Subscribe to Gizbot

4000mAh ಬ್ಯಾಟರಿಯ ಲಿನೋವೋ ಪಿ70 ಫೋನ್ ಭಾರತದಲ್ಲೂ

Posted By:

ಲಿನೋವೋ ಪಿ70 ಸ್ಮಾರ್ಟ್‌ಫೋನ್ ಕಂಪೆನಿಯ ಆನ್‌ಲೈನ್ ಸ್ಟೋರ್ ಮೂಲಕ ಭಾರತದಲ್ಲಿ ಲಾಂಚ್ ಆಗಿದ್ದು ಇದೇ ಸೈಟ್‌ನಲ್ಲಿ ರೂ 15,999 ಕ್ಕೆ ಪೂರ್ವ ಆರ್ಡರ್ ಲಭ್ಯವಿತ್ತು. ಭಾರತದಲ್ಲಿ ಏಪ್ರಿಲ್ 14 ರಂದು ಸ್ಮಾರ್ಟ್‌ಫೋನ್ ಮಳಿಗೆಗಳಿಗೆ ಕಾಲಿಡಲಿದೆ.

ಇದನ್ನೂ ಓದಿ: ನಿಮ್ಮದು ಲಾಲಿಪಪ್ ಫೋನಾ ಹಾಗಿದ್ರೆ ಚಿಂತೇನೇ ಬೇಡ

4000mAh ಬ್ಯಾಟರಿಯ ಲಿನೋವೋ ಪಿ70 ಫೋನ್ ಭಾರತದಲ್ಲೂ

ಇನ್ನು ಫೋನ್‌ನಲ್ಲಿರುವ ಮಹತ್ತಾದ ವಿಶೇಷತೆ ಎಂದರೆ ಇದು 4ಜಿ ಎಲ್‌ಟಿಇ ಕನೆಕ್ಟಿವಿಟಿಗೆ ಬೆಂಬಲವನ್ನು ಒದಗಿಸುತ್ತದೆ ಅಂತೆಯೇ ದೊಡ್ಡದಾದ 4000mAh ಬ್ಯಾಟರಿಯನ್ನು ಇದು ಒದಗಿಸುತ್ತಿದೆ. 18 ಗಂಟೆಗಳ ಟಾಕ್ ಟೈಮ್ ಅನ್ನು ಮತ್ತು 696 ಗಂಟೆಗಳ ಸ್ಟ್ಯಾಂಡ್‌ಬೈ ನಿಮಗೆ 3ಜಿ ನೆಟ್‌ವರ್ಕ್‌ಗಳಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ: ಆಪಲ್ ಎಲ್ಲಾ ಅಪ್ಲಿಕೇಶನ್‌ಗಳಿಗೂ ಮಣೆಹಾಕುವುದಿಲ್ಲ ಏಕೆ ಗೊತ್ತೇ?

4000mAh ಬ್ಯಾಟರಿಯ ಲಿನೋವೋ ಪಿ70 ಫೋನ್ ಭಾರತದಲ್ಲೂ

ಲಿನೋವೋ ಪಿ70 ಡ್ಯುಯಲ್ ಸಿಮ್ ಫೋನ್ ಆಗಿದ್ದು ಇತ್ತೀಚಿನ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಇದರಲ್ಲಿ ಚಾಲನೆಯಾಗುತ್ತಿದೆ. ಫೋನ್ 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1.7GHZ ಓಕ್ಟಾ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಇದರಲ್ಲಿದೆ. ಫೋನ್ 2ಜಿಬಿ RAM ಅನ್ನು ಪಡೆದುಕೊಂಡಿದ್ದು, 16 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ. ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 5 ಮೆಗಪಿಕ್ಸೆಲ್ ಆಗಿದೆ.

4000mAh ಬ್ಯಾಟರಿಯ ಲಿನೋವೋ ಪಿ70 ಫೋನ್ ಭಾರತದಲ್ಲೂ

ಫೋನ್ ಬರೇ ಮೂರು ಗಂಟೆಗಳಲ್ಲಿ ಪೂರ್ಣ ಚಾರ್ಜ್ ಅನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು 4 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತಿದೆ. ಲಿನೋವೋ ಎ7000 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮಂಗಳವಾರ ಲಾಂಚ್ ಮಾಡಿತ್ತು, ಇದರ ಬೆಲೆ 8,999 ಆಗಿದೆ. ಏಪ್ರಿಲ್ 15 ರಿಂದ 4ಜಿ ಸಕ್ರಿಯ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.

4000mAh ಬ್ಯಾಟರಿಯ ಲಿನೋವೋ ಪಿ70 ಫೋನ್ ಭಾರತದಲ್ಲೂ
English summary
The Lenovo P70 smartphone has been launched in India via the company's online store, where it has gone up for pre-orders at Rs. 15,999. Lenovo's The Do Store listing mentions that the smartphone will ship on April 14 in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot