ ಕೊಂಡುಕೊಳ್ಳಬಹುದು. ಬ್ಲೂಟೂತ್ ಆವೃತ್ತಿ 4.2 ಅನ್ನು ಹೊಂದಿದ್ದು, 1800 mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.

ಬೋಟ್‌ ಸ್ಟೋನ್‌ 1000

ಬೋಟ್‌ ಸ್ಟೋನ್‌ 1000

ಬೋಟ್‌ ಸ್ಟೋನ್‌ 1000 ಸ್ಪೀಕರ್‌ 3989ರೂ. ಗಳ ಸಾಮಾನ್ಯ ದರ ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 1,999ರೂ. ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಪೀಕರ್ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ಗಳಿಗೆ ಸಪೋರ್ಟ್‌ ಮಾಡಲಿದೆ. ಬ್ಲೂಟೂತ್ ಆವೃತ್ತಿ 2.1 ಆಯ್ಕೆ ಹೊಂದಿದ್ದು, ಎಂಟು ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

ಬೋಟ್‌ ಸ್ಟೋನ್‌ ಸ್ಪಿನ್ ಎಕ್ಸ್ 2.0

ಬೋಟ್‌ ಸ್ಟೋನ್‌ ಸ್ಪಿನ್ ಎಕ್ಸ್ 2.0

ಬೋಟ್‌ ಸ್ಟೋನ್‌ ಸ್ಪಿನ್ ಎಕ್ಸ್ 2.0 ಸ್ಪೀಕರ್‌ನ ಸಾಮಾನ್ಯ ದರ 5,590ರೂ. ಗಳಾಗಿದ್ದು, ಇದನ್ನು ಅಮೆಜಾನ್‌ ತನ್ನ ಆಫರ್‌ ಸೇಲ್‌ನಲ್ಲಿ 1,999ರೂ. ಗಳಿಗೆ ಮಾರಾಟ ಮಾಡುತ್ತಿದೆ. ಇನ್ನುಳಿದಂತೆ 2000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, 8 ಗಂಟೆಗಳ ವರೆಗೆ ಪ್ಲೇಟೈಮ್ ನೀಡುತ್ತದೆ.

ಝೆಬ್ರೋನಿಕ್ಸ್ ಝೆಬ್ ಜ್ಯೂಕ್ ಬಾರ್  9000 ಪ್ರೊ

ಝೆಬ್ರೋನಿಕ್ಸ್ ಝೆಬ್ ಜ್ಯೂಕ್ ಬಾರ್ 9000 ಪ್ರೊ

ಝೆಬ್ರೋನಿಕ್ಸ್ ಝೆಬ್ ಜ್ಯೂಕ್ ಬಾರ್ 9000 ಪ್ರೊ ಸ್ಪೀಕರ್‌ಗೆ 29,999ರೂ. ಇದ್ದು, ಇದನ್ನು ಅಮೆಜಾನ್‌ನಲ್ಲಿ 8,499ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಪೀಕರ್‌ ಡಾಲ್ಬಿ, ಸಬ್ ವೂಫರ್‌ನೊಂದಿಗೆ 120W ಮಲ್ಟಿಮೀಡಿಯಾ ಸೌಂಡ್‌ಬಾರ್ ಹೊಂದಿದೆ.

ಜೆಬಿಎಲ್‌ ಗೋ 2

ಜೆಬಿಎಲ್‌ ಗೋ 2

ಜೆಬಿಎಲ್‌ ಗೋ 2 ಸ್ಪೀಕರ್‌ 2990ರೂ. ಗಳ ಸಾಮಾನ್ಯ ದರ ಹೊಂದಿದ್ದು, ಇದನ್ನು ಅಮೆಜಾನ್‌ನಲ್ಲಿ 1,699ರೂ. ಗಳಿಗೆ ಕೊಂದುಕೊಳ್ಳಬಹುದು. ಈ ಸ್ಪೀಕರ್‌ ವಾಟರ್‌ ಪ್ರೂಫ್‌ ಫೀಚರ್‌ ಹೊಂದಿದೆ. ಜೊತೆಗೆ ಇನ್‌ಬಿಲ್ಟ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಸ್ಪೀಕರ್‌ ಫೋನ್‌ ಸಹ ಇದರಲ್ಲಿದೆ. ಪೂರ್ಣ ಚಾರ್ಜ್‌ನಲ್ಲಿ 5 ಗಂಟೆಗಳ ಪ್ಲೇಟೈಮ್ ನೀಡುತ್ತದೆ.

ಜೆಬಿಎಲ್‌ ಫ್ಲಿಪ್ 3

ಜೆಬಿಎಲ್‌ ಫ್ಲಿಪ್ 3

ಜೆಬಿಎಲ್‌ ಫ್ಲಿಪ್ 3 ಸ್ಪೀಕರ್‌ 6,990ರೂ. ಗಳ ಸಾಮಾನ್ಯ ದರ ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 4,299ರೂ. ಗಳಿಗೆ ಖರೀದಿ ಮಾಡಬಹುದು. ಈ ಸ್ಪೀಕರ್‌ನಲ್ಲಿ ಮೈಕ್‌ ಆಯ್ಕೆಯನ್ನು ಸಹ ನೀಡಲಾಗಿದೆ. ಹಾಗೆಯೇ 3000mAH ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಒಂದು ಪೂರ್ಣ ಚಾರ್ಜ್‌ಗೆ 10 ಗಂಟೆಗಳ ಪ್ಲೇಟೈಮ್‌ ನೀಡುತ್ತದೆ.

ಝೆಬ್ರೋನಿಕ್ಸ್ ಝೆಬ್ ಜ್ಯೂಕ್ ಬಾರ್ 9400 ಪ್ರೊ

ಝೆಬ್ರೋನಿಕ್ಸ್ ಝೆಬ್ ಜ್ಯೂಕ್ ಬಾರ್ 9400 ಪ್ರೊ

ಜೆಬ್ರೋನಿಕ್ಸ್ ಝೇಬ್ ಜ್ಯೂಕ್ ಬಾರ್ 9400 ಪ್ರೊ 37,999ರೂ. ಗಳ ಮೂಲ ದರ ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 11,899ರೂ. ಗಳಿಗೆ ಕೊಂಡುಕೊಳ್ಳಬಹುದು. ಬ್ಲೂಟೂತ್ ಆವೃತ್ತಿ 5 ಅನ್ನು ಹೊಂದಿದ್ದು, ಆಡಿಯೋದಲ್ಲಿ ಅತ್ಯುತ್ತಮ ಅನುಭವ ನೀಡಲಿದೆ.

ಸೋನಿ HT-S40R

ಸೋನಿ HT-S40R

ಸೋನಿ HT-S40R ನ ಸಾಮಾನ್ಯ ಬೆಲೆ 34,990ರೂ. ಗಳಾಗಿದ್ದು, ಅಮೆಜಾನ್‌ನಲ್ಲಿ 24,990ರೂ. ಗಳಿಗೆ ಖರೀದಿ ಮಾಡಬಹುದು. 5.1ch ರಿಯಲ್ ಸರೌಂಡ್ ಆಯ್ಕೆಯ ಜೊತೆಗೆ 600W ಪವರ್ ಔಟ್‌ಪುಟ್ ನೀಡುತ್ತದೆ. ಹಾಗೆಯೇ ಡಾಲ್ಬಿ ಆಡಿಯೋ ಥಿಯೇಟರ್‌ನ ಅನುಭವ ನೀಡುತ್ತದೆ.

Best Mobiles in India

English summary
Speakers in the home, car and small events will add to the excitement. In this article we have given details of top ten speakers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X