ಸ್ವಂತ ವಾಟ್ಸಾಪ್ ಇದ್ರೂ, ಸಿಗ್ನಲ್ ಆಪ್ ಬಳಕೆ ಮಾಡುತ್ತಿರುವ ಮಾರ್ಕ್ ಜುಕರ್​ಬರ್ಗ್!

|

ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್​ಬುಕ್​ ಸಂಸ್ಥಾಪಕ, ಮಾರ್ಕ್​ ಜುಕರ್​ಬರ್ಗ್ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ. ತಮ್ಮ ಫೇಸ್​ಬುಕ್ ಹಾಗೂ ವಾಟ್ಸ್​ಪ್ ಶೇ 100 ರಷ್ಟು ಸುರಕ್ಷಿತ, ಮೂರನೇ ವ್ಯಕ್ತಿಯೊಂದಿಗೆ ಯಾವುದೇ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದರು ಜುಕರ್​ಬರ್ಗ್​. ಆದರೆ, ಇದೀಗ ಇದೇ ಮಾರ್ಕ್​, ತಮ್ಮ ಫೇಸ್​ಬುಕ್ ಖಾತೆಯಿಂದ ತಮ್ಮ ವೈಯಕ್ತಿಕ ಮಾಹಿತಿ ಲೀಕ್ ಆಗಿದೆ ಎಂದು ಮಾಹಿತಿ ವಿನಿಮಯಕ್ಕಾಗಿ ಸಿಗ್ನಲ್ ಆಪ್‌ ಬಳಸುತ್ತಿದ್ದಾರೆ ಎಂಬ ವರದಿಯೊಂದು ಅಚ್ಚರಿ ಮೂಡಿಸಿದೆ.

ಆ್ಯಪ್

ಹೌದು, ಇದು ಅಚ್ಚರಿಯಾದರೂ ನಿಜ ಎನ್ನುತ್ತಿದ್ದಾರೆ ಅಮೆರಿಕದ ಸೈಬರ್ ಭದ್ರತಾ ಸಂಶೋಧಕರು. ಇತ್ತೀಚೆಗೆ ಸುಮಾರು 50 ಕೋಟಿ ಫೇಸ್​ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಹೀಗೆ ಸೋರಿಕೆಯಾದ ಮಾಹಿತಿಯಲ್ಲಿ ಮಾರ್ಕ್​ ಜುಕರ್​ಬರ್ಗ್​ ಅವರದ್ದು ಇದೆ. ಅವರ ಸೋರಿಕೆಯಾದ ಮೊಬೈಲ್​ ನಂಬರ್​ನಿಂದಲೇ ಈಗ ಅವರು ಸಿಗ್ನಲ್ ಆ್ಯಪ್ ಬಳಸುತ್ತಿದ್ದಾರೆ ಎಂದು ಅಮೆರಿಕದ ಸೈಬರ್ ಭದ್ರತಾ ಸಂಶೋಧಕ ಡೇವ್ ವಾಲ್ಕರ್ ಎನ್ನುವರು ಟ್ವೀಟ್​ ಮಾಡುವ ಮೂಲಕ ಹೇಳಿದ್ದಾರೆ.

ಕೂಡ

ಸಿಗ್ನಲ್ ಮೆಸೆಜಿಂಗ್ ಆಪ್‌ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಅಮೆರಿಕ ಮೂಲದ ಮೊಬೈಲ್ ಆಪ್‌ ಆಗಿದೆ. ಬಳಕೆದಾರರ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಬಲ್ಲದು ಈ ಸಿಗ್ನಲ್ ಆಪ್‌. ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸ್​ಪ್ ಕೂಡ ತನ್ನದು end-to-end encryption ಮೆಸೆಂಜರ್ ಎಂದು ಹೇಳಿದರೂ ಕೂಡ ವಾಟ್ಸ್​ಪ್ ಮೇಲೆ ಆಗಾಗ ಆರೋಪಗಳು ಕೇಳಿ ಬರುತ್ತಿವೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಸಿಗ್ನಲ್ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ಮೇಲೆ ಬಳಕೆದಾರರ ವಿಶ್ವಾಸ ಇಮ್ಮಡಿಯಾಗುತ್ತಿದೆ.

ಅಂಡ್ರಾಯ್ಡ್

ಸಿಗ್ನಲ್ ಆಪ್‌ ಬಳಕೆದಾರರು ಮಾತ್ರ ತಮ್ಮ ಮಾಹಿತಿಯನ್ನು ನೋಡಬಹುದಾಗಿದ್ದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಎರಡನೇ ಅಥವಾ ಮೂರನೇ ವ್ಯಕ್ತಿಗೆ ನೋಡುವ ಅವಕಾಶ ಇಲ್ಲ ಎನ್ನಲಾಗುತ್ತಿದೆ. ಅಂದಹಾಗೇ ಅಂಡ್ರಾಯ್ಡ್​ ಪ್ಲೆ ಸ್ಟೋರ್​ನಲ್ಲಿ ಒಟ್ಟು 50 ಮಿಲಿಯನ್ ಡೌನ್​ಲೋಡ್​ಗಳನ್ನು ಇದು ಕಂಡಿದೆ.

ಸಿಗ್ನಲ್ ಎಂದರೇನು?

ಸಿಗ್ನಲ್ ಎಂದರೇನು?

ಸಿಗ್ನಲ್ ಗೌಪ್ಯತೆಯ ಮೇಲೆ ಹೆಚ್ಚಿನ ಗಮನವನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದರ ಟ್ಯಾಗ್‌ಲೈನ್ 'Say hello to Privacy'' ಹೆಸರೇ ಸೂಚಿಸುವಂತೆ ಇದು ಭದ್ರತೆಗೆ ಹೆಚ್ಚಿನ ಮಹತ್ವ ನೀಡಿದೆ. ಇದು ವಾಟ್ಸಾಪ್‌ನಂತೆಯೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸೇವೆಯಾಗಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ಕ್ರೋಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಗ್ನಲ್ ಲಭ್ಯವಿದೆ. ಇದು ವೆಚ್ಚವಿಲ್ಲದೆ ಮತ್ತು ಇತರ ಮೆಸೆಂಜರ್ ಅಪ್ಲಿಕೇಶನ್‌ಗಳಂತೆಯೇ ಫೀಚರ್ಸ್‌ಗಳನ್ನು ಹೊಂದಿದೆ.

ಸಿಗ್ನಲ್ ಅಪ್ಲಿಕೇಶನ್‌ ಯಾರ ಒಡೆತನದಲ್ಲಿದೆ?

ಸಿಗ್ನಲ್ ಅಪ್ಲಿಕೇಶನ್‌ ಯಾರ ಒಡೆತನದಲ್ಲಿದೆ?

ಸಿಗ್ನಲ್ ಅಪ್ಲಿಕೇಶನ್‌ ಅನ್ನು ಸಿಗ್ನಲ್ ಫೌಂಡೇಶನ್ ಮತ್ತು ಸಿಗ್ನಲ್ ಮೆಸೆಂಜರ್ ಎಲ್ಎಲ್ ಸಿ ಅಭಿವೃದ್ಧಿಪಡಿಸಿದೆ. ಇದು ಲಾಭರಹಿತ ಕಂಪನಿಯಾಗಿದೆ. ಸಿಗ್ನಲ್ ಅನ್ನು ಅಮೆರಿಕದ ಕ್ರಿಪ್ಟೋಗ್ರಾಫರ್ ಮತ್ತು ಪ್ರಸ್ತುತ ಸಿಗ್ನಲ್ ಮೆಸೆಂಜರ್ ಮತ್ತು ವಾಟ್ಸಾಪ್ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಸಿಇಒ ಮೊಕ್ಸಿ ಮಾರ್ಲಿನ್‌ಸ್ಪೈಕ್ ಅವರು ಹೊಂದಿದ್ದಾರೆ.

ಸಿಗ್ನಲ್ ಯಾವ ದೇಶಕ್ಕೆ ಸೇರಿದೆ?

ಸಿಗ್ನಲ್ ಯಾವ ದೇಶಕ್ಕೆ ಸೇರಿದೆ?

ಸಿಗ್ನಲ್ ಅಪ್ಲಿಕೇಶನ್‌ನ ಮೂಲ ಅಮೆರಿಕದ ಕ್ಯಾಲಿಫೋರ್ನಿಯಾ. ಇದು ಚೀನಾದ ಕಂಪನಿಯೆಂದು ಕೆಲವರು ಗೊಂದಲವನ್ನು ಹೊಂದಿದ್ದಾರೆ. ಆದರೆ ಇದು ಅಮೆರಿಕಾದ ಅಪ್ಲಿಕೇಶನ್‌ ಅನ್ನೊದು ಗಮನಿಸಬೇಕಾದ ಅಂಶವಾಗಿದೆ.

ಸಿಗ್ನಲ್ ಸುರಕ್ಷಿತವಾಗಿದೆಯೇ?

ಸಿಗ್ನಲ್ ಸುರಕ್ಷಿತವಾಗಿದೆಯೇ?

ಕಾರ್ಯಕ್ಷಮತೆ ಡೇಟಾ, ಡಿವೈಸ್‌ ಐಡಿ, ಜಾಹೀರಾತು ಡೇಟಾ, ಉತ್ಪನ್ನದ ಸಂವಹನ, ಪಾವತಿ ಮಾಹಿತಿ, ಸ್ಥಳ ಡೇಟಾ, ಸರ್ಚಿಂಗ್‌ ಹಿಸ್ಟರಿ ಮತ್ತು ಹೆಚ್ಚಿನ ಮಾಹಿತಿಯನ್ನು ವಾಟ್ಸಾಪ್ ಸಂಗ್ರಹಿಸುತ್ತಿದೆ. ಆದರೆ ಸಿಗ್ನಲ್ ಅನ್ನು ಸುರಕ್ಷಿತ ಅಪ್ಲಿಕೇಶನ್ ಎಂದು ಹೇಳಲಾಗಿದೆ.

Best Mobiles in India

English summary
According to media reports, the leaked data includes Zuckerberg's phone number, Facebook user ID, personal details like location, marriage details and birth date.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X